ಮದು ಮಗಳ ಮನಕ್ಕೊಪ್ಪುವ ಶೃಂಗಾರ
Team Udayavani, Jul 26, 2019, 5:00 AM IST
ಮದುವೆ ಸೀಸನ್‌ಗಳಲ್ಲಿ ಮಹಿಳೆಯರು, ಪುರುಷರು ಸೇರಿದಂತೆ ಎಲ್ಲರಿಗೂ ಬಟ್ಟೆ ಬರೆ, ಒಡವೆಗಳನ್ನು ಕೊಳ್ಳುವುದರಲ್ಲಿಯೇ ಹೆಚ್ಚು ಆಸಕ್ತಿ. ಯಾವ ತರಹದ ಬಟ್ಟೆ ಖರೀದಿಸಿದಲ್ಲಿ ಮಂಟಪದಲ್ಲಿ ಮಿಂಚುವುದು ಸಾಧ್ಯ? ಎಂದು ಯೋಚಿಸುವುದರಲ್ಲಿ ಮತ್ತು ಅದನ್ನು ಖರೀದಿ ಮಾಡುವುದರಲ್ಲಿ ಹೆಚ್ಚು ಸಮಯವನ್ನು ವಿನಿಯೋಗಿಸಿ ಬಿಡುತ್ತೇವೆ. ಇನ್ನು ಮದುಮಕ್ಕಳ ಬಟ್ಟೆ ಖರೀದಿಸುವಾಗಲಂತೂ ನಮ್ಮ ಆಯ್ಕೆಗಳನ್ನೇ ಗೊಂದಲಕ್ಕೀಡು ಮಾಡುವಷ್ಟು ವೆರೈಟಿಗಳು ನಮ್ಮ ಮುಂದೆ ಬಂದಿರುತ್ತವೆ. ಮದುಮಗಳ ಸಿಂಗಾರಕ್ಕೆ ಒಪ್ಪಿತವಾಗುವಂತಹ ಕೆಲವು ಬಟ್ಟೆಗಳ ಸೆಲೆಕ್ಷನ್ ಬಗ್ಗೆ ಇಲ್ಲಿದೆ ಮಾಹಿತಿ.
ಮೆಹಂದಿಗೆ ಲೆಹೆಂಗಾ ಸೂಕ್ತ
ಸಾಂಪ್ರದಾಯಿಕತೆಯ ಜತೆಗೆ ಹೊಸ ಫ್ಯಾಶನ್ ಆಗಿಯೂ ಲೆಹೆಂಗಾದ ಆಯ್ಕೆ ಅತ್ಯುತ್ತಮ ಎಂದರೆ ಅತಿಶಯವಲ್ಲ.
ಮದುವೆಯ ಸೀರೆಗಳ ಆಯ್ಕೆ
ಪೈಥಾನಿ ಮದುವೆ ಸೀರೆಗಳು, ಕಾಂಜೀವರಂ, ಬನಾರಸ್ ಸೀರೆಗಳು, ಮುಗ ಸಿಲ್ಕ್ , ಪಾಟ್ನಾ ಪಟೊಲ, ಬಂಧನೀ, ಪಟ್ಟು ಸೀರೆಗಳನ್ನು ಮದುಮಕ್ಕಳ ಸೀರೆ ಸಿಂಗಾರದ ವಿಚಾರದಲ್ಲಿ ಹೆಚ್ಚು ಅಯ್ಕೆ ಮಾಡಿಕೊಳ್ಳುವುದು ಸಾಮಾನ್ಯ ವಿಚಾರ. ಆಯಾಯ ಪ್ರದೇಶಗಳಿಗೆ ಸಂಬಂಧಪಟ್ಟಂತೆ ಮದುಮಗಳ ಬಟ್ಟೆಯ ಶೈಲಿಯೂ ಬದಲಾಗುತ್ತಿರುತ್ತಿದ್ದರೂ ಎಲ್ಲ ಕಾಲದಲ್ಲಿಯೂ ಎಲ್ಲರ ಮನೆ ಮನಗಳಲ್ಲಿಯೂ ಪ್ರಾಶಸ್ತ್ಯ ಪಡೆದಿರುವ ಹಿರಿಮೆ ಸೀರೆಗಳಿಗೆ ಸಲ್ಲುತ್ತದೆ.
