ಅಂದ ಹೆಚ್ಚಿಸುವ ಚಂದದ ಲುಂಗಿ ಕುರ್ತಾ
Team Udayavani, Mar 15, 2019, 7:38 AM IST
ಫ್ಯಾಶನ್ ಲೋಕದಲ್ಲಿ ಪ್ರತಿ ದಿನವೂ ಹೊಸತೊಂದು ಬಗೆ ಹುಟ್ಟಿಕೊಳ್ಳುತ್ತಲೇ ಇರುತ್ತದೆ. ಅದಲ್ಲದೆ ಗಂಡಸರ ಉಡುಗೆ ವಿನ್ಯಾಸವಿರುವ ಬಟ್ಟೆಗಳನ್ನು ಹೆಂಗಳೆಯರು ತೊಡುವುದು ಸಾಮಾನ್ಯ. ಅದಕ್ಕೆ ತಕ್ಕಂತೆ ಮಾರುಕಟ್ಟೆಯಲ್ಲಿ ಹೆಂಗಳೆ ಯರ ಮನ ಸೆಳೆಯುತ್ತಿದೆ ಲುಂಗಿ ಕುರ್ತಾ.
ಇದೇನು ಅಂತ ಯೋಚಿಸ್ತಯಿದ್ದರೆ ನೀವು ಈ ಲುಂಗಿ ಕುರ್ತಾದ ಬಗ್ಗೆ ತಿಳಿಯಬೇಕು. ಮಹಿಳೆಯರ ಫ್ಯಾಶನ್ ಲೋಕಕ್ಕೆ ಕಾಲಿಟ್ಟು ಸ್ವಲ್ಪ ದಿನವಾದರೂ, ಹವಾ ಮಾತ್ರ ಜೋರಾಗಿ ಇದೆ. ಚೂಡಿ, ಕುರ್ತಾಗಳಲ್ಲಿ ಸಾವಿರಾರು ವಿನ್ಯಾಸಗಳನ್ನು ನೋಡಿದವರಿಗೆ ಇದು ಆಕರ್ಷಣೀಯವೆನಿಸುವುದಲ್ಲದೇ ಹೊಸ ಬಗೆಯ ಲುಕ್ ನೀಡಲಿದೆ.
ಕ್ರಾಪ್ ಟಾಪ್
ಚೂಡಿದಾರ್‌ಗಳಲ್ಲಿ ಲುಂಗಿಯ ಹಾಗೆ ನೆರಿಗೆ ಬಂದು, ಪ್ಯಾಂಟ್ ಎಲ್ಲದರಲ್ಲೂ ಇರುವುದು ಒಂದಾದರೆ ಚಿಕ್ಕ ಟಾಪ್ ಅದಕ್ಕೆ ಪ್ಯಾಂಟ್ ಲುಂಗಿಯ ನೆರಿಗೆಯಂತೆ ಸುತ್ತುವರಿದಿರುವುದು ಇನ್ನೊಂದು ಬಗೆ.
ಕ್ರಾಪ್ ಟಾಪ್ ಗಳನ್ನು ಆಫೀಸ್‌ಗಳಿಗೂ ತೊಡಬಹುದಾಗಿದ್ದು ಇನ್ ಶರ್ಟ್ ಕೂಡ ಮಾಡಿಕೊಳ್ಳಬಹುದಾಗಿದೆ. ಅದಲ್ಲದೆ ಪಾರ್ಟಿವೇರ್ ಆಗಿ ಸಮಾರಂಭಗಳಿಗೂ ಧರಿಸಬಹುದಾಗಿದೆ. ಇದರಲ್ಲಿ ಒಂದೇ ಬಣ್ಣದ ಪ್ರಿಟೆಂಡ್, ಎಂಬ್ರಾಯ್ಡರಿ, ಪ್ಲೈನ್ ಲಭ್ಯವಿದೆ.
