ಸಣ್ಣ ಮನೆಯ ಬಾಹ್ಯ ವಿನ್ಯಾಸ
Team Udayavani, Nov 24, 2018, 1:17 PM IST
ಮನೆ ಕಟ್ಟುವುದು ಎಂದರೆ ಸಣ್ಣ ಕೆಲಸವೆನಲ್ಲ ಅದು ಚಿಕ್ಕದಾಗಲೀ ದೊಡ್ಡದಾಗಲಿ ವರ್ಷಗಳ ಪ್ಲಾನರ್ ಇಲ್ಲದೆ ಏನು ಮಾಡಲು ಸಾಧ್ಯವಾಗುವುದಿಲ್ಲ. ದೊಡ್ಡ ಮನೆಗಳನ್ನು ಸುಲಭದಲ್ಲಿ ಕಟ್ಟಿ ಮುಗಿಸಬಹುದೇನೊ ಆದರೆ ಸಣ್ಣ ಮನೆ ಕಟ್ಟುವುದು ಸವಾಲಿನ ಕೆಲಸ. ನಮ್ಮ ನಮ್ಮ ಕನಸಿನ ಮನೆಗಳನ್ನು ವಿನ್ಯಾಸಗೊಳಿಸುವುದು ನಾವೇ ಆಗಿರುವುದರಿಂದ ಅದನ್ನು ಎಲ್ಲರೂ ಬೆರಗುಗೊಳಿಸುವ ರೀತಿಯಲ್ಲಿ ಮಾಡುವುದು ಕೂಡ ನಾವೇ ಹಾಗಾಗಿ ಮನೆ ನಿರ್ಮಿಸುವಾಗ ಹೊಂದಾಣಿಕೆಯಾಗುವ ಮರದ ಬಳಕೆ , ವಸ್ತುಗಳು, ಬಣ್ಣ ಎಲ್ಲದರಿಂದ ಮನೆ ಸುಂದರವಾಗಿ ಕಾಣುತ್ತದೆ. ಹಾಗಾಗಿ ಅದನ್ನು ಲಾಭದಾಯಕವಾಗಿ ಸುಲಭ ಉಪಾಯಗಳು.
ಶೌಸುಗಿ ಬಾನ್
ಸಣ್ಣದಾದ ಮನೆಯನ್ನು ಕಟ್ಟ ಬಯಸುವವರಿಗೆ, ಚಿಕ್ಕ ಜಾಗ ಎಂದು ತಲೆಕೆಡಿಸಿಕೊಳ್ಳುವವರಿಗೆ ಶೌ ಸುಗಿ ಬಾನ್ ಒಳ್ಳೆಯ ಉಪಾಯ ಇದು ಮೂಲವಾಗಿ ಜಪಾನ್ ಶೈಲಿಯಲ್ಲಿ ನಿರ್ಮಿತವಾಗಿದ್ದು ಈಗ ಎಲ್ಲ ಕಡೆಗಳಲ್ಲಿ ಇದು ಜನಪ್ರಿಯಗೊಳ್ಳುತ್ತಿದೆ. ಸಾಮಾನ್ಯವಾಗಿ ಈ ಮರದ ತುಂಡುಗಳು ಕಪ್ಪು ಬಣ್ಣಗಳಿಂದ ಕೂಡಿದ್ದು ಗಾಢವಾದ ವಿನ್ಯಾಸ ಮಾಡಲು ಸಹಕಾರಿಯಾಗುತ್ತದೆ. ಅದಲ್ಲದೆ ನೀವು ಈಗ ತುಂಬಾ ಬಳಕೆಯಲ್ಲಿರುವ ಒಂದು ಗೋಡೆಗೆ ಮಾತ್ರ ಇಂತಹವುಗಳನ್ನು ಬಳಸಿ ಮನೆಯ ಬಾಹ್ಯ ಸೌಂದರ್ಯವನ್ನು ಹೆಚ್ಚಿಸಬಹುದು.
