ಮಂಗಳೂರಿನಲ್ಲೂ ಜಾರಿಗೆ ಬರಲಿ ಉಚಿತ ಕಸ ವಿಲೇವಾರಿ ದಿನ


Team Udayavani, Jul 21, 2019, 5:06 AM IST

sakth-idea

ಲ್ಯಾಕ್ಸಿಂಗ್‌ಟನ್‌ ಎಂಬ ನಗರ ತನ್ನ ನಗರದ ತ್ಯಾಜ್ಯಗಳ ಸಮರ್ಪಕ ನಿರ್ವಹಣೆ ಹಾಗೂ ನಗರ ವಾಸಿಗಳು ಉಪಯೋಗಿಸದೆ ಬಿಟ್ಟಿರುವ ಕೆಲವು ವಸ್ತುಗಳ ಮರುಬಳಕೆ ಮಾಡಲು ವರ್ಷದ ಒಂದು ದಿನವನ್ನು ಉಚಿತವಾಗಿ ಕಸ ವಿಲೇವಾರಿಗಾಗಿ ಅಲ್ಲಿನ ಆಡಳಿತ ಮಂಡಳಿ ಅವಕಾಶ ನೀಡಿದೆ. ಇದೊಂದು ವಿಶೇಷ ರೀತಿಯ ಆಚರಣೆ. ತ್ಯಾಜ್ಯ ವಿಲೇವಾರಿಗೆ ಸಾರ್ವಜನಿಕರು ಇಂತಿಷ್ಟು ಹಣ ನೀಡುವುದು ಸಾಮಾನ್ಯ. ಆದರೆ ಲ್ಯಾಕ್ಸಿಂಗ್‌ಟನ್‌ ಕೈಗೊಂಡಿರುವ ಯೋಜನೆಯಲ್ಲಿ ಆ ಒಂದು ದಿನ ಅಲ್ಲಿ ಉಚಿತವಾಗಿ ಕಸಗಳ ವಿಲೇವಾರಿ ನಡೆಯುತ್ತದೆ ಹಾಗೂ ಅಲ್ಲಿನ ನಗರವಾಸಿಗಳು ಭಾರೀ ಉತ್ಸಾಹದಿಂದ ಈ ಆಚರಣೆಯಲ್ಲಿ ಭಾಗವಹಿಸುತ್ತಾರೆ.

ನಗರದಲ್ಲಿ ವಾಸಿಸುವವರಿಗೆ ಮನೆಗಳಲ್ಲಿ ಹೆಚ್ಚಿನ ವಸ್ತುಗಳನ್ನಿಡಲು ಸ್ಥಳಾವಕಾಶವು ಇರುವುದಿಲ್ಲ. ಕೆಲವೊಂದು ವಸ್ತುಗಳು ಮನೆಯಿಂದ ಹೊರಹಾಕಲಾಗದೇ, ಯಾವುದೋ ಮೂಲೆಯಲ್ಲಿ ಹಾಗೆ ಇಟ್ಟಲ್ಲಿ ಮನೆಯ ಅಂದಗೆಡುವುದು, ಇಕ್ಕಟ್ಟಿನ ಸ್ಥಿತಿ ನಿರ್ಮಾಣ ವಾಗುವು ದುಂಟು. ಸೋಫಾ ಸೆಟ್, ಹಳೆಯದಾದ ಫ್ರಿಜ್ಡ್, ವಾಷಿಂಗ್‌ ಮಿಷನ್‌ ಹೀಗೆ ದೊಡ್ಡ ವಸ್ತುಗಳನ್ನು ಎತ್ತ ಬಿಸಾಡುವುದು ಎಂದು ತಿಳಿಯದೆ ಮನೆಯ ಸ್ಟೋರ್‌ ರೂಮ್‌ಗಳಲ್ಲೇ ಉಳಿದು ಬಿಡುತ್ತವೆ. ಇವುಗಳಿಗೆ ಪರಿಹಾರ ಫ್ರೀ ಟ್ರಾಶ್‌ ಡಿಸ್‌ಪೋಸಲ್ ಡೇ.

