ಭರ್ಜರಿ ಮೈಲೇಜ್‌ ಬೈಕ್‌ಗಳೇ ಹಾಟ್‌ ಫೇವರಿಟ್‌ 

Team Udayavani, Jun 29, 2018, 4:02 PM IST

29-june-17.jpg

ಭಾರೀ ಸಾಮರ್ಥ್ಯ, ಬೆಲೆಯೂ ಅಧಿಕವಿರುವ ಬೈಕ್‌ಗಳೇ ಹೆಚ್ಚಾಗಿ ಮಾರಾಟವಾಗುವ ಕಾಲವಿದು. ಆದರೆ ಹೆಚ್ಚು ಮೈಲೇಜ್‌ ನೀಡುವ ಬಳಕೆದಾರ ಸ್ನೇಹಿ ಬೈಕ್‌ಗಳ ಮಾರಾಟ ಕಡಿಮೆಯೂ ಆಗಿಲ್ಲ ಎನ್ನುವುದು ಗಮನಾರ್ಹ.

ಬೈಕೇ ಅಚ್ಚುಮೆಚ್ಚು
ಸುಲಭ ಚಾಲನೆ, ಟ್ರಾಫಿಕ್‌ನಲ್ಲೂ ಈಸಿ, ಮೈಲೇಜ್‌ ಕೂಡ ಚೆನ್ನಾಗಿದೆ ಎಂಬ ಕಾರಣಕ್ಕೆ ನಗರದ ಅದರಲ್ಲೂ ಗ್ರಾಮೀಣ ಭಾಗದ ಜನ ಹೆಚ್ಚಾಗಿ 100 ಸಿಸಿ ಸಾಮರ್ಥ್ಯದ ಕಮ್ಯೂಟರ್‌ ಬೈಕ್‌ಗಳನ್ನೇ ಆಯ್ಕೆ ಮಾಡುತ್ತಾರೆ. ದೀರ್ಘ‌ ಬಾಳಿಕೆಗೂ ಇದು ಪರವಾಗಿಲ್ಲ ಎಂಬಂತಿರುವುದರಿಂದ ಜನರಿಗೆ ಈ ಮಾದರಿಯ ಬೈಕ್‌ಗಳೇ ಅಚ್ಚುಮೆಚ್ಚಾಗಿದೆ. 

ನಿರ್ವಹಣೆ: ನೋ ಟೆನ್ಷ್ ನ್‌
ಕಮ್ಯೂಟರ್‌ ಬೈಕ್‌ಗಳ ನಿರ್ವಹಣೆ ವಿಚಾರದಲ್ಲೂ ಕಿಸೆಗೆ ಇದು ಹಗುರ. ದುಬಾರಿ ಬೆಲೆಯ ಬೈಕ್‌ಗಳಾದರೆ 2 ಸಾವಿರ ರೂ. ಗಳಿಂದ 8 ಸಾವಿರ ರೂ.ಗಳವರೆಗೆ ಸರ್ವೀಸ್‌ ಗೆ ವ್ಯಯಿಸಬೇಕು. ಆದರೆ ಕಮ್ಯೂಟರ್‌ ಬೈಕ್‌ಗಳು ಹಾಗಲ್ಲ. ಇದರ ನಿರ್ವಹಣೆಗೆ 800-900 ರೂ. ವೆಚ್ಚ ಮಾಡಿದರೆ ಸಾಕು ಒಂದೊಮ್ಮೆ ಸರ್ವೀಸ್‌ ಆದರೆ ಮತ್ತೆ ಬೈಕ್  ಕಿರಿಕಿರಿಯೂ ಹೆಚ್ಚೇನಿಲ್ಲ. ಪದೇ ಪದೇ ಬೈಕ್‌ ಗಾಗಿ ಖರ್ಚು ಮಾಡಬೇಕಿಲ್ಲ. ಆದ್ದರಿಂದ ಬಹಳಷ್ಟು ಮಂದಿ ಇಂತಹ ಬೈಕ್‌ಗಳನ್ನೇ ನೆಚ್ಚಿಕೊಳ್ಳುತ್ತಾರೆ.

