ಮನೆಯೂ ಈಗ ಸ್ಮಾರ್ಟ್ !


Team Udayavani, Feb 23, 2019, 7:16 AM IST

23-february-7.jpg

ಜೋರು ಸೆಕೆ ಎಸಿ ಆನ್‌ ಆಗಲಿ, ಹಾಗೆಯೇ ಮಧುರವಾದ ಸಂಗೀತವೊಂದು ತೇಲಿ ಬರಲಿ ಎಂದರೆ ಸಾಕು ತನ್ನಿಂತಾನೇ ಎಸಿ ಆನ್‌ ಆಗುತ್ತೆ, ಹಿಂದುಗಡೆಯಿಂದ ಸಂಗೀತವೂ ಕೇಳಿ ಬರುತ್ತದೆ, ಜತೆಗೆ ಕಾಫಿ ಬೇಕಿದ್ದರೆ ಅದಕ್ಕೂ ಆರ್ಡರ್‌ ಕೊಡಬಹುದು. ಇದು ಯಾವುದೋ ರೆಸ್ಟೋರೆಂಟ್‌ನಲ್ಲಿ ಕುಳಿತು ಹೇಳುವುದಲ್ಲ. ಬದಲಿಗೆ ಮನೆಯಲ್ಲೇ. ಹೌದು ಆಧುನಿಕ ತಂತ್ರಜ್ಞಾನಗಳು ಈಗ ನಮ್ಮೆಲ್ಲ ಕೆಲಸವನ್ನು ಸುಲಭಗೊಳಿಸಿವೆ. ಮನೆಯೊಳಗೆ ಕುಳಿತು ಸ್ಮಾರ್ಟ್‌ ಟೆಕ್ನಾಲಜಿಯನ್ನು ಬಳಸಿಕೊಂಡು ಮನೆಯ ಪ್ರತಿಯೊಂದು ಅತ್ಯಾಧುನಿಕ ಎಲೆಕ್ಟ್ರಾನಿಕ್‌ ವಸ್ತುಗಳನ್ನು ನಿಯಂತ್ರಿಸಿಕೊಳ್ಳಬಹುದು.

ಆಧುನಿಕ ಲೋಕ ವಿಸ್ತಾರವಾಗುತ್ತಿದೆ. ಮನೆಯಲ್ಲಿ ಬಳಕೆ ಮಾಡುತ್ತಿರುವ ವಸ್ತುಗಳು ಕೂಡ ಈಗ ಸ್ಮಾರ್ಟ್‌ ರೂಪಕ್ಕೆ ಬದಲಾಗುತ್ತಿವೆ. ನಿತ್ಯ ಬಳಕೆ ಮಾಡುವ ಮನೆ ವಸ್ತುಗಳು ಸ್ಮಾರ್ಟ್‌ ಆಗುವ ಮೂಲಕ ಜೀವನ ವ್ಯವಸ್ಥೆ ಸುಧಾರಣೆ ಕಾಣುತ್ತಿದೆ. ಟಿವಿ, ಫ್ರಿಜ್‌, ವಿದ್ಯುತ್‌ ದೀಪಗಳು, ಕಾಫಿ ಮೇಕರ್‌ಗಳು ಸ್ಮಾರ್ಟ್‌ ಆಗುತ್ತಿವೆ. ವೈಫೈ, ಬ್ಲೂಟೂಥ್‌ ಸಾಧನಗಳ ಮೂಲಕ ಇವುಗಳಿಗೆ ಸಂಪರ್ಕ ನೀಡಲು ಸಾಧ್ಯವಿದೆ.

