ಡಿಜಿಟಲ್ ಶುಲ್ಕಕ್ಕೆ ವಿದಾಯ
Team Udayavani, Aug 4, 2019, 5:37 AM IST
ಕೇಂದ್ರ ಸರಕಾರ ಬಜೆಟ್ ಮಂಡಿಸುವಾಗ ಜನಸಾಮಾನ್ಯರು ಯಾರೂ ಅಷ್ಟಾಗಿ ಗಮನಿಸದ ಒಂದು ಸಂಗತಿಯನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಪ್ರಸ್ತಾವಿಸಿದರು. ‘ಡಿಜಿಟಲ್ ವಹಿವಾಟಿನ ವೇಳೆ ಎಂಡಿಆರ್ (ಮರ್ಚಂಟ್ ಡಿಸ್ಕೌಂಟ್ ರೇಟ್) ಅನ್ನು ರದ್ದುಗೊಳಿಸಿದ್ದೇವೆ. ಇದು 50 ಕೋಟಿ ರೂ.ಗಿಂತ ಹೆಚ್ಚು ವಹಿವಾಟು ಹೊಂದಿರುವ ಎಲ್ಲ ಉದ್ಯಮಗಳಿಗೂ ಅನ್ವಯಿಸಲಿದೆ’ ಎಂದರು.
ಆರಂಭದಲ್ಲಿ ಇದರ ಸಾಧಕಗಳ ಕುರಿತಾಗಿ ಜನರು ಅಷ್ಟಾಗಿ ತಲೆಕೆಡಿಸಿಕೊಳ್ಳಲಿಲ್ಲ. ಆದರೆ ಕೆಲವೇ ದಿನಗಳಲ್ಲಿ ಈ ಪ್ರಸ್ತಾವಕ್ಕೆ ಒಂದು ಸ್ಪಷ್ಟ ರೂಪ ಸಿಕ್ಕಿತು.
ಎಂಡಿಆರ್ ರದ್ದತಿಯಿಂದ ಲಾಭ
ಎಂಡಿಆರ್ ರದ್ದುಗೊಳಿಸಿದ್ದರಿಂದ ಎಲ್ಲ ವರ್ಗಗಳ ಜನರಿಗೆ ಭಾರೀ ಪ್ರಮಾಣದಲ್ಲಿ ಅನುಕೂಲವಾಗಲಿದೆ. ಅದು ಹೇಗೆ ಎನ್ನುತ್ತೀರಾ? ಅದೇ ಸ್ವಾರಸ್ಯ. ನಾವು ಖರೀದಿಸಿದ ವಸ್ತು ಅಥವಾ ಸೇವೆಗೆ ಕಾರ್ಡ್ ಬಳಸಿ ಪಾವತಿ ಮಾಡಿದಾಗ ಅದರ ಮೇಲೆ ಶೇ. 1ರಿಂದ 2ರ ವರೆಗೆ ಶುಲ್ಕ ವಿಧಿಸುವುದುಂಟು. ಅದನ್ನು ಎಂಡಿಆರ್ ಎಂದು ಕರೆಯಲಾಗುತ್ತದೆ. ಮೋದಿ ಸರಕಾರ ಬಂದು 500 ಹಾಗೂ 1000 ರೂ.ಗಳ ನೋಟು ಅಮಾನ್ಯ ಮಾಡಿದ ಮೇಲೆ ಈ ರೀತಿ ಶುಲ್ಕ ವಿಧಿಸುವುದನ್ನು ತಾತ್ಕಾಲಿಕವಾಗಿ ನಿಲ್ಲಿಸಿ ಡಿಜಿಟಲ್ ಪಾವತಿ ಮಾಡುವಂತೆ ಪ್ರೋತ್ಸಾಹ ನೀಡಿದ್ದರು.
