ಕಠಿನ ಪರಿಶ್ರಮವೇ ಯಶಸ್ಸಿನ ದಾರಿ- ಬಾಲಗಂಗಾಧರ ತಿಲಕ್‌


Team Udayavani, Aug 6, 2018, 3:46 PM IST

6-agust-15.jpg

ಆಗಸ್ಟ್‌ ತಿಂಗಳೆಂದರೆ ದೇಶ ಪೂರ್ತಿ ಹಬ್ಬದ ಸಂಭ್ರಮದಲ್ಲಿ ಮುಳುಗುವ ಹೊತ್ತು. ದೇಶಕ್ಕೆ ಸ್ವಾತಂತ್ರ್ಯ ಬಂದು 70 ವರ್ಷಗಳೇ ಕಳೆದರೂ ಇನ್ನೂ ಕೂಡ ಸ್ವಾತಂತ್ರ್ಯಕ್ಕಾಗಿ ಬಲಿದಾನ ಮಾಡಿದವರ ಹೆಸರುಗಳು ಎಲ್ಲರ ಮನದಲ್ಲೂ ಉಳಿದಿವೆ. ಇವರು ಕೇವಲ ಸ್ವಾತಂತ್ರ್ಯಕ್ಕಾಗಿ ಹೋರಾಡಲಿಲ್ಲ ಬದಲಿಗೆ ನಮ್ಮೆಲ್ಲರ ಬದುಕನ್ನೇ ಬದಲಿಸಿದರು. ಬದುಕಿಗೊಂದು ದಾರಿ ತೋರಿಸಿದವರು.

ದೇಶ ರಕ್ಷಣೆಗಾಗಿ ಹಲವಾರು ಮಂದಿ ತಮ್ಮ ಪ್ರಾಣವನ್ನೇ ಒತ್ತೆ ಇಟ್ಟರು. ತಮ್ಮ ಕುಟುಂಬ, ಬಂಧುಬಳಗ ಬಿಟ್ಟು ಹೋದರು. ಅಂತಹ ಸಾಧಕರ ಹೆಸರಿನಲ್ಲಿ ಕೇಳಿ ಬರುವ ಪ್ರಮುಖ ಹೆಸರು ಬಾಲಗಂಗಾಧರ ತಿಲಕ್‌. ದೇಶ ಕಂಡ ಅಪ್ರತಿಮ ರಾಷ್ಟ್ರೀಯವಾದಿ, ಸಮಾಜ ಸುಧಾರಕ, ಹಿಂದೂ ರಾಷ್ಟ್ರೀಯ ಪಿತಾಮಹರೆಂದೇ ಕರೆಯಲ್ಪಡುವ ಇವರು ಪ್ರತಿಯೊಬ್ಬರ ಬದುಕಿಗೂ ಬೇಕಾದ ಅಮೂಲ್ಯ ವಿಚಾರಗಳನ್ನು ನೀಡಿದ್ದಾರೆ. ದೇಶ ಸೇವೆಯೇ ಧ್ಯೇಯ ಸ್ವಾತಂತ್ರ್ಯ ಪೂರ್ವದಲ್ಲಿ ಘರ್ಜಿಸಿದ ಈ ಮಾತು ಇಂದಿಗೂ ಜನಸಾಮಾನ್ಯರ ಮನಸ್ಸಿನಲ್ಲಿ ಉಳಿದುಕೊಂಡಿದೆ. ದೇಶ ಸೇವೆಯನ್ನೇ ತಮ್ಮ ಪ್ರಮುಖ ಉದ್ದೇಶವನ್ನಾಗಿ ಮಾಡಿಕೊಂಡ ಇವರು ಇಂದಿನ ಯುವ ನಾಯಕರಿಗೆ ಮಾದರಿಯಾಗಿದ್ದಾರೆ. ಯಾವುದೇ ಕರ್ತವ್ಯ, ಜವಾಬ್ದಾರಿಗಳನ್ನು ಸ್ವಹಿತದ ದೃಷ್ಟಿಯಿಂದ ನೋಡದೆ, ದೇಶದ ಒಳಿತಿಗಾಗಿ ಹಗಲು, ರಾತ್ರಿ ದುಡಿದು ಎಲ್ಲರ ಹೃದಯದಲ್ಲೂ ಇಂದು ಅಗ್ರ ಮಾನ್ಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಗಣಿತದ ಮೇಲೆ ಅಪಾರ ಆಸಕ್ತಿ ಹೊಂದಿದ್ದ ಬಾಲಗಂಗಾಧರ ತಿಲಕ್‌, ಆಧುನಿಕ ಶೈಲಿಯ ಶಿಕ್ಷಣ ಪಡೆದವರಲ್ಲಿ ಪ್ರಮುಖರಾಗಿದ್ದರು. ಶಿಕ್ಷಕ ವೃತ್ತಿಯನ್ನು ಪಡೆದು, ಬಳಿಕ ಅದನ್ನು ತ್ಯಜಿಸಿ ಪತ್ರಕರ್ತರಾದರು. ಪಾಶ್ಚಾತ್ಯ ಶಿಕ್ಷಣ ಪದ್ಧತಿಯನ್ನು ತೀವ್ರವಾಗಿ ವಿರೋಧಿಸಿದ ಇವರು ಇಂಗ್ಲಿಷ್‌ ಭಾಷೆಯನ್ನೂ ವಿರೋಧಿಸಿದ್ದರು. ಭಾರತೀಯ ಪರಂಪರೆಯನ್ನು ಉಳಿಸುವ ನಿಟ್ಟಿನಲ್ಲಿ ಸತತ ಹೋರಾಟ ಮಾಡಿದ ಬಾಲ ಗಂಗಾಧರ ತಿಲಕ್‌, ಪುಣೆಯಲ್ಲಿ ಡೆಕ್ಕನ್‌ ಎಜುಕೇಶನಲ್‌ ಸೊಸೈಟಿಯನ್ನು ಸ್ಥಾಪಿಸಲು ಸತತ ಪರಿಶ್ರಮಪಟ್ಟರು. ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ದೊರೆಯಬೇಕು ಎಂಬುದೇ ಇವರ ಉದ್ದೇಶವಾಗಿತ್ತು.

