ಗೃಹಿಣಿಯ ಸಣ್ಣ ಉಳಿತಾಯವೂ ಮನೆಗೆ ದೊಡ್ಡ ಆದಾಯ


Team Udayavani, Dec 10, 2018, 2:55 PM IST

10-december-13.gif

ಗೃಹಿಣಿಯರು ಮನೆಗೆಲಸದ ಆಳುಗಳಲ್ಲ. ಮನೆಯ ಪ್ರತಿಯೊಂದು ಆಗುಹೋಗುಗಳಲ್ಲಿ ಅವರ ಪಾತ್ರ ಮಹತ್ತರದಾಗಿರುತ್ತದೆ. ಅದು ಚಿಕ್ಕ ವಿಷಯವಾಗಲಿ ಅಥವಾ ದೊಡ್ಡದೇ ಆಗಲಿ. ಮನೆಯ ಆರ್ಥಿಕ ವ್ಯವಹಾರಗಳಲ್ಲಿಯೂ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಗೃಹಿಣಿಯರು ತಮ್ಮ ಪಾತ್ರ ನಿಭಾಯಿಸುತ್ತಾರೆ. ಮನೆ ಮಂದಿಗೆ ಗೊತ್ತಿಲ್ಲದಂತೆ ಗೃಹಿಣಿಯರು ಮಾಡುವ ಸಣ್ಣ ಉಳಿತಾಯವೂ ಮುಂದೊಂದು ದಿನ ದೊಡ್ಡ ಮೊತ್ತವಾಗಿ ಕುಟುಂಬದ ಕಷ್ಟ ಕಾಲದಲ್ಲಿ ಸಹಾಯವಾಗಬಲ್ಲದು. ಈ ನಿಟ್ಟಿನಲ್ಲಿ ಹಣ ಉಳಿತಾಯ ಮಾಡಲು ಗೃಹಿಣಿಯರಿಗೆ ಕೆಲವು ಸಲಹೆಗಳು ಇಲ್ಲಿವೆ.

ದುಂದು ವೆಚ್ಚಗಳಿಗೆ ಕಡಿವಾಣ ಹಾಕಿ
ಮನೆಯೆಂದ ಮೇಲೆ ನಮ್ಮ ಗಮನಕ್ಕೆ ಬಾರದೆ ಅದೆಷ್ಟೋ ದುಂದು ವೆಚ್ಚಗಳು ನಡೆಯುತ್ತಿರುತ್ತವೆ. ಅತಿಯಾದ ಮೊಬೈಲ್‌, ಫೋನ್‌ಗಳ ಬಳಕೆ, ಅಗತ್ಯಕ್ಕಿಂತ ಹೆಚ್ಚು ವಿದ್ಯುತ್‌ ಬಳಕೆ, ಅನಗತ್ಯ ಶಾಪಿಂಗ್‌, ಆಹಾರಗಳ ಪೋಲು, ನಮ್ಮ ಅಜಾಗರೂಕತೆಯಿಂದ ಗೃಹೋಪಯೋಗಿ ವಸ್ತುಗಳಿಗಾಗುವ ಹಾನಿ ಮುಂತಾದವುಗಳ ಕಡೆ ಕೊಂಚ ಜಾಸ್ತಿ ಗಮನ ನೀಡಿ. ಇದು ಅನಗತ್ಯ ವೆಚ್ಚವನ್ನು ಕಡಿಮೆ ಮಾಡಲು ಸಹಕಾರಿ.

ಬಜೆಟ್‌ ಇರಲಿ
ನಿಮ್ಮ ಆದಾಯ ಮತ್ತು ಖರ್ಚುಗಳ ಬಗ್ಗೆ ಒಂದು ಚಿಕ್ಕ ಬಜೆಟ್‌ ತಯಾರಿಸಿಕೊಳ್ಳಿ. ನಿಮ್ಮಲ್ಲಿರುವ ಹಣವನ್ನು ಎಲ್ಲಿ? ಹೇಗೆ? ಯಾವುದಕ್ಕೆ ವಿನಿಯೋಗಿಸಬೇಕು ಎಂಬುದು ನಿಮಗೆ ಸ್ಪಷ್ಟವಾಗಿ ತಿಳಿದಿರಲಿ. ಮುಂಬರುವ ಖರ್ಚು ವೆಚ್ಚಗಳನ್ನೂ ಗಮನದಲ್ಲಿರಿಸಿ ನಿಮ್ಮ ಉಳಿತಾಯದ ಹಣವನ್ನು ಜಾಗರೂಕರಾಗಿ ಬಳಸಿ. ಈ ನಿಮ್ಮ ಪುಟ್ಟ ಬಜೆಟ್‌ ದೊಡ್ಡ ಉಳಿತಾಯಕ್ಕೆ ಉಪಕಾರವಾದೀತು.

