ಮನೆಯ ಅಂದ ಹೆಚ್ಚಿಸುವ ಗಾರ್ಡನಿಂಗ್
Team Udayavani, Jan 25, 2020, 4:32 AM IST
ಹೂದೋಟ ನಿರ್ಮಿಸುವುದರ ಬಗ್ಗೆ, ಹೂಗಿಡಗಳನ್ನು ನೆಟ್ಟು ಬೆಳೆಸುವುದರ ಬಗೆಗೆ ಹಲವು ಗೊಂದಲಗಳಿರುತ್ತವೆ. ಒತ್ತಡದ ಜೀವನದಲ್ಲಿ ಬದುಕುತ್ತಿರುವವರಿಗೆ ಸ್ವಲ್ಪ ನೆಮ್ಮದಿ ಹೂಗಳಿಂದ ಲಭಿಸುತ್ತದೆ. ಅವುಗಳನ್ನು ಮನೆಯ ಒಳಗೆ ಹಾಗೂ ಹೊರಭಾಗದಲ್ಲಿ ಹೇಗೆ ಬೆಳೆಸಬಹುದು ಎಂಬುದು ಇಂದಿನ ವಿಶೇಷ
ಮನೆ ಪ್ರತಿಯೊಬ್ಬರ ಕನಸಿನ ಕೂಸು. ಮನೆ ಚಿಕ್ಕದಾಗಿದ್ದರೂ ಚೊಕ್ಕವಾಗಿರಬೇಕು. ಅದರ ಆಕೃತಿಗೆ ತಕ್ಕಂತೆ ಅದನ್ನು ವಿನ್ಯಾಸಗೊಳಿಸುವ ಕಲೆ ಕೂಡ ತಿಳಿದಿರಬೇಕು. ದೊಡ್ಡ ಮನೆಯಾಗಿದ್ದರೆ ಮನೆಯ ಹೊರಗಡೆ ಸುಂದರವಾದ ಹೂದೋಟ ಅಥವಾ ಉದ್ಯಾನವನ ನಿರ್ಮಿಸುವುದು. ಸಣ್ಣ ಮನೆ ಹಾಗೂ ಸಣ್ಣ ವರಾಂಡದಲ್ಲಿ ಇರುವ ಜಾಗವನ್ನು ಸೂಕ್ತವಾಗಿ ಬಳಸಿಕೊಂಡು ಗಿಡಗಳನ್ನು ಬೆಳೆಸುವುದು ಹೇಗೆ, ಅಂದವನ್ನು ಹೆಚ್ಚಿಸುವುದು ಹೇಗೆ ಎಂಬ ವಿಷಯಗಳು ತಿಳಿದಿದ್ದರೆ ಮನೆಯ ಅಲಂಕಾರ ಇನ್ನಷ್ಟು ಸುಲಭವಾಗುತ್ತದೆ. ಗಾರ್ಡನ್‌ಗಳ ಅಂದ ಕೂಡ ಹೆಚ್ಚಾಗುತ್ತದೆ. ಇತ್ತೀಚೆಗೆ ಗಾರ್ಡನ್ ಡೆಕೊರೇಟರ್ ಗಳು ಮನೆ ಸಂಪೂರ್ಣವಾಗಬೇಕಾದರೆ ಅಲ್ಲೊಂದು ಹೂದೋಟವಿರಬೇಕೆಂದು ಹೇಳಿ ಗಾರ್ಡನ್ ಅಭಿವೃದ್ಧಿಗೆ ಹೊಸ ಹೊಸ ಯೋಜನೆಗಳನ್ನು ತಯಾರಿಸುತ್ತಾರೆ.
ಟೆರ್ರಾರಿಯಂ ಗಿಡಗಳು
ಮನೆಯ ಒಳಗಡೆ ಬೆಳೆಸುವ ಗಿಡಗಳಲ್ಲಿ ಟೆರ್ರಾರಿಯಂ ಗಿಡಗಳೂ ಸೇರಿಕೊಳ್ಳುತ್ತವೆ. ಗಾಜಿನ ಪೆಟ್ಟಿಗೆಗಳ ಒಳಗಡೆ ಬೆಳೆಯುವ ಈ ಗಿಡಗಳು ಟೀಪಾಯ್ ಶೋಕೇಸ್‌ಗಳಿಗೆ ಹೆಚ್ಚು ಅಂದವನ್ನು ನೀಡುತ್ತವೆೆ.
