ಜಿಪಿಎಸ್‌ ಹೋಗಿ ವಿಪಿಎಸ್‌ ಬರುತ್ತೆ!

Team Udayavani, Oct 25, 2019, 4:58 AM IST

q-81

ಒಂದಾನೊಂದು ಕಾಲದಲ್ಲಿ ಮೊದಲ ಬಾರಿ ವಿಳಾಸ ಹುಡುಕಿಕೊಂಡು ಹೊರಟಾಗ ದಾರಿಯಲ್ಲಿ ಸಿಗುವ ಜನರನ್ನೇ ನೆಚ್ಚಿಕೊಳ್ಳಬೇಕಿತ್ತು. ಎರಡು-ಮೂರು ಬಾರಿಯಾದರೂ ದಾರಿಹೋಕರನ್ನು ಕೇಳಿಕೊಂಡು ತಲುಪಬೇಕಾದ ವಿಳಾಸ ತಲುಪುತ್ತಿದ್ದೆವು. ಆದರೆ ಆಮೇಲೆ ಬಂತು ನೋಡಿ ಜಿಪಿಎಸ್‌ ಜಮಾನಾ. ಈಗ ಸ್ಮಾರ್ಟ್‌ಫೋನ್‌ ಒಂದಿದ್ದರೆ ಸಾಕು. ಅದನ್ನು ಕೈಲಿ ಹಿಡಿದು ಅದು ದಿಕ್ಕು ತೋರಿಸಿದತ್ತ ನಡೆಯುತ್ತಾ ಬೇರೆ ಯಾರ ಸಹಾಯವೂ ಇಲ್ಲದೆ ವಿಳಾಸ ಹುಡುಕಿಕೊಳ್ಳುತ್ತಿದ್ದೇವೆ. ಇದರಿಂದ ದಾರಿಹೋಕರ ಮೇಲಿನ ಅವಲಂಬನೆಯಂತೂ ಕಡಿಮೆಯಾಗಿದೆ. ಅಲ್ಲದೆ ಅಪರಿಚಿತರನ್ನು ಹೇಗಪ್ಪಾ ಕೇಳುವುದು ಎಂಬ ಸಂದೀಗ್ಧತೆಯೂ ತಪ್ಪಿದೆ.

ಜಿಪಿಎಸ್‌ಎನ್ನುವುದು “ಗ್ಲೋಬಲ್‌ಪೊಸಿಷನಿಂಗ್‌ಸಿಸ್ಟಮ್‌’ ಎನ್ನುವುದರ ಶಾರ್ಟ್‌ಫಾರ್ಮ್. ಅದು ಉಪಗ್ರಹ ಆಧಾರಿತ ಮಾರ್ಗದರ್ಶನ(ನ್ಯಾವಿಗೈಷನ್‌) ವ್ಯವಸ್ಥೆ. ಸೈನಿಕರಿಗೆ ಯುದ್ಧದ ಸಂದರ್ಭದಲ್ಲಿ ಉಪಯೋಗವಾಗಲಿ ಎಂಬ ಉದ್ದೇಶದಿಂದ ಜಿಪಿಎಸ್‌ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗಿತ್ತು.

ಮಾರುಕಟ್ಟೆಯಲ್ಲಿ ಗೂಗಲ್‌ಮ್ಯಾಪ್ಸ್‌ನಂತೆಯೇ, ಮ್ಯಾಪ್‌ಕ್ವೆಸ್ಟ್‌, ಮ್ಯಾಪ್ಸ್‌ಮಿ, ಮ್ಯಾಪ್ಸ್‌ಫ್ಯಾಕ್ಟರ್‌ಮುಂತಾದ ನ್ಯಾವಿಗೈಷನ್‌ಸಂಸ್ಥೆಗಳೂ ಇವೆ. ಜಿಪಿಎಸ್‌ನಲ್ಲಿ ಸಣ್ಣಪುಟ್ಟ ತಪ್ಪುಗಳಾಗಲು ಕೆಲ ಕಾರಣಗಳನ್ನು ಪಟ್ಟಿ ಮಾಡಬಹುದಾದರೆ ದುರ್ಬಲ ಸ್ಯಾಟಲೈಟ್‌ ಸಿಗ್ನಲ್‌, ಮ್ಯಾಪ್‌ಗ್ಳು ದಿನದಿನಕ್ಕೂ ಅಪ್‌ಡೇಟ್‌ಆಗದಿರುವುದು. ಹೀಗಾಗಿ ಜಿಪಿಎಸ್‌ಗೆ ಪರ್ಯಾಯ ತಂತ್ರಜ್ಞಾನದ ಕುರಿತು ಸಂಶೋಧನೆಗಳು ಹಿಂದಿನಿಂದಲೇ ಆಗುತ್ತಿವೆ. ಅವುಗಳಲ್ಲೊಂದು ವಿ.ಪಿ.ಎಸ್‌.(ವಿಶುವಲ್‌ ಪೊಸಿಷನಿಂಗ್‌ ಸಿಸ್ಟಂ).

