ನಮ್ಮಲ್ಲೇ ಇದೆ ಸಂತೋಷದ ಕೀಲಿಕೈ
Team Udayavani, May 13, 2019, 6:00 AM IST
ನಾವು ನಮ್ಮವರು ಎನ್ನುವ ಲೋಕವಿದೆಯಲ್ಲ ಅದೊಂದು ಕಂಪರ್ಟ್ ಝೋನ್ ಇದ್ದ ಹಾಗೆ. ನಮ್ಮ ಖುಷಿ, ಸಂತೋಷಗಳೆಲ್ಲ್ಲ ಈ ವಲಯದಲ್ಲೇ ಹಂಚಿ ಹೋಗಿರುತ್ತದೆ. ಎಲ್ಲಿಯೂ ಹೇಳದ ಮನದ ತುಮುಲಗಳನ್ನೆಲ್ಲ ತೆರೆದಿಡಲು ಈ ವಲಯವೇ ಸೂಕ್ತ ವೇದಿಕೆಯಾಗಿರುತ್ತದೆ.
ಮನದಾಳದ ದುಃಖವನ್ನು ಅಪರಿಚಿತ ವ್ಯಕ್ತಿ ಮತ್ತು ಆತ್ಮೀಯರೊಂದಿಗೆ ಹಂಚಿಕೊಂಡಾಗ ಅಲ್ಲಿ ಎರಡು ಭಿನ್ನ ಪ್ರತಿಕ್ರಿಯೆಗಳು ಬರಬಹುದು. ಅಪರಿಚಿತರು ನಮ್ಮ ಸಮಸ್ಯೆಗಳಿಗೆ ಮುಗುಳ್ನಕ್ಕು ಮುಂದೆ ನಡೆದು ಹೋಗಿಬಿಡುವರು. ಆದರೆ ನಮ್ಮವರು ಎನ್ನುವವರು ನಮ್ಮ ಖುಷಿಗೆ ಅವರು ದುಪ್ಪಟ್ಟು ಖುಷಿಪಟ್ಟು ನಮ್ಮ ಕಷ್ಟಗಳಿಗೆ ಮರುಗಿ ಅವರದ್ದೇ ಸಮಸ್ಯೆ ಎಂದು ಪರಿಹರಿಸಲು ಮುಂದೆ ಬರುತ್ತಾರೆ. ಇದೇ ಆತ್ಮೀಯರು ಮತ್ತು ಅಪರಿಚಿತರ ನಡುವೆ ಇರುವ ವ್ಯತ್ಯಾಸ.
ನಮ್ಮವರು ಎನ್ನುವ ಪ್ರಪಂಚದಲ್ಲಿ ಹೆಚ್ಚಿನ ನಿರೀಕ್ಷೆಗಳಿರುತ್ತವೆ. ನಮ್ಮ ಖುಷಿ, ಸಂತೋಷಗಳಿಗೆ ಸರಿಯಾದ ಪ್ರತಿಕ್ರಿಯೆ ಸಿಗದಿದ್ದರೆ ಯಾಕೆ ಹೀಗೆ ವರ್ತಿಸುತ್ತಿದ್ದಾರೆ ಎನ್ನುವ ಪ್ರಶ್ನೆಗಳು ಎದುರಾಗುವುದು. ಈ ರೀತಿಯ ಅನೇಕ ವಿಷಯಗಳು ನಮ್ಮವರಲ್ಲಿ ಹಂಚಿಕೊಂಡಾಗ ಅದಕ್ಕೆ ನಮ್ಮ ನಿರೀಕ್ಷೆಯ ಪ್ರತಿಕ್ರಿಯೆ ತೋರದಿದ್ದಾಗ ನಾವೇ ನೊಂದುಕೊಳ್ಳುತ್ತೇವೆ. ಎಷ್ಟೋ ಬಾರಿ ನಮ್ಮ ಖುಷಿ ಬೇರೆಯವರು ಕೊಡುವ ಪ್ರತಿಕ್ರಿಯೆಯನ್ನು ಆಧರಿಸಿರುತ್ತದೆ. ಆದರೆ ಅದು ಶಾಶ್ವತವಾಗಿರಲು ಹೇಗೆ ಸಾಧ್ಯ.
ಬಹಳ ಹಿಂದಿನಿಂದ ಬಂದ ಮಾತಿದೆ ನಮ್ಮ ಕಷ್ಟ ಸುಖಗಳನ್ನು ನಮ್ಮವರಲ್ಲೇ ಹಂಚಿಕೊಂಡು ಪರಿಹರಿಸಬೇಕು. ಹಾಗಂತ ಎಲ್ಲರೂ ನಿಮ್ಮ ಸಮಸ್ಯೆಗಳಿಗೆ ಕಿವಿಯಾಗುತ್ತಾರೆ ಎಂಬುದನ್ನು ನಂಬಬಾರದು. ನೀವು ಯಾರನ್ನು ಆತ್ಮೀಯ ಎಂದು ಎನಿಸುಕೊಳ್ಳುವ ವ್ಯಕ್ತಿ ನಿಮ್ಮನ್ನು ಅಪರೂಪಕ್ಕೆ ಪರಿಚಯವಾದ ಜಸ್ಟ್ ಫ್ರೆಂಡ್ ಅನ್ನುವ ಸ್ಥಾನದಲ್ಲಿ ಇಟ್ಟಿರಬಹುದು. ಆದರೆ ಅದು ನಿಮಗೆ ಗೊತ್ತಾಗುವ ಹೊತ್ತಿಗೆ ನೀವು ನೋವಿನ ಭಾವದಲ್ಲಿರುತ್ತೀರಿ ಆ ಕಾರಣಕ್ಕಾಗಿ ಎಲ್ಲರೂ ನಮ್ಮವರೆನ್ನುವ ಭ್ರಮಾ ಲೋಕದಲ್ಲಿ ತೇಲಿಬಿಡಬೇಡಿ. ಹಾಗಂತ ಎಲ್ಲ ಸಮಸ್ಯೆಗಳಿಗೂ ಇನ್ನೊಬ್ಬರ ಬಳಿಯೇ ಪರಿಹಾರ ಇದೆ ಎಂದು ನಂಬಿದರೆ ನಮ್ಮ ಬದುಕು ಪರಿಪೂರ್ಣವಾಗಲು ಸಾಧ್ಯವಿದೆ. ನಾವು ಬೆಳೆಯಬೇಕಾದರೆ ನಮ್ಮ ಸಂತೋಷವನ್ನು ನಾವೇ ಹುಡುಕಲು ಕಲಿಯಬೇಕು. ಆಗ ಬದುಕು ನಮಗೆ ಸಾಕಷ್ಟು ಅನುಭವವನ್ನು ಕಟ್ಟಿಕೊಡುತ್ತದೆ.
-ವಿಶ್ವಾಸ್ ಅಡ್ಯಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.