ಕಿಚನ್ ರೂಮ್‌ಗೆ ನೀಡಿ ಆಧುನಿಕ ಟಚ್
Team Udayavani, Sep 1, 2018, 2:58 PM IST
ಅಡುಗೆ ಕೋಣೆ ಸ್ವಚ್ಛವಾಗಿದ್ದರೆ ಮಾತ್ರ ಸಾಲದು ಸುಂದರವಾಗಿಯೂ ಇರಬೇಕು. ಆಗಲೇ ಮನೆ ಮಂದಿಗೆ ಇಷ್ಟವಾಗುವಂತ ವಿಧವಿಧದ ಅಡುಗೆ ಮಾಡಲು ಮನಸ್ಸಾಗುವುದು. ಮನೆ ಮಂದಿಯಲ್ಲಿ ಹೊಸ ಚೈತನ್ಯ ತುಂಬುವ ಅಡುಗೆ ಮನೆಯನ್ನು ಇನ್ನಷ್ಟು ಸುಂದರಗೊಳಿಸಲು ಕೆಲವು ವಿಧಾನಗಳನ್ನು ಅನುಸರಿಸಿದರೆ ಸಾಕು.
ಹೈಟೆಕ್ ಗ್ಯಾಜೇಟ್‌ಗಳ ಬಳಕೆ
ಮಿಕ್ಸರ್ ಗ್ರೈಂಡರ್, ಮೈಕ್ರೋವೇವ್, ಸ್ವಶುಚಿತ್ವದ ಚಿಮಣಿಗಳು ಸಹಿತ ಅಡುಗೆ ಕೋಣೆಯಲ್ಲಿ ಹೊಸ ಹೊಸ ತಂತ್ರಜ್ಞಾನದ ಜೋಡಣೆಯಾದರೆ ಮತ್ತಷ್ಟು ಮೆರುಗು ತರುತ್ತವೆ.
ಬಣ್ಣಗಳ ಆಯ್ಕೆ
ಅಡುಗೆ ಕೋಣೆಗೆ ಎರಡು ಶೇಡ್‌ನಲ್ಲಿ ಬಣ್ಣ ಬಳಸುವುರಿಂದ ಸೌಂದರ್ಯ ಹೆಚ್ಚಿಸಬಹುದು. ಕೆಳಸ್ತರದಲ್ಲಿ ಗಾಢಬಣ್ಣ, ಮೇಲ್‌ಸ್ತರದಲ್ಲಿ ತಿಳಿ ಬಣ್ಣಗಳನ್ನು ಬಳಸುವುದು ಉತ್ತಮ.
ತೆರೆದ ಕವಾಟುಗಳು
ಆಧುನಿಕ ಅಡುಗೆ ಕೋಣೆಗಳಲ್ಲಿ ತೆರೆದ ಕವಾಟುಗಳು ಹೆಚ್ಚು ಪ್ರಚಲಿತವಾಗುತ್ತಿವೆ. ಇದು ಸಸ್ಯಗಳು, ಆಲಂಕಾರಿಕ ಪರಿಕರಗಳನ್ನು ಇಡಲು ಸ್ಥಳಗಳನ್ನು ಒದಗಿಸುತ್ತದೆ. ಧೂಳಿನ ಸಮಸ್ಯೆಗಳನ್ನು ಕಡಿಮೆ ಮಾಡಲು ಬಯಸುವವರು ಮುಚ್ಚಿದ ಕವಾಟುಗಳನ್ನು ಬಳಸಬಹುದು.
ಬಹುಬಳಕೆ
ಅಡುಗೆ ಮನೆಯಲ್ಲಿಡುವ ಪ್ರತಿಯೊಂದು ವಿನ್ಯಾಸವೂ ಬಹುಬಳಕೆಗೆ ಉಪಯೋಗವಾಗುವಂತಿರಬೇಕು. ಮೈಕ್ರೋ ವೇವ್ ಮತ್ತು ಓವನ್, ಡೈನಿಂಗ್ ಮತ್ತು ಕಿಚನ್ ಹೀಗೆ. ಒಂದು ಸ್ಥಳ ಎರಡು ವಿಷಯಕ್ಕಾಗಿ ಉಪಯೋಗವಾಗುವಂತಿದ್ದರೆ ಅಡುಗೆ ಮನೆ ಹೆಚ್ಚು ಸುಂದರವಾಗಿ ಕಾಣುತ್ತದೆ.
ಬೆಳಕು
ಅಡುಗೆ ಮನೆಯಲ್ಲಿರುವ ಕಾರ್ಯ ಹಾಗೂ ವಿನ್ಯಾಸಕ್ಕೆ ಅನುಗುಣವಾಗಿ ಬೆಳಕು ಆವಶ್ಯಕ. ಅಲಂಕಾರಿಕ ದೀಪಗಳು ಕೋಣೆಯ ವಿನ್ಯಾಸಕ್ಕೆ ಮತ್ತಷ್ಟು ಮೆರುಗು ತುಂಬು ತ್ತ ವೆ.
ರಮ್ಯಾ ಕೆದಿಲಾಯ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.