ಇನ್ನೂ ಪ್ರಾಯೋಗಿಕ ಹಂತದಲ್ಲಿರುವ ವಿ.ಪಿ.ಎಸ್‌. ತಂತ್ರಜ್ಞಾನ ಜಿಪಿಎಸ್‌ಗಿಂತ ನಿಖರವಾಗಿ ವಿಳಾಸವನ್ನು ಹುಡುಕುತ್ತದೆ. ಹೇಗೆಂದರೆ ಉಪಗ್ರಹ ಸಿಗ್ನಲ್‌ಗ‌ಳ ಸಹಾಯದಿಂದ ಮಾತ್ರವೇ ಇದು ಮಾರ್ಗ ತೋರುವುದಿಲ್ಲ. ಅದರ ಜತೆಗೆ ಫೋನಿನ ಕೆಮರಾದ ಸಹಾಯವನ್ನು ಈ ತಂತ್ರಜ್ಞಾನ ಪಡೆದುಕೊಳ್ಳುತ್ತದೆ. ಕೆಮರಾದಲ್ಲಿ ಕಂಡುಬರುವ ದೃಶ್ಯಾವಳಿಯ ಸಹಾಯದಿಂದ ಬಳಕೆದಾರ ಯಾವ ಜಾಗದಲ್ಲಿ ನಿಂತಿದ್ದಾನೆ ಎಂಬುದನ್ನು ಖಚಿತವಾಗಿ ಪತ್ತೆ ಹಚ್ಚಿ ಅಲ್ಲಿಂದ ತಲುಪಬೇಕಾಗಿರುವ ವಿಳಾಸಕ್ಕೆ ದಾರಿ ತೋರುತ್ತದೆ. ಕೆಮರಾದಲ್ಲಿ ಕಂಡು ಬರುವ ಅಂಗಡಿ, ಕಟ್ಟಡಗಳನ್ನು ಸಂಸ್ಕರಣೆಗೆ ಒಳಪಡಿಸಿ ಬಳಕೆದಾರ ಇರುವ ಸ್ಥಳವನ್ನು ಪತ್ತೆ ಹಚ್ಚುತ್ತದೆ ಈ ತಂತ್ರಜ್ಞಾನ. ಇಲ್ಲಿ ಆರ್ಟಿಫಿಷಿಯಲ್‌ಇಂಟೆಲಿಜೆನ್ಸ್‌ತಂತ್ರಜ್ಞಾನವನ್ನೂ ಬಳಸಿಕೊಳ್ಳಲಾಗುತ್ತದೆ. ಜಿಪಿಎಸ್‌ತಂತ್ರಜ್ಞಾನ ಏನೆಲ್ಲ ಸಮಸ್ಯೆಗಳನ್ನು ಎದುರಿಸುತ್ತಿದೆಯೋ ಅವೆಲ್ಲವನ್ನೂ ಮೀರುತ್ತದೆ ವಿಪಿಎಸ್‌ತಂತ್ರಜ್ಞಾನ. ಇದರಿಂದ ಕೆಮರಾ ತನ್ನ ಲೆನ್ಸ್‌ನಲ್ಲಿ ಕಾಣುವ ದೃಶ್ಯಾವಳಿಯನ್ನು ತನ್ನ ಡೇಟಾಸೆಂಟರ್‌ಗೆ ವರ್ಗಾಯಿಸಿ ಆ ಪ್ರದೇಶವನ್ನು ನಿಖರವಾಗಿ ಪತ್ತೆ ಹಚ್ಚುತ್ತದೆ. ಈಗಾಗಲೇ ಹಲವು ಅಂತಾರಾಷ್ಟ್ರೀಯ ಕಂಪೆನಿಗಳು ಕೋಟ್ಯಂತರ ದುಡ್ಡನ್ನು ಈ ತಂತ್ರಜ್ಞಾನದ ಸಂಶೋಧನೆಗೆ ವಿನಿಯೋಗಿಸುತ್ತಿವೆ. ಮುಂಬರುವ ದಿನಗಳಲ್ಲಿ ಈ ತಂತ್ರಜ್ಞಾನವನ್ನು ಅದಕ್ಕೆಂದೇ ರೂಪಿಸಲಾದ ಉಪಕರಣಗಳಲ್ಲಿ, ಮೊಬೈಲುಗಳಲ್ಲಿ ಕಾಣಬಹುದಾಗಿದೆ.

