ಇಲ್ಲಿ ಹ್ಯಾಟ್‌ಗಳದ್ದೇ ಹವಾ!
Team Udayavani, Mar 13, 2020, 5:17 AM IST
ಬಿಸಿಲಿನಿಂದ ರಕ್ಷಣೆ ಪಡೆಯಲು ಹ್ಯಾಟ್‌ಗಳನ್ನು ಧರಿಸುವ ಕಾಲವೊಂದಿತ್ತು. ಆದರೆ ಇಂದು ಸ್ಟೈಲ್ ಸೇಟ್‌ಮೆಂಟ್ ಆಗಿ ಧರಿಸಲಾಗುತ್ತದೆ. ಹ್ಯಾಟ್/ ಟೊಪ್ಪಿಗಳಲ್ಲಿ ಹಲವಾರು ವಿಧಗಳು ಬರುತ್ತವೆ. ಮಹಿಳೆಯರಿಗೆ ಮತ್ತು ಪುರುಷರಿಗೆ ವಿಧ ವಿಧವಾದ ಫ್ಯಾಶನ್‌ಗಳಲ್ಲಿ ಟೋಪಿಗಳು ಲಭ್ಯವಾಗುತ್ತವೆ. ಇತ್ತೀಚೆಗೆ ಬಂದ ಹೊಸ ಟ್ರೆಂಡ್ ಏನೆಂದರೆ ನೈಸರ್ಗಿಕ ಉತ್ಪನ್ನಗಳ ಟೋಪಿ. ಅದನ್ನು ಖರೀದಿಸಿ ಸಂಭ್ರಮಿಸುವವರ ಸಂಖ್ಯೆಯಲ್ಲಿ ಯುವಜನಾಂಗವೇ ಹೆಚ್ಚು ಎಂಬುದರಲ್ಲಿ ಸಂಶಯವಿಲ್ಲ.
ಪ್ಲೆನ್‌ಸ್ಟರೋ ಹ್ಯಾಟ್
ಸುತ್ತಲೂ ವೃತ್ತಾಕಾರದ ಆಕೃತಿಯನ್ನು ಹೊಂದಿರುವ ಟೋಪಿ ಇದಾಗಿದ್ದು, ಮಹಿಳೆಯರಿಗೆ ಧರಿಸಲು ಹೆಚ್ಚು ಸೂಕ್ತ. ತಲೆಯಿಂದ ಕೆಳಗೆ ಬೀಳದಂತೆ ಈ ಟೋಪಿ ರಚನೆಯಾಗಿದೆ. ಇದನ್ನು ಪನಾಮಾ ಟೋಪಿಗಳೆಂದೂ ಕರೆಯುತ್ತಾರೆ.
ಬೇಸ್‌ಬಾಲ್ ಹ್ಯಾಟ್
ಮಹಿಳೆಯರು ಮತ್ತು ಪುರುಷರು ಸಮಾನವಾಗಿ ಇಷ್ಟಪಡುವ ಟೋಪಿಗಳಲ್ಲಿ ಇದೂ ಒಂದು. ತುಂಬಾ ಮೃದುವಾದ ಕಾಟನ್ ಬಟ್ಟೆಗಳಿಂದ ತಯಾರಾದ ಈ ಟೋಪಿಯ ಎದುರುಭಾಗ ಅಗಲವಾಗಿದ್ದು ಬಿಸಿಲಿನಿಂದ ರಕ್ಷಿಸುತ್ತದೆ. ಈ ಟೋಪಿಗಳನ್ನು ಬಹುತೇಕರು ಇಷ್ಟಪಡುತ್ತಾರೆ.