ಬಾಲ್ಕನಿಯಲ್ಲೊಂದು ಗಾರ್ಡನ್
ಫ್ಲ್ಯಾಟ್‌ನಲ್ಲಿ ಹೂದೋಟ ನಿರ್ಮಿಸುವುದು ಹೇಗೆ ಎಂಬುವುದು ಒಂದು ಯೋಚನೆ. ಹೆಚ್ಚಿನ ಜನರು ಗಿಡಗಳ ಮೇಲೆ ಪ್ರೀತಿಯಿದ್ದರೂ ತಮ್ಮ ಫ್ಲ್ಯಾಟ್‌ನಲ್ಲಿ ಅವುಗಳನ್ನು ಬೆಳೆಸಲು ಅವಕಾಶವಿಲ್ಲವೆಂಬ ಕಾರಣಕ್ಕೆ ಗಿಡಗಳ ಪ್ರೀತಿಯನ್ನು ಮರೆತುಬಿಡುತ್ತಾರೆ. ಆದರೆ ಹೆಚ್ಚಿನ ಎಲ್ಲ ಫ್ಲ್ಯಾಟ್‌ಗಳಲ್ಲಿ ಬಾಲ್ಕನಿ ಇದ್ದೇ ಇರುತ್ತದೆ. ಬಾಲ್ಕನಿಯನ್ನು ಅಂದವಾಗಿ ಹೂ ಗಿಡಗಳಿಂದ ಅಲಂಕರಿಸಿ ಹೂದೋಟವಾಗಿ ಮಾರ್ಪಾಡು ಮಾಡಬಹುದು. ಕೆಲವು ಹೂ ಕುಂಡಗಳನ್ನು ನೆಲದ ಮೇಲಿಟ್ಟರೆ, ಇನ್ನು ಕೆಲವು ಗಿಡಗಳನ್ನು ಹ್ಯಾಂಗ್ ಮಾಡಿ ಬೆಳೆಸಬಹುದು. ಇತ್ತೀಚೆಗೆ ನರ್ಸರಿಗಳಲ್ಲಿ ಬಾಲ್ಕನಿಯಲ್ಲಿ ಬೆಳೆಯಬಹುದಾದ ಗಿಡಗಳು ಅಧಿಕವಾಗಿ ಲಭಿಸುತ್ತಿದೆ. (ಅಧಿಕ ಬೆಳವಣಿಗೆ ಇಲ್ಲದ, ಪೊದೆಗಳ ಹಾಗೆ ಬೆಳೆಯದ ಗಿಡಗಳು)
ಎಲ್ಲ ಕಾಲದಲ್ಲೂ ಹೂ ಬಿಡುತ್ತವೆ
ಕೆಲವು ಗಿಡಗಳನ್ನು ಸೀಸನಲ್ ಎಂದು ಕರೆಯುತ್ತಾರೆ. ಯಾಕೆಂದರೆ ಅವುಗಳು ಕೆಲವು ಸಮಯಲ್ಲಿ ಮಾತ್ರ ಅಧಿಕವಾಗಿ ಹೂ ಬಿಡುತ್ತದೆ, ಉಳಿದ ಸಮಯದಲ್ಲಿ ಬೋಳು ಗಿಡಗಳು ಮಾತ್ರ ಇರುತ್ತವೆ. ಉದಾ: ಮಲ್ಲಿಗೆ ಮಳೆಗಾಲದಲ್ಲಿ ಅಧಿಕವಾಗಿ ಹೂ ಬಿಡುತ್ತದೆ. ಆದರೆ ಹೂಗಳು ಹೆಚ್ಚು ಇಷ್ಟವಿರುವವರಿಗೆ ಈ ಸೀಸನಲ್ ಗಿಡಗಳು ಬೋರ್ ಅನಿಸುತ್ತವೆ. ಅದಕ್ಕಾಗಿ ಒಂದೇ ಜಾತಿಯ ಹೂ ಗಿಡಗಳಿಗಿಂತ ಬೇರೆ ಬೇರೆ ವಿಧದ ವಿಭಿನ್ನ ಕಾಲಘಟ್ಟಗಳಲ್ಲಿ ಹೂ ಬಿಡವ ಗಿಡಗಳನ್ನು ಗಾರ್ಡನ್‌ನಲ್ಲಿ ಬೆಳೆಸಬಹುದು. ಇದರಿಂದ ಗಾರ್ಡನ್ ಎಲ್ಲ ಕಾಲಗಳಲ್ಲೂ ಹೂಗಳಿಂದ ನಳನಳಿಸುತ್ತಿರುತ್ತದೆ. ಹೂಗಳ ಜತೆ ಗ್ರೀನರಿಗೂ ಆದ್ಯತೆ ನೀಡಿ ಹಲ್ಲುಗಳನ್ನು ಹಾಗೂ ಕ್ರಾಟನ್ ಗಿಡಗಳನ್ನೂ ಗಾರ್ಡನ್‌ನಲ್ಲಿ ಬೆಳೆಸಬಹುದು. ಇದು ಮನಸ್ಸಿಗೆ ಆಹ್ಲಾದವನ್ನು ನೀಡುತ್ತದೆ.