ಉದಾರಿ, ಸೌಮ್ಯವಾದಿ ಧೋರಣೆಯ ತಿರಸ್ಕರಿಸುತ್ತಿದ್ದ ಬಾಲ ಗಂಗಾಧರ ತಿಲಕ್‌, ನೇರ ನಡೆನುಡಿಯ ವ್ಯಕ್ತಿತ್ವ ಹೊಂದಿದ್ದರು. ಕೇಸರಿ, ಮರಾಠಿ ಪತ್ರಿಕೆಗಳ ಮೂಲಕ ಇಂಗ್ಲಿಷ್‌ ಭಾಷೆ, ಆಡಳಿತವನ್ನು ಟೀಕಿಸುತ್ತಿದ್ದ ಇವರು, ಈ ಮೂಲಕ ಜನಜಾಗೃತಿ ಮೂಡಿಸುತ್ತಿದ್ದರು. ಸಮಾಜ ಸುಧಾರಣೆಗೂ ಹಲವು ದಾರಿಗಳನ್ನು ತೋರಿದವರಲ್ಲಿ ಬಾಲ ಗಂಗಾಧರ ತಿಲಕ್‌ ಕೂಡ ಒಬ್ಬರು. ಮದ್ಯಪಾನ ಸೇವನೆಯ ವಿರುದ್ಧ ಹೋರಾಟವನ್ನೇ ನಡೆಸಿದರು. ಈ ಮೂಲಕ ಇನ್ನೊಬ್ಬರನ್ನು ಟೀಕಿಸುವ ಮೊದಲು ನಾವು ದುಶ್ಚಟಗಳಿಂದ ದೂರವಿದ್ದು ನಮ್ಮ ಪರಿಸರವನ್ನು ಸ್ವಚ್ಛ ವಾಗಿಟ್ಟುಕೊಳ್ಳಬೇಕು ಎಂಬುದನ್ನು ಸಾರಿದರು.

