ಕಂದಡ್ಕ ಹೊಳೆಗೆ ಅಪಾಯಕಾರಿ ಸೇತುವೆ!


Team Udayavani, Apr 5, 2019, 5:29 PM IST

sudina-2
ಸುಳ್ಯ : ನಗರದ ಜಟ್ಟಿಪಳ್ಳ- ಕೊಡಿಯಾಲಬೈಲು ರಸ್ತೆಯಲ್ಲಿ ಕಂದಡ್ಕ ಹೊಳೆಗೆ ನಿರ್ಮಿಸಿರುವ ಸೇತುವೆ ವಾಹನ
ಸವಾರರ ಪಾಲಿಗೆ ಮೃತ್ಯುಕೂಪವೆನಿಸಿದೆ. ಹಲವು ಸಮಯದಿಂದ ಈ ಸಮಸ್ಯೆ ಯಿದ್ದರೂ, ಸ್ಥಳೀಯಾಡಳಿತ ದುರಸ್ತಿಗೆ ಮನಸ್ಸು ಮಾಡಿಲ್ಲ. ಸಂಚಾರದ ಸಂದರ್ಭ ವಾಹನ ಸವಾರರು ಕೊಂಚ ಬದಿಗೆ ಸರಿದರೆ ಹೊಳೆ ಪಾಲಾಗುವುದು ನಿಶ್ಚಿತ. ಈಗಾಗಲೇ ಕೆಲ ಅವಘಡಗಳು ಸಂಭವಿಸಿವೆ.
ಪ್ರಮುಖ ಸಂಪರ್ಕ ರಸ್ತೆ ನಗರ ಪಂಚಾಯತ್‌ ವ್ಯಾಪ್ತಿಯಲ್ಲಿ ಈ ಸೇತುವೆ ಇದೆ. ಇದನ್ನು ಸಂಪರ್ಕಿ ಸುವ ರಸ್ತೆಯ ಸ್ಥಿತಿಯೂ ಅಷ್ಟಕ್ಕಷ್ಟೆ. ಸುಬ್ರಹ್ಮಣ್ಯ-ಜಾಲೂರು ಮುಖ್ಯ ರಸ್ತೆಯಿಂದ ದುಗಲಡ್ಕದ ಮೂಲಕ ಸುಳ್ಯ ನಗರ ಸಂಪರ್ಕಿಸಲು ಸಾಧ್ಯವಿರುವ ಉಪಯುಕ್ತ ರಸ್ತೆ ಇದಾಗಿದೆ. ದುಗಲಡ್ಕ – ನೀರಬಿದಿರೆ- ಕಮಿಲಡ್ಕ- ಕೊಡಿಯಾಲಬೈಲು- ಜಟ್ಟಿಪಳ್ಳ ರಸ್ತೆ ಮೂಲಕ 6 ಕಿ.ಮೀ. ಅಂತರದಲ್ಲಿ ಸುಳ್ಯ ನಗರ ಪ್ರವೇಶಿಸಬಹುದು. ಆದರೆ ರಸ್ತೆ ಸಮರ್ಪಕವಾಗಿಲ್ಲದೆ, ಸೇತುವೆ ಸುರಕ್ಷಿತವಾಗಿಲ್ಲದ ಕಾರಣ ಸುಬ್ರಹ್ಮಣ್ಯ, ಗುತ್ತಿಗಾರು ಭಾಗದಿಂದ ಬರುವ ಹನಗಳು ಪೈಚಾರು ಮೂಲಕ ನಗರಕ್ಕೆ ಸಂಚರಿಸಬೇಕು. ಇದರ ಅಂತರ ಸುಮಾರು 9 ಕಿ.ಮೀ. ಹೀಗಾಗಿ ದುಗಲಡ್ಕ -ನೀರಬಿದಿರೆ-ಜಟ್ಟಿಪಳ್ಳ ರಸ್ತೆ ಪರ್ಯಾಯ ರಸ್ತೆಯಾಗಿ ಅಭಿವೃದ್ಧಿ ಪಡಿಸಿದಲ್ಲಿ ಕೆಎಸ್‌ ಆರ್‌ಟಿಸಿ ಬಸ್‌ ಸಹಿತ ಎಲ್ಲ ವಾಹನಗಳು ನೇರ ನಗರಕ್ಕೆ ಪ್ರವೇಶಿಸಬಹುದು. ಇದರಿಂದ ನಗರದ ಸಂಚಾರ ದಟ್ಟನೆ ಸಮಸ್ಯೆಗೆ ಒಂದಷ್ಟು ಪರಿಹಾರ ದೊರೆಯಲಿದೆ.
ಸಂಪರ್ಕ ಸೇತುವಿನ ದುಃಸ್ಥಿತಿ ಕಂದಡ್ಕ ಹೊಳೆಗೆ ನಿರ್ಮಿಸಿರುವ ಸೇತುವೆ ದಾಟಿ 700ಕ್ಕೂ ಅಧಿಕ ವಿದ್ಯಾರ್ಥಿಗಳು ಪ್ರತಿದಿನ ಸಂಚರಿಸುತ್ತಾರೆ. ಕೊಡಿಯಾಲಬೈಲಿನಲ್ಲಿರುವ ಸುಳ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜು, ಒಕ್ಕಲಿಗ ಸಮುದಾಯ ಭವನ, ಉಬರಡ್ಕ ಗ್ರಾ.