ಗಾರ್ಡನಿಂಗ್ ನಿಮ್ಮಿಂದಲೂ ಸಾಧ್ಯ
Team Udayavani, Aug 3, 2019, 5:21 AM IST
ಮನೆ ಅಂದರೆ ಹಾಗಿರಬೇಕು, ನಮ್ಮ ಮನೆ ಹೀಗೆ ಕಟ್ಟಬೇಕು, ನಾವು ಮನೆಯನ್ನು ಒಪ್ಪ ಓರಣವಾಗಿ ಸಿಂಗರಿಸಿಡಬೇಕು ಇತ್ಯಾದಿಗಳ ಬಗ್ಗೆ ವಿಶೇಷ ಕಾಳಜಿ ವಹಿಸುವ ಅನೇಕ ಮಂದಿ ನಮ್ಮ ನಡುವೆ ಇದ್ದಾರೆ. ಯಾವ ರೀತಿಯ ವಿನ್ಯಾಸಗಳೊಂದಿಗೆ ನಮ್ಮ ಮನೆಯ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸುವುದಕ್ಕೆ ಸಾಧ್ಯ ಎನ್ನುವ ಬಗ್ಗೆಯೂ ನಮ್ಮ ಕಲ್ಪನಾ ಲಹರಿ ಹರಿಯುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಮನೆಯ ಮುಂದೆ ಎಲ್ಲರನ್ನೂ ನಸುನಗುತ್ತಾ ಸ್ವಾಗತಿಸುವ, ಮುದ ನೀಡುವ ಗಾರ್ಡನ್‌ಗಳ ಬಗ್ಗೆಯೂ ಕೊಂಚ ಗಮನ ಹರಿಸಿದರೆ ಅಂದದ ಮನೆ ಇನ್ನಷ್ಟು ಎದ್ದು ಕಾಣಿಸುತ್ತದೆ.
ಗಾರ್ಡನ್
ಹಸುರು ಸಮೃದ್ಧಿಯ ಸಂಕೇತ. ಇದನ್ನು ಪಾಸಿಟಿವ್ ಕಲರ್ ಎಂದು ನಂಬಿದವರೂ ನಮ್ಮಲ್ಲಿದ್ದಾರೆ. ನಿಸರ್ಗವೆಂದರೆ ಮೊದಲಿಗೆ ನಮಗೆ ನೆನಪಿಗೆ ಬರುವುದು ನಮ್ಮ ಮನದಾಳಕ್ಕೆ ಎಂದೂ ಹೋಗುವ ಬಣ್ಣ ಹಸಿರು. ಹೀಗೆ ಬಹು ವಿಧದಲ್ಲಿ ಮಾನ್ಯತೆ ಪಡೆದಿರುವ ಗ್ರೀನರಿಯ ಜತೆಗೆ ಇನ್ನೊಂದಷ್ಟು ಬಣ್ಣಗಳನ್ನು ಗಿಡ ಮರಗಳ ಮೂಲಕ ನಮ್ಮ ಅಂಗಳವನ್ನು ಶೃಂಗಾರ ಮಾಡಿದರೆ ನಮ್ಮ ಮನಸ್ಸಿನ ಜತೆಗೆ ಆಗಮಿಸುವ ಅತಿಥಿಗಳ ಸಂತೋಷವನ್ನು ವೃದ್ಧಿಸುವಲ್ಲಿಯೂ ಇದು ಕೆಲಸ ಮಾಡುತ್ತದೆ.