ಒಗ್ಗಟ್ಟಿನಲ್ಲಿ ಬಲವಿದೆ ಎಂಬುದನ್ನು ಮತ್ತೊಮ್ಮೆ ಸಾರಿದ ಕೀರ್ತಿಯೂ ಬಾಲಗಂಗಾಧರ ತಿಲಕ್‌ ಅವರಿಗೇ ಸಲ್ಲಬೇಕು. ಸಾರ್ವಜನಿಕ ಗಣೇಶೋತ್ಸವದ ನೆಪದಲ್ಲಿ ದೇಶ ಪ್ರೇಮಿಗಳನ್ನು ಒಗ್ಗೂಡಿಸಿದ ಕೀರ್ತಿ ಅವರದ್ದು. ಧಾರ್ಮಿಕ ಕಾರ್ಯಕ್ರಮಗಳು ದೇಶದ ಉದ್ಧಾರಕ್ಕಾಗಿಯೇ ನಡೆಯಬೇಕು ಎಂಬುದನ್ನು ಅವರು ಈ ಮೂಲಕ ಸಾರಿದರು. ಸಮಾನ ಮನಸ್ಕರು, ಸಾಮಾನ್ಯ ಜನತೆ, ದೇಶದ ಪ್ರತಿಯೊಬ್ಬ ವ್ಯಕ್ತಿಯೂ ಒಗ್ಗಟ್ಟಾಗಿದ್ದರೆ ಯಾರಿಂದಲೂ ದೇಶವನ್ನು ದೋಚಲು ಸಾಧ್ಯವಿಲ್ಲ. ಇದರಿಂದ ಒಂದಲ್ಲ ಒಂದು ದಿನ ಖಂಡಿತಾ ಜಯ ನಮ್ಮದಾಗುತ್ತದೆ ಎನ್ನುವುದನ್ನೂ ಸಾರಿದ್ದಾರೆ.

ಶಿಕ್ಷಣದಿಂದ ಪ್ರಗತಿ
ಶಿಕ್ಷಣ ಪಡೆದರೆ ಮಾತ್ರ ನಾವು ಪ್ರಗತಿಯ ದಾರಿಯಲ್ಲಿ ಸಾಗಬಹುದು. ಶಿಕ್ಷಣ ನಮ್ಮ ಭವಿಷ್ಯಕ್ಕೆ ಮಾತ್ರವಲ್ಲ ದೇಶದ ಪ್ರಗತಿಗೂ ಅಗತ್ಯ . ನಾವು ಇನ್ನೊಬ್ಬರ ಮೇಲೆ ಅವಲಂಬಿತರಾಗಬಾರದು. ಪ್ರತಿಯೊಬ್ಬರೂ ತಮ್ಮ ಸ್ವಂತ ಹಿತದೃಷ್ಟಿಯಿಂದ ದೇಶದ ಪ್ರಗತಿ ಕಾಣಬೇಕು. ಇದರಿಂದ ಒಗ್ಗಟ್ಟು ಸಾಧ್ಯವಾಗುತ್ತದೆ ಎನ್ನುವುದು ಅವರ ವಾದವಾಗಿತ್ತು.

ಅಸ್ಪ್ರಶ್ಯತೆ ನಿವಾರಣೆ ಶ್ರೇಷ್ಠ ಕಾರ್ಯ
ಅಸ್ಪ್ರಶ್ಯತೆ ನಿವಾರಣೆಗೆ ನಮ್ಮ ದೇಶದಲ್ಲಿ ಅನೇಕ ಸಮಾಜ ಸುಧಾರಕರು ಪ್ರಯತ್ನಿಸಿದ್ದಾರೆ. ಅವರಲ್ಲಿ ತಿಲಕ್‌ ಕೂಡ ಒಬ್ಬರು. ‘ಅಸ್ಪ್ರಶ್ಯತೆಯನ್ನು ದೇವರು ಬಂದು ಪ್ರತಿಪಾದಿಸಿದರೂ ನಾನು ಆ ದೇವರನ್ನು ದೇವರೆಂದು ಪೂಜಿಸಲಾರೆ’ ಎನ್ನುವ ಮೂಲಕ ಬಾಲಗಂಗಾಧರ ತಿಲಕ್‌ ಅಸ್ಪ್ರಶ್ಯತೆಯನ್ನು ತೀವ್ರವಾಗಿ ವಿರೋಧಿಸಿದರು ಮಾತ್ರವಲ್ಲದೇ ಹಿಂದೂ ಧರ್ಮ ಸುಧಾರಣೆ ಮತ್ತು ಧರ್ಮ ರಕ್ಷಣೆಗಾಗಿ ಅಸ್ಪೃಶ್ಯತೆ ನಿವಾರಿಸುವುದು ಶ್ರೇಷ್ಠ ಕಾರ್ಯ ಎಂಬುವುದು ಅವರ ವಾದವಾಗಿತ್ತು.