ಈಗ ಟಿವಿಗಳು ಸ್ಮಾರ್ಟ್‌ ಆಗುತ್ತಿವೆ. ಟಿವಿಗಳು ವೈಫೈ ಸಿಗ್ನಲ್‌ಗೆ ಕನೆಕ್ಟ್ಆಗುವಂತಾಗಿದೆ. ಕಳೆದ ಕೆಲವೇ ತಿಂಗಳಿನಿಂದ ಭಾರತದಲ್ಲಿಯೇ ಕನಿಷ್ಠ 4- 5 ಕಂಪೆನಿಗಳು ಸ್ಮಾರ್ಟ್‌ ಟಿವಿಗಳನ್ನು ಬಿಡುಗಡೆ ಮಾಡಿದೆ. ಚೀನ ಮೂಲದ ಶಿಯೋಮಿ ಸಹಿತ ಇತರ ಕಂಪೆನಿಯ ಟಿವಿಗಳು ಮಾರುಕಟ್ಟೆಗೆ ಪರಿಚಿತವಾಗಿವೆ. ಇವುಗಳು ಸ್ಮಾರ್ಟ್‌ ಫೋನ್‌ ರೀತಿಯಲ್ಲಿಯೇ ಕೆಲಸ ಮಾಡುತ್ತವೆ. ಟಿವಿಯಲ್ಲಿ ಟೈಪ್‌ ಮಾಡುವ ಅನಾನುಕೂಲ ತಪ್ಪಿಸುವುದಕ್ಕೆಂದು ಇವುಗಳಲ್ಲಿ ವಾಯ್ಸ ಕಂಟ್ರೋಲ್‌ ವ್ಯವಸ್ಥೆಯಿದೆ. ಅಂದರೆ ಸ್ಮಾರ್ಟ್‌ ಟಿವಿಗಳ ರಿಮೋಟ್‌ನಲ್ಲಿರುವ ವಾಯ್ಸ ಬಟನ್‌ ಒತ್ತಿ ನೀವು ಮಾತನಾಡಿದರೆ ಯೂಟ್ಯೂಬ್‌ನಲ್ಲಿರುವ ವೀಡಿಯೋವನ್ನು ಸ್ಕ್ರೀನ್‌ ಮೇಲೆ ತೋರಿಸುತ್ತದೆ.

ಯೂಟ್ಯೂಬ್‌ ಮಾತ್ರವಲ್ಲದೆ, ಟಿವಿಯಲ್ಲಿ ಇನ್‌ಸ್ಟಾಲ್‌ ಆಗಿರುವ ಆಪ್ಲಿಕೇಶನ್‌ ಗಳ ಪೈಕಿ ಯಾವ ಅಪ್ಲಿಕೇಶನ್‌ ವಾಯ್ಸ್ ಸಪೋರ್ಟ್‌ ಮಾಡುತ್ತದೆಯೋ ಅವುಗಳಿಗೆ ಟಿವಿ ತೆರೆದುಕೊಳ್ಳಲಿದೆ. ಕಳೆದ ಒಂದೆರಡು ವರ್ಷಕ್ಕೆ ಹೋಲಿಸಿದರೆ ಈಗ ಬ್ರಾಡ್‌ಬ್ಯಾಂಡ್‌ ಹಾಗೂ ಮೊಬೈಲ್‌ ಡೇಟಾ ದರ ಗಣನೀಯವಾಗಿ ಇಳಿದಿದೆ. ಹೀಗಾಗಿ ಮನೋರಂಜನೆಯ ವಿಧಾನ ಕೂಡ ಬದಲಾಗಿದೆ. ಜನರಿಗೆ ಮೊಬೈಲ್‌ ಗಳಲ್ಲಿ ವೈವಿಧ್ಯಮಯ ವಿಡಿಯೋಗಳು ಸಿಗುವ ಕಾರಣದಿಂದ ಧಾರಾವಾಹಿಗೆ ದಾಸರಾಗುತ್ತಿದ್ದ ಕಾಲ ಸ್ವಲ್ಪ ಸ್ವಲ್ಪವಾಗಿ ನಗರ ವ್ಯಾಪ್ತಿಯಲ್ಲಿ ದೂರವಾಗುತ್ತಿದೆ. ಆ್ಯಂಡ್ರಾಯ್ಡ ಮೂಲಕ ಕಾರ್ಯನಿ ರ್ವಹಿಸಬಹುದಾದ ಸ್ಮಾರ್ಟ್‌ ಟಿವಿಗಳೂ ಇವೆ.

