ಕರ್ಮದ ಮುಂದೆ ಎಲ್ಲವೂ ಗೌಣ:ಚಾಣಕ್ಯ
Team Udayavani, Sep 3, 2018, 12:43 PM IST
ಬದುಕಿನಲ್ಲಿ ಪ್ರಾಮಾಣಿಕತೆ ಒಂದು ಮೌಲ್ಯ. ಏನೇ ಆದರೂ ಅತಿಯಾದರೆ ಅಪಾಯ. ಅತಿಯಾದರೆ ಅಮೃತವೂ ವಿಷ ಎನ್ನುವ ಮಾತಿದೆ. ಪ್ರಾಮಾಣಿಕತೆ ಹೆಚ್ಚಾದರೆ ಏನಾಗುತ್ತದೆ ಎಂಬುದನ್ನು ಶ್ರೇಷ್ಠ ಶಿಕ್ಷಕರಲ್ಲೊಬ್ಬರಾದ ಚಾಣಕ್ಯ ತನ್ನ ತೀಕ್ಷ್ಣ ಮಾತುಗಳಲ್ಲಿ ಮನಮುಟ್ಟುವಂತೆ ಹೀಗೆ ಹೇಳುತ್ತಾರೆ. ‘ಹೆಚ್ಚು ಪ್ರಾಮಾಣಿಕರಾಗಿರಬಾರದು. ನೇರ ಬೆಳೆದ ಮರಗಳು ಮೊದಲಿಗೆ ಕತ್ತರಿಸಲ್ಪಡುತ್ತವೆ ಮತ್ತು ಪ್ರಾಮಾಣಿಕ ವ್ಯಕ್ತಿಗಳು ಮೊದಲು ತೊಂದರೆಗೊಳಗಾಗುತ್ತಾರೆ’. ಪ್ರಸ್ತುತ ದಿನಗಳಿಗೆ ಇದು ಅತ್ಯಂತ ಸೂಕ್ತವಾದ ಸಲಹೆ ಎನ್ನಬಹುದು.
ಬದುಕು ವ್ಯಾವಹಾರಿಕ ಆಗುತ್ತಿರುವ ಸಂದರ್ಭ ನಮ್ಮನ್ನು ನಾವು ಆಪತ್ತಿನಿಂದ ರಕ್ಷಿಸಿಕೊಳ್ಳಲು ಈ ಎಚ್ಚರಿಕೆಯ ಮಾತು ಬಲು ಸಹಕಾರಿ. ‘ಮಾನವ ತನ್ನ ಕೆಲಸಗಳಿಂದ ದೊಡ್ಡವನೆನಿಸಿಕೊಳ್ಳುತ್ತಾನೆ; ಹುಟ್ಟಿನಿಂದಲ್ಲ’ ಎನ್ನುವ ಅವರ ಮಾತಿನಲ್ಲಿ, ಮಾನವನು ಉತ್ತಮ ಕಾರ್ಯಗಳನ್ನು ಮಾಡಿ ಜೀವನ ಸಾರ್ಥಕ ಪಡಿಸಿಕೊಳ್ಳಬೇಕು ಎಂಬ ಸೂಚನೆಯಿದೆ. ಯಾವುದೇ ಕೆಲಸ ಮೇಲು, ಕೀಳು ಎಂದು ಯೋಚಿಸದೆ ನಮ್ಮ ಕೆಲಸದಲ್ಲಿ ನಾವು ತೊಡಗಬೇಕು. ಆಗಲೇ ಸಾಧನೆಯ ಹಾದಿ ಸುಗಮವಾಗುವದು ಎನ್ನುವ ಅರ್ಥವೂ ಇದೆ.
ಹುಟ್ಟು, ಮನೆತನ ಇತ್ಯಾದಿಗಳು ಕರ್ಮದ ಮುಂದೆ ಗೌಣವಾಗುತ್ತವೆ. ಏಕೆಂದರೆ, ಉತ್ತಮ ಕರ್ಮಗಳು ವ್ಯಕ್ತಿಯನ್ನು ಉನ್ನತ ಸ್ಥಾನಕ್ಕೇರಿಸುತ್ತವೆ. ಕುಕರ್ಮಗಳು ಉನ್ನತ ಕುಲದ ವ್ಯಕ್ತಿಯನ್ನೂ ನೆಲಕಚ್ಚಿಸುತ್ತವೆ. ಮನುಷ್ಯ ‘ದೊಡ್ಡವ’ ಎನಿಸಿಕೊಳ್ಳಲು ಉತ್ತಮ ಕರ್ಮಗಳು ಅಗತ್ಯವಾಗಿವೆ ಎಂಬುದನ್ನು ಈ ಮಾತು ತಿಳಿಸುತ್ತದೆ.
ಸಂದೇಶ್ ಸಾಲ್ಯಾನ್/ ಭರತ್ ರಾಜ್ ಕರ್ತಡ್ಕ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.