ಪ್ಲೈನ್ ಟಾಪ್‌ಗೆ ಲುಂಗಿ ಸ್ಕರ್ಟ್
ವಿನೂತನ ಬಗೆಯ ಪ್ಲೈನ್ ಟಾಪ್ ಗಳಿದ್ದರೆ ಇದಕ್ಕೆ ವಿವಿಧ ಕಲರ್ ಲುಂಗಿ ಸ್ಕರ್ಟ್ ಲಭ್ಯವಿದೆ. ಬೇರೆ ಬೇರೆ ಕಲರ್‌ಗೆ ಇದನ್ನು ಹೊಂದಿಸಿಕೊಳ್ಳಬಹುದಾಗಿದೆ. ಚೆಕ್ಸ್ ಮತ್ತು ಬಿಳಿ ಬಣ್ಣದ ಲುಂಗಿ ಸ್ಕರ್ಟ್‌ಗೆ ಅತಿ ಹೆಚ್ಚಿನ ಬೇಡಿಕೆ ಇದ್ದು ಇದು ಮಾರುಕಟ್ಟೆಯಲ್ಲಿ ಹೊಸ ಟ್ರೆಂಡ್ ಕ್ರಿಯೆಟ್ ಮಾಡಿದೆ. ಇದನ್ನು ತಾರೆಯರು ಕೂಡ ಬಲು ಇಷ್ಟ ಪಟ್ಟಿದ್ದು ಚಿಕ್ಕ ಚಿಕ್ಕ ಸಮಾರಂಭಗಳಲ್ಲಿ ತೊಟ್ಟು ಮಿಂಚುತ್ತಿದ್ದಾರೆ.
ನೈಟ್ ಡ್ರೆಸ್ ಗಳಲ್ಲೂ ಲಭ್ಯ
ಲುಂಗಿ ಡ್ರೆಸ್‌ಗಳು ನೈಟ್ ಡ್ರೆಸ್ ನಲ್ಲಿಯೂ ಲಭ್ಯವಿದ್ದು ನೈಲಾನ್ ಮತ್ತು ಕಾಟನ್ ಬಟ್ಟೆಗಳಲ್ಲಿ ಇದು ಲಭ್ಯವಿದೆ. ಶಾರ್ಟ್ ಟಾಪ್ ಸಾಮಾನ್ಯವಾಗಿಪ್ಲೈ ನ್ ಬಂದು ಲುಂಗಿ ಮಾತ್ರ ಕ್ರಿಯೆಟಿವ್ ಆಗಿದ್ದು ನಿಮಗೆ ಬೇಕಾದ ರೀತಿಯ ಡಿಸೈನ್‌ಗಳನ್ನು ಆರಿಸಿಕೊಳ್ಳಬಹುದಾಗಿದೆ. ಗಂಡಸರ ಲುಂಗಿ 100 ರೂ. ರಿಂದ ಶುರುವಾದರೆ ಲುಂಗಿ ಕುರ್ತಾಗಳು ಸಾವಿರ ರೂ. ನಿಂದ ಆರಂಭವಾಗುತ್ತದೆ. ಬಟ್ಟೆಯ ಆಧಾರದ ಮೇಲೆ ಮತ್ತು ವೈವಿಧ್ಯಮಯ ವಿನ್ಯಾಸಕ್ಕೆ ಬೆಲೆಯನ್ನು ನಿಗದಿಪಡಿಸಲಾಗುತ್ತದೆ. ಇದು ಮಾರುಕಟ್ಟೆಗಳಲ್ಲಿ ಲಭ್ಯವಿದ್ದು, ನಿಮಗೆ ಒಪ್ಪುವಂತಹ ಕು ರ್ತಾಗಳನ್ನು ಬೇಕಾದ ರೀತಿಯಲ್ಲಿ ನಿವೇ ಆರ್ಡರ್ ನೀಡಿ ಮಾಡಿಸಿಕೊಳ್ಳಬಹುದಾಗಿದೆ. ಅದಲ್ಲದೆ ಇದು ನಿಮಗೆ ಹೊಸ ರೀತಿಯ ಲುಕ್ ನೀಡುವುದರಲ್ಲಿ ಸಂಶಯವಿಲ್ಲ.
ಮಕ್ಕಳಿಗೂ ಫೇವರೆಟ್
ಇದನ್ನು ಚಿಕ್ಕ ಮಕ್ಕಳು ಕೂಡ ಇಷ್ಟಪಡುತ್ತಿದ್ದು ಶಾಲೆಗಳಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸ್ವಲ್ಪ ಗ್ರ್ಯಾಂಡ್ ಆಗಿರುವ ಲುಂಗಿ ಕುರ್ತಿ ಧರಿಸಿ ಮಿಂಚುತ್ತಿದ್ದಾರೆ. ಅದಲ್ಲದೆ ಇದನ್ನು ಯಾವುದೇ ಸಂದರ್ಭದಲ್ಲೂ ತೊಡಬಹುದು ಮತ್ತು ಆರಾಮದಾಯಕವಾಗಿರುವುದರಿಂದ ಎಲ್ಲರಿಗೂ ಅಚ್ಚುಮೆಚ್ಚು.
ಪ್ರೀತಿ ಭಟ್ ಗುಣವಂತೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.