ಇದು ಬಹುಮಟ್ಟಿಗೆ ಆ್ಯಂಡ್ರಾಯ್ಡ ಟ್ಯಾಬ್ಲೆಟ್‌ ಅಥವಾ ಫೋನ್‌ ಅನ್ನು ಮೊದಲ ಬಾರಿಗೆ ಪ್ರಾರಂಭಿಸಿದಾಗ ನಡೆದುಕೊಳ್ಳುವ ರೀತಿಯಲ್ಲಿಯೇ ನಡೆದುಕೊಳ್ಳುತ್ತದೆ. ಅಂದರೆ ಅದು ಕೆಲವು ಆಯ್ಕೆಗಳನ್ನು ಹೊಂದಿಸಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಆ್ಯಂಡ್ರಾಯ್ಡನ ಹಲವು ಆ್ಯಪ್‌ ಗಳು ಇದರಲ್ಲಿದೆ. ಗೂಗಲ್‌ ಪ್ಲೇ ಸ್ಟೋರ್‌, ಕ್ರೋಮ್‌ ಸೇರಿದಂತೆ ಬೇರೆ ಬೇರೆ ಆ್ಯಪ್‌ ಗಳು ಇದರಲ್ಲಿವೆ.

ಅಂದಹಾಗೆ, ಗೀಸರ್‌, ಎ.ಸಿ., ಇಸ್ತ್ರಿಪೆಟ್ಟಿಗೆ ಹೀಗೆ ಮನೆಯ ಯಾವುದೇ ವಸ್ತುವನ್ನು ಅಥವಾ ವಿದ್ಯುತ್‌ ಉಪಕರಣಗಳನ್ನು ಬಳಸುತ್ತಿದ್ದರೂ ಅವುಗಳನ್ನು ವೈಫೈ ನೆಟ್‌ವರ್ಕ್‌ ಜತೆಗೆ ಜೋಡಿಸಲು ಆ ಮೂಲಕ ಸ್ಮಾರ್ಟ್‌ ಲುಕ್‌ ನೀಡಲು ಸಾಧ್ಯವಿದೆ.

ಈ ಮೂಲಕ ನಿತ್ಯ ವಸ್ತುಗಳನ್ನು ಮೊಬೈಲ್‌ ಸಹಾಯದಿಂದಲೇ ನಿಯಂತ್ರಿಸಲು ಅವಕಾಶವಿದೆ. ಉದಾಹರಣೆಗೆ ಫ್ರಿಜ್ ಕೂಡ ಸ್ಮಾರ್ಟ್‌ ರೂಪ ಪಡೆದರೆ ಅದರೊಳಗೆ ಯಾವೆಲ್ಲ ವಸ್ತುಗಳಿವೆ ಎಂಬುದನ್ನು ಫ್ರಿಜ್ ನ ಬಾಗಿಲು ತೆಗೆದಲು ಮೊಬೈಲ್‌ನಲ್ಲಿಯೇ ನೋಡಬಹುದು. ಅಡುಗೆ ಕೋಣೆಯಲ್ಲಿ ಫ್ರಿಜ್ ಇರುವುದರಿಂದ ಅಡುಗೆ ಮಾಡುವಾಗ ಹಾಡು ಕೂಡ ಕೇಳಬಹುದು.

ಜತೆಗೆ ಕಾಫಿ ಮೇಕರ್‌ ಕೂಡ ಸ್ಮಾರ್ಟ್‌ ಆಗಿದೆ. ಬ್ಲೂಟೂತ್‌ ಸಂಪರ್ಕದಿಂದ ಬಿಸಿ ಬಿಸಿ ಕಾಫಿಗೆ ಆರ್ಡರ್‌ ಕೊಡ ಬಹುದು. ಜತೆಗೆ ಒಂದೆರಡು ದಿನ ಮನೆ ಬಿಟ್ಟು ಇರಬೇಕಾದರೆ ಸಿಸಿ ಕೆಮರಾಗಳನ್ನು ಕೂಡ ನಾವು ದೂರದಲ್ಲಿದ್ದು ಕೊಂಡೇ ವೀಕ್ಷಿಸಬಹುದು. ಮನೆಯೊಳಗೆ, ಸುತ್ತ ಮುತ್ತ ನಡೆಯುವ ವ್ಯವಹಾರಗಳನ್ನು ಗಮನಿಸಬಹುದು. ಹೀಗಾಗಿ ಯಾವುದೇ ಆತಂಕವಿಲ್ಲದೆ ದೂರದೂರುಗಳಿಗೆ ಹೋಗಿ ಬರಬಹುದು. 

