ಗಂಧಕಯುಕ್ತ ಕರಿಬೇವು ಬೆಳೆಯುವುದು ಹೇಗೆ?


Team Udayavani, Dec 8, 2019, 4:28 AM IST

sd-24

ಕರಿಬೇವಿನ ಎಲೆಯಲ್ಲಿರುವ ಗಂಧಕಯುಕ್ತ ಎಣ್ಣೆಯ ಅಂಶವೇ “ಘಮ…’ ಎನ್ನುವ ಸುವಾಸನೆಗೆ ಕಾರಣ. ಇದನ್ನು ಅಡುಗೆ ಮನೆಯಲ್ಲಿ ಮಾತ್ರವೇ ಅಲ್ಲದೆ, ಆಯುರ್ವೇದ ಔಷಧಗಳ ತಯಾರಿಕೆಗೂ ಬಳಸಲಾಗುತ್ತದೆ. ಇದನ್ನು ಬೆಳೆಯುವುದು ಹೇಗೆ ಎನ್ನುವುದರ ಮಾಹಿತಿ ಇಲ್ಲಿದೆ.

ಕರಿಬೇವು, ನಮ್ಮ ದೇಶದಲ್ಲಿ ಯಥೇತ್ಛವಾಗಿ ಬೆಳೆಯುವ ಸೊಪ್ಪು ಅಡುಗೆಗಳಲ್ಲಿಯೂ ಹೇರಳವಾಗಿ ಸುವಾಸನೆಗೆ ಹಾಗೂ ರುಚಿಗೆಂದು ಇದನ್ನು ಉಪಯೋಗಿಸುತ್ತಾರೆ. ಕರಿಬೇವಿನ ಎಲೆಯಲ್ಲಿರುವ ಗಂಧಕಯುಕ್ತ ಎಣ್ಣೆಯ ಅಂಶವೇ “ಘಮ…’ ಎನ್ನುವ ಸುವಾಸನೆಗೆ ಕಾರಣ. ಇದಲ್ಲದೇ ಆಯುರ್ವೇದ ಔಷಧಗಳ ತಯಾರಿಕೆಗೂ ಇದನ್ನು ಬಳಸಲಾಗುತ್ತದೆ. ಕರಿಬೇವು, ಕಬ್ಬಿಣ ಮತ್ತು ಸುಣ್ಣದ ಅಂಶ ಹಾಗೂ “ಎ’ ಜೀವಸತ್ವವನ್ನು ತುಂಬಿಕೊಂಡಿರುತ್ತದೆ.

ಇದರ ಸಸಿಗಳನ್ನು ವಾರ್ಷಿಕವಾಗಿ ಯಾವುದೇ ಕಾಲದಲ್ಲಿಯೂ ನಾಟಿ ಮಾಡಬಹುದು. ಇವನ್ನು ಬೆಳೆಯಲು ಜೂನ್‌- ಜುಲೈ ಹೆಚ್ಚು ಸೂಕ್ತ. ಬಹುವಾರ್ಷಿಕವಾಗಿ ಬೆಳೆಯುವ ಈ ಬೆಳೆಗೆ, ಎಲ್ಲ ಬಗೆಯ ಮಣ್ಣೂ ಸೂಕ್ತ. ಆದರೆ ಅಳಕು ಕಪ್ಪು ಮಣ್ಣನ್ನು ಹೊರತುಪಡಿಸಿ. ಕರಿಬೇವಿನ ವೈಶಿಷ್ಟ್ಯವೆಂದರೆ, ಎಲೆಯ ವಾಸನೆ, ಬಣ್ಣದ ಆಧಾರದಲ್ಲಿ ಇದರ ತಳಿಯನ್ನು ಗುರುತಿಸಬಹುದು.

