ಗೈರೋಸ್ಕೋಪಿಕ್ ಸಾರಿಗೆ ವ್ಯವಸ್ಥೆ
Team Udayavani, Jul 8, 2018, 3:30 PM IST
ಟ್ರಾಫಿಕ್ ಜಾಮ್ ಎನ್ನುವ ಸಮಸ್ಯೆಯನ್ನು ವಿಶ್ವವೇ ಎದುರಿಸುತ್ತಿದೆ. ಇದರ ನಿಯಂತ್ರಣಕ್ಕಾಗಿ ಹಲವು ದಾರಿಗಳನ್ನು ಕಂಡುಕೊಂಡಿದ್ದರೂ, ಹಲವಾರು ಪರ್ಯಾಯ ಮಾರ್ಗೋಪಾಯಗಳು ಬಂದರೂ ಸಂಚಾರ ದಟ್ಟಣೆಯನ್ನು
ಸುಸೂತ್ರಗೊಳಿಸಲು ಆಡಳಿತ ವ್ಯವಸ್ಥೆ ಹರಸಾಹಸವನ್ನೇ ಪಡುತ್ತಿದೆ. ಸ್ಥಳಾವಕಾಶಗಳಿದ್ದಲ್ಲಿ ರಸ್ತೆಗಳ ಅಗಲೀಕರಣವಾಗುತ್ತದೆ, ರಿಂಗ್ ರೋಡ್, ಮೇಲ್ಸೇತುವೆಗಳ ನಿರ್ಮಾಣವಾಗುತ್ತದೆ. ಆದರೆ ನಗರ ಪ್ರದೇಶಗಳ ಪ್ರಮುಖ ಭಾಗಗಳಲ್ಲಿ ಇದು ಅಸಾಧ್ಯ. ಅದಕ್ಕಾಗಿಯೇ ಗೈರೋಸ್ಕೋಪಿಕ್ ಎನ್ನುವ ಹೊಸ ಸಾರಿಗೆ ವ್ಯವಸ್ಥೆಯನ್ನು ರೂಪಿಸಲಾಗಿದೆ. ರಸ್ತೆಯಲ್ಲೇ ಪ್ರತ್ಯೇಕ ಲ್ಯಾನ್ ನಿರ್ಮಿಸಿ ಅದರ ಮೂಲಕ ಈ ಗೈರೋಸ್ಕೋಪಿಕ್ ವಾಹನಗಳು ತೆರಳುತ್ತವೆ. ಇದಕ್ಕೆ ರಸ್ತೆಯಲ್ಲಿ ಅಧಿಕ ಸ್ಥಳಾವಕಾಶಬೇಕೆಂದಿಲ್ಲ ಮಾತ್ರವಲ್ಲದೆ ಹೆಚ್ಚು ಖರ್ಚು ಕೂಡ ತಗಲುವುದಿಲ್ಲ. ಇದು ಫ್ಲೈಯಿಂಗ್ ಬಸ್‌ಗಳ ಮಾದರಿಯಲ್ಲಿ ಕಾರ್ಯ ನಿರ್ವಹಿಸುತ್ತದೆ. ಸಾರ್ವಜನಿಕ ಬಸ್ ರೀತಿಯ ಎಲ್ಲ ವ್ಯವಸ್ಥೆಯೂ ಇದರೊಳಗಿದೆ.
ನಗರಗಳಿಗೆ ಸೂಕ್ತ
ಟ್ರಾಫಿಕ್ ಜಾಮ್‌ನಿಂದ ರೋಸಿ ಹೋದ ನಗರದ ಜನ ತೆಗೆ ಇದೊಂದು ಆಶಾಕಿರಣ. ರಸ್ತೆ ಮಧ್ಯ ದಲ್ಲೇ ರ್‍ಯಾಂಪ್ ನಿರ್ಮಿ ಸಿ ದರೆ ಸಾಕು. ಎಷ್ಟೇ ಟ್ರಾಫಿಕ್ ಇದ್ದರೂ ಇತರೆ ವಾಹನಗಳೊಂದಿಗೆ ಯಾವುದೇ ಅಡೆತಡೆಗಳಿಲ್ಲದೆ ಈ ವಾಹನಗಳು ಸಾಗಬಲ್ಲವು. ಸಂಚಾರದ ಸಂದರ್ಭದಲ್ಲಿ ತನ್ನ ಎತ್ತರವನ್ನು ಹೆಚ್ಚಿಸುವ ಮತ್ತು ಕುಗ್ಗಿಸುವಂತ ತಾಂತ್ರಿಕ ಸೌಲಭ್ಯವನ್ನು ಹೊಂದಿರುವ ಈ ವಾಹನಗಳು ಹೆಚ್ಚು ಟ್ರಾಫಿಕ್ ಮಧ್ಯೆ ತನ್ನ ಎತ್ತರವನ್ನು ಹೆಚ್ಚಿಸಿಕೊಂಡು ಸಾಗಿದರೆ, ಫ್ಲೈ ಓವರ್ ಬಂದಾಗ ತನ್ನ ಗಾತ್ರವನ್ನು ಕುಗ್ಗಿಸಿಕೊಳ್ಳುತ್ತವೆ. ಇದರಿಂದ ವಾಹನಗಳ ಸಂಚಾರ ಸರಾಗವಾಗಿ ನಡೆಯಲು ಸಾಧ್ಯವಾಗುತ್ತದೆ. ಇದು ಸಾರಿಗೆ ವ್ಯವಸ್ಥೆಗೊಂದು ಆಶಾಕಿರಣವಾಗಿದೆ.
