ಆಸೆಯಲ್ಲೊಂದು ಧನಾತ್ಮಕ ಚಿಂತನೆ ಇರಲಿ
Team Udayavani, Feb 24, 2020, 5:32 AM IST
ಎಷ್ಟೋ ಬಾರಿ ನಮ್ಮದಲ್ಲದ ತಪ್ಪಿಗೆ ನಮ್ಮನ್ನು ಗುರಿಮಾಡಿದಾಗ ಕೋಪ, ಅಸಹನೆ, ದಃಖ ಹೀಗೆ ಎಲ್ಲೂವೂ ಒಟ್ಟಿಗೆ ಅಭಿವ್ಯಕ್ತಗೊಳ್ಳುವುದು ಸಹಜ. ಇಂತಹ ಸಂದರ್ಭದಲ್ಲಿ ಆಂತರಿಕ ಕೋಪ ಅಭಿವ್ಯಕ್ತಿಸುವ ಕಲೆ ಪ್ರಧಾನ ಪಾತ್ರವಹಿಸುತ್ತದೆ. ನಮ್ಮ ವರ್ತನೆ ಹೀಗೇ ಇರಬೇಕೆಂಬ ಬೇಲಿ, ಕಟ್ಟುಬದ್ಧ ನಿಯಮಗಳನ್ನು ಹಾಕಿದಾಗ ಅದನ್ನು ಮೀರಿ ಹೋಗಲೇಬೇಕೆಂಬ ಒಂದು ವಿಚಿತ್ರವಾದ ಹಠಮಾರಿತನ ಹೆಚ್ಚಾಗುತ್ತದೆಯೇ ವಿನಹ ಬೇರೆಯವರು ಹೇಳಿದಂತೆ ಸ್ವಭಾವ ಬದಲಿಸಲು ಮುಂದಾಗಲಾರೆವು. ಆದರೆ ಈ ರೀತಿ ಮಾಡುವುದರಿಂದ ನಮ್ಮ ವ್ಯಕ್ತಿತ್ವದ ಕೊಲೆಗಡುಕರು ನಾವಾಗುತ್ತೇವೆ ವಿನಹ ಬೇರೆನಿಲ್ಲ. ಇಂತ ಸಂದರ್ಭದಲ್ಲಿ ಕೊಪದ ಕೈಗೆ ಬುದ್ಧಿ ಕೊಡದಿರುವುದು ಒಳ್ಳೆಯದು.
ಆಂತರಿಕ ಅಭಿವ್ಯಕ್ತಿ
ಆಂತರಿಕ ಅಭಿವ್ಯಕ್ತಿ ನಮ್ಮ ಆಂತರ್ಯದಲ್ಲಿ ಅಡಗಿರುವ ನೋವು, ನಲಿವು, ಬೇಸರ ಮುಂತಾದವುಗಳ ಹೊರಹಾಕುವ ಪರಿಯಾಗಿದೆ. ಇದು ಏಷ್ಟೋ ಬಾರಿ ನಮಗರಿವಿಲ್ಲದಂತೆ ನಮ್ಮ ಏಕಾಂತ ಕಾಲದಲ್ಲಿ ಹೋರಹೊಮ್ಮುತ್ತದೆ. ನಮ್ಮನ್ನು ನಾವೇ ಸಮಾಧಾನ ಪಡಿಸಿಕೊಳ್ಳುವುವುದು, ಒಬ್ಬರೇ ಏನೆನೋ ನೆನೆದು ನಗುವುದು, ಯಾವತ್ತೋ ಆದ ಘಟನೆ ನೆನೆಸಿ ಅಳವುದು, ನಮ್ಮಷ್ಟಕ್ಕೆ ನಾವೇ ಮಾತಾಡುವುದು ಎಲ್ಲವೂ ಇದರ ಸಾಲಿಗೆ ಸೇರಿದೆ. ಈ ಅಭಿವ್ಯಕ್ತಿ ಮಿತಿ ಮೀರಿದರೆ ಒಂದು ಕಾಯಿಲೆ ಆಗಿಯೂ ಬದಲಾಗುತ್ತದೆ. ಹಾಗೆಂದು ಇದು ತಪ್ಪಲ್ಲ ಇದರಲ್ಲೂ ಹಲವಾರು ಉಪಯುಕ್ತತೆಗಳಿರುವುದನ್ನು ಸಹ ನೀವು ಗಮನಿಸಬೇಕಾಗಿದೆ. ನಿಮಗೆ ಯಾರೊಂದಿಗಾದರೂ ಬೇಸರ ಬಂದಾಗ ಎಲುಬಿಲ್ಲದ ನಾಲಿಗೆ ಬುದ್ದಿಯ ಸ್ಥಿಮಿತವಿಲ್ಲದೆ ಬಡಬಡಾಯಿಸುತ್ತದೆ. ಅಂತಹ ಸಂದರ್ಭದಲ್ಲಿ ನೀವು ಕನ್ನಡಿ ನೋಡಿ ಕೋಪವನ್ನು ಅಭಿವ್ಯಕ್ತಿಸಿದಾಗ ನಿಮಗೂ ಸಮಾಧಾನವಾಗುತ್ತದೆ ಜತೆಗೆ ಇತರರಿಗೂ ಬೇಸರ ಆಗಲಾರದು.
