ಕೈ ಹಿಡಿವ ಕಡಲೆ; ನಿಶ್ಚಿತ ಕಾಸು ಕೊಡುವ ದ್ವಿದಳ ಧಾನ್ಯ
Team Udayavani, Dec 22, 2019, 4:45 AM IST
ನಾವು ತಿನ್ನುವ ಊಟದಲ್ಲಿ ದಿನನಿತ್ಯ ಕನಿಷ್ಠ 80 ಗ್ರಾಂ.ಗಳಷ್ಟಾದರೂ ದ್ವಿದಳ ಧಾನ್ಯದ ಕಾಳುಗಳು ಇರಲೇಬೇಕು! ಹೌದು, ದ್ವಿದಳ ಧಾನ್ಯಗಳಿಗೆ ಇರುವ ಮಹತ್ತÌವೇ ಅಂಥದ್ದು. ಆಹಾರದಲ್ಲಿ ಮುಖ್ಯವಾಗಿ ಇರಬೇಕಾದ ಪ್ರೊಟೀನ್/ಸಸಾರಜನಕ ಅಂಶವನ್ನು ಇವು ಒದಗಿಸುತ್ತವೆ. ಕಾಳುಗಳಲ್ಲಿ 39; ಸಿ39; ಜೀವಸತ್ತ ಹೆಚ್ಚಾಗಿದ್ದು, ಇವುಗಳನ್ನು ನಿರಂತರವಾಗಿ ಸೇವಿಸಿದರೆ ಅನಾರೋಗ್ಯ ನಿಮ್ಮ ಹತ್ತಿರವೂ ಸುಳಿಯಲ್ಲ. ಈ ಹಿನ್ನೆಲೆಯಲ್ಲಿಯೇ, ಜಗತ್ತಿನಾದ್ಯಂತ ದ್ವಿದಳ ಧಾನ್ಯಗಳಿಗೆ ಅಧಿಕ ಬೇಡಿಕೆ ಇದೆ. ಅದರಲ್ಲೂ ಕಡಲೆ ರೈತರ ಕೈ ಹಿಡಿಯುತ್ತೆ. ಇದು ಹಿಂಗಾರಿನ ಬೆಳೆ. ಹೆಚ್ಚು ಮಳೆಯ ಆವಶ್ಯಕತೆ ಇಲ್ಲ. ತಂಪಾದ ವಾತಾವರಣವಿದ್ದರೆ ಸಾಕು. ಹವೆಯಲ್ಲಿನ ನೀರಿನಾಂಶವನ್ನೇ ಹೀರಿಕೊಂಡು ಬೆಳೆಯುತ್ತದೆ.
ಬೀಜ ಬಿತ್ತನೆ ಹೇಗೆ?
ಕಡಲೆಯಲ್ಲಿ ಕಂದು, ಹಳದಿ, ಕಪ್ಪು, ಬಿಳಿ ಹೀಗೆ ನಾಲ್ಕು ಬಣ್ಣದವುಗಳಿವೆ, ಒಂದೊಂದು ಪ್ರದೇಶದಲ್ಲಿ ಒಂದೊಂದು ವಿಧದ ಕಡಲೆ ಬೆಳೆಯುತ್ತಾರೆ. ಆದರೂ ಅಣ್ಣಿಗೇರಿ- 1 ಕಡಲೆ ಅತ್ಯಂತ ಜನಪ್ರಿಯ ತಳಿ. ಜೊತೆಗೆ ಬಿ.ಜಿ.ಡಿ.- 103 ಹಾಗೂ ಜೆ.ಜಿ. – 11 ಕೂಡ ಅಧಿಕ ಇಳುವರಿ ಕೊಡುವ ತಳಿಗಳು. ಮುಂಗಾರಿನ ಬೆಳೆಯ ನಂತರ ಜಮೀನನ್ನು ಎರಡು ಸಲ ಉಳುಮೆ ಮಾಡಿ ಕೊನೆಗೊಮ್ಮೆ ಕಪ್ಪು ಮಣ್ಣಿನಲ್ಲಿ ಜಮೀನಿನ ತುಂಬಾ ಮಡಿ ಆಗುವಂತೆ ಕುಂಟೆಯ ಸಹಾಯದಿಂದ ಮಣ್ಣು ಎತ್ತರಿಸಬೇಕು. ಬಿತ್ತನೆಗೆ ಎರಡು ವಾರ ಮೊದಲು ಎಕರೆಗೆ ಕೇವಲ 2- 3 ಟನ್‌ನಷ್ಟು ಕೊಟ್ಟಿಗೆ ಗೊಬ್ಬರ ಹಾಕಿ ಮಣ್ಣಿನಲ್ಲಿ ಬೆರೆಸಿ. ಮೊದಲೇ ಹೇಳಿದಂತೆ ದ್ವಿದಳ ಧಾನ್ಯಗಳಿಗೆ ರಾಸಾಯನಿಕ ಗೊಬ್ಬರಗಳ ಅವಶ್ಯ ಇಲ್ಲ. ಹೊಲ ಫಲವತ್ತಾಗಿದ್ದರೆ ಅಷ್ಟೇ ಸಾಕು, ಕೂರಿಗೆಯ ಸಹಾಯದಿಂದ ಒಂದೂವರೆ ಅಡಿ ಅಗಲದ ಸಾಲಿನಲ್ಲಿ ಅರ್ಧ ಅಡಿಗೊಂದು ಬೀಜ ಬೀಳುವಂತೆ ಬಿತ್ತನೆ ಮಾಡಿ.
