ಅಂದ ಹೆಚ್ಚಿಸುವ ಮರ, ಬಿದಿರಿನ ಪೀಠೊಪಕರಣ
Team Udayavani, Sep 7, 2019, 5:13 AM IST
ಮನೆಯ ಅಂದ ಹೆಚ್ಚಿಸುವುದರಲ್ಲಿ ಬಿದಿರು, ಮರದ ಪೀಠೊಪಕರಣಗಳ ಪಾತ್ರವೂ ಮಹತ್ವದ್ದು. ಬಲಿಷ್ಠತೆ, ಗರಿಷ್ಠ ಬಾಳಿಕೆ, ಅಂದ, ನುಣುಪು, ಆಕರ್ಷಕ ಲುಕ್ ಇತ್ಯಾದಿ ವೈಶಿಷ್ಟ್ಯಗಳ ಈ ಪೀಠೊಪಕರಣಗಳು ಹಲವು ಬಣ್ಣ, ವಿನ್ಯಾಸಗಳಲ್ಲಿ ಇಂದು ಲಭ್ಯ.
ಹಿಂದೆಲ್ಲ ಗ್ರಾಮೀಣ ಪ್ರದೇಶಗಳ ಮನೆಗಳಲ್ಲಿ ಕಂಡುಬರುತ್ತಿದ್ದ ಬಿದಿರಿನ ಪೀಠೊಪಕರಣಗಳ ಬಳಕೆ ಈಗ ನಗರ ಜೀವನದಲ್ಲೂ ಹಾಸುಹೊಕ್ಕಾಗಿವೆ. ಮರದ ಪೀಠೊಪಕರಣಗಳು ಒಂದು ಹಂತಕ್ಕೆ ಔಟ್ಡೇಟೆಡ್ ಅನ್ನಿಸಿದರೂ ಈಗ ಹಾಗಿಲ್ಲ. ಫ್ಯಾಷನ್ ಎಂಬುದು ಎಂದೂ ಒಂದೇ ರೀತಿ ಇರುವುದಿಲ್ಲ. ಮರದ ಉತ್ಪನ್ನಗಳು ಅಗ್ಗದ ಸೊತ್ತುಗಳೂ ಅಲ್ಲ. ಸ್ಥಾನಮಾನದ ದೃಷ್ಟಿಯಿಂದಲೂ ಮರದ ಪೀಠೊಪಕರಣಗಳು ಹೆಚ್ಚುಗಾರಿಕೆ ಹೊಂದಿವೆ. ಮರ ಮತ್ತು ಬಿದಿರಿನ ಪೀಠೊಪಕರಣಗಳಲ್ಲಿ ಕಲಾತ್ಮಕತೆಗೆ ಅವಕಾಶ ಹೆಚ್ಚು. ಇದು ಮನೆಯ ಮೆರುಗನ್ನು ಹೆಚ್ಚಿಸುತ್ತದೆ.
ಆಗ್ರ್ಯಾನಿಕ್ ಸಿಟ್ಟಿಂಗ್ ರೂಂ, ಬ್ಯಾಂಬೂ ಫ್ಲೋರಿಂಗ್: ಮನೆ ಎಂದ ಮೇಲೆ ಲಿವಿಂಗ್ ರೂಂ ಅಥವಾ ಸಿಟ್ಟಿಂಗ್ ರೂಂ ಬಹಳ ಪ್ರಮುಖ. ಬಿದಿರಿನಿಂದ ತಯಾರಿಸಿದ ಕುರ್ಚಿ, ಸೋಫಾ ಸೆಟ್ ಇತ್ಯಾದಿ ಪೀಠೊಪಕರಣಗಳು ಲಿವಿಂಗ್ ರೂಂಗೆ ಉತ್ತಮ ಲುಕ್ ನೀಡಬಲ್ಲವು. ಅತಿಥಿಗಳ ಮನಸ್ಸಿಗೆ ಉತ್ತಮ ಅನುಭೂತಿ ನೀಡಬಲ್ಲವು. ಮರದ ಆಸನಗಳು, ಮರ ಮತ್ತು ಕುಶನ್-ಎರಡೂ ಇರುವ ಪಾರಂಪರಿಕ ವಿನ್ಯಾಸ ಆಸನಗಳಿವೆ. ಲಿವಿಂಗ್ ರೂಂಗೆ ಬಿದಿರಿನ ಫ್ಲೋರಿಂಗ್ ಕೂಡ ಉತ್ತಮ ಆಯ್ಕೆ. ಇದರ ನಿರ್ವಹಣೆಯೂ ಸುಲಭ. ಮರದ ಲಾಂಗ್ ಸೋಫಾಗಳು ಲಿವಿಂಗ್ ರೂಂ ಗೆ ಸೂಕ್ತ. ದೊಡ್ಡ ಮಟ್ಟದ ಕಾರ್ಯಕ್ರಮಗಳು ಮನೆಯಲ್ಲಿ ನಡೆದಾಗ ಅತಿಥಿಗಳಿಗೆ ಬೆಡ್ ಆಗಿಯೂ ಇವು ಉಪಯೋಗಕ್ಕೆ ಬರುತ್ತವೆ.