ಪಂ. ಕಚೇರಿ, ಸಾರ್ವಜನಿಕ ರುದ್ರಭೂಮಿ, ಸರಕಾರಿ ಪ್ರಾಥಮಿಕ ಶಾಲೆ ಮೊದಲಾದೆಡೆ ಸಂಚಾರಕ್ಕೆ ಈ ಸೇತುವೆ ಅನಿವಾರ್ಯ. ದಿನಂಪ್ರತಿ ಸಾವಿರಕ್ಕೂ ಅಧಿಕ ಪ್ರಯಾಣಿಕರು, ವಾಹನಗಳು ಇಲ್ಲಿ ಸಂಚರಿಸುತ್ತವೆ. ರಸ್ತೆಯಿಂದ ಸೇತುವೆ ಸಾಕಷ್ಟು ಕೆಳಭಾಗದಲ್ಲಿದೆ. ಸುಳ್ಯ ಭಾಗದಿಂದ ಸಂಚರಿಸುವ ವಾಹನಗಳು ಸೇತುವೆ ಪ್ರವೇಶ ಸ್ಥಳದಿಂದ 50 ಮೀ. ದೂರ ಇರುವ ಕಾಂಕ್ರೀಟ್‌ ರಸ್ತೆಯಲ್ಲಿ ಇಳಿಮುಖವಾಗಿ ಸಾಗಬೇಕು. ಇದು ಕೂಡ ಅಪಾಯಕಾರಿ ದಾರಿಯೇ. ಮೇಲಿಂದ ಸೇತುವೆ ಕಡೆಗೆ ವಾಹನಗಳು ಸಂಚರಿಸುವ ಸಂದರ್ಭದಲ್ಲಿ ಬದಿಗೆ ಸರಿಯಲು ಜಾಗವಿಲ್ಲ. ಸ್ವಲ್ಪ ತಪ್ಪಿದರೂ ಹೊಳೆ ಪಾಲಾಗುವ ಅಪಾಯವಿದೆ. ಸೇತುವೆ ಎರಡು ಬದಿಗಳಲ್ಲಿ ಬೇಲಿ ಮುರಿದು ಬಿದ್ದು ಅದೆಷ್ಟೂ ವರ್ಷಗಳು ಕಳೆದಿವೆ. ರಸ್ತೆ, ಸೇತುವೆ ನಡುವೆ ಓರೆಕೋರೆ ರಸ್ತೆಯಿದೆ. ಇವೆಲ್ಲವೂ ವಾಹನ ಸವಾರರ ಪಾಲಿಗೆ ಸವಾಲೆನಿಸಿದೆ.
ಮಳೆಗಾಲದಲ್ಲಿ ಭಾರಿ ಅಪಾಯ
ಇನ್ನೇನು ಮಳೆಗಾಲ ಸಮೀಪಿಸುತ್ತದೆ. ಆಗ ಹೊಳೆ ತುಂಬಾ ನೀರು ಹರಿಯುತ್ತದೆ. ಈ ವೇಳೆ ವಾಹನ ಚಲಾಯಿಸುವುದಂತೂ ಜೀವ ಕೈಯಲ್ಲಿ ಹಿಡಿದು ಸಾಗಿದ ಅನುಭವ. ವಾಹನ ತುಸು ವೇಗವಾಗಿ ಬಂದಲ್ಲಿ ನಿಯಂತ್ರಣಕ್ಕೆ ಸಿಗಲಾರದು. ಹೊಳೆ ನೀರಲ್ಲಿ ಕೊಚ್ಚಿಕೊಂಡು ಹೋಗುವುದು ಗ್ಯಾರಂಟಿ.
ದುರಸ್ತಿಗೆ ಕ್ರಮ 
ಸೇತುವೆ ದುರಸ್ತಿಗೆ ಪ್ರಾಕೃತಿಕ ವಿಕೋಪದಡಿ ಅನುದಾನಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಅದು ಮಂಜೂರಾಗಬೇಕಿದೆ. ಈ ಬಾರಿ ಅನುದಾನಕ್ಕೆ ಕಾಯದೇ ನ.ಪಂ. ಸ್ವಂತ ನಿಧಿಯಿಂದ ದುರಸ್ತಿ ಕೈಗೆತ್ತಿಕೊಳ್ಳಲಾಗುವುದು.
– ಶಿವಕುಮಾರ್‌ ಎಂಜಿನಿಯರ್‌, ನ.ಪಂ. ಸುಳ್ಯ
ಹೆಚ್ಚು ಪ್ರಯೋಜನವಿದೆ
ಈ ರಸ್ತೆ ಮತ್ತು ಸೇತುವೆ ಅಭಿವೃದ್ಧಿಪಡಿಸಿದರೆ ಹೆಚ್ಚು ಪ್ರಯೋಜನವಿದೆ. ಹುಡ್ಕೊ ಯೋಜನೆಯಲ್ಲಿ ಅನುದಾನ
ಬಿಡುಗಡೆಗೊಂಡು, ಅದು ಸರಕಾರಕ್ಕೆ ವಾಪಾಸು ಹೋಗಿತ್ತು. ಅನಂತರ ಸೀಮಿತ ಭಾಗದಲ್ಲಿ ಮಾತ್ರ ದುರಸ್ತಿ ಆಗಿತ್ತು. ಈ
ಮುರಿದ ಸೇತುವೆ ಅಪಾಯಕಾರಿ ಆಗಿದೆ.
-ಭವಾನಿ ಶಂಕರ ಕಲ್ಮಡ್ಕ ಸ್ಥಳೀಯ ನಿವಾಸಿ

