ಹೊಸ ವರ್ಷದ ಸ್ವಾಗತಕ್ಕೆ ಮನೆಯೂ ಸಿದ್ಧವಾಗಲಿ


Team Udayavani, Dec 29, 2018, 7:07 AM IST

29-december-8.jpg

ಹೊಸ ವರ್ಷಕ್ಕೆ ಇನ್ನು ಕೆಲವೇ ದಿನಗಳಷ್ಟೇ ಬಾಕಿ. ಈಗಾ ಗಲೇ ಎಲ್ಲಿ, ಹೇಗೆ ಪಾರ್ಟಿ ಮಾಡಬೇಕು ಎಂಬ ಪ್ಲ್ರಾನಿಂಗ್‌ ಆರಂಭವಾಗಿದೆ. ಕೆಲವರು ಮನೆಯಲ್ಲೇ ವಿವಿಧ ಕಾರ್ಯಕ್ರಮ ನಡೆಸುವ ಮೂಲಕ ಹೊಸ ವರ್ಷದ ಸ್ವಾಗತಕ್ಕೆ ತಯಾರಿ ನಡೆಸುತ್ತಿದ್ದಾರೆ. ಮನೆಯಲ್ಲೇ ಪಾರ್ಟಿ ಮಾಡುವುದಿದ್ದರೆ, ಹೊಸ ವರ್ಷದಲ್ಲಿ ಮನೆಗೆ ಕೊಂಚ ಹೊಸತನವನ್ನು ಕೊಡಬೇಕೆಂದಿದ್ದರೆ ಕೆಲವೊಂದು ಐಡಿಯಾಗಳು ಇಲ್ಲಿವೆ. 

ಹೊಸ ವರ್ಷದ ಸ್ವಾಗತಕ್ಕೆ ಮನಸ್ಸು ಮಾತ್ರವಲ್ಲ ಮನೆಯೂ ಸಿದ್ಧವಾಗಬೇಕು. ಇನ್ನು ಏನಿದ್ದರೂ ಶುಭ ಸಮಾರಂಭಗಳು ಆರಂಭಗೊಳ್ಳುತ್ತವೆ. ಅತಿಥಿ ಗಣ್ಯರು ಹೆಚ್ಚಾಗಿ ಮನೆಗೆ ಬರುತ್ತಿರುತ್ತಾರೆ. ಹೀಗಾಗಿ ಮನೆಯೊಳಗೆ, ಹೊರಗೆ ಕೊಂಚ ಬದಲಾವಣೆ ಮಾಡಬೇಕು ಎಂಬ ಯೋಚನೆ ಇದ್ದರೆ ಕೂಡಲೇ ಅದನ್ನು ಜಾರಿಗೆ ತನ್ನಿ. ಯಾಕೆಂದರೆ ಹೊಸ ವರ್ಷಕ್ಕೆ ಮನೆಯೂ ಹೊಸ ಲುಕ್‌ ಪಡೆಯಲಿ.

ಹೊಸ ವರ್ಷದ ಪಾರ್ಟಿಗೆ ಮಾತ್ರವಲ್ಲ ವರ್ಷ ವಿಡೀ ಮನೆಯ ಆಕ ರ್ಷಣೆ ಹೆಚ್ಚಿಸಲು ಪ್ರಯತ್ನಿಸಿ. ಪೀಠೊಪಕರಣ, ಬಣ್ಣ, ಕುಶನ್ಸ್‌ ಕವರ್‌, ಕರ್ಟನ್‌ ಗಳಲ್ಲಿ ಒಂದಷ್ಟು ಬದಲಾವಣೆಗಳನ್ನು ಮಾಡಿಕೊಳ್ಳಿ. ಆಗ ಮನೆ ಹೆಚ್ಚು ಸುಂದರವಾಗಿ ಕಾಣುವುದು ಮಾತ್ರವಲ್ಲ ಎಲ್ಲರ ಆಕರ್ಷಣೆಗೂ ಕಾರಣವಾಗುತ್ತದೆ.

