ನೆಮ್ಮದಿ ಹೆಚ್ಚಿಸಲಿ ನೆಲಹಾಸು


Team Udayavani, Jun 23, 2018, 4:59 PM IST

23-june-18.jpg

ಕೆಲವೊಮ್ಮ ಮನೆಗಳಲ್ಲಿ ಹೆಚ್ಚು ಕಾಣದಿದ್ದರೂ ನಮಗೆ ಹೆಚ್ಚು ಉಪಯುಕ್ತವೂ, ಒಳಾಂಗಣಕ್ಕೆ ಹೆಚ್ಚು ಮೆರುಗನ್ನು ನೀಡುವುದು ನೆಲಹಾಸುಗಳು. ಅಂಗಡಿಗಳಿಗೆ ಹೋದರೆ ಯಾವುದನ್ನು ಖರೀದಿಸಬೇಕು ಎನ್ನುವುದೇ ಕಷ್ಟಕರ ಆಯ್ಕೆ ಆಗುತ್ತದೆ. ಜತೆಗೆ ನಮ್ಮ ಬಳಕೆ, ಹೆಚ್ಚು ಸವೆಯುವ ಸಾಧ್ಯತೆಯಿರುವ ಕಡೆಗೆ ಗಟ್ಟಿಮುಟ್ಟಾದ, ಸುಲಭದಲ್ಲಿ
ಮುರಿಯದ ಬಿಲ್ಲೆಕಲ್ಲುಗಳನ್ನು ಆಯ್ದು ಕೊಳ್ಳಬೇಕಾಗುತ್ತದೆ. ಹಾಗೆಯೇ ವಿನ್ಯಾಸ ಎದ್ದು ಕಾಣುವಂತಿರಬೇಕು, ಒಳಾಂಗಣಕ್ಕೆ ಸೂಕ್ತವಾಗಿರುವ ಟೈಲ್ಸ್ ಗಳನ್ನು, ಮುಖ್ಯವಾಗಿ ಡ್ರಾಯಿಂಗ್‌ ರೂಮ್ಸ್ , ಬೆಡ್‌ ರೂಮ್‌ ಇತ್ಯಾದಿ ಜಾಗದಲ್ಲಿ ಬಳಸಬೇಕಾಗುತ್ತದೆ. ನೀರು ಬೀಳುವ ಜಾಗಗಳಲ್ಲಿ ವಿಶೇಷವಾಗಿ ತಯಾರಾಗಿರುವ ಟೈಲ್ಸ್‌ಗಳನ್ನು ಬಳಸಬೇಕು.

ಜಾರುವ ಟೈಲ್ಸ್ ಗಳು
ಇತ್ತೀಚೆಗೆ ಬರುತ್ತಿರುವ ಟೈಲ್ಸ್‌ ಗಳು ಅತಿ ಹೆಚ್ಚು ಎನ್ನುವಷ್ಟು ಪಾಲಿಶ್‌ ಹೊಂದಿರುತ್ತವೆ. ಅದರಲ್ಲೂ ಒಂದೆರೆಡು ನೀರ ಹನಿ ಬಿದ್ದರೂ ಸಾಕು ಬೀಳುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗಾಗಿ ದೊಡ್ಡ ಗಾತ್ರದ ಟೈಲ್ಸ್‌ಗಳ ಮಧ್ಯೆ ಅಂದರೆ ಎರಡು ಅಡಿಗೆ ಎರಡು ಅಡಿ ಅಗಲದ ಅನಂತರ ಒಂದು ಇಲ್ಲವೇ ಎರಡು ಇಂಚು ಅಗಲದ ಕಾಂಟ್ರಾಸ್ಟ್  ಪಟ್ಟಿಗಳನ್ನು ಅಳವಡಿಸಿದರೆ ನೋಡಲು ಸುಂದರವಾಗಿ ಕಾಣುವುದರ ಜತೆಗೆ ಜಾರುವ ಸಾಧ್ಯತೆಯೂ ಕಡಿಮೆ ಇರುತ್ತದೆ.