ಮನೆಯಲ್ಲಿನ ಬೃಹತ್‌ ಗಾತ್ರದ ವಸ್ತುಗಳನ್ನು ತ್ಯಾಜ್ಯದ ಗಾಡಿಗಳಲ್ಲಿ ಕೊಂಡೊಯ್ಯಲು ನಿರ್ಬಂಧವಿದೆ. ನಾವೇ ಮುತುವರ್ಜಿ ವಹಿಸಿ ಗಾಡಿ ಮಾಡುವುದಾದರೆ ಖರ್ಚು ಮತ್ತು ಎಲ್ಲಿಗೆ ಸಾಗಿಸುವುದು ಎನ್ನುವ ಗೊಂದಲ ತಪ್ಪಿದ್ದಲ್ಲ. ಇದನ್ನು ತಪ್ಪಿಸಲೆಂದೇ ಲ್ಯಾಕ್ಸಿಂಗ್‌ಟನ್‌ ನಗರದ ಫಾಯೆಟ್ಟೆ ಕೌಂಟಿ ರೆಸಿಡೆಂಟ್ಸ್‌ ನಲ್ಲಿ ಫ್ರೀ ಟ್ರಾಶ್‌ ಡಿಸ್‌ಪೋಸಲ್ ಡೇ (ಉಚಿತ ಕಸ ವಿಲೇವಾರಿ ದಿನ) ಎಂಬ ಒಂದು ದಿನದ ಅಭಿಯಾನ ಕೈಗೊಂಡಿದೆ.

ಏನಿದು ಫ್ರೀ ಟ್ರಾಶ್‌ ಡಿಸ್‌ಪೋಸಲ್ ಡೇ?
ಪ್ರತಿ ವರ್ಷ ಜನವರಿ 13ರಂದು ಫ್ರೀ ಟ್ರಾಶ್‌ ಡಿಸ್‌ಪೋಸಲ್ ಡೇ ಎನ್ನುವ ಅಭಿಯಾನವನ್ನು ಲ್ಯಾಕ್ಸಿಂಗ್‌ಟನ್‌ನಲ್ಲಿ ಒಂದು ರೀತಿಯ ಹಬ್ಬದಂತೆ ಕೈಗೊಳ್ಳಲಾಗುತ್ತದೆ. ನಗರವಾಸಿಗಳು ಈ ದಿನಕ್ಕೆಂದು ಕಾದು ಕುಳಿತುಕೊಳ್ಳುವುದಿದೆ. ಒತ್ತಡದ ಬದುಕಿನ ನಡುವೆ ಕೋಣೆಗಳನ್ನು ಖಾಲಿ ಮಾಡುವುದೇ ದೊಡ್ಡ ಸಂತಸ. ಈ ಅಭಿಯಾನ ಕೈಗೊಳ್ಳುವುದು ಬೆಳಗ್ಗೆ 6 ಗಂಟೆಯಿಂದ ಸಂಜೆ 6 ರವರೆಗೆ. ನಗರಾಭಿವೃದ್ಧಿಗೆ ಸಂಬಂಧಪಟ್ಟ ಅಧಿಕಾರಿಗಳು ದೊಡ್ಡ ದೊಡ್ಡ ಗಾಡಿಗಳಲ್ಲಿ ಬೇಡವಾದ ವಸ್ತುಗಳನ್ನು ಹೊತ್ತೂಯ್ಯಲು ಬರುತ್ತಾರೆ. ಆದರೆ ಎಲ್ಲಾ ವಸ್ತುಗಳನ್ನು ನೀಡಲು ಇಲ್ಲಿ ಅವಕಾಶವಿಲ್ಲ. ಮರುಬಳಕೆಗೆ ಯೋಗ್ಯವಾಗುವಂತಹ ಎಲೆಕ್ಟ್ರಾನಿಕ್‌ ವಸ್ತುಗಳು, ಮನೆಯ ಪೀಠೊಪಕರಣಗಳು, ಟಯರ್‌ ಮುಂತಾದ ವಸ್ತುಗಳನ್ನು ಯಾವುದೇ ವೆಚ್ಚವಿಲ್ಲದೆ ಸಾಗಹಾಕಬಹುದು. ಹೀಗೆ ಯಾವುದೋ ಮೂಲೆಯಲ್ಲಿ, ಅಥವಾ ಎಲ್ಲೆಂದರಲ್ಲಿ ಬಿಸಾಡುವ ವಸ್ತುಗಳನ್ನು ಒಂದೆಡೆ ಸೇರಿಸಿ ಮರುಬಳಕೆಗೆ ಪೂರಕವಾದ ವಸ್ತುಗಳನ್ನು ತಯಾರಿಸುವ ಈ ಕಾರ್ಯ ಸ್ವಚ್ಛ ನಗರ ನಿರ್ಮಾಣದೆಡೆಗೆ ಒಂದು ಉತ್ತಮ ಹೆಜ್ಜೆಯಾಗಿದೆ.

