ಫ್ಯಾಶನ್ ಲೋಕದಲ್ಲಿ ರಾರಾಜಿಸುತ್ತಿರುವ ಜಾಕೆಟ್ ಸಾರಿ…
Team Udayavani, Feb 14, 2020, 5:44 AM IST
ಫ್ಯಾಶನ್ ಲೋಕದಲ್ಲಿ ಮಹಿಳೆಯರಿಗಾಗಿ ಹಲವಾರು ಟ್ರೆಂಡ್ ಬರುತ್ತಲೇ ಇರುತ್ತದೆ. ಹೊಸ ಹೊಸ ಪ್ರಯೋಗಗಳು ನಡೆಯುತ್ತಲೇ ಇರುತ್ತದೆ. ಇದೀಗ ಹುಡುಗಿಯರ ಹಾಟ್ ಫೇವ್‌ರೇಟ್ ಜಾಕೆಟ್ ಸೀರೆ ಫ್ಯಾಶನ್ ಲೋಕಕ್ಕೆ ಕಾಲಿಟ್ಟಿದೆ. ಸೀರೆಗೆ ಜಾಕೆಟ್ ಸೇರಿಸುವುದರಿಂದ ಉಡುಪಿಗೊಂದು ಕಳೆ ಬರುತ್ತದೆ.
ಸರಿಯಾದ ಆಯ್ಕೆ
ಸೀರೆಯೊಂದಿಗೆ ಹೊಂದಿಕೆಯಾಗುವ ಜಾಕೆಟ್‌ವೊಂದನ್ನು ಆರಿಸಿಕೊಳ್ಳಿ. ನಿಮ್ಮ ಸೀರೆಯನ್ನು ಡ್ರಾಪ್ ಮಾಡಿದ ಅನಂತರ, ಸೀರೆಯ ಮೇಲೆ ಜಾಕೆಟ್ ಧರಿಸಿ, ಆಗ ನಿಮ್ಮ ಸೀರೆಗೆ ಬೇಕಾದ ರೀತಿಯಲ್ಲಿ ಜಾಕೆಟ್ ಹೊಂದಿಸಿಕೊಂಡು ವಿಭಿನ್ನ ಬಗೆಯಲ್ಲಿ ಅದನ್ನು ಧರಿಸಬಹದು. ಕೆಲವರು ಡಿಪ್ ಜಾಕೆಟ್ ಹಾಕಿದರೆ ಇನ್ನು ಕೆಲವರು ಕೋಲರ್ ನೆಕ್ ಹಾಕುತ್ತಾರೆ.
ಸ್ಲಿàವ್‌ಲೆಸ್ ಜಾಕೆಟ್ ಸೀರೆ ಗೆ ವೆಸ್ಟರ್ನ್ ಕುಪ್ಪಸ ಧರಿಸಿ
ನಿಮ್ಮ ಸೀರೆಗೆ ನಿರ್ದಿಷ್ಟವಾದ ಬ್ಲಿಂಗ್ ಮತ್ತು ಸೌಂದರ್ಯವನ್ನು ಸೇರಿಸಲು ಜಾಕೆಟ್ ಬ್ಲೌಸ್‌ನಂತಹ ಉಡುಪಿನಲ್ಲಿ ಉತ್ತಮ ಪ್ರಮಾಣದ ಕನ್ನಡಿ ಅಥವಾ ಚಿನ್ನ ಅಥವಾ ದಾರದ ಕೆಲಸ ಇದ್ದರೆ ಅದು ಅಂದವಾಗಿ ಕಾಣುತ್ತದೆ. ನೀವು ವೆಸ್ಟರ್ನ್ ಬ್ಲೌಸ್ ಹಾಕಿ ಅದರ ಮೇಲೆ ಜಾಕೆಟ್ ಹಾಕಿಕೊಳ್ಳಬಹುದು.
ಸೀರೆಯೊಂದಿಗೆ ಸಣ್ಣ ಜಾಕೆಟ್
ನಿಮ್ಮ ಮೊಣಕೈಯವರೆಗೆ ತೋಳುಗಳನ್ನು ಹೊಂದಿರುವ ಸಣ್ಣ ಜಾಕೆಟ್ -ಬ್ಲೌಸ್‌ಉತ್ತಮ ಆಕರ್ಷಕವಾಗಿ ಕಾಣುತ್ತದೆ. ಡಾರ್ಕ್ ಬಣ್ಣದ ಸೀರೆಗೆ ಸಣ್ಣ ಜಾಕೆಟ್ ಆರಿಸಿಕೊಳ್ಳಿ. ನಿಮ್ಮ ಸೀರೆಗೆ ಸ್ವಲ್ಪ ಬ್ಲಿಂಗ್ ಇದ್ದರೆ ಸಣ್ಣ ಜಾಕೆಟ್ ಬ್ಲೌಸ್ ಸುಂದರವಾಗಿ ಕಾಣುತ್ತದೆ.