ಹಲವು ಸೌಲಭ್ಯ
ಈ ಗೈರೋಸ್ಕೋಪಿಕ್ ಬಸ್‌ಗಳಲ್ಲಿ ಹಲವು ಸೌಕರ್ಯದ ಜತೆಗೆ ವಿವಿಧ ಮಾಡೆಕ್ ಗಳಿವೆ. ಬಸ್ ಒಳಗಡೆ ಆರಾಮವಾಗಿ ಕುಳಿತುಕೊಳ್ಳುವ ಆಸನಗಳು, ಟಿ.ವಿ. ಸೌಲಭ್ಯಗಳನ್ನೊಳಗೊಂಡಿದೆ. ಇದರಲ್ಲಿ ಲಕ್ಸುರಿ ವ್ಯವಸ್ಥೆಯನ್ನು ರೂಪಿಸಲಾಗಿದ್ದು ಬಿಸಿನೆಸ್ ಕ್ಲಾಸ್‌ಗೂ ಇದು ಸೂಕ್ತವಾಗಿದೆ.
ಸೋಲರ್ ಶಕ್ತಿಯಿಂದ ಚಲಿಸುವ ಕಾರಣ ಪ್ರತ್ಯೇಕ ಸೋಲರ್ ಪ್ಯಾನಲ್ ಹಾಗೂ ಚಾರ್ಜಿಂಗ್ ಬ್ಯಾಟರಿಯನ್ನು ಇದು ಹೊಂದಿರುತ್ತದೆ. ಹೀಗಾಗಿ ಇದಕ್ಕೆ ಇಂಧನ ವೆಚ್ಚವೂ ಇಲ್ಲವಾಗುತ್ತದೆ. ಫ್ಯೂಚರಿಸ್ಟಿಕ್ ಸಾರಿಗೆ ಸುರಕ್ಷಿತವಾದ ವಿನ್ಯಾಸದೊಂದಿಗೆ ಪರಿಸರ ಸ್ನೇಹಿಯಾಗಿದ್ದು, ಎರಡು ಚಕ್ರದಲ್ಲಿ ಸಾಗುವ ಈ ವಾಹನ ಜಾಯ್‌ಸ್ಟಿಕ್ ಮೂಲಕ ಚಾಲನೆ ನಿಯಂತ್ರಿಸಬಹುದು. ಇದರೊಳಗೆ ಕುಳಿತು ಸಂಪೂರ್ಣ ಹೊರ ವೀಕ್ಷಣೆಯನ್ನು ಮಾಡಲು ಸಾಧ್ಯ. ಶಬ್ದ ರಹಿತ ಪ್ರಯಾಣವನ್ನು ನಡೆಸಬಹುದು. ಇದರಿಂದ ಸಮಯ
ಹಾಗೂ ಹಣದ ಉಳಿತಾಯವೂ ಸಾಧ್ಯವಿದೆ. ರಶ್ಯನ್ ದಾಹಿರ್ ಇನ್‌ಸಾಟ್ ಕಂಪೆನಿಯು ತಯಾರಿಸಿರುವ ಈ ಗೈರೋ ಸ್ಕೋ ಪಿಕ್ ವಾಹನಗಳ ಮಾದರಿಗಳಷ್ಟೇ ರಸ್ತೆಗಿಳಿದಿದ್ದು, ಇದು ಸಂಪೂರ್ಣವಾಗಿ ಸಿದ್ಧವಾಗಲು ಹಲವು ವರ್ಷಗಳೇ ಬೇಕಾಗಬಹುದು.
ಭರತ್‌ರಾಜ್ ಕರ್ತಡ್ಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.