ಸುರಕ್ಷೆ
ಎಲ್ಲವನ್ನೂ ಒಂದೇ ರೀತಿಯಲ್ಲಿ ಕಾಣುವಂತೆ ಮಾಡುವುದು ಇತ್ತೀಚಿನ ಫ್ಯಾಷನ್‌ ಎನ್ನುವಂತಾಗಿದ್ದರೂ ಕೆಲ ವಿನ್ಯಾಸಗಳು ಎಲ್ಲ ಕಾಲಕ್ಕೂ ಸಲ್ಲುತ್ತವೆ. ಆದುದರಿಂದ, ನಮ್ಮ ಅಗತ್ಯಕ್ಕೆ ತಕ್ಕಂತೆ ನಾವು ಹಾಲ್‌ -ಲಿವಿಂಗ್‌ ರೂಂ ಮಧ್ಯೆಯೂ ವಿವಿಧ ಚಿತ್ತಾರಗಳನ್ನು ಮೂಡಿಸಿಕೊಂಡರೆ, ಅವು ನೋಡಲು ಅತ್ಯಾಕರ್ಷಕವಾಗಿರುವುದರ ಜತೆಗೆ ದೊಡ್ಡ ಗಾತ್ರದ ಟೈಲ್ಸ್‌ಗಳ ಮೇಲೆ ಜಾರುವ ಸಾಧ್ಯತೆಯನ್ನೂ ಕಡಿಮೆ ಮಾಡುತ್ತದೆ.

ಅಡುಗೆ ಮನೆ ಹಾಗೂ ಟಾಯ್ಲೆಟ್‌ ಗಳಲ್ಲಿ ಹೆಚ್ಚು ಜಾರಲು ಮುಖ್ಯ ಕಾರಣ ನೀರೇ. ಆದರೂ ಕೆಲವೊಮ್ಮೆ ಇಳಿಜಾರೂ ಕೂಡ ಕಾರಣವಾಗಿರುತ್ತದೆ. ನೀರು ಸರಾಗವಾಗಿ ಹರಿದು
ಹೋಗಲು ನೀಡಿರುವ ಇಳಿಜಾರು ಸ್ವಲ್ಪ ಹೆಚ್ಚಾದರೂ ಹೆಚ್ಚು ಹೆಚ್ಚು ಜಾರುವ ಸಾಧ್ಯತೆ ಇರುತ್ತದೆ. ಆದುದರಿಂದ ಈ ಪ್ರದೇಶದಲ್ಲಿ ಸೂಕ್ತ ಬಾರ್ಡರ್‌ ಹಾಗೂ ಪಟ್ಟಿಗಳನ್ನು ನೀಡಿದರೆ, ಇವು ಬ್ರೇಕ್‌ ಮಾದರಿಯಲ್ಲಿ ಕಾರ್ಯ ನಿರ್ವಹಿಸಿ, ಜಾರುವುದನ್ನು ತಪ್ಪಿಸುತ್ತವೆ.

ನಾವು ಎಷ್ಟೇ ಲೆಕ್ಕಾಚಾರ ಮಾಡಿ ಟೈಲ್ಸ್  ಖರೀದಿಸಿದರೂ ಒಂದಷ್ಟು ಟೈಲ್ಸ್ ಉಳಿದೇ ಉಳಿಯುತ್ತದೆ. ಹೀಗಾಗಲು ಕಾರಣ ನಮ್ಮ ಮನೆಯ ಕೋಣೆಯ ಅಳತೆಗೂ ಅಂಗಡಿಯಲ್ಲಿ ಸಿಗುವ ಟೈಲ್ಸ್  ಗಳ ಅಳತೆಗೂ ತಾಳೆ ಆಗದಿರುವುದು. ಆದ್ದರಿಂದ ಹೀಗೆ ಉಳಿಕೆ ಆಗುವ ಟೈಲ್ಸ್ ಗಳನ್ನು ಸಣ್ಣ ಗಾತ್ರದ ತುಂಡುಗಳನ್ನೂ ಕೂಡ ನಾವು ನಮ್ಮ ಮನೆಗಳಲ್ಲಿ ಕಾಲುಜಾರುವುದನ್ನು ತಪ್ಪಿಸುವ ಸುರಕ್ಷ ಕ್ರಮಕ್ಕೆ ಬಳಸಬಹುದು. ಫ್ಯಾಷನ್‌ಗೋಸ್ಕರ ನಾವು ಮನೆಯಲ್ಲಿ ತೀರ ಸುರಕ್ಷಿತವಾಗಿ ಓಡಾಡುವುದನ್ನು ತಪ್ಪಿಸುವ ಅಗತ್ಯವಿಲ್ಲ. ನಮ್ಮ ಕಾಲಿಗೆ ಸದೃಢ ಆಧಾರ ಕಲ್ಪಿಸಲು ಉಳಿಕೆ ಟೈಲ್ಸ್‌ಗಳಿಂದಲೂ ವಿವಿಧ ವಿನ್ಯಾಸಗಳನ್ನು ಮಾಡಿಕೊಳ್ಳಬಹುದು. 