ಹೇಗಿದ್ದರೆ ಚೆನ್ನ
ನೀವು ಗಾರ್ಡನ್ ನಿರ್ಮಿಸಬೇಕು ಎಂದು ಯೋಚಿಸುತ್ತಿರುವ ಪ್ರದೇಶದಲ್ಲಿರುವ ಮಣ್ಣಗೆ ಅನುಗುಣವಾಗಿ ನೀವು ಬೆಳೆಸಬೇಕೆಂದಿರುವ ಸಸ್ಯಗಳ ಆಯ್ಕೆ ಇದ್ದರೆ ಚೆನ್ನ. ಜತೆಗೆ ಸೂರ್ಯನ ಬೆಳಕು ಹೇಗೆ ಬೀಳುತ್ತದೆ ಎನ್ನುವ ಆಧಾರದಲ್ಲಿ ಗಾರ್ಡನ್ ಏರಿಯಾವನ್ನು ಆಯ್ಕೆ ಮಾಡಿಕೊಳ್ಳುವುದು ಸಹ ತೀರಾ ಮುಖ್ಯ. ಜತೆಗೆ ಹೇಗೆ ಗಾರ್ಡನ್ ಏರಿಯಾವನ್ನು ಸಿದ್ಧ ಪಡಿಸುವುದು ಎನ್ನುವ ಕುರಿತಾದಂತೆ ನೀಲ ನಕಾಶೆಯನ್ನು ಸಿದ್ಧ ಪಡಿಸಿ, ಆ ರೀತಿಯಲ್ಲಿಯೇ ಅದಕ್ಕೆ ಯೋಜನೆಗಳನ್ನು ರೂಪಿಸಿಕೊಂಡಿರಿ ಎಂದಾದಲ್ಲಿ ನಿಮ್ಮ ಗಾರ್ಡನ್ ಕನಸು ಮತ್ತಷ್ಟು ಪರಿಣಾಮಕಾರಿಯಾಗಿ ಮೂಡುವುದು ಸಾಧ್ಯ.
ಗಾರ್ಡನ್‌ನಲ್ಲಿ ನಿಮ್ಮ ಮನೆಯಲ್ಲಿಯೇ ಉಪಯೋಗಕ್ಕಿಲ್ಲದ ಹಳೆಯ ಪಾತ್ರೆಗಳು, ಬಕೆಟ್, ಮಗ್ ಇತ್ಯಾದಿಗಳನ್ನು ಬಳಕೆ ಮಾಡಿ ಸಸಿ ನೆಟ್ಟರೆ ಕಡಿಮೆ ಖರ್ಚಿನಲ್ಲಿ ಹಸಿರುಮನೆಯು ನಿಮ್ಮನೆ ಮುಂದೆ ನಿರ್ಮಾಣವಾಗುತ್ತದೆ. ಅದರೊಂದಿಗೆ ನಿಮ್ಮನೆಯಲ್ಲಿ ರಾಶಿ ಬಿದ್ದ ಹಳೆ ವಸ್ತುಗಳಿಗೂ ಮುಕ್ತಿ ಕೊಟ್ಟ ನೆಮ್ಮದಿ ನಿಮ್ಮ ಪಾಲಿನದಾಗುತ್ತದೆ. ನೀರಿನ ವ್ಯವಸ್ಥೆಯ ಬಗೆಗೂ ನೀವು ಚಿತ್ತ ಹರಿಸಿದಿರಿ ಎಂದಾದಲ್ಲಿ ವರ್ಷಪೂರ್ತಿ ಅವು ತಾಜಾ ಎನಿಸಿಕೊಳ್ಳುತ್ತದೆ
ಇನ್ನು ನಿಮ್ಮ ಕೈತೋಟ ಅಥವಾ ಗಾರ್ಡನ್ ಏರಿಯಾದಲ್ಲಿ ನೀವು ಬಣ್ಣ ಬಣ್ಣದ ಹೂಬಿಡುವ ಗಿಡಗಳನ್ನು ನೆಡುವಲ್ಲಿ ಮತ್ತು ಅವುಗಳನ್ನು ಕಾಳಜಿ ವಹಿಸಿ ನೋಡಿಕೊಳ್ಳುವತ್ತಲೂ ಮನ ನೆಟ್ಟಿರೆಂದಾದಲ್ಲಿ ಸೊಗಸಾದ ಹಸಿರು ಹೂಬನ ಮನೆಯ ಸೌಂದಯ ಹೆಚ್ಚಿಸುತ್ತದೆ •
•ಭುವನ ಬಾಬು, ಪುತ್ತೂರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.