ಸ್ಮಾರ್ಟ್‌ ಆಗಿವೆ ವಿದ್ಯುತ್‌ ದೀಪ
ಇದೇ ರೀತಿ ಮನೆಯಲ್ಲಿರುವ ವಿದ್ಯುತ್‌ ದೀಪಗಳು ಕೂಡ ಸ್ಮಾರ್ಟ್‌ ಆಗುತ್ತಿವೆ. ಮೊಬೈಲ್‌ ಮೂಲಕವೇ ವಿದ್ಯುತ್‌ ದೀಪಗಳನ್ನು ನಿಯಂತ್ರಿಸುವ ಕಲೆಗಾರಿಕೆ ಇದಕ್ಕಿದೆ. ಪ್ರತಿಷ್ಠಿತ ಕಂಪೆನಿಯೊಂದು ಸ್ಮಾರ್ಟ್‌ ತಂತ್ರಜ್ಞಾನವನ್ನು ಪರಿಚಯಿಸಿತ್ತು. ಮೂರು ಬಲ್ಬ್ ಗಳ  ಜತೆಗೆ ಪುಟ್ಟದಾದ ಒಂದು ರೌಟರ್‌ ವ್ಯವಸ್ಥೆಯಿದೆ. ಈ ಬಲ್ಬ್ ಗಳಿಗೆ ಅಂತರ್ಜಾಲ ಸಂಪರ್ಕ ದೊರೆಯುತ್ತದೆ. ಹೀಗಾಗಿ ಇವು ತಂತಿರಹಿತವಾಗಿಯೇ ಕಾರ್ಯನಿರ್ವಹಿಸುತ್ತವೆ. ಫೋನ್‌ನಲ್ಲಿ ಆ್ಯಪ್‌ ಅಳವಡಿಸಿಕೊಂಡು ಅದರಿಂದಲೇ ಇದನ್ನು ನಿಯಂತ್ರಿಸಬಹುದು. ಇದೇ ಸಮಯಕ್ಕೆ ಆನ್‌/ ಆಫ್‌ ಮಾಡುವ ಬಗ್ಗೆ ಸಮಯ ಹೊಂದಿಸಿಕೊಂಡು ವಿದ್ಯುತ್‌ ದೀಪಗಳನ್ನು ನಿಯಂತ್ರಿಸಬಹುದು. ವಿಶೇಷವೆಂದರೆ ಮನೆಯಲ್ಲಿಯೇ ಇರುವಾಗ ಫೋನ್‌ನ ಅಗತ್ಯವಿಲ್ಲದೆ ಮಾತಿನ ಮೂಲಕವೇ ನಿಯಂತ್ರಿಸಬಹುದು. ಕೋಣೆಯೊಳಗೆ ಪ್ರವೇಶಿಸುತ್ತಿದ್ದಂತೆ ದೀಪಗಳು ಉರಿಯುವಂತೆ, ನೀವಿರುವಾಗ ಅಪರಿಚಿತರು ಕೋಣೆಯೊಳಗೆ ಬಂದಾಗ ದೀಪಗಳು ಆನ್‌ ಆಗುವಂತೆ ಮಾಡುವುದಕ್ಕೆ ಅವಕಾಶವಿದೆ. 

