ಜೇನು ತಿನ್ನುವ ಜಾಣ ಕಳ್ಳ
Team Udayavani, Sep 15, 2018, 2:58 PM IST
ಅವನು ಅಂತಿಂಥ ಕಳ್ಳನಲ್ಲ. ಯಾರ ಕಣ್ಣಿಗೂ ಬೀಳದಂತೆ, ತನ್ನ ಕೆಲಸ ಮುಗಿಸಿಕೊಂಡು, ಪುಳಕ್ಕನೆ ಎಸ್ಕೇಪ್ ಆಗುವ ಚೋರ. ಆತ ಇರೋದು ದಕ್ಷಿಣ ಚೀನಾದಲ್ಲಿ. ಅಲ್ಲಿನ ಯುನ್ನಾನ್ ಪ್ರಾಂತ್ಯದಲ್ಲಿ ದಿನಪೂರ್ತಿ ದುಡಿದು ದಣಿದ ರೈತ, ಮನೆಗೆ ಹೋಗಿ ಮಲಗುವ ವೇಳೆಯೇ, ಈತ ಬಂದು ರಾತ್ರಿಯಿಡೀ ಕಳ್ಳತನ ಮಾಡ್ತಿದ್ದ. ಅವನು ಕದಿಯುವುದು ರೈತ ಕೂಡಿಟ್ಟ ಹಣವನ್ನೋ, ಅಡಗಿಸಿಟ್ಟ ಚಿನ್ನವನ್ನೋ ಅಲ್ಲ. ಅಲ್ಲಿನ ರೈತರ ಮೂಲಾಧಾರವೇ ಜೇನು ಕೃಷಿ. ಆ ರುಚಿ ರುಚಿಯಾದ ತುಪ್ಪವನ್ನು ಕದಿಯಲೆಂದೇ ಬರುತ್ತಿದ್ದ ಈ ಕಳ್ಳ, ಅಪಾರ ನಷ್ಟ ಮಾಡಿಟ್ಟು ಹೋಗ್ತಿದ್ದ.
ಈ ವಿಚಾರವಾಗಿ ರೈತರು ಪರಸ್ಪರ ಅನುಮಾನಿಸಿಕೊಂಡು, ಜಗಳವಾಡುತ್ತಿದ್ದರಂತೆ. ಕೆಲವರು ಪಕ್ಕದ ಮನೆಯವರ ಜತೆ ಫೈಟಿಂಗೂ ಮಾಡಿದ್ದರು. ಒಂದು ದಿನವಂತೂ ಊರಿನವರೆಲ್ಲ ನಿದ್ದೆಬಿಟ್ಟು, ಕಾದು ಕುಳಿತರು. ಹೇಗಾದರೂ ಮಾಡಿ ಅವನನ್ನು ಇವತ್ತು ಹಿಡಿಯಲೇಬೇಕು ಅಂತ. ಆದರೆ, ಆವತ್ತು ಜೇನು ಕಳವಾಯಿತೇ ವಿನಾ ಈ ಕಳ್ಳ ಸಿಕ್ಕಿಬೀಳಲಿಲ್ಲ. ಕೊನೆಗೆ ಈ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿತು. ಹತ್ತಾರು ಪೊಲೀಸರು ಬಂದು, ರಾತ್ರಿಯಿಡೀ ಜಮೀನು ಕಾದರು. ಆವತ್ತೂ ಜೇನು ಸ್ವಾಹವಾಗಿತ್ತು. ಕಳ್ಳ ಮಾತ್ರ ಕೈಗೆ ಸಿಗಲಿಲ್ಲ.
ಇದೆಲ್ಲ ನೋಡಿ ನೋಡಿ ಸಾಕಾಗಿ, ಕೊನೆಗೆ ಸರಕಾರವೇ ಜಮೀನಿನ ಸುತ್ತ ಸಿಸಿ ಕೆಮರಾ ಹಾಕಿತು. ಅದರ ಮರುದಿನ ಎಲ್ಲರಿಗೂ ಅಚ್ಚರಿಯ ಆಘಾತ ಆಯ್ತು. ಯಾಕೆ ಗೊತ್ತಾ? ಹಾಗೆ ಜೇನು ಕದಿಯುತ್ತಿದ್ದವನು, ರೈತರು ಅನುಮಾನಿಸಿದಂತೆ ಯಾವುದೇ ಮನುಷ್ಯ ಆಗಿರಲಿಲ್ಲ. ಒಂದು ಕಪ್ಪು ಆಕೃತಿ! ಹಾಗಾದರೆ, ಭೂತನಾ? ಅಲ್ಲ. ಝೂಮ್ ಮಾಡಿ ನೋಡಿದಾಗಲೇ ಗೊತ್ತಾಗಿದ್ದು, ಅದೊಂದು ಕರಡಿ ಅಂತ! ಈ ಚೋರನ ಮೇಲೆ ರೈತರೆಲ್ಲ ಈಗ ಸಿಟ್ಟಾಗಿದ್ದಾರೆ. ಊರಿನ ಸುತ್ತ ಬೆಂಕಿ ಹಾಕಿ, ಮನೆಗೆ ಒಬ್ಬೊಬ್ಬರಂತೆ ಈಗ ಕಾವಲು ನಿಲ್ಲುತ್ತಿದ್ದಾರಂತೆ. ವಾರ ವಾಯ್ತು. ಈ ಚೋರ, ಮತ್ತೆ ಜೇನಿನ ಆಸೆಗಾಗಿ, ಜಮೀನಿನತ್ತ ಬರಲಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Chikkamagaluru: ತಾಯಿ ಮನೆಗೆ ಬರಲಿಲ್ಲ ಎಂದು ಮಾವನ ಮೇಲೆ ಮಚ್ಚು ಬೀಸಿದ ಅಳಿಯ
UP: ವಿವಾಹದ ಮಧ್ಯೆ ಬಾತ್ರೂಮ್ ಹೋಗಿ ಬರುವುದಾಗಿ ಹೇಳಿ ಚಿನ್ನ – ನಗದು ಜತೆ ವಧು ಪರಾರಿ
ISRO: ಅಂತರಿಕ್ಷದಲ್ಲಿ ಅಲಸಂದೆ ಬೀಜ ಮೊಳಕೆ: ಇಸ್ರೋ ಪ್ರಯೋಗಕ್ಕೆ ಯಶಸ್ಸು
World Test Championship: ಭಾರತದ ಕನಸು ಛಿದ್ರ; ಆಸೀಸ್ ಫೈನಲ್ ಸ್ಥಾನ ಭದ್ರ
Bengaluru: ಯುವತಿ ಜೊತೆ ಅಸಭ್ಯ ವರ್ತನೆ: ಮ್ಯಾನೇಜರ್, ಮತ್ತಿಬ್ಬರ ಮೇಲೆ ಕೇಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.