ಏನು ಮಾಡಬಹುದು?
 ಕೇಕ್‌ ಟೇಬಲ್‌ಗೆ ಹೊಸ ಲುಕ್‌
ಹೊಸ ವರ್ಷದ ಆಚರಣೆ ಎಂದರೆ ಹೊಸ ಮಾತ್ರವಲ್ಲ, ವರ್ಷದಲ್ಲಿ ಮನೆಯಲ್ಲಿರುವವರ ಬರ್ತ್‌ ಡೇ, ಆನಿವರ್ಸರಿ ಸಹಿತ ವಿವಿಧ ಕಾರ್ಯಕ್ರಮಗಳು ಇದ್ದೇ ಇರುತ್ತ ದೆ. ಹೀಗಾಗಿ ಕೇಕ್‌ ಟೇಬಲ್‌ ಸಿಂಪಲ್‌ ಆಗಿದ್ದರೆ ಚೆನ್ನಾಗಿರುವುದಿಲ್ಲ. ಅದಕ್ಕಾಗಿ ಟೇಬಲ್‌ನ ಅಲಂಕಾರದತ್ತ ಗಮನ ನೀಡಿ. ಕೇಕ್‌ ಟೇಬಲ್‌ನ ಸುತ್ತ ಸುಂದರವಾದ ಕರ್ಟನ್‌ ಜೋಡಿಸಿ. ಕಾರ್ಯಕ್ರಮಕ್ಕೆ ತಕ್ಕಂತೆ ಶುಭ ಹಾರೈಸುವ ಬಣ್ಣ ಬಣ್ಣದ ಕಾಗದವನ್ನು ಬರೆದು ನೂಲಿನ ಸಹಾಯದಿಂದ ಕರ್ಟನ್‌ ಮೇಲೆ ಜೋಡಿಸಿ. ಇದು ಟೇಬಲ್‌ಗೆ ಆಕರ್ಷಕವಾದ ಲುಕ್‌ ನೀಡುತ್ತದೆ. ಟೇಬಲ್‌ ಮೇಲೆ ಬಟ್ಟೆ ಹಾಕಿ. ಕೇಕ್‌, ಸಿಹಿ ತಿಂಡಿಗಳನ್ನು ಬಿಳಿ ಬಣ್ಣದ ಟ್ರೇಯಲ್ಲಿ ಜೋಡಿಸಿಟ್ಟರೆ ಟೇಬಲ್‌ ಹೆಚ್ಚು ಸುಂದರವಾಗಿ ಕಾಣುವುದು.

 ಬಲೂನ್‌, ಬಣ್ಣದ ಕಾಗದ
ವಿವಿಧ ಕಾರ್ಯಕ್ರಮಗಳಲ್ಲಿ ಮನೆಯನ್ನು ಅಲಂಕರಿಸಲು ಬಲೂನ್‌, ಬಣ್ಣದ ಕಾಗದಗಳನ್ನು ತಂದಿರಿಸಿ. ಪಾರ್ಟಿ ನಡೆಯುವ ಕೋಣೆಯನ್ನು ಇದರಿಂದ ಅಲಂಕರಿಸಿ. ಗೋಡೆಯ ಬಣ್ಣಕ್ಕೆ ಹೊಂದಿಕೆಯಾಗುವ ಬಲೂನ್‌ ಗಳನ್ನು ಬಳಸಿ. ಬಲ್ಬ್ಗಳ ಮಧ್ಯೆ ಬಲೂನ್‌ ಗಳನ್ನು ಗೊಂಚಲಾಗಿ ನೇತಾಡಿಸಿ. ಇದರಿಂದ ಕೋಣೆ ಹೆಚ್ಚು ಸುಂದರವಾಗಿ ಕಾಣುತ್ತದೆ. ಬಂಗಾರದ ಬಣ್ಣದ ಕಾಗದಗಳನ್ನು ವಿವಿಧ ಆಕೃತಿಯಲ್ಲಿ ಕತ್ತರಿಸಿ ಆಲಂಕಾರಿಕ ಬಲ್ಬ್ ಗಳಿಗೆ ಹೊದಿಸಿ. ಕೇಕ್‌ ಟೇಬಲ್‌ಗ‌ೂ ಬಲೂನ್‌ ಜೋಡಿಸಿ.