ನಿಮ್ಮನ್ನು ನೀವು ಪ್ರೀತಿಸಲು ಕಲಿಯಬೇಕು. ಆಗ ಇತರರ ಪ್ರೀತಿ ಅವರ ಸ್ವ-ಗೌರವವನ್ನು ನೀವು ಅರಿಯುತ್ತೀರಿ. ನಮ್ಮ ಸ್ವ-ಗೌರವಕ್ಕೆ ಕೆಲವೊಂದು ಬಾರಿ ಧನಾತ್ಮಕ ವ್ಯಕ್ತಿತ್ವ ಬುನಾದಿಯಾಗಿದೆ. ಏಷ್ಟೋ ಬಾರಿ ನೀವೇನು ಮಾಡುತ್ತಿದ್ದಿರಿ ಎಂದು ನಿಮಗೆ ಸ್ಪಷ್ಟತೆ ಇಲ್ಲದೆ ತಲ್ಹಣಗೊಳ್ಳುವಿರಿ. ಗೊತ್ತಿಲ್ಲದನ್ನು ಹೇಳಿಕೊಳ್ಳಿ ಅದನ್ನು ಕಲಿಯಲು ಪ್ರಯತ್ನಿಸಿ ಮೊದ ಮೊದಲು ಹಿಂಜರಿಕೆ ಆಗುವುದು ಸಹಜ. ಅನುಮಾನ, ಪರರ ಕುರಿತು ಅನಗತ್ಯ ಚಿಂತೆೆಯೂ ನಿಮ್ಮ ಧನಾತ್ಮಕ ಚಿಂತನೆಯ ಕುಸಿತಕ್ಕೆ ಕಾರಣವಾಗುತ್ತದೆ. ಪ್ರಯತ್ನ, ಪರಿಶ್ರಮ, ಧನಾತ್ಮಕ ವಿಚಾರಗಳು ನಿಮ್ಮ ಯಶಸ್ಸಿಗೆ ಹಿಡಿದ ಕೈಗನ್ನಡಿಯಾಗಿದೆ.
ಬೊಗಸೆಯಲ್ಲೂಂದು ಆಸೆ
ಎಷ್ಟೋ ಸಲ ನಮ್ಮ ಪುಟ್ಟ ಪುಟ್ಟ ಕನಸುಗಳು ಈಡೇರದಿದ್ದಾಗ ಹತಾಶರಾಗುತ್ತೇವೆ. ಇಂತಹ ಹತಾಶೆ ಮಾನಸಿಕ ಖನ್ನತೆಗೂ ಕಾರಣವಾಗಬಹುದು. ಆದರೆ ಈಡೇರದ ಆಸೆಯನ್ನೇ ಮನದಲ್ಲಿಟ್ಟುಕೊಂಡು ಇತರರ ಮೇಲೆ ಕೆಂಡಕಾರಿ ಅವರ ಭಾವನೆಗಳಿಗೆ ಘಾಸಿಗೊಳಿಸುವ ಮನೋಭಾವನೆ ನಿಮ್ಮದಾಗದಿರಲಿ. ಬದಲಾಗಿ ಎಂದಾದರೂ ಅಂತಹ ಆಸೆ ಈಡೇರುತ್ತದೆ ಎಂಬ ಭರವಸೆ ನಿಮ್ಮಲ್ಲಿದ್ದರೆ ನಿಮ್ಮ ಬೇಸರವೂ ದೂರ ಸರಿಯುತ್ತದೆ.
-ರಾಧಿಕಾ,ಕುಂದಾಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.