ಸೀರೆಗಳ ಆಯ್ಕೆ ವಿಷಯಕ್ಕೆ ಬಂದಾಗ ವಾತಾವರಣಕ್ಕೆ ಅನುಗುಣವಾಗಿ, ಹವಾಮಾನವನ್ನು ಗಮನದಲ್ಲಿಟ್ಟುಕೊಂಡು ಸೀರೆ ಖರೀದಿಸಿದಲ್ಲಿ ಉತ್ತಮ. ಬೇಸಗೆಯಲ್ಲಿ ಹಗುರವಾದ ಮತ್ತು ಬೆವರನ್ನು ತಡೆಯುವಂತಹ ತೆಳು ಬಟ್ಟೆಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿದಲ್ಲಿ ಉತ್ತಮ. ಚಳಿಗಾಲದಲ್ಲಿ ವೆಲ್ವೆಟ್ ಮತ್ತು ಬೊಕೇಡ್ ಸೀರೆಗಳಿಗೆ ಹೆಚ್ಚು ಪ್ರಾಶಸ್ತ್ಯ ನೀಡಿದಲ್ಲಿ ಉತ್ತಮ. ಜತೆಗೆ ನಿಮ್ಮ ಸೀರೆಗೆ ಒಪ್ಪುವಂತಹ ಆರ್ನಮೆಂಟ್ಸ್‌ಗಳ ಬಗ್ಗೆಯೂ ಹೆಚ್ಚಿನ ಕಾಳಜಿ ವಹಿಸುವುದು ಅತೀ ಅಗತ್ಯ. ಮ್ಯಾಚಿಂಗ್ ಒಡವೆಗಳನ್ನು ಧರಿಸಿ, ಈಗಿನ ಟ್ರೆಂಡೀ ರೀತಿಯಲ್ಲಿ ಸೀರೆ ಉಟ್ಟಿರೆಂದಾದಲ್ಲಿ ಮುಂದೆ ಇತರ ಮದುಮಕ್ಕಳು ನಿಮ್ಮ ಫ್ಯಾಶನ್ ಅನ್ನೇ ನಕಲು ಮಾಡಬಹುದು.
ಜತೆಗೆ ಸೀರೆಗೆ ಒಪ್ಪುವಂತಹ ಬ್ಲೌಸ್‌ಗಳನ್ನು ನಾವು ಹೇಗೆ ಸ್ಟಿಚ್ ಮಾಡಿಸುತ್ತೇವೆ ಎನ್ನುವುದರಲ್ಲಿಯೂ ಸೀರೆಯಲ್ಲಿ ನೀರೆಯ ಅಂದದ ಗುಟ್ಟು ಅಡಗಿದೆ ಎನ್ನುವುದನ್ನು ಮರೆಯುವಂತಿಲ್ಲ. ಜತೆಗೆ ಗಮನಿಸಬೇಕಾದ ಅಂಶ ನಮ್ಮ ಮುಖ ಸೌಂದರ್ಯಕ್ಕೆ ಯಾವುದು ಹೆಚ್ಚು ಸೂಕ್ತ ಎನಿಸುತ್ತದೆಯೋ ಅಂತಹ ಸೌಂದರ್ಯವರ್ಧಕಗಳ ಬಳಕೆಯನ್ನೇ ಆಯ್ದುಕೊಳ್ಳಬೇಕು.
ರಿಸೆಪ್ಶನ್ ವೇರ್ ರಿಸೆಪ್ಶನ್‌ಗಳಿಗೆ ಮತ್ತೆ ಲೆಹೆಂಗಾಗಳ ಆಯ್ಕೆ ಈಗಿನ ಟ್ರೆಂಡ್. ನಿಮ್ಮ ಬಣ್ಣಕ್ಕೊಪ್ಪುವ ವಸ್ತ್ರಗಳ ಬಣ್ಣಗಳ ಕಡೆಗೆ ಹೆಚ್ಚು ಗಮನ ವಹಿಸಿದಲ್ಲಿ ಉತ್ತಮ. ಜತೆಗೆ ಲೈಟಿಂಗ್ಸ್ ಬೆಳಕಿಗೆ ಹೊಳೆೆಯುವ ಕಲ್ಲುಗಳಿರುವ, ಮಣಿ, ಮುತ್ತುಗಳಿಂದ ಅವೃತವಾದ ಲೆಹೆಂಗಾಗಳ ಬಳಕೆ ಮದುವೆಯನ್ನು ಇನ್ನಷ್ಟು ಸ್ಮರಣೀಯಗೊಳಿಸಬಹುದು.
– ಭುವನ ಬಾಬು, ಪುತ್ತೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.