 ನಕ್ಷತ್ರಗಳ ಅಲಂಕಾರವಿರಲಿ
ಕಾರ್ಡ್‌ ಬೋರ್ಡ್‌ ತುಂಡುಗಳನ್ನು ನಕ್ಷತ್ರದ ಆಕಾರಕ್ಕೆ ಕತ್ತರಿಸಿ ಅದಕ್ಕೆ ಚಿನ್ನದ ಬಣ್ಣ ಹಾಕಿ ಹೊಳೆಯುವಂತೆ ಮಾಡಿ. ಇದನ್ನು ಮನೆಯ ಎದುರು ಭಾಗದಲ್ಲಿ, ಮನೆಯ ಒಳಾಂಗಣದಲ್ಲಿ ನೋತಾಡಿಸಿ. ಇದು ಮನೆಯೊಳಗೆ ಪಾರ್ಟಿ ಲುಕ್‌ ಒದಗಿಸುತ್ತದೆ. ಸಿಲ್ವರ್‌, ಗೋಲ್ಡನ್‌ ಬಣ್ಣದ ರೆಡಿಮೇಡ್‌ ನಕ್ಷತ್ರ , ಬಾಲ್‌ಗ‌ಳು ಮಾರುಕಟ್ಟೆಯಲ್ಲಿ ಸಿಗುತ್ತವೆ. ಇದನ್ನು ತಂದು ಅಲಂಕರಿಸಬಹುದು.

 ಸಾಂಪ್ರದಾಯಿಕ ಅಲಂಕಾರವೂ ಇರಲಿ
ಸೋಫಾ ಕುರ್ಚಿಗಳ ಅಲಂಕಾರಕ್ಕೆ ಲೆದರ್‌ನ ಬಟ್ಟೆಗಳನ್ನು ಬಳಸಿ. ಇದು ಮನೆಯೊಳಗೆ ಗ್ರ್ಯಾಂಡ್‌ ಲುಕ್‌ ನೀಡುತ್ತದೆ ಮಾತ್ರವಲ್ಲ ಸಾಂಪ್ರದಾಯಿಕ ಲುಕ್‌ ಅನ್ನು ಒದಗಿಸುತ್ತದೆ. ಲಿವಿಂಗ್‌ ರೂಮ್‌ನ ಅಂದ ಹೆಚ್ಚಿಸಲು ಒಂದು ಸುಂದರ ಸೋಫಾ ಸಾಕು. ಅದಕ್ಕೆ ವೆಲ್‌ ವೆಟ್‌ ಬಟ್ಟೆಯ ಕವರ್‌ ಹೊದೆಸಿ. ಇದರಿಂದ  ಅಂದರ ಅಂದ ಮಾತ್ರವಲ್ಲ ಕೋಣೆಯ ಸೌಂದರ್ಯವೂ ಇಮ್ಮಡಿಯಾಗುವುದು.

ಕೆಲವು ಪೀಠೊಪಕರಣ, ವಸ್ತುಗಳು ಸಾಂಪ್ರದಾಯಿಕ ಶೈಲಿಯಲ್ಲಿದ್ದರೆ ಹೆಚ್ಚು ಸುಂದರವಾಗಿ ಕಾಣುತ್ತದೆ. ದೇವರ ಕೋಣೆಗೆ ಯಾವುದೇ ಅಲಂಕಾರ ಬೇಡ. ಹಣತೆ, ಹೂವಿನ ಶೃಂಗಾರವಿದ್ದರೆ ಸಾಕು. ಮನೆಯೊಳಗೆ, ಹೊರಗೆ ತೂಗು ದೀಪಗಳು ಇರಲಿ. ಲೈಟ್‌ಗಳಲ್ಲಿ ಇತ್ತೀಚಿನ ವಿನೂತನ ಪ್ರಯೋಗವೆಂದರೆ ಅಣಬೆ ಆಕಾರದ ಲೈಟ್‌ ಗಳು. ಜಪಾನಿ ಡಿಸೈನರ್‌ ಮಾಡಿರುವ ಈ ಸಣ್ಣ ಲೈಟ್‌ ನೊಳಗೆ ಎಲ್‌ಇಡಿ ಬಲ್ಬ್ಗಳು ಇರುತ್ತವೆ. ಇದು ಬಣ್ಣಗಳನ್ನು ಬದಲಿಸುತ್ತಾ ಇರುತ್ತದೆ.

