ನಗರ ಸೌಂದರ್ಯ ಹೆಚ್ಚಿಸುವ ಹಸುರು ಕಟ್ಟಡ


Team Udayavani, Jul 22, 2018, 3:24 PM IST

22-july-14.jpg

ನಗರವೆಂದರೆ ಕೇವಲ ಕಾಂಕ್ರೀಟ್‌ ಕಟ್ಟಡಗಳು ಎಂಬಂತಾಗಿದೆ. ಅಲ್ಲೋ, ಇಲ್ಲೊಂದು ಮರಗಳನ್ನು ಬಿಟ್ಟರೆ ಬೇರೆಲ್ಲೂ ಮರ ನೆಡಲು ಸಾಧ್ಯವಿಲ್ಲ ಎನ್ನುವ ಪರಿಸ್ಥಿತಿ ಇದೆ. ಜಾಗ ಇರುವವರು ಟೇರೆಸ್‌ ಗಾರ್ಡನ್‌, ಸಣ್ಣ ಕೈ ತೋಟ ಮಾಡಿ ಯಶಸ್ವಿಯಾಗಿದ್ದಾರೆ. ಆದರೆ ಜಾಗವೇ ಇಲ್ಲವೆಂದು ಕೊಂಡವರು ಈ ಬಗ್ಗೆ ಹೆಚ್ಚು ಚಿಂತಿಸಬೇಕಿಲ್ಲ. ತಾವಿರುವ ಕಟ್ಟಡವನ್ನೇ ಹಸುರು ಕಟ್ಟಡವನ್ನಾಗಿ ಮಾಡಬಹುದು. 

ಹಸುರು ಎಂದಾಕ್ಷಣ ಕೇವಲ ಕಾಡು, ಉದ್ಯಾನವನಕ್ಕೆ ಸೀಮಿತವಾಗಿರಿಸದೆ ಪ್ರಕೃತಿಯೊಂದಿಗೆ ಜೀವಿಸುವ ಹೊಸ ವಾಸ್ತುಶಿಲ್ಪ ಈಗಾಗಲೇ ಹಲವು ದೇಶಗಳಲ್ಲಿ ಜನಾಕರ್ಷಣೆಗೆ ಪಾತ್ರವಾಗಿದೆ. ಜತೆಗೆ ಪ್ರಕೃತಿಯನ್ನು ಬೆಳೆಸಿದಂತೆಯೂ ಆಗುತ್ತದೆ. 

ಬಹು ಮಹಡಿ ಕಟ್ಟಡಗಳನ್ನು ನಿರ್ಮಿಸುವಾಗ ನಾನಾ ರೀತಿಯ ವಿನ್ಯಾಸಗಳನ್ನು ಮಾಡುವುದು ಸಹಜ. ಆದರೆ ಈ ಕಟ್ಟಡಗಳಿಂದ ಮಾನವನಿಗೆ ಪ್ರಕೃತಿಯ ಜತೆಗಿನ ಸಂಬಂಧ ಇಲ್ಲದಂತಾಗುತ್ತದೆ. ಅದ ಕ್ಕಾಗಿ ಬಹು ಮಹಡಿ ಕಟ್ಟಡಗಳ ಗೋಡೆಗಳಲ್ಲಿ ಹಾಗೂ ಮೇಲ್ಛಾವಣಿಗಳಲ್ಲಿ ಸಸಿಗಳನ್ನು ಬೆಳೆಸುವ ಹೊಸ ಉಪಕ್ರಮ ಈಗ ಬಹಳ ಖ್ಯಾತಿಯಾಗಿದೆ.

ಸುಸ್ಥಿರ ಅಭಿವೃದ್ಧಿ
ಸುಸ್ಥಿರ ಅಭಿವೃದ್ಧಿಯ ಉದ್ದೇಶದಿಂದ ಇಂತಹ ಹಲವಾರು ಉಪಕ್ರಮಗಳನ್ನು ಕಂಡುಹಿಡಿಯುವಲ್ಲಿ ಇಡೀ ವಿಶ್ವವೇ ಹೊರಟಿದೆ. ಹಾಗಾಗಿ ಕೆಲವೊಂದು ದೇಶಗಳು ಈಗಾಗಲೇ ಅದಕ್ಕೆ ಹುಲ್ಲಿನ ಛಾವಣಿಗಳನ್ನು ನಿರ್ಮಿಸಿ ಹಸುರನ್ನು ಬೆಳೆಸುವ ಕಾರ್ಯ ಮಾಡುತ್ತಿವೆ.

ಇತ್ತೀಚಿನ ದಿನಗಳಲ್ಲಿ ವಾಸ್ತುಶಿಲ್ಪಿಗಳು ಮತ್ತು ವಿನ್ಯಾಸಕಾರರು ಸಸ್ಯಗಳ ಏಕೀಕರಣಕ್ಕೆ ಕಟ್ಟಡದ ಹೊರಭಾಗವನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಆರಂಭಿಸಿದ್ದಾರೆ. ಐಕಾನ್ಕಾ ಸ್ಟಿಕ್‌ ಆಸ್ಟ್ರಿಯಾದ ಕಲಾವಿದ ಮೊದಲಿಗೆ ಪ್ರಾರಂಭಿಸಿದ. ಈ ಹಸುರು ಗೋಡೆಗಳು ಮತ್ತು ಛಾವಣಿಗಳು ಕಟ್ಟಡಗಳ ಸೌಂದರ್ಯವನ್ನೂ ಹೆಚ್ಚಿಸುತ್ತಿವೆ. 