ಹೂಕುಂಡಗಳೂ ಅಗತ್ಯ
ಹೂ ಕುಂಡಗಳನ್ನು ಆಯ್ಕೆ ಮಾಡುವಾಗಲೂ ಬಹಳ ಎಚ್ಚರಿಕೆಯಿಂದ ಆಯ್ಕೆ ಮಾಡಬೇಕು. ಕೆಲವು ಹೂ ಕುಂಡಗಳು ಗಿಡಗಳ ಬೆಳವಣಿಗೆಯನ್ನು ನಿಯಂತ್ರಿಸುತ್ತದೆ, ಬೇರುಗಳು ವಿಸ್ತಾರವಾಗಿ ಹರಡಲು ಅಡ್ಡಿ ಮಾಡುತ್ತವೆ. ಆದ್ದರಿಂದ ಅವುಗಳನ್ನು ಆಯ್ಕೆ ಮಾಡುವಾಗ ಎಚ್ಚರಿಕೆ ವಹಿಸಬೇಕು. ಕುಂಡಗಳು ಸಮರ್ಪಕವಾಗಿದ್ದರೆ ಗಿಡಗಳನ್ನು ಅದರಲ್ಲೇ ಬೆಳೆಸಬಹುದು. ಗಿಡಗಳಿಗೆ ಹೆಚ್ಚು ಗೊಬ್ಬರ ಲಭಿಸಲು ಇವುಗಳು ಸಹಕಾರಿ.
ಪರಿಸರ ಕಾಳಜಿ
ಹೂದೋಟಗಳು ಕೇವಲ ಮನಸ್ಸಿಗೆ ನೆಮ್ಮದಿ ಹಾಗೂ ಮನೆಯ ಅಂದವನ್ನು ಹೆಚ್ಚಿಸುವುದಲ್ಲ. ಬದಲಾಗಿ ಪರಿಸರ ಕಾಳಜಿ ಬೆಳೆಯಲೂ ಸಹಕಾರಿ. ಕಾಂಕ್ರೀಟ್ ಕಾಡುಗಳ ನಡುವೆ ಪ್ರಕೃತಿ ಸೌಂದರ್ಯಗಳು ಕಳೆದು ಹೋಗುತ್ತಿರುವಾಗ ಇಂತಹ ಗಿಡಗಳನ್ನು ನೆಟ್ಟು ಬೆಳೆಸುವುದರಿಂದ ಪರಿಸರ ಪ್ರೀತಿಯನ್ನು ತೋರಿಸಬಹುದು. ಮನೆಯಲ್ಲಿ ಮಕ್ಕಳಿದ್ದರೆ ಅವರಿಗೂ ಪರಿಸರ ಪ್ರೀತಿ ಬೆಳೆಯಲು ಹೂದೋಟಗಳು ಕಾರಣವಾಗುತ್ತದೆ.
ಮನೆಯ ಒಳಗೂ ಬೆಳೆಸಬಹುದು
ಇಂಡೋರ್ ಗಿಡಗಳು ಎಂದು ಕರೆಯಲ್ಪಡುವ ಹೂವಿನ ಗಿಡಗಳನ್ನು ಮನೆಯ ಒಳಗೆ ಬೆಳೆಸಬಹುದು. ಇವುಗಳಿಗೆ ಬಿಸಿಲು ಅಧಿಕವಾಗಿ ಅಗತ್ಯವಿಲ್ಲ. ನೆರಳಿನ ಜಾಗದಲ್ಲಿ ಅಥವಾ ಅರ್ಧ ಬಿಸಿಲಿರುವ ಜಾಗದಲ್ಲಿ ಸಮೃದ್ಧವಾಗಿ ಬೆಳೆಯಬಲ್ಲ ಈ ಗಿಡಗಳು ಗಾಳಿಯನ್ನು ಹೆಚ್ಚು ಶುದ್ಧವಾಗಿರಿಸುವಲ್ಲಿ ಸಹಕಾರಿ.
ಸುಶ್ಮಿತಾ ಶೆಟ್ಟಿ, ಸಿರಿಬಾಗಿಲು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mandya; ಭೀಕರ ಅಪಘಾ*ತದಲ್ಲಿ ಮೂವರು ವಿದ್ಯಾರ್ಥಿಗಳು ಮೃ*ತ್ಯು
ತಾಯಿಯ ಕ್ಯಾನ್ಸರ್ ಚಿಕಿತ್ಸೆಗೆ ಕೂಡಿಟ್ಟ ಹಣದಲ್ಲೇ ರಮ್ಮಿ ಆಡಿದ ಮಗ.. ಕೊನೆಗೆ ಜೀವ ಕಳೆದುಕೊಂಡ
ಸಿನೆಮಾ ಪೋಸ್ಟರ್ ಗಳ ಕೋಣೆಯಲ್ಲಿ-ಹಾಲಿವುಡ್ ನಿರ್ದೇಶಕರ ದಂಡು; ಮರೆ ಯಲಾಗದ ಅದ್ಭುತ ಕ್ಷಣ
Vijay Hazare Trophy;ಕೃಷ್ಣನ್ ಶ್ರೀಜಿತ್ ಅಮೋಘ ಶತಕ:ಬಲಿಷ್ಠ ಮುಂಬೈ ಎದುರು ಕರ್ನಾಟಕ ಜಯಭೇರಿ
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.