ಸವಾಲುಗಳನ್ನು ಸ್ವೀಕರಿಸಿ
ಜೀವನದಲ್ಲಿ ಸೋಲು ಗೆಲುವು ಖಚಿತ. ಪ್ರತೀ ದಿನ, ಪ್ರತೀ ಸಮಯ ಸವಾಲುಗಳು ನಮ್ಮನ್ನು ಇನ್ನಷ್ಟು ಕಠಿನ ಪರಿಶ್ರಮಕ್ಕೆ ದೂಡುತ್ತದೆ. ಇದರಿಂದ ಹೊಸ ಪಾಠ ಕಲಿಯುತ್ತೇವೆ. ಒಂದಿಷ್ಟು ಜಾಗೃತರಾಗಿಯೂ ಇರುತ್ತೇವೆ. ಆದರೆ, ಸಾಧನೆಗೆ ಪೂರಕವಾಗುವ ಚಾತುರ್ಯತೆ ಬೆಳೆಸಿಕೊಳ್ಳಬೇಕಾಗಿದೆ. ಬಹುಮುಖ್ಯವಾಗಿ, ಸವಾಲುಗಳನ್ನು ಹೇಗೆ ಸ್ವೀಕರಿಸಬೇಕು ಎನ್ನುವುದನ್ನು ತಿಳಿದುಕೊಂಡರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎನ್ನುವುದರಲ್ಲಿ ಎರಡು ಮಾತಿಲ್ಲ ಎನ್ನುತ್ತಿದ್ದ ಬಾಲಗಂಗಾಧರ್‌ ತಿಲಕ್‌ ಇದನ್ನು ತಮ್ಮ ಜೀವನ ಮೂಲಕವೇ ತೋರಿಸಿಕೊಟ್ಟರು.

ಇಚ್ಛಾಶಕ್ತಿಯ ಕೊರತೆ ನೀಗಿಸಿಕೊಳ್ಳಿ
ಬದುಕಿನಲ್ಲಿ ಸಮಸ್ಯೆ  ಸಾಮಾನ್ಯ. ಸಮಸ್ಯೆಯ ಮೂಲ ಹುಡುಕಲು ಕಲಿಕೆ ಬೇಕಿಲ್ಲ. ಬದಲಾಗಿ ಸಮಸ್ಯೆಯನ್ನು ನಿವಾರಿಸಲು ಹೋರಾಡುವುದಕ್ಕೆ ಮಾನಸಿಕ ಸದೃಢತೆ ಬೇಕು. ಅದಕ್ಕಾಗಿ ಇಚ್ಛಾ ಶಕ್ತಿಯ ಕೊರತೆ ನೀಗಿಸಿಕೊಳ್ಳಬೇಕು. ಸ್ವಇಚ್ಛೆಯಿದ್ದರೆ ಮಾತ್ರ ಕೆಲಸ ಕಾರ್ಯಗಳು ಸುಲಭವಾಗುತ್ತವೆ. ಈಗಿನ ಯುವ ಪೀಳಿಗೆ ಎದುರಿಸುತ್ತಿರುವ ಪ್ರಮುಖ ಸವಾಲುಗಳಲ್ಲಿ ಇಚ್ಛಾ ಶಕ್ತಿಯ ಕೊರತೆಯೂ ಒಂದು. ಅದ್ದರಿಂದ ಇಚ್ಛಾ ಶಕ್ತಿಯ ಕೊರತೆಯನ್ನು ನೀಗಿಸಿಕೊಂಡರೆ ಬದುಕಿನಲ್ಲಿ ಎಂತಹ ಸವಾಲು ಬೇಕಿದ್ದರೂ ಎದುರಿಸಬಹುದು ಎಂಬ ಬಾಲಗಂಗಾಧರ ತಿಲಕರ ಮಾತುಗಳು ಇಂದಿಗೂ ಅರ್ಥಪೂರ್ಣ ಎಂದೆನಿಸುತ್ತದೆ.