ಗ್ರಾಮೀಣ ಜನತೆಯ ಮೊದಲ ಆಯ್ಕೆ
ಗ್ರಾಮೀಣ ಪ್ರದೇಶದಲ್ಲಿ ಎಲ್ಲಾ ಕಡೆಗಳಲ್ಲಿಯೂ ಸಾರಿಗೆ ಸಂಪರ್ಕ ಸುಲಭವಾಗಿ ಇರುವುದಿಲ್ಲ. ಅತ್ತಿಂದಿತ್ತ ಸಾಗುವ ವೇಳೆ ಜತೆಗೆ ಏನಾದರೂ ಸಲಕರಣೆ ಇದ್ದೇ ಇರುತ್ತದೆ. ಹೀಗಿರುವಾಗ ಗ್ರಾಮೀಣ ಪ್ರದೇಶದ ಹೆಚ್ಚಿನ ಮಂದಿಗೆ ತಮ್ಮ ಆಯ್ಕೆ ಬೈಕ್‌ ಆಗಿರುತ್ತದೆ. ದಿನನಿತ್ಯದ ಓಡಾಟವೂ ಹೆಚ್ಚಿರುವುದರಿಂದ ಅತಿ ಹೆಚ್ಚು ಮೈಲೇಜ್‌ ನೀಡುವಂತಹ ಬೈಕ್‌ಗಳನ್ನು ಆಯ್ಕೆ ಮಾಡುತ್ತಾರೆ. ಅಲ್ಲದೆ, ಅವರು ಆರ್ಥಿಕವಾಗಿಯೂ ಕಮ್ಯೂಟರ್‌ ಬೈಕ್‌ ಗಳು ಲಾಭವಾದ್ದರಿಂದ ಕಡಿಮೆ ಬೆಲೆಗೆ ಒಳ್ಳೆಯ ಬೈಕ್‌ ಯಾವುದು ಎಂದು ಚರ್ಚೆ ಮಾಡಿಯೇ ಕೊಂಡುಕೊಳ್ಳುತ್ತಾರೆ.

ಯಾವೆಲ್ಲ ಬೈಕ್‌ಗಳಿವೆ?
ಅನೇಕ ಬೈಕ್‌ಗಳು ಕೂಡ ಕಡಿಮೆ ಬೆಲೆಗೆ ಮಾರುಕಟ್ಟೆಯಲ್ಲಿ ಲಭ್ಯವಿದೆ. ಬಜಾಜ್‌ ಕಂಪೆನಿಯ ಸಿಟಿ 100 ಬಿ ಕಡಿಮೆ ಬೆಲೆ ಮತ್ತು 65 ರಿಂದ 80 ಕಿ.ಮೀನಷ್ಟು ಮೈಲೇಜ್‌ ಸಿಗುತ್ತದೆ. ಇದರ ಜೊತೆ ಬಜಾಜ್‌ ಸಿ.ಟಿ. 100 ಕೂಡ ಮಾರುಕಟ್ಟೆಯಲ್ಲಿದೆ. ಇದು ಗ್ರಾಮೀಣ ಪ್ರದೇಶದವರ ಆಯ್ಕೆಯ ಬೈಕ್‌ ಆಗಿದ್ದು 99.27 ಸಿ.ಸಿ. ಇಂಜಿನ್‌ ಹೊಂದಿದೆ. ಕಂಪನಿ ಪ್ರಕಾರ ಈ ಬೈಕ್‌ 85 ಕಿ.ಮೀ.ಗೂ ಹೆಚ್ಚು ಮೈಲೇಜ್‌ ನೀಡುತ್ತದೆ. ಇದರ ಜೊತೆ ಬಜಾಜ್‌ ಪ್ಲಾಟಿನಾ, ಬಜಾಜ್‌ ಸಿಟಿ 100 ಇಎಸ್‌ಬೈಕ್‌ ಕೂಡ ಹೆಚ್ಚು ಬಿಕರಿಯಾಗುತ್ತದೆ. ಹಿರೋ ಎಚ್‌ಎಫ್‌ ಡಿಲಕ್ಸ್‌ ಕೂಡ ಕಡಿಮೆ ಬೆಲೆಯ ಬೈಕ್‌. ಸುಮಾರು 70 ಕಿ.ಮೀ ಮೈಲೇಜ್‌ ಕೂಡ ನೀಡುತ್ತದೆ. ಗ್ರಾಮೀಣ ಪ್ರದೇಶದ ಮಂದಿಯೇ ಇದನ್ನು ಹೆಚ್ಚಾಗಿ ಆಯ್ಕೆ ಮಾಡುತ್ತಾರೆ. ಹಾಗೆಯೇ ಟಿವಿಎಸ್‌ನ ಸ್ಟಾರ್‌ ಸಿಟಿ ಪ್ಲಸ್‌, ಸ್ಟಾರ್‌ ಸಿಟಿ ಸ್ಪೋರ್ಟ್ಸ್ , ಮಹೀಂದ್ರಾ ಸೆಂಚುರೋ ಕೂಡ ಬಹು ಬೇಡಿಕೆಯ ಬೈಕ್‌ಗಳಾಗಿವೆ.