ಇನ್ನು ವಿಶ್ರಾಂತಿ ಕೊಠಡಿಯಲ್ಲಿ ಬೆಡ್‌ ಮೇಲೆ ಮೃದು ವಾದ ಬೆಡ್‌ ಶೀಟ್‌ ಹಾಸಿ. ಇದು ಕೋಣೆಯ ಸೌಂದರ್ಯ ಹೆಚ್ಚಿಸುವುದರೊಂದಿಗೆ ಹೆಚ್ಚು ಚಳಿ ಇರುವ ಈ ಸಂದರ್ಭದಲ್ಲಿ ಮನೆಗೆ ಬಂದ ಅತಿಥಿಗಳಿಗೆ ರಾತ್ರಿ ಮಲಗುವಾಗ ಬೆಚ್ಚನೆಯ ಅನುಭವವನ್ನು ಕೊಡುತ್ತದೆ.

 ವಿಶೇಷ ಪೀಠೊಪಕರಣ ಬಳಸಿ
ಅತ್ಯಾಧುನಿಕ ಶೈಲಿಯ ಪೀಠೊಪಕರಣಗಳೂ ಇರಲಿ. ಇತ್ತೀಚಿನ ದಿನಗಳಲ್ಲಿ ವಕ್ರ ಆಕೃತಿಯ ಪೀಠೊಪಕರಣಗಳು ಟ್ರೆಂಡ್‌ ಆಗಿವೆ. ಹೀಗಾಗಿ ಪೀಠೊಪಕರಣ ಬದಲಾಯಿಸಬೇಕೆನ್ನುವವರಿಗೆ ಇದು ಸೂಕ್ತ ಕಾಲ. ವೃತ್ತಾಕಾರದ ಸೋಫಾ, ಕುರ್ಚಿಗಳು ಮನೆ ಅಲಂಕಾರಕ್ಕೆ ಮತ್ತಷ್ಟು ಮೆರುಗು ನೀಡುತ್ತವೆ.

 ಮೂಲಿಕೆ ಉದ್ಯಾನ
ಮನೆ ಸುತ್ತಮುತ್ತ, ಅಡುಗೆ ಕೋಣೆ ಬಳಿ ಅಡುಗೆಗೆ ಬಳಸುವಂತಹ ಗಿಡಗಳನ್ನು ಬೆಳೆಸುವ ಮೂಲಕ ಮೂಲಿಕೆ ಉದ್ಯಾನವನವನ್ನು ಸೃಷ್ಟಿಸಬಹುದು. ನರ್ಸರಿಗಳಲ್ಲಿ ಸಿಗುವ ಗಿಡಗಳನ್ನು ತಂದು ಪಾಟ್‌ ನಲ್ಲಿ ಹಾಕಿ ಅಲಂಕರಿಸಿದರೆ ಮನೆಯ ಅಂದವೂ ಹೆಚ್ಚಾಗುವುದು.

ಡೈನಿಂಗ್‌ ಟೇಬಲ್‌ ಸುಂದರವಾಗಲಿ
ವಿಶೇಷ ಸಂದರ್ಭದಲ್ಲಿ ಎಲ್ಲರ ಗಮನ ಸೆಳೆಯುವುದು ಡೈನಿಂಗ್‌ ಟೇಬಲ್‌ ಗಳು. ಹೀಗಾಗಿ ಇಲ್ಲಿರುವ ವಸ್ತುಗಳು ಒಂದೇ ಬಣ್ಣದಲ್ಲಿರಲಿ. ಸಿಹಿ, ಖಾರ ತಿಂಡಿಗಳನ್ನು ಸಮಾನವಾಗಿ ಜೋಡಿಸಿ. ಇಲ್ಲಿ ಯಾವುದೇ ಬಣ್ಣದ ಕಾಗದಗಳಿಂದ ಅಲಂಕರಿಸಬೇಡಿ. ಬದಲಿಗೆ ಕ್ಯಾಂಡಲ್‌ ಹಚ್ಚಿ, ಹೂದಾನಿಗಳನ್ನು ಇರಿಸಿ.