ಉದ್ದವಾದ ಜಾಕೆಟ್ ಕುಪ್ಪಸ ಬಳಸಿ
40, 50ರ ದಶಕಗಳಲ್ಲಿ ಜನಪ್ರಿಯವಾಗಿದ್ದ ಮೊಣಕಾಲುಗಳವರೆಗೆ ತಲುಪುವ ಉದ್ದವಾದ ಜಾಕೆಟ್‌ಗಳು ಈಗಿನ ಫ್ಯಾಶನ್ ಆಗಿದೆ. ಹೊಳೆಯುವ ರೇಷ್ಮೆ ಜಾಕೆಟ್‌ಗಳು ಅಥವಾ ಕೈಯಿಂದ ನೇಯ್ದ ಬಟ್ಟೆಯೊಂದಿಗೆ ಈ ಉದ್ದವಾದ ಜಾಕೆಟ್‌ಗಳನ್ನು ಬಳಸಿ. ನಿಮ್ಮನ್ನು ಕ್ಲಾಸಿಯಾಗಿ ಕಾಣುವಂತೆ ಮಾಡುತ್ತದೆ.
ನಿಮ್ಮ ಜಾಕೆಟ್ ಸೀರೆ ಕುಪ್ಪಸವನ್ನು ಬೆಲ್ಟ… ಮಾಡಿ
ಜಾಕೆಟ್ ಕುಪ್ಪಸ ಮತ್ತು ಸೀರೆಯನ್ನು ಉಟ್ಟ ಮೇಲೆ ನಿಮ್ಮ ಸೊಂಟದಲ್ಲಿ ಬೆಲ್ಟ… ಸೇರಿಸುವುದು ಕೂಡ ಈ ಜಾಕೆಟ್ ಸೀರೆಯ ಒಂದು ಫ್ಯಾಶನ್. ಇದು ಖಂಡಿತವಾಗಿಯೂ ಸೊಬಗನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಧೋತಿ ಸೀರೆಗಳೊಂದಿಗೆ ಜಾಕೆಟ್ ಬ್ಲೌಸ್
ಜಾಕೆಟ್ ಕುಪ್ಪಸ, ಧೋತಿ ಸೀರೆ ಪರಸ್ಪರ ಮ್ಯಾಚ್ ಆಗುತ್ತದೆ. ನೀವು ಧೋತಿ ಸೀರೆಯನ್ನು ಉಟ್ಟುಕೊಂಡರೆ ಸೊಂಟದವರೆಗೆ ಸಣ್ಣ ಜಾಕೆಟ್ ಹಾಕಿಕೊಳ್ಳಿ. ಇದು ಸೀರೆಯ ಅಂದ ಹೆಚ್ಚಿಸುವುದಲ್ಲದೆ ನಿಮ್ಮ ಅಂದವನ್ನು ಇಮ್ಮಡಿಗೊಳಿಸುತ್ತದೆ.
ಪೂರ್ಣ ತೋಳಿನ ಕಾಲರ್ ಜಾಕೆಟ್
ನಿಮ್ಮ ಸೀರೆಗೆ ಉತ್ತಮ ಸೊಬಗು ಬರಬೇಕಾದರೆ, ನೀವು ಬಯಸಿದರೆ ಪೂರ್ಣ ತೋಳು ಮತ್ತು ಕಾಲರ್ ಜಾಕೆಟ್ ಸೀರೆಯೊಂದಿಗೆ ಮ್ಯಾಚ್ ಆಗುತ್ತದೆ. ನೀವು ಲೇಸ್, ರೇಷ್ಮೆ ಅಥವಾ ವೆಲ್ವೆಟ್ ಜಾಕೆಟ್‌ಗಳನ್ನು ಆಯ್ಕೆ ಮಾಡಬಹುದು, ಅವುಗಳ ಮೇಲೆ ಉತ್ತಮವಾದ ಕಸೂತಿ ತಯಾರಿಸಲಾಗುತ್ತದೆ ಇದು ಇನ್ನೂ ಸೌಂದರ್ಯವನ್ನು ಹೆಚ್ಚಿಸುತ್ತದೆ.
- ಪೂರ್ಣಿಮಾ ಪೆರ್ಣಂಕಿಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್ ರನ್ ಆರಂಭಿಸಿದ ಸಿ.ಟಿ.ರವಿ
Healt: ಶಿಶುವಿನ ಹಾಲು ಹಲ್ಲುಗಳು ನೀವು ತಿಳಿದಿರಬೇಕಾದ 9 ಲಕ್ಷಣಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.