ಟಾಪ್ ನ್ಯೂಸ್

Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಘಾತ

Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ

Naxal encounter case: Jayant Gowda’s interrogation, villagers lay siege to the police station

Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು

Goa ಕರಾವಳಿಯಲ್ಲಿ ನೌಕಾಪಡೆಯ ಸಬ್‌ ಮರೈನ್‌ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!

Goa ಕರಾವಳಿಯಲ್ಲಿ ನೌಕಾಪಡೆಯ ಸಬ್‌ ಮರೈನ್‌ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!

BGT 24: ಕೆಎಲ್‌ ರಾಹುಲ್‌ ಔಟ್‌ ಅಥವಾ ನಾಟೌಟ್:‌ ಏನಿದು ವಿವಾದ? ಇಲ್ಲಿದೆ ಅಂಪೈರ್‌ ಉತ್ತರ

BGT 24: ಕೆಎಲ್‌ ರಾಹುಲ್‌ ಔಟ್‌ ಅಥವಾ ನಾಟೌಟ್:‌ ಏನಿದು ವಿವಾದ? ಇಲ್ಲಿದೆ ಅಂಪೈರ್‌ ಉತ್ತರ

11-elephant

Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ

Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

ಬೆಳಗಾವಿ: ಸಿಎಂ ಸಿದ್ದರಾಮಯ್ಯಗೆ ಬೆಳಗಾವಿ ಅಧಿವೇಶನವೇ ಕೊನೆ-ಬಿ.ವೈ ವಿಜಯೇಂದ್ರ

ಬೆಳಗಾವಿ: ಸಿಎಂ ಸಿದ್ದರಾಮಯ್ಯಗೆ ಬೆಳಗಾವಿ ಅಧಿವೇಶನವೇ ಕೊನೆ-ಬಿ.ವೈ ವಿಜಯೇಂದ್ರ

Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಘಾತ

Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ

13-

Chikkamagaluru: ಅಪರಿಚಿತ ವಾಹನ ಡಿಕ್ಕಿಯಾಗಿ ಕಂಡಕ್ಟರ್ ಸಾವು

Naxal encounter case: Jayant Gowda’s interrogation, villagers lay siege to the police station

Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು

ನವೆಂಬರ್‌ 26-30: ಧರ್ಮಸ್ಥಳ ಲಕ್ಷದೀಪೋತ್ಸವ ಸಂಭ್ರಮ

ನವೆಂಬರ್‌ 26-30: ಧರ್ಮಸ್ಥಳ ಲಕ್ಷದೀಪೋತ್ಸವ ಸಂಭ್ರಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.