ಆದರೆ, ಈ ಶುಲ್ಕವನ್ನು ಗ್ರಾಹಕರಿಗೆ ವಿಧಿಸುತ್ತಿರಲಿಲ್ಲ. ಬ್ಯಾಂಕ್‌ಗಳು ಗ್ರಾಹಕರಿಗೆ ವಿಧಿಸುತ್ತಿದ್ದವು. ನಾವು ಅಂಗಡಿಯಿಂದ 100 ರೂ. ಸಾಮಗ್ರಿ ಖರೀದಿ, ಎಸ್‌ಬಿಐ ಕಾರ್ಡ್ ಮೂಲಕ ಪಾವತಿಸಿದರೆ, ಬ್ಯಾಂಕ್ ಮಳಿಗೆಯವರಿಗೆ ಕೇವಲ 99 ರೂ. ನೀಡುತ್ತಿತ್ತು. 1 ರೂ.ವನ್ನು ಡಿಜಿಟಲ್ ಸೇವೆಗೆ ಶುಲ್ಕ ರೂಪದಲ್ಲಿ ಕಡಿತಗೊಳಿಸುತ್ತಿತ್ತು. ಸರಕಾರದ ಹೊಸ ನಿರ್ಧಾರದಿಂದ ಬ್ಯಾಂಕ್‌ಗಳು ಡಿಜಿಟಲ್ ಸೇವೆಗೆ ಅಂಗಡಿಗಳಿಗೆ ಶುಲ್ಕ ವಿಧಿಸುವಂತಿಲ್ಲ! ಪೂರ್ತಿ ಹಣ ಪಾವತಿಯಾಗುತ್ತದೆ. ಮೊದಲು 20 ಲಕ್ಷ ರೂ.ಗಳಿಗಿಂತ ಕಡಿಮೆ ವಾರ್ಷಿಕ ವಹಿವಾಟು ಇರುವ ಸಂಸ್ಥೆಗಳಿಗೆ ಶುಲ್ಕ ವಿಧಿಸುತ್ತಿರಲಿಲ್ಲ.
ನಮ್ಮ ಬಳಿ ಇರುವ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಒಂದು ನಿರ್ದಿಷ್ಟ ಬ್ಯಾಂಕ್‌ನದು ಆಗಿರುತ್ತದೆ. ಆದರೆ ಅದನ್ನು ಎಲ್ಲಿ ಬೇಕಾದರೂ ಸ್ವೈಪ್ ಮಾಡಿ, ಹಣ ಪಾವತಿಸಲು ಸಾಧ್ಯವಾಗಿತ್ತು ಡಿಜಿಟಲ್ ಕ್ರಾಂತಿಯಿಂದ. ನೆಟ್ವರ್ಕ್ ಸೇವೆಯಿಂದಾಗಿ ಆನ್‌ಲೈನ್ ಪಾವತಿ ಸುಲಭಸಾಧ್ಯವಾಗಿದೆ. ಇದಕ್ಕೆಂದೇ ವೀಸಾ, ಮಾಸ್ಟರ್ ಕಾರ್ಡ್‌ಗಳಿವೆ. ಇತ್ತೀಚೆಗೆ ಕೇಂದ್ರ ಸರಕಾರದ ರುಪೇ ವ್ಯವಸ್ಥೆಯೂ ಇದೆ. ಈ ರಿಯಾಯಿತಿ ಖಾಸಗಿ ಸೇವಾ ಸಂಸ್ಥೆಗಳಿಗೆ ಅನ್ವಯಿಸುವುದಿಲ್ಲ. ಬ್ಯಾಂಕ್‌ಗಳು ಈ ಹೊರೆಯನ್ನು ಭರಿಸಬೇಕಾಗುತ್ತದೆ. ಈ ಹೊರೆಯನ್ನು ನಿವಾರಿಸಲೂ ಕೇಂದ್ರ ಸರಕಾರ ಹಾದಿ ಕಂಡುಕೊಂಡಿದೆ. ಎರಡು ಕೋಟಿ ರೂ.ಗಿಂತ ಹೆಚ್ಚು ನಗದು ವಹಿವಾಟು ನಡೆಸುವವರಿಗೆ ಶೇ. 2ರಷ್ಟು ತೆರಿಗೆ ವಿಧಿಸಲು ನಿರ್ಧರಿಸಿದೆ. ಈ ವಿಧಾನದಿಂದ ಸಂಗ್ರಹವಾದ ಹಣ ಕಾರ್ಡ್ ಸೇವೆ ಒದಗಿಸುವ ಸಂಸ್ಥೆಗಳಿಗೆ ನೀಡಲು ಸರಿಯಾದೀತು ಎಂಬುದು ಸರಕಾರದ ಯೋಚನೆ.
