ಫ್ಯಾಷನ್‌ ಜಗತ್ತಿನಲ್ಲಿ ಹೆಡ್‌ ರ‍್ಯಾಪ್‌


Team Udayavani, Dec 7, 2018, 1:13 PM IST

7-december-9.gif

ಫ್ಯಾಷನ್‌ ಪ್ರಪಂಚವೆಂದರೆ ಹಾಗೇನೇ. ಅಲ್ಲಿ ಕ್ಷಣಕ್ಕೊಂದು, ದಿನಕ್ಕೊಂದು ಹೊಸತನವಿರುತ್ತದೆ. ಫ್ಯಾಷನ್‌ಪ್ರಿಯರ ಮನಸ್ಸಿಗೆ ಕನ್ನ ಹಾಕಲು ಅದೆಷ್ಟೋ ಫ್ಯಾಷನೆಬಲ್‌ ಧಿರಿಸುಗಳು ಫ್ಯಾಷನ್‌ ಪ್ರಪಂಚದಲ್ಲಿ ಹೊಸತನದೊಂದಿಗೆ ಮಾರುಕಟ್ಟೆ ಪ್ರವೇಶಿಸಿವೆ. ನಾಳೆ ಹಳೆಯದಾಗುವ ಇಂದಿನ ಹೊಸ ಫ್ಯಾಷನ್‌ ಜಗತ್ತಿನೊಳಗೆ ಇಂದೇ ನೋಟ ಹರಿಸಿದರೆ ಸಿಗುವ ಹೊಸ ಮಾದರಿಯವು ಅಸಂಖ್ಯಾತ.

ಹುಡುಗಿಯರ ಫ್ಯಾಷನ್‌ ಲೋಕದಲ್ಲಿ ದಿನಕ್ಕೊಂದು ಹೊಸತು. ಬಟ್ಟೆಯಿಂದ ಹಿಡಿದು, ಮೇಕಪ್‌ ಸೆಟ್‌, ಕೂದಲಿನ ಶೃಂಗಾರ ಎಲ್ಲದಕ್ಕೂ ಹೊಸ ಮಾದರಿಯದ್ದೇ ಕಾರುಬಾರು. ಫ್ಯಾನ್ಸಿ ಅಂಗಡಿಯೊಳಗೋ, ಬಟ್ಟೆ ಅಂಗಡಿಯೊಳಗೋ ಒಂದು ಸುತ್ತು ಹಾಕಿದರೆ ಎಲ್ಲವನ್ನು ತೆಗೆದುಕೊಂಡು ಬಿಡುವ ಎಂಬಷ್ಟು ಹೊಸ ವೆರೈಟಿಯ ಫ್ಯಾಷನೆಬಲ್‌ ಐಟಂಗಳು ಅಲ್ಲಿ ಸಿದ್ಧವಾಗಿಯೇ ಇರುತ್ತವೆ. ಕಾಡುವ ಆರ್ಥಿಕ ಅಡಚಣೆಯೋ ಇನ್ನೇನೋ ಕಾರಣಗಳಿಂದ ಎಲ್ಲವನ್ನು ಖರೀದಿಸಬೇಕೆಂಬ ಮನಸ್ಸಾದರೂ, ಒಲ್ಲದ ಮನಸ್ಸಿನಿಂದ ಒಂದೆರಡು ವಸ್ತು ಖರೀದಿಸಿ ಹಾಗೇ ಬಿಟ್ಟು ಬರಬೇಕಾದ ಸನ್ನಿವೇಶ. ಆದರೂ ಮತ್ತು ವಾರ ಬಿಟ್ಟು ಹೋದರೆ ಅದೇ ಜಾಗಕ್ಕೆ ಇನ್ನೊಂದಷ್ಟು ಹೊಸ ಫ್ಯಾಷನ್‌ಗಳ ಎಂಟ್ರಿ.

ಹೆಡ್‌ ರ‍್ಯಾಪ್‌
ಈಗ ಟೋಪಿ ಟ್ರೆಂಡ್‌. ಟೋಪಿ ಹಾಕುವುದು ಹುಡುಗರಿಗೆ ಮಾತ್ರವೆಂದೇಕೆ ಪರಿಗಣಿಸುತ್ತಿರುವಿರಿ; ನಮಗೂ ಟೋಪಿ ಹಾಕಿ ಶೈನ್‌ ಆಗುವುದು ಗೊತ್ತೆಂಬಂತೆ ಹೊರಟಿದ್ದಾರೆ ಹುಡುಗಿಯರು. ಹುಡುಗರು ಟೋಪಿ ಹಾಕಿದರೆ, ಹುಡುಗಿಯರೂ ತಾವೇನ್‌ ಕಮ್ಮಿ ಇಲ್ಲ ಎಂಬಂತೆ ತಲೆಗೊಂದು ಬಟ್ಟೆಯ ಟೋಪಿಯನ್ನಿಡಲು ಶುರು ಮಾಡಿದ್ದಾರೆ. ಆದರೆ ಇದು ಕೇವಲ ಟೋಪಿಯಲ್ಲ. ಫ್ಯಾಷನ್‌ ಹೆಸರಿನಲ್ಲಿ ಹುಡುಗಿಯರ ಮನಸ್ಸಿಗೆ ಲಗ್ಗೆ ಇಟ್ಟ ಹೆಡ್‌ ರ‍್ಯಾಪ್‌. ಅಗ್ಗದ ದರದಲ್ಲಿ ಸಿಗುವ ಈ ಹೆಡ್‌ ರ್ಯಾಪ್‌ಗಳು  ನೋಡಲೂ ಆಕರ್ಷಕ.