ಹೊರಾಂಗಣ ಆಸನಗಳು: ಯಾವುದೇ ವಾತಾವರಣಕ್ಕೆ ಸುಲಭವಾಗಿ ಹಾನಿಗೊಳಗಾಗದೆ ಇರುವುದರಿಂದ ಹೊರಾಂಗಣಕ್ಕೆ ಬಿದಿರಿನ ಪೀಠೊಪಕರಣಗಳು ಸೂಕ್ತ. ಬಿದಿರು ಮತ್ತು ಮರದ ಸಂಯೋಜನೆ ಇಲ್ಲಿ ಬಹಳ ಉತ್ತಮ. ಮನೆಯಲ್ಲಿ ಹಿರಿಯರಿದ್ದರೆ ಸಿಟೌಟ್‌ನಲ್ಲಿ ಅವರಿಗೊಂದು ಮರದ ಕುರ್ಚಿ ಬಹಳ ಗೌರವಯುತವಾಗಿ ಕಾಣುತ್ತದೆ. ಮನೆಯಲ್ಲಿ ಪುಟ್ಟ ಪಾರ್ಕ್ ಇದ್ದರೆ ಅಲ್ಲಿ ಬಿದಿರಿನ ಪೀಠೊಪಕರಣಗಳನ್ನು ಬಳಸಬಹುದು.
ಬಾಗಿಲು
ಮರದ ಬಾಗಿಲಿಗೆ ಅತ್ಯಂತ ಬೇಡಿಕೆ. ಅದ್ಭುತ ಕಲಾತ್ಮಕತೆಯನ್ನು ಇದರಲ್ಲಿ ತರಬಹುದು. ನುರಿತ ಬಡಗಿಗಳಿಂದ ಚಿತ್ತಾರಗಳನ್ನು ಕೆತ್ತಿಸಿದ ಬಾಗಿಲುಗಳು ಮನೆಗೆ ವಿಶೇಷ ಮೆರುಗು ನೀಡುತ್ತವೆ.
ಡ್ರೆಸ್ಸರ್
ಬೆಡ್‌ರೂಂನಲ್ಲಿ ಬಟ್ಟೆ, ಆಭರಣಗಳನ್ನು ನೇತುಹಾಕಲು ಬಳಕೆಯಾಗುವ, ಹಲವು ಡ್ರಾಯರ್‌ಗಳಿರುವ ಡ್ರೆಸ್ಸರ್ ಮರದಿಂದ ತಯಾರಾಗುತ್ತದೆ.
