ಒಂಟಿತನವನ್ನೂ ಆನಂದಿಸಿ
Team Udayavani, Dec 16, 2019, 5:11 AM IST
ಸಾಂದರ್ಭಿಕ ಚಿತ್ರ.
ಒಂಟಿತನ ಎನ್ನುವುದು ಎಲ್ಲರ ಜೀವನದಲ್ಲಿ ಒಂದಲ್ಲ ಒಂದು ಬಾರಿ ಆವರಿಸಿಕೊಳ್ಳುತ್ತದೆ. ಅದಕ್ಕಾಗಿ ಆತಂಕ ಪಡುವುದು ಬೇಡ. ಏಕೆಂದರೆ ಜಗತ್ತಿನಲ್ಲಿ ಎಲ್ಲರೂ ಒಂದಲ್ಲ ಒಂದು ರೀತಿ ಒಬ್ಬಂಟಿಗಳೆ ಎನ್ನುವುದು ಕಟು ಸತ್ಯ. ಇದನ್ನು ಮೊದಲು ಅರಿತುಕೊಳ್ಳಬೇಕು.
ಹುಟ್ಟಿದ ಊರು ಬಿಟ್ಟು ಹೆಚ್ಚಿನ ವಿದ್ಯಾಭ್ಯಾಸ ಅಥವಾ ಕೆಲಸಕ್ಕೆಂದು ದೂರದೂರಿಗೆ ಬರುವ ಅನೇಕ ಯುವ ಮನಸ್ಸುಗಳು ಒಂಟಿತನಕ್ಕೆ ಸಿಲುಕಿ ಮಾನಸಿಕವಾಗಿ ಕುಗ್ಗಿ ಹೋಗುತ್ತವೆ. ಇದು ಮನಸ್ಸಿನ ಮೇಲೆ ಗಾಢವಾದ ಪರಿಣಾಮ ಉಂಟು ಮಾಡಬಹುದು. ಇದರಿಂದ ಹೊರ ಬರಲು ಒಂಟಿತನವನ್ನೇ ನಿಮ್ಮ ಖುಷಿಯ ಸಾಧನವನ್ನಾಗಿ ಪರಿವರ್ತಿಸಿಕೊಳ್ಳಿ. ಆಗ ಅದು ನಿಮ್ಮನ್ನು ಕಾಡಲಾರದು.
ನಿಮಗಿಷ್ಟದ ಸಂಗೀತ ಕೇಳಿ
ಸಂಗೀತಕ್ಕೆ ವಿಶಿಷ್ಟವಾದ ಶಕ್ತಿ ಇದೆ. ಒಂಟಿತನಕ್ಕೆ ಇದು ದಿವ್ಯ ಔಷಧವೂ ಹೌದು. ನಿಮಗಿಷ್ಟವಾದ ಸಂಗೀತವನ್ನು ಕೇಳುವ ಮೂಲಕ ನೀವು ಸಂತೋಷವಾಗಿರಲು ಸಾಧ್ಯ. ಅಥವಾ ಸಂಗೀತ ತರಗತಿಗೆ ಸೇರಿಕೊಳ್ಳಬಹದು.
ಪುಸ್ತಕ ಓದಿ
ಒಂದು ಉತ್ತಮ ಪುಸ್ತಕ ಒಬ್ಬ ಆತ್ಮೀಯ ಗೆಳೆಯನಿಗೆ ಸಮಾನ. ನಿಮ್ಮ ಅಭಿರುಚಿಗೆ ತಕ್ಕಂಥ ಪುಸ್ತಕ ಕೊಂಡು ಅದನ್ನು ಓದಿ. ಇದರಿಂದ ಹೊಸದೇನಾದರೂ ತಿಳಿಯತ್ತದೆ ಮತ್ತು ಒಂಟಿತನದ ಬೇಸರ ಕಾಡುವುದಿಲ್ಲ.
ಅಡುಗೆ ಮಾಡಿ
ಕೆಲಸಕ್ಕಾಗಿ ಪರ ಊರಿಗೆ ಬಂದು ಬಾಡಿಗೆ ರೂಮ್‌ನಲ್ಲಿ ಇದ್ದೀರೆಂದರೆ ಅಲ್ಲಿ ನಿಮ್ಮ ಒಂಟಿತನ ಹೋಗಲಾಡಿಸಲು ಅಡುಗೆ ಮನೆ ಕೂಡ ನಿಮಗೊಂದು ಅತ್ಯುತ್ತಮ ಸಂಗಾತಿ. ಹೌದು, ಅಡುಗೆ ಮಾಡುವುದರಿಂದ ಮನಸ್ಸಿಗೆ ಖುಷಿ ಸಿಗುತ್ತದೆ. ಅಲ್ಲದೇ ನೀವೇ ತಯಾರಿಸಿದ ಅಡುಗೆಯ ರುಚಿಯನ್ನು ಸವಿಯುವಾಗ ಸಿಗುವ ಮಜಾನೇ ಬೇರೆ.
ಕರೆ ಮಾಡಿ
ಇಂದಿನ ತಂತ್ರಜ್ಞಾನ ದೂರ ವಿರುವವರನ್ನೂ ಹತ್ತಿರವಾಗಿಸುತ್ತದೆ. ಇವುಗಳಿಂದ ನಿಮ್ಮ ತಂದೆ- ತಾಯಿ, ಕುಟುಂಬದವರು, ಸ್ನೇಹಿತರಿಗೆ ಕರೆ ಮಾಡುವ ಮೂಲಕ ಮನಸ್ಸು ಹಗುರ ಮಾಡಿಕೊಳ್ಳಬಹುದು.
ಬೆಳಗಿನ ವ್ಯಾಯಾಮ,ಧ್ಯಾನ
ಬೆಳಗಿನ ವ್ಯಾಯಾಮ ದಿನವಿಡೀ ನೀವು ಖುಷಿಯಾಗಿರಲು ಬಲು ಉಪಕಾರಿ. ಬೆಳಗ್ಗೆ ಬೇಗನೆ ಎದ್ದು ಶುದ್ಧವಾದ ಪರಿಸರದಲ್ಲಿ ಸ್ವಲ್ಪ ಹೊತ್ತು ಓಡಾಡಿ. ಅನಂತರ ಧ್ಯಾನ ಮಾಡಿದರೆ ಮನಸ್ಸು ಪ್ರಫುಲ್ಲವಾಗಿ ಫುಲ್ ಚಾರ್ಜ್ ಆಗುತ್ತೆ.
- ಶಿವಾನಂದ್ ಎಚ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.