ಕ್ರಿಮಿಕೀಟ ನಿರೋಧಕ ಟೈಲ್ಸ್‌
ಇತ್ತೀಚೆಗೆ ಕ್ರಿಮಿಕೀಟ ನಿರೋಧಕ ಗುಣಗಳನ್ನು ಹೊಂದಿರುವ ಟೈಲ್ಸ್‌ಗಳು ಕೂಡ ಮಾರುಕಟ್ಟೆಗೆ ಬಂದಿವೆ. ಈ ಮಾದರಿಯ ಬಿಲ್ಲೆಕಲ್ಲುಗಳಲ್ಲಿ ಪಾಚಿ ಕಟ್ಟುವುದು, ಕರೆ ಕಟ್ಟುವುದು
ಆಗುವುದಿಲ್ಲ. ಹಾಗಾಗಿ ಜಾರುವ ಸಾಧ್ಯತೆ ಕಡಿಮೆ. ಗೋಡೆ ಸೂರಿಗೆ ಹೋಲಿಸಿದರೆ ಮನೆಗಳಲ್ಲಿ ಪಾದ ತಾಗಿ ಅತಿ ಹೆಚ್ಚು ಸವಕಳಿಗೆ ಒಳಗಾಗುವ ಸ್ಥಳ ಮನೆಯ ನೆಲಹಾಸೇ ಆಗಿರುವ ಕಾರಣ ಅವುಗಳ ಆಯ್ಕೆ ಹಾಗೂ ವಿನ್ಯಾಸದ ಬಗ್ಗೆ ಸ್ವಲ್ಪ ಕಾಳಜಿ ವಹಿಸುವುದು ಅಗತ್ಯವಾಗಿರುತ್ತದೆ. 

ಟಾಪ್ ನ್ಯೂಸ್

Dubai ಬಾನೆತ್ತರದಲ್ಲಿ ಹಾರಾಟಕ್ಕೆ ಸಿದ್ದವಾಗುತ್ತಿದೆ…ಡ್ರೋನ್‌ ಏರ್‌ಟ್ಯಾಕ್ಸಿ

Dubai ಬಾನೆತ್ತರದಲ್ಲಿ ಹಾರಾಟಕ್ಕೆ ಸಿದ್ದವಾಗುತ್ತಿದೆ…Drone ಏರ್‌ಟ್ಯಾಕ್ಸಿ-ಏನಿದರ ವಿಶೇಷ

ದೇಶದ ಆರ್ಥಿಕತೆಗೆ ‘ಸಹಕಾರʼದ ಕೊಡುಗೆ ಶ್ರೇಷ್ಠ: ಸಚಿವ ಈಶ್ವರ ಖಂಡ್ರೆ

Bidar: ದೇಶದ ಆರ್ಥಿಕತೆಗೆ ‘ಸಹಕಾರʼದ ಕೊಡುಗೆ ಶ್ರೇಷ್ಠ: ಸಚಿವ ಈಶ್ವರ ಖಂಡ್ರೆ

Australia’s assistant coach to skip Perth test because of the IPL auction!

BGT 2024: ಐಪಿಎಲ್‌ ಹರಾಜಿನ ಕಾರಣಕ್ಕೆ ತಂಡ ತೊರೆದ ಆಸ್ಟ್ರೇಲಿಯಾದ ಸಹಾಯಕ ಕೋಚ್‌!

Explained: ಈ ವರ್ಷ ಸೌದಿ ಅರೇಬಿಯಾ 100ಕ್ಕೂ ಅಧಿಕ ವಿದೇಶಿಯರನ್ನು ನೇಣಿಗೇರಿಸಲು ಕಾರಣ ಏನು!

Explained:ಈ ವರ್ಷ ಸೌದಿ ಅರೇಬಿಯಾ 100ಕ್ಕೂ ಅಧಿಕ ವಿದೇಶಿಯರನ್ನು ನೇಣಿಗೇರಿಸಲು ಕಾರಣ ಏನು!

