ಮನೆ ಸೌಂದರ್ಯ ಹೆಚ್ಚಿಸುವ- ಕ್ಯಾಂಡಲ್ ಸ್ಟಾಂಡ್ ಗಳು
Team Udayavani, Nov 24, 2018, 12:46 PM IST
ಕ್ಯಾಂಡಲ್ ದೀಪ ಹಚ್ಚುವುದು ಇಂದು ಫ್ಯಾಷನ್ ಆಗಿಬಿಟ್ಟಿದೆ. ಇದಕ್ಕೆಂದೇ ವಿವಿಧ ವಿನ್ಯಾಸಗಳ ಕ್ಯಾಂಡಲ್ ಸ್ಟಾಂಡ್ ಗಳು ಮಾರುಕಟ್ಟೆಯಲ್ಲಿ ರಾರಾಜಿಸುತ್ತಿವೆ. ಕ್ಯಾಂಡಲ್ ದೀಪ ಮನೆಯನ್ನು ಬೆಳೆಗಿಸಿದರೆ ಸ್ಟಾಂಡ್ ಗಳು ಮನೆಯ ಅಂದವನ್ನು ಹೆಚ್ಚಿಸುತ್ತದೆ.
ಮನೆಯ ಸೌಂದರ್ಯ ವರ್ಧನೆಗೆ ಕ್ಯಾಂಡಲ್‌ಸ್ಟಾಂಡ್ ಹೆಚ್ಚು ಆವಶ್ಯಕ. ಇತ್ತೀಚಿನ ದಿನಗಳಲ್ಲಿ ಕ್ಯಾಂಡಲ್ ಸ್ಟಾಂಡ್‌ನಲ್ಲಿ ದೀಪ ಉರಿಸಿ ಮನೆ ಮಂದಿ ಊಟ ಮಾಡುವುದು, ಪಾರ್ಟಿ ಮಾಡುವುದೆಲ್ಲ ಸಾಮಾನ್ಯವಾಗಿದೆ. ಹೊಸ ಟ್ರೆಂಡ್ ಆಗಿಯೂ ಇದು ಖ್ಯಾತಿ ಗಳಿಸುತ್ತಿದೆ.
ಐಶಾರಾಮಿ ಮನೆಗಳಲ್ಲಿ ಈ ಕ್ಯಾಂಡಲ್ ಸ್ಟಾಂಡ್ ಪ್ರತಿಷ್ಠೆಯ ಸಂಕೇತವಾಗಿಯೂ ಗಮನ ಸೆಳೆಯುತ್ತದೆ. ಬೇಜಾನ್ ವೆರೈಟಿಯಲ್ಲಿಯೂ ಇದು ಲಭ್ಯವಿರುವುದರಿಂದ ಆಯ್ಕೆಗೂ ಸಾಕಷ್ಟು ಅವಕಾಶಗಳಿವೆ. ಹೂವಿನಾಕಾರ, ಲ್ಯಾಂಪ್‌ನಾಕಾರ, ಗಣಪತಿ ಚಿತ್ರ ಹೊಂದಿರುವ ಸ್ಟಾಂಡ್‌ಗಳು, ಮನುಷ್ಯನ ಮೂರ್ತಿಯಾಕಾರ, ಮರದ ಆಕಾರ ಸೇರಿದಂತೆ ನಾನಾ ಆಕಾರ, ವಿನ್ಯಾಸಗಳಲ್ಲಿ ಕ್ಯಾಂಡಲ್ ಸ್ಟಾಂಡ್ ಲಭ್ಯವಿದೆ. ಹೂವಿನ ಗಿಡದ ಆಕಾರದಲ್ಲಿರುವ ಸ್ಟಾಂಡ್ ಹೆಚ್ಚು ಆಕರ್ಷಕವಾಗಿ ಕಾಣುತ್ತದೆ. ಏಕೆಂದರೆ ಇದರಲ್ಲಿ ಕೊಂಬೆಗಳಿದ್ದು, ಕೊಂಬೆಗಳ ತುದಿಯಲ್ಲಿ ಹೂ ಎಸಳು ಬಿಟ್ಟಂತೆ ಕ್ಯಾಂಡಲ್ ಗಳನ್ನು ಇರಿಸಲಾಗಿರುವುದು ಆಕರ್ಷಣೆಗೆ ಕಾರಣವಾಗಿದೆ.