ಮಂಗಳೂರು ಅಭಿಯಾನಕ್ಕೆ ಮನಸ್ಸು ಮಾಡಲಿ
ಕೇಂದ್ರ ಸರಕಾರದ ಸ್ವಚ್ಛತಾ ಅಭಿಯಾನ ದೇಶದೆಲ್ಲೆಡೆ ಟ್ರೆಂಡ್‌ ರೀತಿಯಲ್ಲಿ ಹಬ್ಬಿಕೊಂಡು ಇವತ್ತಿಗೂ ಛಲಬಿಡದೆ ಈ ಕಾರ್ಯವನ್ನು ನಡೆಸುಕೊಂಡು ಬಂದಿರುವುದು ಪ್ರಶಂಸನೀಯ. ಇಂತಹ ಅಭಿಯಾನದ ಜತೆಗೆ ಮೇಲೆ ಹೇಳಿದ ಈ ರೀತಿಯ ಕಲ್ಪನೆ ಜೋಡನೆಗೊಂಡಾಗ ಇನ್ನಷ್ಟು ಸ್ವಚ್ಚತಾ ಕಾರ್ಯಕ್ಕೆ ಹೊಸ ಹುಮ್ಮಸ್ಸನ್ನು ನೀಡುತ್ತದೆ. ಈ ಕಲ್ಪನೆ ಕಾರ್ಯರೂಪಕ್ಕೆ ಬಂದಾಗ ಮುಂದೊಂದು ದಿನ ದೇಶದ ಪ್ರಮುಖ ನಗರಗಳ ಸಾಲಿನಲ್ಲಿ ಮಂಗಳೂರು ರಾರಾಜಿಸುವುದರಲ್ಲಿ ಸಂಶಯವಿಲ್ಲ.

-ವಿಶ್ವಾಸ್‌ ಅಡ್ಯಾರ್‌

ಟಾಪ್ ನ್ಯೂಸ್

mumbai1

ಮುಂಬೈ ದೋಣಿ ದುರಂತ: ನಾಪತ್ತೆಯಾಗಿದ್ದ ಬಾಲಕನ ಶವ ಪತ್ತೆ, ಮೃತರ ಸಂಖ್ಯೆ 15ಕ್ಕೆ ಏರಿಕೆ

Mangaluru: Ambedkar – Constitution should not be a tool for anyone: BL Santosh

Mangaluru: ಅಂಬೇಡ್ಕರ್‌ – ಸಂವಿಧಾನ ಯಾರಿಗೂ ಟೂಲ್‌ ಆಗಬಾರದು: ಕೈ ವಿರುದ್ದ ಸಂತೋಷ್‌ ಟೀಕೆ

ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!

ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!

Chintamani: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕಾರು… ಪತಿ ಸಾ*ವು, ಪತ್ನಿಗೆ ಗಾಯ

Chintamani: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕಾರು… ಪತಿ ಸಾ*ವು, ಪತ್ನಿ ಗಂಭೀರ

Delhi: ಆಮ್‌ ಆದ್ಮಿಯ ಮಾಜಿ ಶಾಸಕ ಸುಖ್ಬೀರ್‌ ದಲಾಲ್‌ ಬಿಜೆಪಿ ಸೇರ್ಪಡೆ, ಕೇಜ್ರಿಗೆ ಹಿನ್ನಡೆ

Delhi: ಆಮ್‌ ಆದ್ಮಿಯ ಮಾಜಿ ಶಾಸಕ ಸುಖ್ಬೀರ್‌ ದಲಾಲ್‌ ಬಿಜೆಪಿ ಸೇರ್ಪಡೆ, ಕೇಜ್ರಿಗೆ ಹಿನ್ನಡೆ

Nodidavaru Enanthare Movie: ನವೀನ್‌ ಶಂಕರ್‌ ಚಿತ್ರದ ಟೀಸರ್‌ ಬಂತು

Nodidavaru Enanthare Movie: ನವೀನ್‌ ಶಂಕರ್‌ ಚಿತ್ರದ ಟೀಸರ್‌ ಬಂತು

Nelamangala: ಐಷಾರಾಮಿ ಕಾರಿನ ಮೇಲೆ ಬಿದ್ದ ಕಂಟೈನರ್… ಒಂದೇ ಕುಟುಂಬದ 6 ಮಂದಿ ಸಾವು

Nelamangala: ಐಷಾರಾಮಿ ಕಾರಿನ ಮೇಲೆ ಬಿದ್ದ ಕಂಟೈನರ್… ಒಂದೇ ಕುಟುಂಬದ 6 ಮಂದಿ ಸಾ*ವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

mumbai1

ಮುಂಬೈ ದೋಣಿ ದುರಂತ: ನಾಪತ್ತೆಯಾಗಿದ್ದ ಬಾಲಕನ ಶವ ಪತ್ತೆ, ಮೃತರ ಸಂಖ್ಯೆ 15ಕ್ಕೆ ಏರಿಕೆ

Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ 

Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ 

Mangaluru: Ambedkar – Constitution should not be a tool for anyone: BL Santosh

Mangaluru: ಅಂಬೇಡ್ಕರ್‌ – ಸಂವಿಧಾನ ಯಾರಿಗೂ ಟೂಲ್‌ ಆಗಬಾರದು: ಕೈ ವಿರುದ್ದ ಸಂತೋಷ್‌ ಟೀಕೆ

ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!

ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.