ಯಶಸ್ಸಿಗೆ ಶತ್ರುಗಳಿರಬೇಕು
ಮನೆಮಂದಿ, ಸ್ನೇಹಿತರು, ಬಂಧುಬಳಗದ ವರು ನಾವು ಕಷ್ಟ ದಲ್ಲಿದ್ದಾಗ ಅಥವಾ ಸುಖಿಯಾಗಿದ್ದಾಗ ಸಹಾಯ ಹಸ್ತ ಮಾಡುತ್ತಾರೆ. ಸಾಧನೆಯ ಶಿಖರವೇರಲು ಮೆಟ್ಟಿಲುಗಳಾಗುತ್ತಾರೆ. ಆದರೆ ಶತ್ರುಗಳು ಹೆಚ್ಚಾದರೆ ನಿಮ್ಮ ಸಾಧನೆಯ ಫ‌ಲ ಗೋಚರಿಸುತ್ತದೆ ಎನ್ನುವ ಬಾಲ ಗಂಗಾಧರ್‌ ತಿಲಕ್‌ ಅವರ ಮಾತುಗಳು, ಬದುಕಿನಲ್ಲಿ ಶತ್ರುಗಳು ನಮ್ಮನ್ನು ಉನ್ನತಿಯೆಡೆಗೆ ಕರೆದುಕೊಂಡು ಹೋಗುತ್ತಾರೆ ಎನ್ನುವ ಅರ್ಥವೂ ಅಡಗಿದೆ. 

ಶ್ರುತಿ ನೀರಾಯ

ಟಾಪ್ ನ್ಯೂಸ್

1-weewq

Karkala: ಬಾವಿಗೆ ಬಿದ್ದ ದಂಪತಿಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ

1-bgg

BGT ಸೋಲು; ಇಂಗ್ಲೆಂಡ್ ವಿರುದ್ದದ ಸರಣಿಗೆ ಕೊಹ್ಲಿ ಸ್ಥಾನ ಉಳಿಸಿಕೊಳ್ಳಲು ಸಾಧ್ಯವೇ?

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

1-asad

ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ

Mollywood: ʼಮಾರ್ಕೊʼ ಬಳಿಕ ಮೋಹನ್‌ ಲಾಲ್‌ ನಿರ್ದೇಶನದ ʼಬರೋಜ್‌ʼ ಚಿತ್ರಕ್ಕೂ ಪೈರಸಿ ಕಾಟ

Mollywood: ʼಮಾರ್ಕೊʼ ಬಳಿಕ ಮೋಹನ್‌ ಲಾಲ್‌ ನಿರ್ದೇಶನದ ʼಬರೋಜ್‌ʼ ಚಿತ್ರಕ್ಕೂ ಪೈರಸಿ ಕಾಟ

BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್‌ ಗೆ ಆಹ್ವಾನವಿಲ್ಲ!‌ ದಿಗ್ಗಜನ ಬೇಸರ

BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್‌ ಗೆ ಆಹ್ವಾನವಿಲ್ಲ!‌ ದಿಗ್ಗಜನ ಬೇಸರ

Odisha: ಕಾರಿಗೆ ಟ್ರಕ್‌ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು;

Odisha: ಕಾರಿಗೆ ಟ್ರಕ್‌ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

2

Kundapura: ಬಟ್ಟೆ ವ್ಯಾಪಾರಿ ನಾಪತ್ತೆ

1-weewq

Karkala: ಬಾವಿಗೆ ಬಿದ್ದ ದಂಪತಿಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ

1-y-1-2-c

Yakshagana; 500 ವಿದ್ಯಾರ್ಥಿಗಳಿಂದ ಯಕ್ಷ ರಂಗಪ್ರವೇಶ

1-y-1-2

Yakshagana; ಕಲಾಸ್ಪಂದನದ ವಿಶಿಷ್ಟ ಪ್ರಯೋಗ ಯಕ್ಷವೀಣಾ

1-y-1

Yakshagana; ರಂಜಿಸಿದ ಯಕ್ಷಗಾನಾರ್ಚನೆ, ಭಕ್ತಿ ಸಂಗೀತ, ದಾಶರಥಿ ದರ್ಶನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.