ಅಮೆರಿಕ ಸೇನೆ ಬಳಕೆ
ಅಮೆರಿಕ ಸೇನೆ ಮಾತ್ರವೇ ಮೊದಲು ಅದನ್ನು ಬಳಸುತ್ತಿತ್ತು. ಅನಂತರದ ದಿನಗಳಲ್ಲಿ ತಂತ್ರಜ್ಞಾನವನ್ನು ಸಾರ್ವಜನಿಕ ಬಳಕೆಗೂ ಮುಕ್ತವಾಗಿಸಿತು. ಸದ್ಯ ಗೂಗಲ್‌ ನ್ಯಾವಿಗೈಷನ್‌ ಕ್ಷೇತ್ರದಲ್ಲಿ ನಾಯಕ ಎನಿಸಿಕೊಂಡಿದೆ. ಕಾಲದಿಂದ ಕಾಲಕ್ಕೆ ಅದು ಜಿಪಿಎಸ್‌ಆಧಾರಿತ ಗೂಗಲ್‌ನಕಾಶೆ(ಗಾಗಲ್‌ಮ್ಯಾಪ್ಸ್‌) ವ್ಯವಸ್ಥೆಯನ್ನು ಸುಧಾರಣೆಗೊಳಪಡಿಸುತ್ತಲೇ ಇರುತ್ತದೆ. ಹಾಗಿದ್ದೂ ಗೂಗಲ್‌ನ ಈ ವ್ಯವಸ್ಥೆ ನೂರಕ್ಕೆ ನೂರು ಪ್ರತಿಶತಃ ನಿಖರವಾಗಿಲ್ಲ. ವಿಳಾಸ ಹುಡುಕುವಲ್ಲಿ ಸಣ್ಣಪುಟ್ಟ ತಪ್ಪುಗಳು ಆಗುತ್ತಲೇ ಇರುತ್ತವೆ.

ಟಾಪ್ ನ್ಯೂಸ್

Maharashtra: ಉದ್ದವ್‌ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ

Maharashtra: ಉದ್ದವ್‌ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ

Bisanala-Dairy

Achievement: ಮಹಾಲಿಂಗಪುರದ ಬಿಸನಾಳ ಹಾಲಿನ ಡೇರಿಗೆ ಕೇಂದ್ರದ ಪ್ರಶಸ್ತಿ ಗರಿ!

PM Modi: ಜ.11ರಿಂದ 2 ದಿನ ವಿಕಸಿತ ಭಾರತ ಯುವ ನಾಯಕರ ಸಮಾವೇಶ

PM Modi: ಜ.11ರಿಂದ 2 ದಿನ ವಿಕಸಿತ ಭಾರತ ಯುವ ನಾಯಕರ ಸಮಾವೇಶ

Bantwala-Crime

Bantwala: ತುಂಬೆ ದೇವಸ್ಥಾನ ಕಳ್ಳತನ ಪ್ರಕರಣ: ಮೂವರು ಖದೀಮರ ಸೆರೆ

Mayawati: ಇನ್ನು ಮುಂದೆ ಉಪಚುನಾವಣೆಯಲ್ಲಿ ಸ್ಪರ್ಧೆ ಇಲ್ಲ

Mayawati: ಇನ್ನು ಮುಂದೆ ಉಪಚುನಾವಣೆಯಲ್ಲಿ ಸ್ಪರ್ಧೆ ಇಲ್ಲ

1-rcb

RCB ತಂಡಕ್ಕೆ ಸೇರಿದ ಫಿಲ್ ಸಾಲ್ಟ್, ಜಿತೇಶ್ ಶರ್ಮ, ಹ್ಯಾಜಲ್‌ವುಡ್‌

Central Govt: ಸಂಸದೀಯ ಸಮಿತಿ ಪರೀಕ್ಷಿಸಲಿದೆ ಲ್ಯಾಟರಲ್‌ ಎಂಟ್ರಿ ನೇಮಕಾತಿ

Central Govt: ಸಂಸದೀಯ ಸಮಿತಿ ಪರೀಕ್ಷಿಸಲಿದೆ ಲ್ಯಾಟರಲ್‌ ಎಂಟ್ರಿ ನೇಮಕಾತಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Maharashtra: ಉದ್ದವ್‌ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ

Maharashtra: ಉದ್ದವ್‌ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ

Bisanala-Dairy

Achievement: ಮಹಾಲಿಂಗಪುರದ ಬಿಸನಾಳ ಹಾಲಿನ ಡೇರಿಗೆ ಕೇಂದ್ರದ ಪ್ರಶಸ್ತಿ ಗರಿ!

PM Modi: ಜ.11ರಿಂದ 2 ದಿನ ವಿಕಸಿತ ಭಾರತ ಯುವ ನಾಯಕರ ಸಮಾವೇಶ

PM Modi: ಜ.11ರಿಂದ 2 ದಿನ ವಿಕಸಿತ ಭಾರತ ಯುವ ನಾಯಕರ ಸಮಾವೇಶ

Bantwala-Crime

Bantwala: ತುಂಬೆ ದೇವಸ್ಥಾನ ಕಳ್ಳತನ ಪ್ರಕರಣ: ಮೂವರು ಖದೀಮರ ಸೆರೆ

Mayawati: ಇನ್ನು ಮುಂದೆ ಉಪಚುನಾವಣೆಯಲ್ಲಿ ಸ್ಪರ್ಧೆ ಇಲ್ಲ

Mayawati: ಇನ್ನು ಮುಂದೆ ಉಪಚುನಾವಣೆಯಲ್ಲಿ ಸ್ಪರ್ಧೆ ಇಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.