ಜೋಬಿಗೆ ಹಗುರ
100 ಸಿಸಿಯ ಬೈಕ್‌ಗಳು ಯಾವತ್ತೂ ಜೋಬಿಗೆ ಹಗುರ. ಹೆಚ್ಚು ಪೆಟ್ರೋಲ್‌ ಬೇಡ, ಬೆಲೆಯೂ ಕಡಿಮೆ. ಆದ್ದರಿಂದ ಭಾರತದಂತಹ ದೇಶಗಳಲ್ಲಿ ಮಧ್ಯಮವರ್ಗದವರಿಗೆ ಇದು ಅಚ್ಚುಮೆಚ್ಚಾಗಿದೆ. ಇದರ ರೋಡ್‌ಟ್ಯಾಕ್ಸ್‌, ವಿಮಾ ಮೊತ್ತವೂ ಕಡಿಮೆ. ಒಂದು ವರ್ಷಕ್ಕೆ ಬೈಕ್‌ ನಿರ್ವಹಣೆ, ವಿಮೆ ಎಲ್ಲವೂ ಸೇರಿದರೆ ನಾಲ್ಕು ಸಾವಿರ ರೂ. ಮೀರುವುದಿಲ್ಲ. ಆದ್ದರಿಂದ ಜನ ಇದನ್ನು ಹೆಚ್ಚು ಇಷ್ಟ ಪಡುತ್ತಾರೆ. ಗ್ರಾಮೀಣ ಭಾಗದಲ್ಲೂ ಇವುಗಳ ರಿಪೇರಿ ಕೂಡ ಸುಲಭವಾಗಿದ್ದು, ಬೈಕ್‌ಗಳನ್ನೇ ನೆಚ್ಚಿಕೊಳ್ಳುತ್ತಾರೆ.

ಗ್ರಾಮೀಣ ಪ್ರದೇಶದ ಮಂದಿ ಹೆಚ್ಚಾಗಿ ಕಡಿಮೆ ಬೆಲೆಯ ಬೈಕ್‌ ಆಯ್ಕೆ ಮಾಡುತ್ತಾರೆ. ಅನೇಕ ಬೈಕ್‌ಗಳಿಂದು ಕಡಿಮೆ ಬೆಲೆಗೆ ಮಾರುಕಟ್ಟೆಯಲ್ಲಿ ಲಭ್ಯವಿದೆ. ಗ್ರಾಮೀಣ ಪ್ರದೇಶದ ಮಂದಿಗೆ ಬೈಕ್‌ ಹೆಚ್ಚು ಉಪಯೋಗವಿರುವುದರಿಂದ ಬೆಲೆ ಮತ್ತು ಮೈಲೇಜ್‌ಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ.
– ಪುರುಷೋತ್ತಮ,
ಬೈಕ್‌ ಶೋರೂಂ ಮಾರುಕಟ್ಟೆ ವಿಭಾಗ