 ದಿನೇಶ್‌ ಇರಾ

ಟಾಪ್ ನ್ಯೂಸ್

Firefighters rescue horse that fell into canal

Shimoga; ಕಾಲುವೆಗೆ ಬಿದ್ದ ಕುದುರೆಯನ್ನು ರಕ್ಷಣೆ ಮಾಡಿದ ಅಗ್ನಿಶಾಮಕ ಸಿಬ್ಬಂದಿ

SUNIL-KUMAR

Congress government ಗಾಂಧಿವಾದದಿಂದ‌ ಮಾವೋವಾದಕ್ಕೆ ಹೊರಳಿದೆ: ಸುನಿಲ್ ಕುಮಾರ್ ಕಿಡಿ

arrested

Delhi Police; ಬೆಂಗಳೂರಿನಲ್ಲಿ ಇಬ್ಬರು ಶಾರ್ಪ್‌ಶೂಟರ್‌ಗಳ ಬಂಧನ

KSRTC: ಚಾರ್ಮಾಡಿ ಘಾಟಿಯಲ್ಲಿ ಕೆಟ್ಟು ನಿಂತ ಸರ್ಕಾರಿ ಬಸ್, ಪ್ರಯಾಣಿಕರಲ್ಲಿ ಆತಂಕ…!

KSRTC: ಚಾರ್ಮಾಡಿ ಘಾಟಿಯಲ್ಲಿ ಕೆಟ್ಟು ನಿಂತ ಸರ್ಕಾರಿ ಬಸ್, ಪ್ರಯಾಣಿಕರಲ್ಲಿ ಆತಂಕ…!

1-frrr

L&T; ನೌಕರರು ರವಿವಾರವೂ ಕೆಲಸ ಮಾಡಬೇಕು, ವಾರಕ್ಕೆ 90 ಗಂಟೆ ಕೆಲಸ!!

1-naxal

NIA ವಿಶೇಷ ನ್ಯಾಯಾಲಯ; ಶರಣಾದ ಆರು ನಕ್ಸಲರಿಗೆ ಜ.31ರವರೆಗೆ ನ್ಯಾಯಾಂಗ ಬಂಧನ

Dog Love: ಮನೆ ಮಗನಂತಿರುವ ಈ ಶ್ವಾನ ಹಸುಗಳನ್ನು ಮೇಯಿಸಲು ಎಕ್ಸ್ ಪರ್ಟ್!

Dog Love: ಮನೆ ಮಗನಂತಿರುವ ಈ ಶ್ವಾನ ಹಸುಗಳನ್ನು ಮೇಯಿಸಲು ಎಕ್ಸ್ ಪರ್ಟ್!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Firefighters rescue horse that fell into canal

Shimoga; ಕಾಲುವೆಗೆ ಬಿದ್ದ ಕುದುರೆಯನ್ನು ರಕ್ಷಣೆ ಮಾಡಿದ ಅಗ್ನಿಶಾಮಕ ಸಿಬ್ಬಂದಿ

SUNIL-KUMAR

Congress government ಗಾಂಧಿವಾದದಿಂದ‌ ಮಾವೋವಾದಕ್ಕೆ ಹೊರಳಿದೆ: ಸುನಿಲ್ ಕುಮಾರ್ ಕಿಡಿ

Katapady: ಕಾರ್ಮಿಕ ಕುಸಿದು ಬಿದ್ದು ಸಾವು

Katapady: ಕಾರ್ಮಿಕ ಕುಸಿದು ಬಿದ್ದು ಸಾವು

arrested

Delhi Police; ಬೆಂಗಳೂರಿನಲ್ಲಿ ಇಬ್ಬರು ಶಾರ್ಪ್‌ಶೂಟರ್‌ಗಳ ಬಂಧನ

Hanchikatte: ಆ್ಯಂಬುಲೆನ್ಸ್‌ಗೆ ಕೆಎಸ್‌ಆರ್‌ಟಿಸಿ ಬಸ್‌ ಢಿಕ್ಕಿ

Hanchikatte: ಆ್ಯಂಬುಲೆನ್ಸ್‌ಗೆ ಕೆಎಸ್‌ಆರ್‌ಟಿಸಿ ಬಸ್‌ ಢಿಕ್ಕಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.