ಡಿಜಿಟಲ್ ವ್ಯವಹಾರ ನಡೆಸುವವರಿಗೆ ಆದಾಯ ತೆರಿಗೆ ಇಲಾಖೆ ಆದಾಯ ತೆರಿಗೆ ಹಾಗೂ ಜಿಎಸ್ಟಿಯಲ್ಲಿ ವಿನಾಯಿತಿ ನೀಡುವ ಕುರಿತು ಚರ್ಚೆ ಆರಂಭಿಸಿದೆ. ಇದೂ ಜಾರಿಗೆ ಬಂದಲ್ಲಿ ಜನ ಪರ್ಸ್ ಕೈಬಿಟ್ಟು ಕಾರ್ಡ್ ಇಟ್ಟುಕೊಂಡೇ ಓಡಾಡುವ ದಿನಗಳು ದೂರವಿಲ್ಲ.
ಈ ಘೋಷಣೆಯಿಂದಾಗಿ ಇಡೀ ಬ್ಯಾಂಕಿಂಗ್ ವಲಯ ಮತ್ತು ಖಾಸಗಿ ಪಾವತಿ ಸಂಸ್ಥೆಗಳಲ್ಲಿ ಹೊಸ ಉತ್ಸಾಹ ಮೂಡಿದೆ. ಮಾಲ್ಗಳು, ರೆಸ್ಟೋರೆಂಟ್‌ಗಳ ಮಾಲಕರಿಗೂ ಖುಷಿಯಾಗಿದೆ. ಈ ವರೆಗೆ ಕೋಟ್ಯಂತರ ರೂ. ಎಂಡಿಆರ್‌ನಿಂದಾಗಿ ಬ್ಯಾಂಕ್‌ಗಳಿಗೆ ಹೋಗುತ್ತಿತ್ತು. ಈಗ ಅದು ತಪ್ಪಿದೆ. ಹೀಗಾಗಿ, ಮಾಲ್, ರೆಸ್ಟೋರೆಂಟ್‌ಗಳಲ್ಲಿ ಇನ್ನು ಡಿಜಿಟಲ್ ವ್ಯವಹಾರಕ್ಕೆ ಉತ್ತೇಜನ ಸಿಗಬಹುದು. ಕಾರ್ಡ್ ಮೂಲಕ ಪಾವತಿಸುವವರಿಗೆ ರಿಯಾಯಿತಿಯನ್ನೂ ಘೋಷಿಸಿ, ಜನಪ್ರಿಯಗೊಳಿಸಲು ಅವಕಾಶವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Year ender: ಈ ವರ್ಷ ನಕ್ಕು ನಗಿಸಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋಗಳಿವು..
Meditation: ವರ್ಧಿತ ಶೈಕ್ಷಣಿಕ ಕಾರ್ಯಕ್ಷಮತೆಗೆ ಧ್ಯಾನ
Shaw left out; ಓ ದೇವರೇ, ನಾನು ಇನ್ನೇನೆಲ್ಲ ನೋಡಬೇಕು..; ಪೃಥ್ವಿ ಶಾ ನೋವು
Loksabha:ಕಾಂಗ್ರೆಸ್ ಅಂಬೇಡ್ಕರ್ ಗೆ ಹಲವು ಬಾರಿ ಅವಮಾನ ಮಾಡಿದೆ: ಪ್ರಧಾನಿ ಮೋದಿ ತಿರುಗೇಟು
ತೀವ್ರ ಸ್ವರೂಪ ಪಡೆದ ಅತಿಥಿ ಶಿಕ್ಷಕರ ಪ್ರತಿಭಟನೆ; ಶಿಕ್ಷಕ ಅಸ್ವಸ್ಥ, ಆಸ್ಪತ್ರಗೆ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.