ಸಸಿಮಡಿಗೆ ಸಿದ್ಧತೆ
ಪ್ರತಿ ಹೆಕ್ಟೇರ್‌ ಕರಿಬೇವಿನ ಬೆಳೆಗೆ ಎರಡು ಸಾವಿರಕ್ಕೂ ಹೆಚ್ಚು ಸಸಿಗಳನ್ನು 1.50 ಹಾಗೂ 3 ಮೀ ಉದ್ದ ಮತ್ತು ಅಗಲದ ಅಂತರದಲ್ಲಿ ಹಾಕಬೇಕು. 25 ಟನ್‌ ಕೊಟ್ಟಿಗೆ ಗೊಬ್ಬರವನ್ನು ಮಿಶ್ರಣ ಮಾಡಬೇಕು. ಬಹುವಾರ್ಷಿಕ ಬೆಳೆಯಾದ್ದರಿಂದ ಪ್ರತಿ ಸಸಿಗೆ, ಮೊದಲ ವರ್ಷಕ್ಕೆ ರಾಸಾಯನಿಕ ಗೊಬ್ಬರಗಳಾದ ಸಾರಜನಕ-50 ಗ್ರಾಂ, ಎರಡನೆ ವರ್ಷಕ್ಕೆ 150 ಗ್ರಾಂ, ಮೂರನೆ ವರ್ಷಕ್ಕೆ 300 ಗ್ರಾಂ ಹಾಗೂ ರಂಜಕವನ್ನು ಮೊದಲ ವರ್ಷಕ್ಕೆ -25 ಗ್ರಾಂ, ಎರಡನೇ ವರ್ಷಕ್ಕೆ 35-37 ಗ್ರಾಂ, ಮೂರನೇ ವರ್ಷಕ್ಕೆ 50 ಗ್ರಾಂ ಮತ್ತು ಪೊಟ್ಯಾಷ್‌ ಗೊಬ್ಬರವನ್ನು ಮೊದಲ ವರ್ಷಕ್ಕೆ -25 ಗ್ರಾಂ, ಎರಡನೆ ವರ್ಷಕ್ಕೆ 35-37 ಗ್ರಾಂ, ಮೂರನೆ ವರ್ಷಕ್ಕೆ 50 ಗ್ರಾಂನಷ್ಟು ನೀಡಬೇಕು.

ಸಸಿ ನಾಟಿ ಮಾಡುವುದು
ಮೊದಲು ಭೂಮಿಯನ್ನು ಹದಗೊಳಿಸಿ, 60 ಸೆಂ.ಮೀ ತಗ್ಗನ್ನು (ಗುಣಿ) ತೋಡಿ 3 ಮೀ. ಅಂತರದ ಸಾಲುಗಳಲ್ಲಿ ಮಣ್ಣು ಮಿಶ್ರಿತ ಕೊಟ್ಟಿಗೆ ಗೊಬ್ಬರವನ್ನು ಗುಣಿಯಲ್ಲಿ ಹಾಕಿ, 1.5 ಮೀ. ದೂರದಲ್ಲಿ ಸಸಿಗಳನ್ನು ನೆಡಬೇಕು. ನಂತರ ಸಸಿಗಳು ಚಿಗುರುವವರೆಗೂ ದಿನೋಪಚಾರ ಮಾಡಬೇಕು.

ಚಿಗುರು ಚಿವುಟುವುದು
ಸಸಿಗಳು 120 ಸೆಂ.ಮೀ. ಎತ್ತರ ಬೆಳೆದಾಗ, ಭೂಮಿಯಿಂದ 45ಸೆಂ.ಮೀ ಅಂತರದ ಮೇಲೆ ಚಿಗುರನ್ನು ಚಿವುಟಬೇಕು. ಇದರಿಂದ ಅದರ ಟೊಂಗೆಗಳು ಸದೃಢವಾಗಿ ಬೆಳೆಯಲು ಪೂರಕವಾಗುತ್ತದೆ. ಇದಾದ ಮೇಲೆ ಸಸಿಗಳು 150 ಸೆಂ.ಮೀ. ಬೆಳವಣಿಗೆ ಕಂಡಾಗ ಅದರ ಟೊಂಗೆಗಳನ್ನು 100-120 ಸೆಂ.ಮೀ. ಎತ್ತರ ಬಿಟ್ಟು ಸವರಬೇಕು. ಇದು ಕವಲು ಕಂಟಿಯಂತೆ ಬೆಳೆಯಲು ಬಿಟ್ಟಾಗ, ನಂತರ 100-120 ಸೆಂ.ಮೀ. ಎತ್ತರದ ಬೆಳೆಯನ್ನೆ ಕಟಾವು ಮಾಡಬಹುದು.