ಮನೆಯಲ್ಲಿ ಹೆಂಗಳೆಯರಿದ್ದರೆ ಮನೆಯ ಅಲಂಕಾರಕ್ಕೆ ಪ್ರಾಧಾನ್ಯತೆ ಕೊಡುತ್ತಾರೆ. ಮನೆಯ ಒಳಾಂಗಣದ ಜತೆಗೆ ಹೊರಾಂಗಣವೂ ಅಂದವಾಗಿರಬೇಕು. ಸುತ್ತಮುತ್ತಲಿನ ಮಂದಿ ಮನೆಯ ಸೌಂದರ್ಯಕ್ಕೆ ಮಾರುಹೋಗಬೇಕು ಎಂಬ ಆಸೆ ಸಾಮಾನ್ಯವಾಗಿ ಎಲ್ಲರಲ್ಲಿಯೂ ಇರುತ್ತದೆ. ಮನೆಯ ಅಲಂಕಾರಕ್ಕೆಂದೇ ಇತ್ತೀಚಿನ ದಿನಗಳಲ್ಲಿ ಹಲವಾರು ವಸ್ತುಗಳು ಮಾರುಕಟ್ಟೆಗೆ ಬಂದಿದ್ದು, ಬಹು ಬೇಡಿಕೆ ಇದೆ. ಅದರಲ್ಲಿಯೂ, ನವನವೀನ ವಿನ್ಯಾಸದ ಕ್ಯಾಂಡಲ್ ಸ್ಟಾಂಡ್ ಗಳನ್ನು ಮನೆಯ ಅಲಂಕಾರದ ಉದ್ದೇಶದಿಂದ ಹೆಚ್ಚಾಗಿ ಮಾರುಕಟ್ಟೆಯಲ್ಲಿ ಖರೀದಿಸಲಾಗುತ್ತಿದ್ದು. ಇದು ಮನೆಗೆ ಹೊಸ ಮೆರುಗು ನೀಡುತ್ತದೆ.
ಸಾಂಪ್ರದಾಯಿಕ ಕ್ಯಾಂಡಲ್ ಗಳು
ಮನೆ ಮಂದಿ ಕೂತು ಊಟ ಮಾಡುವ ಸಮಯದಲ್ಲಿ ಹೆಚ್ಚಾಗಿ ಸಾಂಪ್ರದಾಯಿಕ ಕ್ಯಾಂಡಲ್ ಸ್ಟಾಂಡ್ ಗಳನ್ನು ಉಪಯೋಗಿಸಲಾಗುತ್ತದೆ. ಇದನ್ನು ಸಾಂಪ್ರದಾಯಿಕ ಕ್ಯಾಂಡಲ್ ಎಂದು ಕರೆಯುತ್ತಾರೆ. ಕ್ಯಾಂಡಲ್ ಬೆಳಕು ಸುತ್ತಮುತ್ತಲು ಪ್ರಶಾಂತತೆಯನ್ನು ಸೂಚಿಸುತ್ತದೆ. ಆಂದಹಾಗೆ, ಸಾಂಪ್ರದಾಯಿಕ ಕ್ಯಾಂಡಲ್‌ನ್ನು ಸಾಮಾನ್ಯವಾಗಿ ಹಿತ್ತಾಳೆ, ಗಾಜು, ಕ್ರಿಸ್ಟಲ್‌ಗಳಲ್ಲಿ ಅಲುಗಾಡದಂತೆ ಜೋಡಿಸಲಾಗುತ್ತದೆ.
ಮಾರುಕಟ್ಟೆಯಲ್ಲಿ ಇಂದು ವಿವಿಧ ಮಾದರಿಯ ಕ್ಯಾಂಡಲ್ ಸ್ಟಾಂಡ್ ಗಳು ಇವೆ. ಅದರಲ್ಲಿ ಪ್ರಮುಖವಾದುದು ಅಂದರೆ ಮಲ್ಟಿಪಲ್ ಕ್ಯಾಂಡಲ್ ಸ್ಟಾಂಡ್. ಹೆಸರೇ ಸೂಚಿಸುವಂತೆ ಇದರಲ್ಲಿ ನಾಲ್ಕರಿಂದ ಐದು ಹೋಲ್ಡರ್‌ಗಳು ಇವೆ. ಪ್ರತಿಯೊಂದು ಹೋಲ್ಡರ್‌ನ ಒಳಗೂ ಕ್ಯಾಂಡಲ್‌ಇಡಲು ಸ್ಥಳಾವಕಾಶ ಇದೆ. ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಾನಿಕ್ ಬಲ್ಬ್ ಸೇರಿದಂತೆ ಎಲ್‌ಇಡಿ ಕ್ಯಾಂಡಲ್‌ಗಳ ಬಳಕೆ ಹೆಚ್ಚಾಗುತ್ತಿದ್ದು, ಇದೇ ಸಮಯದಲ್ಲಿ ಮಲ್ಟಿಪಲ್ ಕ್ಯಾಂಡಲ್ ಸ್ಟಾಂಡ್ ಗಳು ವಿಶೇಷ ಎಂದೆನಿಸುತ್ತವೆ.
