ಸೋರುವ ನಳ್ಳಿ ರಿಪೇರಿ ತಿಳಿದುಕೊಳ್ಳಿ
Team Udayavani, Oct 27, 2018, 2:13 PM IST
ಮನೆಯಲ್ಲೊಂದು ಸೋರುವ ನಳ್ಳಿ ಇದ್ದರೆ ಅಪರಿಮಿತವಾಗಿ ನೀರು ಪೋಲಾಗುತ್ತದೆ. ಬಾಡಿಗೆ ಕೊಠಡಿಗಳಿದ್ದು ಟ್ಯಾಂಕ್ ಒಂದೇ ಇದ್ದ ಪಕ್ಷದಲ್ಲಿ ಯಾವುದಾದರೂ ನಳ್ಳಿ ಸೋರಲು ಶುರುವಿಟ್ಟರೆ ಅದರಿಂದ ನಿಜಕ್ಕೂ ದೊಡ್ಡ ನಷ್ಟವೇ ಉಂಟಾಗುತ್ತದೆ. ಸರಿ ಪಡಿಸೋಣವೆಂದರೆ ಪ್ಲಂಬರ್ ಗಳೂ ಸಕಾಲಕ್ಕೆ ಸಿಗುವುದು ಕಷ್ಟ. ಅಂಥ ಸಂದರ್ಭಗಳಲ್ಲಿ ನಾವೇ ಸ್ಪ್ಯಾನರ್ ಹಿಡಿಯುವುದು ಅನಿವಾರ್ಯವಾಗುತ್ತದೆ.
ಇಂಥ ಸಣ್ಣ ರಿಪೇರಿ ಕೆಲಸಗಳನ್ನು ನಾವೇ ಮಾಡಿಕೊಳ್ಳಬಹುದು. ಸೋರುವ ನಳ್ಳಿಯನ್ನು ರಿಪೇರಿ ಮಾಡುವುದಕ್ಕೆ ಒಂದು ಸ್ಕ್ರೂ ಡ್ರೈವರ್, ಅಡ್ಜಸ್ಟೇಬಲ್ ಸ್ಪ್ಯಾನರ್, ಹೊಸ ವಾಷರ್ ಇವಿಷ್ಟಿದ್ದರೆ ಸಾಕು. ನೀವೇ ಮಾಡಬಹುದು.
ನೀರಿನ ಸಂಪರ್ಕ ಬಂದ್
ಮೊದಲಿಗೆ ಸೋರುವ ನಳ್ಳಿಗೆ ಇರುವ ಐಬಿವಿ (ಐಸೋಲೇಶನ್ ಬಾಲ್ ವಾಲ್ವ್) ಆಫ್ ಮಾಡಬೇಕು. ಇದರಿಂದ ನಲ್ಲಿಗೆ ನೀರಿನ ಹರಿಯುವಿಕೆ ನಿಂತು ಹೋಗುತ್ತದೆ. ಐಬಿವಿ ಇಲ್ಲದೆ ಇದ್ದಲ್ಲಿ ಮೇನ್ಸ್ (ಸ್ಟಾಪ್‌ಕಾಕ್) ಬಂದ್ ಮಾಡುವುದು.
ನಳ್ಳಿಯ ವಿಧ
ರಿಪೇರಿಗೆ ಮೊದಲು ನಳ್ಳಿ ಹಳೆಯ ವಿಧಧ್ದೋ ಅಥವಾ ಆಧುನಿಕ ಸೆರಾಮಿಕ್ ಡಿಸ್ಕ್ ನಳ್ಳಿಯೋ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು.
ಸಾಮಾನ್ಯ ನಲ್ಲಿಯಾದರೆ
1. ಟ್ಯಾಪ್ ಹೆಡ್ ತೆಗೆಯುವುದು: ಫ್ಲ್ಯಾಟ್ ಹೆಡ್ ಸ್ಕ್ರೂ ಡ್ರೈವರ್‌ನಿಂದ ನಳ್ಳಿಯ ಮೇಲ್ಭಾಗದಲ್ಲಿರುವ ಟ್ವಿಸ್ಟಿ ಬಿಟ್ (ಟ್ಯಾಪ್ ಹೆಡ್) ತೆಗೆದು, ಅಡ್ಜಸ್ಟೇಬಲ್ ಸ್ಪ್ಯಾನರ್‌ನಿಂದ ಹೆಡ್ ಗೇರ್ ನಟ್ ತೆಗೆಯಬೇಕು.