ಬ್ಯಾಂಬೂ ಸ್ಟಿಕ್ಸ್
ಮನೆಯ ಗೋಡೆಗಳನ್ನು ಬಿದಿರಿನ ಕೋಲುಗಳಿಂದ ಅಲಂಕರಿಸುವುದು ಹೊಸ ಟ್ರೆಂಡ್. ರೂಂ ಡಿವೈಡರ್ ಆಗಿಯೂ ಬಿದಿರು ಬಳಕೆಯಾಗುತ್ತದೆ. ವಿದ್ಯುತ್ ದೀಪಗಳನ್ನು ಬಿದಿರಿನ ಬೊಂಬುಗಳಿಗೆ ಅಳವಡಿಸಿ, ದೀಪಗಳನ್ನು ತಯಾರಿಸುವುದು, ಗೋಡೆಗಳಲ್ಲಿ ಬಿದಿರುಗಳ ಹಿನ್ನೆಲೆಯಲ್ಲಿ ವಿದ್ಯುತ್ ದೀಪಗಳನ್ನು ಬಳಸಿ ಮನೆಯ ಕೊಠಡಿಗಳನ್ನು ಅದ್ಭುತವಾಗಿ ಸಿಂಗರಿಸುವ ಟ್ರೆಂಡ್ ಕೂಡ ಇದೆ.
ಬಿದಿರಿನ ಪೀಠೊಪಕರಣಗಳು ಮನೆಯ ಸೌಂದರ್ಯವನ್ನು ಹೆಚ್ಚಿಸುತ್ತವೆ ಎಂಬುದರಲ್ಲಿ ಎರಡು ಮಾತಿಲ್ಲ.
ಕಬೋರ್ಡ್
ಸಣ್ಣ ಸಣ್ಣ ಅಪಾರ್ಟ್‌ಮೆಂಟ್‌ಗಳಲ್ಲಿ ಸುಮಾರು 5-6 ಡ್ರಾಯರ್‌ಗಳಿರುವ ಕಬೋರ್ಡ್‌ಗಳ ಬಳಕೆ ಈಗ ಟ್ರೆಂಡ್. ತೀರಾ ಅಗತ್ಯದ ವಸ್ತುಗಳಿಗೆ ಇದು ಉತ್ತಮ ಸ್ಥಳ. ಸುಂದರ ವಿನ್ಯಾಸಗಳಲ್ಲಿ ಇದು ಲಭ್ಯವಾಗುವುದರಿಂದ ಮನೆಗೆ ಅಂದ. ಮಾಡರ್ನ್ ಬಾತ್‌ರೂಂಗಳಲ್ಲಿ ಸ್ನಾನದ ಸಾಮಗ್ರಿಗಳನ್ನಿಡುವುದಕ್ಕೆ ದೊಡ್ಡ ಕನ್ನಡಿ ಹೊಂದಿರುವ ಮರದಿಂದ ತಯಾರಿಸಿದ, ಬಿದಿರಿನಿಂದ ಫ್ರೇಮ್ ಇರುವ ಕಬೋರ್ಡ್ ಗಳು ಒಳ್ಳೆಯ ಲುಕ್ ನೀಡುತ್ತವೆ.
– ಎಸ್ಕೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Havyaka ಭಾಷೆಗೆ ಅಕಾಡೆಮಿ ಅಥವಾ ಅಧ್ಯಯನ ಪೀಠ ಅಗತ್ಯ: ರವಿಶಂಕರ್ ಭಟ್
Ramnagar; 30ಕ್ಕೂ ಅಧಿಕ ಊರುಗಳಲ್ಲಿ ಆತಂಕ ಹುಟ್ಟಿಸಿದ್ದ ಕಾಡಾನೆ ಸೆರೆ
Yakshagana;ಅಧ್ಯಯನ, ಪಾತ್ರ ಜ್ಞಾನದಿಂದಷ್ಟೇ ಕಲಾವಿದ ರಂಗಸ್ಥಳದಲ್ಲಿ ಮೆರೆಯಲು ಸಾಧ್ಯ
Drugs; ಮಾರಾಟ, ಸೇವನೆ : ಮಂಗಳೂರು 1,090, ಉಡುಪಿ 116 ಪ್ರಕರಣ ದಾಖಲು
Udupi; ಕ್ಯಾನ್ಸರ್‌ನಿಂದ ಬಳಲುತ್ತಿದ್ದ ರೋಗಿಯ ರಕ್ಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.