ಸೌಂದರ್ಯಶಾಸ್ತ್ರ ನಗರ ನಿರ್ಮಾಣದಲ್ಲಿ ಒಂದು ಅಂಶವಾಗಿದ್ದು, ಹಸುರು ವಿನ್ಯಾಸಗಳಿಂದ ಕಟ್ಟಡಗಳು ಉತ್ತಮ ಹೊರ ನೋಟವನ್ನು ನೀಡುತ್ತವೆ. ಕುಂಡಗಳ ಮುಖಾಂತರ ಇಂತಹ ಸಸಿಗಳನ್ನು ನೆಟ್ಟರೆ ವಾಸಿಸುವವರ ಆರೋಗ್ಯಕ್ಕೂ ಒಳಿತು. ನ್ಯೂಯಾರ್ಕ್‌, ಯುಎಸ್‌ಎ, ಚಿಕಾಗೊ, ಜರ್ಮನಿ ಹೀಗೆ ಹಲವು ದೇಶಗಳು ಇಂತಹ ಹಸುರು ಕಟ್ಟಡಗಳನ್ನು ನಿರ್ಮಿಸಿ ನಗರದ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿವೆ.

ಇಂತಹ ಯೋಜನೆಯನ್ನು ಬೆಳೆಯುತ್ತಿರುವ ಮಂಗಳೂರಿನಲ್ಲಿ ಮಾಡಿದರೆ ಹಚ್ಚ ಹಸುರು ಕರಾವಳಿ ನಗರವನ್ನು ಮತ್ತಷ್ಟು ಶೃಂಗಾರಗೊಳಿಸಿದಂತೆ ತೋರಬಹುದು.
 
ಭರತ್‌ರಾಜ್‌ ಕರ್ತಡ್ಕ 

ಟಾಪ್ ನ್ಯೂಸ್

IND-W vs WI: ವನಿತೆಯರ ಏಕದಿನ ಮುಖಾಮುಖಿ

IND-W vs WI: ವನಿತೆಯರ ಏಕದಿನ ಮುಖಾಮುಖಿ

GST

Old cars ಬಿಕರಿಗೆ ಶೇ.18 ಜಿಎಸ್‌ಟಿ! ; ವಿತ್ತ ಸಚಿವೆ ನೇತೃತ್ವದ ಜಿಎಸ್‌ಟಿ ಸಭೆ ತೀರ್ಮಾನ

fadnavis

Maharashtra; ಫ‌ಡ್ನವೀಸ್‌ ಬಳಿ ಗೃಹ, ಶಿಂಧೆಗೆ ನಗರಾಭಿವೃದ್ಧಿ ಸೇರಿ 3 ಪ್ರಮುಖ ಖಾತೆ!

BJP 2

BJP; ಬಣ ರಾಜಕೀಯ ತಪ್ಪಿಸಲು ತೃತೀಯ ಬಣ ಸಭೆ?

1-srrrr

English ತರಬೇತಿ ಮಾಧ್ಯಮವಷ್ಟೇ ಆಗಲಿ: ಗೊ.ರು.ಚನ್ನಬಸಪ್ಪ

Sheik Hasina

Sheikh Hasina ಅವಧಿಯಲ್ಲಾದ ಅಪಹರಣಗಳಿಗೆ ಭಾರತ ಕುಮ್ಮಕ್ಕು: ಬಾಂಗ್ಲಾ ವರದಿ

Uddav-2

Mumbai; ಚುನಾವಣೆಗೆ ಏಕಾಂಗಿ ಸ್ಪರ್ಧೆ: ಉದ್ಧವ್‌ ಶಿವಸೇನೆ ಇಂಗಿತ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

IND-W vs WI: ವನಿತೆಯರ ಏಕದಿನ ಮುಖಾಮುಖಿ

IND-W vs WI: ವನಿತೆಯರ ಏಕದಿನ ಮುಖಾಮುಖಿ

11

Puttur: ಎರಡು ಕಡೆ ಚಿನ್ನಾಭರಣ ಕಳವು; ಮೂವರ ಸೆರೆ

Vijayapura: ವೃಕ್ಷಥಾನ್ ಹೆರಿಟೇಜ್ ರನ್‌ಗೆ ಸ್ಪೀಕರ್ ಯು.ಟಿ.ಖಾದರ್ ಚಾಲನೆ

Vijayapura: ವೃಕ್ಷಥಾನ್ ಹೆರಿಟೇಜ್ ರನ್‌ಗೆ ಸ್ಪೀಕರ್ ಯು.ಟಿ.ಖಾದರ್ ಚಾಲನೆ

10

Sullia: ಬಸ್‌ ನಿಲ್ದಾಣದಲ್ಲಿ ಮಲಗಿದ್ದ ಪ್ರಯಾಣಿಕನ ಬ್ಯಾಗ್‌, ಶೂ ಕಳವು

GST

Old cars ಬಿಕರಿಗೆ ಶೇ.18 ಜಿಎಸ್‌ಟಿ! ; ವಿತ್ತ ಸಚಿವೆ ನೇತೃತ್ವದ ಜಿಎಸ್‌ಟಿ ಸಭೆ ತೀರ್ಮಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.