ಎಥ್ನಿಕ್‌ ರಗ್‌ ಈಗೀನ ಟ್ರೆಂಡ್‌
ಇತ್ತೀಚೆಗೆ ಮಾರ್ಕೆಟ್‌ ನಲ್ಲಿ ಎಥ್ನಿಕ್‌ ರಗ್‌ ಗಳು ಟ್ರೆಂಡ್‌ ಸೃಷ್ಟಿಸಿವೆ. ಹೆಚ್ಚು ತಿಳಿ ಬಣ್ಣದ ಪ್ರಿಟೆಂಡ್‌ ರಗ್‌ ಗಳನ್ನು ಕೊಳ್ಳ ಬೇಕು. ಇದನ್ನು ನೆಲಕ್ಕೆ ಹಾಸಲು, ವಾಲ್‌ ಆರ್ಟ್‌ ಆಗಿ ಕೂಡ ಬಳಸಬಹುದು. ಆದಷ್ಟು ಹಗುರವಾದ ರಗ್‌ ಗಳನ್ನೇ ಆಯ್ಕೆ ಮಾಡಿ. ಇದರ ನಿರ್ವಹಣೆ ಸುಲಭವಾಗುವುದು. 

 ಸುಶ್ಮಿತಾ, ಧನ್ಯಾ 

ಟಾಪ್ ನ್ಯೂಸ್

BSY1

ಮಹಿಳೆಯರಿಗೆ ಉಚಿತ ಕೊಟ್ಟು, ಪುರುಷರಿಗೆ ಬಸ್‌ ದರ ಏರಿಕೆ ಭಾರ ಸರಿಯಲ್ಲ: ಬಿ.ಎಸ್‌.ಯಡಿಯೂರಪ್ಪ

Na-Desoza

Passes Away: ಹಿರಿಯ ಸಾಹಿತಿ ನಾ.ಡಿ’ಸೋಜಾ ವಿಧಿವಶ

8

ಉತ್ತರ ಭಾರತದಲ್ಲಿ ಕವಿದ ಮಂಜು: ವಿಮಾನ ವ್ಯತ್ಯಯ

11

PAK- SA: 421 ರನ್ನುಗಳ ಭಾರೀ ಹಿನ್ನಡೆ; ಪಾಕಿಸ್ಥಾನಕ್ಕೆ ಫಾಲೋಆನ್‌

10

ODI: ಶ್ರೀಲಂಕಾ ಬ್ಯಾಟಿಂಗ್‌ ಕುಸಿತ; ನ್ಯೂಜಿಲ್ಯಾಂಡ್‌ಗೆ ಸುಲಭ ಜಯ

Yathanaa

BJP Inner Politics: ಬಿ.ವೈ.ವಿಜಯೇಂದ್ರ ಬಿಜೆಪಿ ಹಂಗಾಮಿ ರಾಜ್ಯಾಧ್ಯಕ್ಷ: ಬಸನಗೌಡ ಯತ್ನಾಳ್‌

7

‌RJD ಜೊತೆ ಮೈತ್ರಿ ಮಾಡಿಕೊಂಡು 2 ಬಾರಿ ತಪ್ಪೆಸಗಿದ್ದೆ: ನಿತೀಶ್‌ ಕುಮಾರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

BSY1

ಮಹಿಳೆಯರಿಗೆ ಉಚಿತ ಕೊಟ್ಟು, ಪುರುಷರಿಗೆ ಬಸ್‌ ದರ ಏರಿಕೆ ಭಾರ ಸರಿಯಲ್ಲ: ಬಿ.ಎಸ್‌.ಯಡಿಯೂರಪ್ಪ

1-idpp

Actor; ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಟಿ ಡಿಂಪಲ್‌ ಕಪಾಡಿಯಾ

1-kukke

Kukke Subrahmanya: ಕಿರುಷಷ್ಠಿ ರಥೋತ್ಸವ

1-mang

Mangaluru ಧರ್ಮಪ್ರಾಂತ;ವಾರ್ಷಿಕ ಪರಮ ಪವಿತ್ರ ಪ್ರಸಾದದ ಮೆರವಣಿಗೆ

arrest-woman

Mulki: ತಲೆಮರೆಸಿಕೊಂಡಿದ್ದ ಆರೋಪಿ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.