ಕೆಬೊನಿ
ಕೆಬೊನಿಯಿಂದ ಮಾರ್ಪಾಡದ ಸಣ್ಣ ಮನೆಯ ವಿನ್ಯಾಸ ಬಹು ಸುಂದರವಾಗಿರುತ್ತದೆ. ಕೆಬೊನಿಯನ್ನು ನೀವು ಮೇಲ್ಛಾವಣಿಯಾಗಿ ಹಾಗೂ ಗೋಡೆಗಳಿಗೆ ಅದಲ್ಲದೆ ಎರಡೂ ಭಾಗಗಳಾಗಿ ಮಾಡಿ ಒಂದು ಕೋಣೆಯನ್ನಾಗಿ ಕೂಡ ಮಾಡಬಹುದಾಗಿದೆ. ಇದು ಉತ್ತಮ ಗುಣಮಟ್ಟದಾಗಿದ್ದು ಜಪಾನ್ ಗಳಲ್ಲಿ ಈ ರೀತಿಯ ಮನೆ ನಿಮಗೆ ಕಾಣ ಸಿಗುತ್ತದೆ. ಅದಲ್ಲದೆ ಇದರ ವಿನ್ಯಾಸ ಜನರನ್ನು ಮನಸೂರೆಗೊಳಿಸುತ್ತದೆ.
ಹೀಗೆ ಹಲವಾರು ರೀತಿಯ ಬಾಹ್ಯ ವಿನ್ಯಾಸಗಳಿಂದ ನಿಮ್ಮ ಮನೆಯ ಸೌಂದರ್ಯವನ್ನು ಹೆಚ್ಚಿಸಬಹುದು. ಇದರಿಂದ ನಿಮ್ಮ ಮನೆ ಎಲ್ಲದಕ್ಕಿಂತ ಭಿನ್ನವಾಗಿ ಹಾಗೂ ಸುಂದರವಾಗಿ ಕಾಣುವುದಲ್ಲದೆ ನೀವು ವ್ಯಯಿಸುವ ಹಣದಲ್ಲೂ ನಿಮಗೆ ಉಳಿತಾಯ ಮಾಡಿಕೊಡುತ್ತದೆ.
ವಿಶಾಲವಾದ ಕಿಟಕಿಗಳು
ಸಣ್ಣ ಮನೆಗಳಲ್ಲಿ ಒಳಾಂಗಣ ಹೆಚ್ಚು ತೆರೆದ ರೀತಿಯಲ್ಲಿ ಇರುವುದರಿಂದ ಮನೆ ಸುಂದರವಾಗಿ ಕಾಣುತ್ತದೆ. ಅದಲ್ಲದೆ ನೈಸರ್ಗಿಕ ಬೆಳಕು ಮನೆಯನ್ನು ಆವರಿಸಿದಾಗ ಮನೆಯ ವಿಶಾಲತೆಯನ್ನು ಆನಂದಿಸಲು ಸಾಧ್ಯವಾಗುತ್ತದೆ. ಸಾಕಷ್ಟು ಕಿಟಕಿಗಳನ್ನು ಮಾಡುವುದರಿಂದ ಇನ್ನೊಂದು ಪ್ರಯೋಜನವೆಂದರೆ ಹೊರಾ ಭಾಗ ನಮಗೆ ವಿಶಾಲವಾಗಿ ಕಾಣುತ್ತದೆ. ಅದಲ್ಲದೆ ನಿಸರ್ಗವನ್ನು ಪ್ರೀತಿಸುವವರಿಗೆ ಇದು ಒಳ್ಳೆಯ ಉಪಾಯ.
ಸೃಜನಶೀಲ ವಿನ್ಯಾಸ
ಕೆಬೊನಿ ಅಥವಾ ಇನ್ನಿತರ ಒಳ್ಳೆಯ ಗುಣ ಮಟ್ಟದ ಮರಗಳನ್ನು ಬಳಸುತ್ತಿದ್ದರೆ ಮನೆಯ ಸೈಡ್ ಗಳಲ್ಲಿ ವಿಶಿಷ್ಟ ವಿನ್ಯಾಸಗಳನ್ನು ಮಾಡಿ ಈಗ ತುಂಬಾ ಜನ ಪ್ರಿಯಗೊಂಡ ಸ್ಕಲ್ಲೋಪ್ಡ್, ರೌಂಡ್, ಡೈಮಂಡ್ ಹಾಗೂ ಇನ್ನಿತರ ಆಕೃತಿಯಲ್ಲಿ ಸೈಡ್ ಗಳನ್ನು ವಿನ್ಯಾಸ ಮಾಡಿ ಇದರಿಂದ ಮನೆಯು ವೈವಿಧ್ಯಮಯವಾಗಿ ಕಾಣುವುದಲ್ಲದೆ ಜನರನ್ನು ಆಕರ್ಷಿಸುವುದರಲ್ಲಿ ಸಂಶಯವಿಲ್ಲ.
ಪ್ರೀತಿ ಭಟ್ ಗುಣವಂತೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.