ಚಪ್ಪಟೆ ಹೋಲ್ಡರ್ ಸ್ಟಾಂಡ್
ಕ್ಯಾಂಡಲ್ ಸ್ಟಾಂಡ್ ಗಳಲ್ಲಿ ಮತ್ತೊಂದು ವಿಧ ಅಂದರೆ ಚಪ್ಪಟೆಯಾಕಾರದ ಸ್ಟಾಂಡ್ ಗಳು. ಇದರ ಬಳಕೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿವೆ. ಮನೆಯ ಜತೆ ಸುತ್ತಮುತ್ತಲಿನ ವಾತಾವರಣವನ್ನು ಅಂದಗಾಣಿ ಸಲು ಇದು ಸಹಕಾರಿ. ಈ ಕ್ಯಾಂಡಲ್ ಸ್ಟಾಂಡ್ ಗೆ 2 ಇಂಚು ಅಗಲದ ಚಿಕ್ಕ ಹೋಲ್ಡರ್ ಇಟ್ಟಿರುತ್ತಾರೆ. ಇದರ ಸುತ್ತಲೂ ಗ್ಲಾಸ್‌ನಿಂದ ಆವರಿತವಾಗಿರುತ್ತದೆ. ಈ ಹೋಲ್ಡರ್ ಒಳಗಡೆ ಕ್ಯಾಂಡಲ್ ಇಡಲಾಗುತ್ತದೆ.
ಬರಣಿಯಾಕಾರದ ಗ್ಲಾಸಿನ ಸ್ಟಾಂಡ್
ಅದೇ ರೀತಿ ಬರಣಿಯಾಕಾರದ ಗ್ಲಾಸಿನ ಸ್ಟಾಂಡ್ ನ್ನು ಕೂಡ ಕ್ಯಾಂಡಲ್ ಇಡಲು ಉಪಯೋಗಿಸಲಾಗುತ್ತದೆ. ಈ ಸ್ಟಾಂಡ್ ನೊಳಗೆ ಉರಿಯುತ್ತಿರುವ ಕ್ಯಾಂಡಲ್ ಆಕರ್ಷಣೆಯಿಂದ ಕಾಣುತ್ತದೆ. ಈ ಮಾದರಿಯ ಕ್ಯಾಂಡಲ್ ಸ್ಟಾಂಡ್ ಗಳನ್ನು ಸಾಮಾನ್ಯವಾಗಿ ಹೊರಾಂಗಣ ಪ್ರದೇಶಗಳಲ್ಲಿ ಉಪಯೋಗಿಸಲಾಗುತ್ತದೆ. ಅದರಲ್ಲಿಯೂ, ಮರಗಳಿಗೆ ಸರಪಳಿಯ ಮೂಲಕ ಜೋತು ಬಿಡಲಾಗುತ್ತದೆ.
ಲ್ಯಾಂಟರ್ನ್ ಶೈಲಿ
ಮನೆಯ ಒಳಾಂಗಣ ಮತ್ತು ಹೊರಾಂಗಣಕ್ಕೆ ಹೊಂದಿಕೊಳ್ಳುವಂತೆ ಇರುವ ಲ್ಯಾಂಟರ್ನ್ ಶೈಲಿಯ ಕ್ಯಾಂಡಲ್ ಸ್ಟಾಂಡ್ ಗಳು ಇತ್ತೀಚಿನ ದಿನಗಳಲ್ಲಿ ಬೇಡಿಕೆ ಪಡೆಯುತ್ತಿದೆ. ಅಳವಡಿಸಿದ ಗ್ಲಾಸ್ ದೊಡ್ಡದಾಗಿರುವ ಕಾರಣ ಕ್ಯಾಂಡಲ್‌ಗಳು ಅತ್ಯಂತ ಸುರಕ್ಷಿತವಾಗಿರುತ್ತದೆ.
ಇಂಟೀರಿಯರ್ ಪ್ರಮುಖ ಪಾತ್ರ
ಇತ್ತೀಚಿನ ಮನೆಗಳಲ್ಲಿ ಕ್ಯಾಂಡಲ್ ಸ್ಟಾಂಡ್ ಗಳ ಬಳಕೆ ಹೆಚ್ಚಾಗುತ್ತಿದೆ. ಅದೊಂದು ಪ್ರತಿಷ್ಠೆಯಾಗಿ ಬೆಳೆದು ಬಂದಿದೆ. ಹಿಂದೆಲ್ಲ ಮನೆಯಲ್ಲಿ ವಿದ್ಯುತ್ ಇಲ್ಲದಿದ್ದರೆ ಕ್ಯಾಂಡಲ್ ಬೆಳಕು ಉಪಯೋಗಿಸುತ್ತಿದ್ದರು. ಆದರೆ ಇದೀಗ ಐಷಾರಾಮಿ ಮನೆಗಳಿಗೂ ಕ್ಯಾಂಡಲ್ ಬೇಕೇ ಬೇಕು. ಕ್ಯಾಂಡಲ್‌ಗಳನ್ನು ಇಡಲೆಂದು ಸಾವಿರಾರು ರೂ. ಖರ್ಚು ಮಾಡಿ ವಿವಿಧ ಮಾದರಿಯ ಸ್ಟಾಂಡ್ ಗಳನ್ನು ಖರೀದಿಸುತ್ತಾರೆ.
ನವೀನ್ ಭಟ್ ಇಳಂತಿಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.