ನಿರ್ವಹಣೆ ಹೇಗೆ?
ಕಡಲೆಯ ಹೊಲದಲ್ಲಿ ಹೆಚ್ಚಿನ ಕಳೆಯ ಕಾಟ ಇರಲ್ಲ. ಆದರೂ 2- 3 ಸಲ ಎಡೆಕುಂಟೆ ಹೊಡೆದು ಮಣ್ಣು ಸಡಿಲ ಮಾಡಿ, ಬಿರುಕುಗಳಿದ್ದರೆ ಮುಚ್ಚುವ ಹಾಗೆ ಮಾಡಿ. ಪ್ರತಿ ಸಲ ಎಡೆಕುಂಟೆ ಹೊಡೆಯುವಾಗ ತಂಪಾದ ವಾತಾವರಣದಲ್ಲಿ ಇಟ್ಟ ಒಳ್ಳೆ ಸಾವಯವ ಗೊಬ್ಬರ, ಎರೆಹುಳು ಗೊಬ್ಬರ ಹಾಗೂ ಮುಂಗಾರಿನ ಬೆಳೆಗಾಗಿ ತಂದ ಇತರ ಸೂಕ್ಷ್ಮ ಪೋಷಕಾಂಶಗಳು ಉಳಿದಿದ್ದರೆ ಅವುಗಳನ್ನು ಮಿಕ್ಸ್ ಮಾಡಿ ಎರಚಬೇಕು. ತೀರ ರಾಸಾಯನಿಕ ಗೊಬ್ಬರ ಕೊಡಲೇಬೇಕು ಅನಿಸಿದರೆ ಎಕರೆಗೆ ಹೆಚ್ಚೆಂದರೆ ಹತ್ತು ಕೇಜಿಯಷ್ಟು ಡಿ.ಎ.ಪಿ. ಗೊಬ್ಬರ ಮಾತ್ರ ಕೊಡಿ ಸಾಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
udupi: ಮಗನ ಅರಸುತ್ತಾ ಬಂದ ತಾಯಿ: ಇಬ್ಬರು ಮಕ್ಕಳ ಸಹಿತ ವೃದ್ಧೆಯ ರಕ್ಷಣೆ
Health Department: ಸರಕಾರಿ ಆಸ್ಪತ್ರೆ, ಕೇಂದ್ರಗಳಲ್ಲಿ ಔಷಧ ಕೊರತೆ ಇಲ್ಲ: ಸಚಿವ ದಿನೇಶ್
Mysuru: ಕೋವಿಡ್ ವೇಳೆ ಔಷಧ ಖರೀದಿಯಲ್ಲಿ ನನ್ನ ಪಾತ್ರವಿಲ್ಲ: ಡಾ.ಸಿ.ಎನ್.ಮಂಜುನಾಥ್
Inquiry Report: ಬಿಜೆಪಿಗೆ ’40 ಪರ್ಸೆಂಟ್’ ಕ್ಲೀನ್‌ಚಿಟ್ ಸಿಕ್ಕಿಲ್ಲ: ಸಚಿವ ಪ್ರಿಯಾಂಕ್
Udupi: ಚಿನ್ನ, ವಜ್ರಾಭರಣ ಕದ್ದು ಹೋಂ ನರ್ಸ್ ಪರಾರಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.