ಗೊಬ್ಬರ ನೀಡುವುದು
ಮೊದಲಿಗೆ ಸಸಿಗಳನ್ನು ನಾಟಿ ಮಾಡಿದ ನಂತರ ಪ್ರತಿ ಸಸಿಗೆ ಶೇ.25ರಷ್ಟು ರಾಸಾಯನಿಕ ಗೊಬ್ಬರವನ್ನು ನೀಡಬೇಕು. ಅದನ್ನು ನಾಟಿ ಮಾಡಿದಾಗಿನಿಂದ ಮೂರು ತಿಂಗಳಿಗೊಮ್ಮೆ ನಾಲ್ಕು ಬಾರಿ ನೀಡಿದರೆ ಸೂಕ್ತ.

ಕಳೆ ಮತ್ತು ನೀರಿನ ನಿಯಂತ್ರಣ
ಬೆಳೆಯಲ್ಲಿನ ಕಳೆ ನಿಯಂತ್ರಣಕ್ಕೆ ಒಂದು ಲೀ. ನೀರಿನಲ್ಲಿ, 3 ಮಿ.ಲೀ. ಪ್ಯಾರಾಕ್ವಾಟ್‌ ಮಿಶ್ರಣ ಮಾಡಿ ಸಿಂಪಡಿಸಬೇಕು. ಇದನ್ನು ಸಿಂಪಡಣೆ ಮಾಡುವಾಗ ಸಸಿಗಳ ಬೊಡ್ಡೆಗೆ ತಗುಲದಂತೆ ಎಚ್ಚರ ವಹಿಸಬೇಕು. ಇದರಿಂದ ಕಳೆಯನ್ನು ಹತೋಟಿಗೆ ತರಬಹುದು. ಅಲ್ಲದೆ, ಸಸಿಗಳು ನೆಲೆಗೊಂಡಾಗ ಸಾಮಾನ್ಯವಾಗಿ ಒಣಹವೆಯನ್ನು ತಡೆಯುವ ಶಕ್ತಿಯಿರುವುದರಿಂದ ತಿಂಗಳಿಗೊಮ್ಮೆ ನೀರನ್ನು ಹಾಯಿಸಬೇಕು.

ರೋಗ ಮತ್ತು ಕೀಟ ನಿಯಂತ್ರಣ
ಬೆಳೆಗಳಿಗೆ ಕೊಯ್ಲಿನ ಸಮಯದಲ್ಲಿ ರೋಗಗಳು ಮತ್ತು ಹೇನು, ಎಲೆ ತಿನ್ನುವಂಥ ಕೀಟಗಳ ಕಾಟ ಬಾಧಿಸುವುದು ಸಾಮಾನ್ಯ. ಅದಕ್ಕೆ ಪ್ರತಿಯಾಗಿ, ಕಟಾವಿಗೆ ಇನ್ನು 15 ದಿನಗಳ ಮುಂಚೆ ಕೀಟಬಾಧೆಗೆ 2 ಮಿ.ಲೀ. ಮಾಲಾಥಿಯಾನ್‌ ಲಿಕ್ವಿಡ್‌, 1 ಲೀ. ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. ರೋಗ ನಿಯಂತ್ರಣಕ್ಕೆ 1 ಗ್ರಾಂ. ಕಾರ್ಬೆಂಡಾಜಿಮ್‌ ಅಥವಾ 2 ಗ್ರಾಂ. ಮ್ಯಾಂಕೊಝೆಬ್‌ ಪುಡಿಯನ್ನು ಪ್ರತಿ ಲೀ. ನೀರಿಗೆ ಮಿಶ್ರಣ ಮಾಡಿ ಸಿಂಪಡಿಸಬೇಕು.

- ಶ್ರೀನಾಥ ಮರಕುಂಬಿ

ಟಾಪ್ ನ್ಯೂಸ್

venkatesh-gowda

Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ

Three Nation Trip: ಮೂರು ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ

Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ

2-biggboss

BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್

Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ

Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ

1-horoscope

Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ

Mangaluru: ಅಪ್ರಾಪ್ತ ಬಾಲಕಿಯ ಅತ್ಯಾ*ಚಾರ: ಗರ್ಭಪಾತ ಪ್ರಕರಣ ಅಪರಾಧಿಗೆ 20 ವರ್ಷ ಜೈಲು

ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ

adani

Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

venkatesh-gowda

Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ

Three Nation Trip: ಮೂರು ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ

Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ

2-biggboss

BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್

Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ

Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ

1-horoscope

Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.