ಹೋಮ್‌ ವರ್ಕ್‌ ಮಾಡದ್ದಕ್ಕೆ ಥಳಿಸಿದ ಶಿಕ್ಷಕ; ಕಣ್ಣ ದೃಷ್ಟಿಯನ್ನೇ ಕಳೆದುಕೊಂಡ ವಿದ್ಯಾರ್ಥಿ

ಹೋಮ್‌ ವರ್ಕ್‌ ಮಾಡದ್ದಕ್ಕೆ ಥಳಿಸಿದ ಶಿಕ್ಷಕ; ಕಣ್ಣ ದೃಷ್ಟಿಯನ್ನೇ ಕಳೆದುಕೊಂಡ ವಿದ್ಯಾರ್ಥಿ

Belagavi: ವರ್ಷದ ಹಿಂದೆ ಪಕ್ಷಕ್ಕೆ ಬರುವಂತೆ ಬಿಜೆಪಿ ಆಹ್ವಾನಿಸಿತ್ತು: ಬಾಬಾಸಾಹೇಬ ಪಾಟೀಲ್

Belagavi: ಹೊಸಬರು, ಹಳಬರನ್ನೂ ಬಿಜೆಪಿಯವರು ಟಚ್ ಮಾಡ್ತಿದ್ದಾರೆ: ಶಾಸಕ ಬಾಬಾಸಾಹೇಬ ಪಾಟೀಲ್

BGT Series: ವಿರಾಟ್‌ ಕೊಹ್ಲಿ ಜತೆ ವೈಯಕ್ತಿಕ ಪೈಪೋಟಿಗೆ ಇಳಿದಿದ್ದೆ: ಮಿಚೆಲ್‌ ಜಾನ್ಸನ್

BGT Series: ವಿರಾಟ್‌ ಕೊಹ್ಲಿ ಜತೆ ವೈಯಕ್ತಿಕ ಪೈಪೋಟಿಗೆ ಇಳಿದಿದ್ದೆ: ಮಿಚೆಲ್‌ ಜಾನ್ಸನ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Dubai ಬಾನೆತ್ತರದಲ್ಲಿ ಹಾರಾಟಕ್ಕೆ ಸಿದ್ದವಾಗುತ್ತಿದೆ…ಡ್ರೋನ್‌ ಏರ್‌ಟ್ಯಾಕ್ಸಿ

Dubai ಬಾನೆತ್ತರದಲ್ಲಿ ಹಾರಾಟಕ್ಕೆ ಸಿದ್ದವಾಗುತ್ತಿದೆ…Drone ಏರ್‌ಟ್ಯಾಕ್ಸಿ-ಏನಿದರ ವಿಶೇಷ

T20 series: ಪಾಕಿಸ್ಥಾನಕ್ಕೆ ವೈಟ್‌ವಾಶ್‌ ಟಿ20: ಆಸ್ಟ್ರೇಲಿಯ 3-0 ಜಯಭೇರಿ

T20 series: ಪಾಕಿಸ್ಥಾನಕ್ಕೆ ವೈಟ್‌ವಾಶ್‌ ಟಿ20: ಆಸ್ಟ್ರೇಲಿಯ 3-0 ಜಯಭೇರಿ

ದೇಶದ ಆರ್ಥಿಕತೆಗೆ ‘ಸಹಕಾರʼದ ಕೊಡುಗೆ ಶ್ರೇಷ್ಠ: ಸಚಿವ ಈಶ್ವರ ಖಂಡ್ರೆ

Bidar: ದೇಶದ ಆರ್ಥಿಕತೆಗೆ ‘ಸಹಕಾರʼದ ಕೊಡುಗೆ ಶ್ರೇಷ್ಠ: ಸಚಿವ ಈಶ್ವರ ಖಂಡ್ರೆ

Australia’s assistant coach to skip Perth test because of the IPL auction!

BGT 2024: ಐಪಿಎಲ್‌ ಹರಾಜಿನ ಕಾರಣಕ್ಕೆ ತಂಡ ತೊರೆದ ಆಸ್ಟ್ರೇಲಿಯಾದ ಸಹಾಯಕ ಕೋಚ್‌!

Manipal: ಆರ್ಯಭಟ ಪ್ರಶಸ್ತಿ ಪುರಸ್ಕೃತ, ಯಕ್ಷಗಾನ ಕಲಾವಿದ ಚೇರ್ಕಾಡಿ ಕಮಲಾಕ್ಷ ಪ್ರಭು ನಿಧನ

Manipal: ಆರ್ಯಭಟ ಪ್ರಶಸ್ತಿ ಪುರಸ್ಕೃತ, ಯಕ್ಷಗಾನ ಕಲಾವಿದ ಚೇರ್ಕಾಡಿ ಕಮಲಾಕ್ಷ ಪ್ರಭು ನಿಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.