2. ವಾಷರ್ ಬದಲಾವಣೆ: ದೋಷಪೂರಿತ ವಾಷರ್‌ನಿಂದಲೇ ಬಹುತೇಕ ನಳ್ಳಿಗಳಲ್ಲಿ ಸೋರಿಕೆ ಉಂಟಾಗುತ್ತದೆ. ಹೆಡ್ ಗೇರ್ ನಟ್ ತೆಗೆದ ಬಳಿಕ ಹೊಸ ವಾಷರ್ ಅಳವಡಿಸಬೇಕು. ವಾಷರ್‌ನ ಸೈಜ್‌ನಲ್ಲಿ ವೆರೈಟಿ ಇರುವುದರಿಂದ ಸೂಕ್ತವಾದ ಸೈಜ್‌ನ ವಾಷರ್ ಆರಿಸಿಕೊಳ್ಳುವುದು ಅಗತ್ಯ.
ಸೆರಾಮಿಕ್ ಡಿಸ್ಕ್ ಟ್ಯಾಪ್
1. ಕಾರ್ಟ್ರಿಡ್ಜ್ ತೆಗೆಯುವುದು: ಫ್ಲ್ಯಾಟ್ ಹೆಡ್ ಸ್ಕ್ರೂ ಡ್ರೈವರ್ ಅಥವಾ ಚಾಕುವಿನಿಂದ ನಳ್ಳಿಯ ಕ್ಯಾಪ್ ತೆಗೆಯಿರಿ. ಹೆಡ್ ಗೇರ್ ನಟ್ ತೆಗೆದು ಕಾರ್ಟ್ರಿಡ್ಜ್ ಹೊರತೆಗೆಯಬೇಕು.
2. ಕಾರ್ಟ್ರಿಡ್ಜ್, ರಬ್ಬರ್ ಸೀಲ್ ಪರಿಶೀಲನೆ: ಪೈಪ್‌ರೆಂಚ್ ಸಹಾಯದಿಂದ ಕಾರ್ಟ್ರಿಡ್ಜ್ ತೆಗೆಯಬೇಕು. ಈಗ ನಿಜವಾದ ಸಮಸ್ಯೆ ತಿಳಿಯುತ್ತದೆ. ಇಲ್ಲಿ ಒಂದು ವೇಳೆ ಕಾರ್ಟ್ರಿಡ್ಜ್ ಬದಲಿಸಬೇಕಾಗಬಹುದು. ಇಲ್ಲವೇ ರಬ್ಬರ್ ಸೀಲ್ ಬದಲಿಸಬೇಕಾಗಬಹುದು. ಎರಡನ್ನೂ ಬದಲಿಸಬೇಕಾಗಬಹುದು. ಇಲ್ಲಿ ಏನಾದರೂ ಕೊಳೆ, ಇತ್ಯಾದಿ ಅಡ್ಡಿ ಇದ್ದು ನಳ್ಳಿ ಸೋರುವುದು ಉಂಟಾಗುತ್ತಲೂ ಇರಬಹುದು. ಇದನ್ನು ಪರೀಕ್ಷಿಸಿ ಅಗತ್ಯ ಇದ್ದರೆ ಮಾತ್ರ ಕಾರ್ಟ್ರಿಡ್ಜ್ಅಥವಾ ರಬ್ಬರ್ ಸೀಲ್ ಬದಲಿಸುವುದು ಒಳ್ಳೆಯದು. ಬಳಿಕ ಮತ್ತೆ ಟ್ಯಾಪ್ ಅನ್ನು ಮರು ಜೋಡಣೆ ಮಾಡಿದರೆ ಸೋರುವನಲ್ಲಿ ಸುಸ್ಥಿತಿಗೆ ಬಂದೀತು.
ಎಸ್ಕೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.