ಪಾರ್ಟ್‌ ಟೈಮ್‌ ಜಾಬ್‌ ಮಾಡಿ
ಗೃಹಿಣಿಯರು ಎಂದ ಮಾತ್ರಕ್ಕೆ ಅವರು ಓದು ಬರಹ ಬಾರದವರು ಎಂದಲ್ಲ. ಹಲವು ಬಾರಿ ಅನಿವಾರ್ಯಕ್ಕೆ ಒಗ್ಗಿಕೊಂಡು ಅವರು ಹೊರಗಡೆ ದುಡಿಯಲು ಹೋಗದೆ ಮನೆ ಕೆಲಸ ನಿಭಾಯಿಸುವ ಜವಾಬ್ದಾರಿ ಹೊತ್ತಿರುತ್ತಾರೆ. ಇದು ಮನೆಯಲ್ಲಿಯೇ ಕುಳಿತು ಮಾಡಬಹುದಾದ ಅದೆಷ್ಟೋ ಪಾರ್ಟ್‌ಟೈಮ್‌ ಕೆಲಸಗಳಿವೆ. ಇವುಗಳನ್ನು ತಮ್ಮ ಬಿಡುವಿನ ವೇಳೆಯಲ್ಲಿ ಗೃಹಿಣಿಯರು ನಿಭಾಯಿಸುವುದರಿಂದ ಹಣ ಗಳಿಸಬಹುದು.

ಹೂಡಿಕೆ ಮಾಡಿ
ಗೃಹಿಣಿಯರಿಗೆ ತಿಂಗಳಿಗೆ ಇಂತಿಷ್ಟೇ ಎಂಬ ನಿರ್ದಿಷ್ಟ ಆದಾಯ ಸಾಮಾನ್ಯವಾಗಿ ಇರುವುದಿಲ್ಲ. ಮಾಡಿದ ಉಳಿತಾಯದಲ್ಲಿಯೇ ಒಂದು ಭಾಗವನ್ನು ಹೂಡಿಕೆ ಮಾಡುವ ಬಗ್ಗೆ ಯೋಚಿಸಿ. ಬ್ಯಾಂಕ್‌ ಖಾತೆಯೊಂದನ್ನು ತೆರೆದು ಬಜೆಟ್‌ ಅನಂತರ ಉಳಿಯುವ ಹಣವನ್ನು ಉಳಿತಾಯ ಮಾಡಿ. ಸಾಧ್ಯವಾದಲ್ಲಿ ಬಂಗಾರ ಅಥವಾ ಬೆಳ್ಳಿಯ ವಸ್ತುಗಳ ಮೇಲೆ ಹೂಡಿಕೆ ಮಾಡಿ. ಮುಂದೊಂದು ದಿನ ಇವನ್ನು ನೀವು ಹಣವಾಗಿ ಪರಿವರ್ತಿಸಿ ಉಪಯೋಗಿಸಬಹುದು.

 ಪ್ರಸನ್ನ ಹೆಗಡೆ ಊರಕೇರಿ

ಟಾಪ್ ನ್ಯೂಸ್

Ullala-Auto-Accident

Ullala: ಕೊಣಾಜೆ ಬಳಿ ರಿಕ್ಷಾ ಅಪಘಾತ: ವ್ಯಕ್ತಿ ಮೃತ್ಯು

1-maha

Mahayuti; ಮಹಾರಾಷ್ಟ್ರ ಮುಖ್ಯಮಂತ್ರಿ ನಿರ್ಧರಿಸಲು ಮಹತ್ವದ ಚರ್ಚೆ: ಯಾರಿಗೆ ಪಟ್ಟ?

MB-Patil-Mi

Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್‌

1-kir

All-party meet: ನಾಳೆಯಿಂದ ಚಳಿಗಾಲದ ಅಧಿವೇಶನ: ಸುಗಮಗೊಳಿಸಲು ಬಯಸಿದ ಸರಕಾರ

IPL Auction 2025: ಸೇಲ್‌ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..

IPL Auction 2025: ಸೇಲ್‌ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..

Jarkahnad–CM-Soren

Jharkhand: ಮತ್ತೆ ಮುಖ್ಯಮಂತ್ರಿಯಾಗಿ ಜೆಎಂಎಂ ನಾಯಕ ಹೇಮಂತ್‌ ಸೊರೇನ್‌ ನ.28ಕ್ಕೆ ಪದಗ್ರಹಣ

120

Tourist place: ಲೇಪಾಕ್ಷಿ ಪುರಾಣದ ಕಥೆಯ ಕೈಗನ್ನಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Chhattisgarh: ಐಇಡಿ ಸ್ಫೋ*ಟ: ಪೊಲೀಸ್‌ ಸಿಬ್ಬಂದಿಗೆ ಗಾಯ

Chhattisgarh: ಐಇಡಿ ಸ್ಫೋ*ಟ: ಪೊಲೀಸ್‌ ಸಿಬ್ಬಂದಿಗೆ ಗಾಯ

Ullala-Auto-Accident

Ullala: ಕೊಣಾಜೆ ಬಳಿ ರಿಕ್ಷಾ ಅಪಘಾತ: ವ್ಯಕ್ತಿ ಮೃತ್ಯು

Maharashtra Elections: 22 ಮಹಿಳೆ ಆಯ್ಕೆ, ವಿಪಕ್ಷದಿಂದ ಒಬ್ಬರೇ!

Maharashtra Elections: 21 ಮಹಿಳೆಯರು ಆಯ್ಕೆ, ವಿಪಕ್ಷದಿಂದ ಒಬ್ಬರೇ!

1-maha

Mahayuti; ಮಹಾರಾಷ್ಟ್ರ ಮುಖ್ಯಮಂತ್ರಿ ನಿರ್ಧರಿಸಲು ಮಹತ್ವದ ಚರ್ಚೆ: ಯಾರಿಗೆ ಪಟ್ಟ?

MB-Patil-Mi

Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.