ಬಕೆಟ್ ಹ್ಯಾಟ್
ಹೆಸರೇ ಸೂಚಿಸುವಂತೆ ಬಕೆಟ್ ಆಕೃತಿಯಲ್ಲಿರುವ ಈ ಟೋಪಿ ಹುಡುಗರಿಗೆ ಹೆಚ್ಚು ಅಂದವನ್ನು ನೀಡುತ್ತದೆ. ಟಿ ಶರ್ಟ್ ಅಥವಾ ಇತರ ಸ್ಟೈಲಿಶ್ ಉಡುಗೆಗಳ ಜತೆ ಈ ಟೋಪಿ ಹೆಚ್ಚು ಅಂದವಾಗಿ ಕಾಣುತ್ತದೆ.
ಆಸ್ಕೋಟ್ ಕ್ಯಾಪ್
ಪುರುಷರು ಹೆಚ್ಚಾಗಿ ಇಷ್ಟಪಡುವ ಟೋಪಿ ಇದಾಗಿದೆ. ಇದು ಇಂದಿನ ಟ್ರೆಂಡ್ ಎಂದು ಹೇಳುವುದಕ್ಕಿಂತ ಹೆಚ್ಚಾಗಿ ಹಳೆಯ ಸ್ಟೈಲ್ ಎಂದೇ ಹೇಳಬಹುದು.
ಕ್ರೋಚೆಟ್ ಟೋಪಿ
ತಲೆಗೆ ಅಂಟಿಕೊಂಡು ನಿಲ್ಲುವ ಈ ಕ್ರೋಚೆಟ್ ಟೋಪಿಗಳು ಹೆಚ್ಚಾಗಿ ಬಟ್ಟೆ, ಉಲ್ಲನ್‌ನಿಂದ ತಯಾರಿಸಲ್ಪಟ್ಟಿರುತ್ತದೆ. ಅಂದದ ಜತೆಗೆ ಆರೊಗ್ಯದ ದೃಷ್ಟಿ ಯಿಂದಲೂ ಈ ಟೋಪಿ ಉತ್ತಮ. ಮಹಿಳೆಯರು ಹೆಚ್ಚಾಗಿ ಇಷ್ಟಪಡುತ್ತಾರೆ.
ಸನ್‌ಹ್ಯಾಟ್
ಮಹಿಳೆಯರಿಗೆಂದೇ ತಯಾರಾದ ಈ ಟೋಪಿ ಬಿಸಿಲಿನಿಂದ ತಲೆ, ಮುಖ ಹಾಗೂ ಕುತ್ತಿಗೆಯನ್ನು ರಕ್ಷಿಸುತ್ತದೆ. ಟೋಪಿಯ ಆಕಾರವೂ ದೊಡ್ಡದಾಗಿರುತ್ತದೆ. ಇದು ಬೀಚ್‌ಗೆ ತೆರಳುವಾಗ ಧರಿಸಲು ಹೆಚ್ಚು ಸೂಕ್ತ. ಇವುಗಳು ಮಾತ್ರವಲ್ಲದೇ ಟೆನ್ನಿಸ್ ಹ್ಯಾಟ್, ಕ್ರಿಕೆಟ್ ಹ್ಯಾಟ್ ಟೋಪಿಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಇವುಗಳು ಮಾತ್ರವಲ್ಲದೇ ಟೆನ್ನಿಸ್ ಹ್ಯಾಟ್, ಕ್ರಿಕೆಟ್ ಹ್ಯಾಟ್ ಹಾಘೂ ಇತರ ಹಲವಾರು ಟೋಪಿಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಸನ್‌ಹ್ಯಾಟ್ ಬೇಸಗೆಗೆ ಹೇಳಿ ಮಾಡಿಸಿದಂತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi; ಗೀತಾರ್ಥ ಚಿಂತನೆ 96 : ವ್ಯಾಮೋಹ ಜಾಲ vs ಜಾಗೃತಾತ್ಮ
Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ
Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್ ರೈ
MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ
Mangaluru: ಎಲ್ಲ ವರ್ಗದ ಜನರ ಸಹಕಾರದಿಂದ ಸಾಮಾಜಿಕ ಸಾಧನೆ: ಕನ್ಯಾನ ಸದಾಶಿವ ಶೆಟ್ಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.