ನವೀನ್‌ ಭಟ್‌ ಇಳಂತಿಲ

ಟಾಪ್ ನ್ಯೂಸ್

ಪರೀಕ್ಷಾ ಫಾರಂ ಮೇಲೆ ಜಿಎಸ್‌ಟಿ: ಸರಕಾರ ವಿರುದ್ಧ ಪ್ರಿಯಾಂಕಾ ವಾಗ್ಧಾಳಿ

GST: ಪರೀಕ್ಷಾ ಫಾರಂ ಮೇಲೆ ಜಿಎಸ್‌ಟಿ: ಸರಕಾರ ವಿರುದ್ಧ ಪ್ರಿಯಾಂಕಾ ವಾಗ್ಧಾಳಿ

JPC: ಒಂದು ರಾಷ್ಟ್ರ ಒಂದು ಚುನಾವಣೆ: ಜ.8ಕ್ಕೆ ಮೊದಲ ಜೆಪಿಸಿ ಸಭೆ

JPC: ಒಂದು ರಾಷ್ಟ್ರ ಒಂದು ಚುನಾವಣೆ: ಜ.8ಕ್ಕೆ ಮೊದಲ ಜೆಪಿಸಿ ಸಭೆ

Nitish Kumar ನೇತೃತ್ವದಲ್ಲೇ ಬಿಹಾರ ಚುನಾವಣೆಗೆ ಎನ್‌ಡಿಎ ಸ್ಪರ್ಧೆ: ಬಿಜೆಪಿ

Nitish Kumar ನೇತೃತ್ವದಲ್ಲೇ ಬಿಹಾರ ಚುನಾವಣೆಗೆ ಎನ್‌ಡಿಎ ಸ್ಪರ್ಧೆ: ಬಿಜೆಪಿ

Hindu Temple: ಸಂಭಲ್‌ ಬಳಿಕ ಬುಲಂದ್‌ಶಹರ್‌ನಲ್ಲಿ ಮತ್ತೊಂದು ಹಳೇ ದೇವಾಲಯ ಪತ್ತೆ

Hindu Temple: ಸಂಭಲ್‌ ಬಳಿಕ ಬುಲಂದ್‌ಶಹರ್‌ನಲ್ಲಿ ಮತ್ತೊಂದು ಹಳೇ ದೇವಾಲಯ ಪತ್ತೆ

Rahul Gandhi: ದಲಿತನೆಂಬ ಕಾರಣಕ್ಕೆ ಪೊಲೀಸ್‌ ವಶದಲ್ಲಿ ವ್ಯಕ್ತಿ ಕೊ*ಲೆ

Rahul Gandhi: ದಲಿತನೆಂಬ ಕಾರಣಕ್ಕೆ ಪೊಲೀಸ್‌ ವಶದಲ್ಲಿ ವ್ಯಕ್ತಿ ಕೊ*ಲೆ

Congress MP: ವಾರಕ್ಕೆ 70 ಗಂಟೆ ಬೇಡ, 4 ದಿನ ಕೆಲಸ ಸಾಕು: ತ.ನಾಡು ಸಂಸದ ಕಾರ್ತಿ

Congress MP: ವಾರಕ್ಕೆ 70 ಗಂಟೆ ಬೇಡ, 4 ದಿನ ಕೆಲಸ ಸಾಕು: ತ.ನಾಡು ಸಂಸದ ಕಾರ್ತಿ

ಕರಾವಳಿಯಲ್ಲಿ “ಕರ್ನಾಟಕ ಕೂಟ’: ಜ. 17-23ರ ವರೆಗೆ ಮಂಗಳೂರು, ಉಡುಪಿಯಲ್ಲಿ

ಕರಾವಳಿಯಲ್ಲಿ “ಕರ್ನಾಟಕ ಕೂಟ’: ಜ. 17-23ರ ವರೆಗೆ ಮಂಗಳೂರು, ಉಡುಪಿಯಲ್ಲಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಪರೀಕ್ಷಾ ಫಾರಂ ಮೇಲೆ ಜಿಎಸ್‌ಟಿ: ಸರಕಾರ ವಿರುದ್ಧ ಪ್ರಿಯಾಂಕಾ ವಾಗ್ಧಾಳಿ

GST: ಪರೀಕ್ಷಾ ಫಾರಂ ಮೇಲೆ ಜಿಎಸ್‌ಟಿ: ಸರಕಾರ ವಿರುದ್ಧ ಪ್ರಿಯಾಂಕಾ ವಾಗ್ಧಾಳಿ

JPC: ಒಂದು ರಾಷ್ಟ್ರ ಒಂದು ಚುನಾವಣೆ: ಜ.8ಕ್ಕೆ ಮೊದಲ ಜೆಪಿಸಿ ಸಭೆ

JPC: ಒಂದು ರಾಷ್ಟ್ರ ಒಂದು ಚುನಾವಣೆ: ಜ.8ಕ್ಕೆ ಮೊದಲ ಜೆಪಿಸಿ ಸಭೆ

puttige-6-

Udupi; ಗೀತಾರ್ಥ ಚಿಂತನೆ 134: ಮನುಷ್ಯ ದೇಹದೊಳಗೆ ಯಾವ ಜೀವವೂ ಇರಬಹುದು

Nitish Kumar ನೇತೃತ್ವದಲ್ಲೇ ಬಿಹಾರ ಚುನಾವಣೆಗೆ ಎನ್‌ಡಿಎ ಸ್ಪರ್ಧೆ: ಬಿಜೆಪಿ

Nitish Kumar ನೇತೃತ್ವದಲ್ಲೇ ಬಿಹಾರ ಚುನಾವಣೆಗೆ ಎನ್‌ಡಿಎ ಸ್ಪರ್ಧೆ: ಬಿಜೆಪಿ

Hindu Temple: ಸಂಭಲ್‌ ಬಳಿಕ ಬುಲಂದ್‌ಶಹರ್‌ನಲ್ಲಿ ಮತ್ತೊಂದು ಹಳೇ ದೇವಾಲಯ ಪತ್ತೆ

Hindu Temple: ಸಂಭಲ್‌ ಬಳಿಕ ಬುಲಂದ್‌ಶಹರ್‌ನಲ್ಲಿ ಮತ್ತೊಂದು ಹಳೇ ದೇವಾಲಯ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.