ಹಲವು ಬಣ್ಣಗಳಲ್ಲಿ
ಮಕ್ಕಳು, ದೊಡ್ಡವರೆನ್ನದೆ ಎಲ್ಲರಿಗೂ ಸೂಕ್ತವಾಗಿ ಒಪ್ಪುವ ಹೆಡ್‌ ರ್ಯಾಪ್‌ ನಾನಾ ವೆರೈಟಿ ಮತ್ತು ಹಲವು ಬಣ್ಣಗಳಲ್ಲಿ ಲಭ್ಯವಿದೆ. ಮಕ್ಕಳಿಗೆ ಮತ್ತು ಹುಡುಗಿಯರಿಗೆ ಕೆಂಪು, ಪಿಂಕ್‌, ತಿಳಿ ಪಿಂಕ್‌ ಬಣ್ಣದ ಹೆಡ್‌ ರ್ಯಾಪ್‌ ಗಳು ಆಕರ್ಷಕವಾಗಿ ಕಾಣುತ್ತವೆ. ಬೆಲೆಯೂ ಸುಮಾರು 30 ರೂ.ಗಳಿಂದ 60 ರೂ. ಗಳ ತನಕ ಇರುವುದರಿಂದ ಕೊಂಡು ಅಂದ ನೋಡುವುದರಲ್ಲಿ ಯಾವುದೇ ಸಮಸ್ಯೆ ಇಲ್ಲ.

ವುಲ್ಲನ್‌ನಲ್ಲಿಯೂ…
ಈ ಹೆಡ್‌ ರ‍್ಯಾಪ್‌ ಕೇವಲ ಬಟ್ಟೆಯಲ್ಲಿ ಮಾತ್ರ ತಯಾರಾಗಿರುವುದಲ್ಲ. ಮಕ್ಕಳಿಗೆಂದೇ ವುಲ್ಲನ್‌ನಲ್ಲಿ ತಯಾರಾಗಿದೆ. ನೋಡಲೂ ಚೆನ್ನಾಗಿರುವ ಇವನ್ನು ಕೊಂಡು, ಮಕ್ಕಳಿಗೆ ತೊಡಿಸದೇ ಇರಲು ಮನಸ್ಸಾಗದು. ಚಳಿಗಾಲದಲ್ಲಿ ಚಳಿಯಿಂದ ರಕ್ಷಿಸಿಕೊಳ್ಳಲೂ ಇದು ಬಳಕೆಯಾಗಬಲ್ಲದು. ಏನಕ್ಕೂ ನೀವು ಫ್ಯಾಷನ್‌ ಪ್ರಿಯರಾದರೆ, ಒಮ್ಮೆ ಈ ಹೆಡ್‌ ರ‍್ಯಾಪ್‌ ತೊಟ್ಟು ನೋಡಿದರೆ ಇನ್ನಷ್ಟು ಚೆನ್ನ

ಮಾಡರ್ನ್ ಲುಕ್‌
ವಿಶೇಷವೆಂದರೆ ಈ ಹೆಡ್‌ ರ್ಯಾಪ್‌ ಅಥವಾ ಟೋಪಿಯನ್ನು ಧರಿಸಿದರೆ ಆಕರ್ಷಕವಾಗಿ ಕಾಣುವುದಲ್ಲದೆ, ಮಾಡರ್ನ್ ಲುಕ್‌ ಕೂಡ ನೀಡುತ್ತದೆ. ಹೆಚ್ಚಾಗಿ ಜೀನ್ಸ್‌ ಪ್ಯಾಂಟ್‌ -ಟೀ ಶರ್ಟ್‌ ಧರಿಸಿ ತಲೆಯ ಮೇಲೊಂದು ಹೆಡ್‌ ರ್ಯಾಪ್‌ನ್ನು ಹಾಕಿಕೊಂಡರೆ ಹೊಸದೇ ಸೌಂದರ್ಯವನ್ನು ನಿಮ್ಮದಾಗಿಸುವುದರಲ್ಲಿ ಸಂಶಯವಿಲ್ಲ. ಹಣೆಯ ಮೇಲ್ಭಾಗದಲ್ಲಿ, ತಲೆಯಲ್ಲಿ ಧರಿಸುವುದು ಹೆಚ್ಚು ಸೂಕ್ತ.

ಧನ್ಯಾ ಬಾಳೆಕಜೆ

ಟಾಪ್ ನ್ಯೂಸ್

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

1-ullala

Mangaluru; ನೇತ್ರಾವತಿ ಸೇತುವೆ ದುರಸ್ತಿ ಆರಂಭ: ಸಂಚಾರ ಸಲಹೆ ನೀಡಿದ ಪೊಲೀಸರು

1-aaammm

Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

Untitled-1

Kasaragod Crime News: ರಸ್ತೆಯಲ್ಲಿ ಬಿಯರ್‌ ಬಾಟ್ಲಿ ಒಡೆದ ಮೂವರ ಬಂಧನ

byndoor

Belthangady: ಬಸ್‌ ಬೈಕ್‌ ಢಿಕ್ಕಿ, ಸವಾರ ಗಂಭೀರ

5

Malpe: ಮೆಹಂದಿಯಲ್ಲಿ ತಡರಾತ್ರಿವರೆಗೆ ಡಿಜೆ ಬಳಕೆ; ಪ್ರಕರಣ ದಾಖಲು

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.