ಐಬಿಪಿಎಸ್ ಪರೀಕ್ಷೆ ಬಗ್ಗೆ ನಿಮಗೆಷ್ಟು ಗೊತ್ತು
Team Udayavani, Jan 15, 2020, 5:34 AM IST
ಪ್ರಸ್ತುತ ಯಾವುದೇ ಪರೀಕ್ಷೆಗಳು ಅಭ್ಯರ್ಥಿ ಯ ವಿಷಯ ಜ್ಞಾನಕ್ಕಷ್ಟೇ ಸೀಮಿತವಾಗಿಲ್ಲ. ಬದಲಿಗೆ ಅಭ್ಯರ್ಥಿಯ ಪೂರ್ಣ ವ್ಯಕ್ತಿತ್ವದ ಬೆಳವಣಿಗೆಯನ್ನು ಅಪೇಕ್ಷಿಸುತ್ತವೆ. ಬ್ಯಾಂಕ್ ಸಿಬಂದಿ ನೇಮಕಾತಿ ಸಂಸ್ಥೆ (ಐಬಿಪಿಎಸ್) ವಿವಿಧ ಬ್ಯಾಂಕಿಂಗ್ ಹುದ್ದೆಗಳ ನೇಮಕಾತಿಗೆ ನಡೆಸುವ ಪರೀಕ್ಷೆಗಳು ಇದಕ್ಕೆ ಉತ್ತಮ ಉದಾಹರಣೆ. ಆದರೆ ಇಂದು ಬಹುಪಾಲು ಅಭ್ಯರ್ಥಿಗಳಿಗೆ ಪರೀಕ್ಷಾ ವಿಷಯ ವಸ್ತುಗಳ ಮಾಹಿತಿ ಕೊರತೆ ಇರುತ್ತದೆ. ಪ್ರತಿವರ್ಷ ಪರೀ ಕ್ಷೆಗಳು ನಡೆಯುತ್ತಿದ್ದರೂ ಅದರ ಅರ್ಹತೆ, ಆಯ್ಕೆ ಪ್ರಕ್ರಿಯೆ ಅರ್ಜಿ ಸಲ್ಲಿಕೆ ಕುರಿತು ಗೊಂದಲ ಇರುತ್ತದೆ. ಈ ಹಿನ್ನಲೆ ಐಬಿಪಿಎಸ್ ಮೂಲಕ ನಡೆಯುವ ಪರೀಕ್ಷೆಗಳ ಮಾಹಿತಿ, ಆಯ್ಕೆ ಪ್ರಕ್ರಿಯೆ ಇತ್ಯಾದಿ ಮಾಹಿತಿ ಇಲ್ಲಿವೆ.
2 ಪರೀಕ್ಷೆ ಪತ್ರಿಕೆಗಳು
ಈ ಸ್ಪರ್ಧಾತ್ಮಕ ಪರೀಕ್ಷೆಯು 2 ವಿಧದ ಪ್ರಶ್ನೆ ಪತ್ರಿಕೆಗಳನ್ನು ಹೊಂದಿದ್ದು, ಆಬೆjಕ್ಟಿವ್(120 ನಿಮಿಷ ಅವಧಿ) ಮತ್ತು ವಿವರಣಾತ್ಮಕ ಪರೀಕ್ಷೆ (60) ಯಾವ ರೀತಿಯ ಪ್ರಶ್ನೆಗಳು
ಆಬೆjಕ್ಟಿವ್ ಪರೀಕ್ಷೆಯು 200 ಅಂಕಗಳ 200 ಪ್ರಶ್ನೆಗಳನ್ನು ಒಳಗೊಂಡಿದ್ದು, ತಲಾ 50 ಪ್ರಶ್ನೆಗಳ 4 ವಿಭಾಗಗಳನ್ನು ಒಳಗೊಂಡಿರುತ್ತದೆ.
ಪಠ್ಯ ವಿಷಯಗಳು
ವಿಶ್ಲೇಷಣೆ ಮತ್ತು ಪರಿಮಾಣಾತ್ಮಕ ಯೋಗ್ಯತಾ ವಿಭಾಗ, ತರ್ಕ, ಸಾಮಾನ್ಯ ಇಂಗ್ಲಿಷ್ ಮತ್ತು ಸಾಮಾನ್ಯ ಜ್ಞಾನ, ಮಾರ್ಕೆ ಟಿಂಗ್, ಕಂಪ್ಯೂಟರ್. 50 ಅಂಕಗಳ ವಿವಿರ ಣಾತ್ಮಕ ಪರೀಕ್ಷೆಗೆ ಪ್ರಬಂಧ, ಪತ್ರ ಮತ್ತು ಸಂಕ್ಷಿಪ್ತ ರೂಪದಲ್ಲಿ ಉತ್ತರಗಳನ್ನು ಬರೆಯಬೇಕು.
ಮಾಹಿತಿ ಎಲ್ಲಿ ಲಭ್ಯ ?
ಕಳೆದ 2 ವರ್ಷಗಳ ಪರೀಕ್ಷೆಯ ಹಳೆ ಪ್ರಶ್ನೆ ಪತ್ರಿಕೆಗಳ ಅಧ್ಯಯನ ಸೂಕ್ತ. ಬ್ಯಾಂಕಿಂಗ್ ಸರ್ವೀಸ್ ಕ್ರಾನಿಕಲ್ ಪುಸ್ತಕ ಪರೀಕ್ಷೆಗೆ ಪೂರಕ ವಾದ ಮಾಹಿತಿ ನೀಡುತ್ತದೆ.
ಅರ್ಹತೆಗಳು
ಭಾರತ ಸರಕಾರದ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಯಾವುದಾದರೂ ಪದವಿ ಹೊಂದಿರಬೇಕು. ಅಧಿಕೃತ ಅಂಕ ಪಟ್ಟಿ ಅಥವಾ ಡಿಗ್ರಿ ಸರ್ಟಿಫಿಕೇಟ್ ಇರಬೇಕು. ವಯೋಮಿತಿ: 20-23 ವರ್ಷ
ಆಯ್ಕೆ ಪ್ರಕ್ರಿಯೆ
ಪ್ರಿಲಿಮಿನರಿ ಪರೀಕ್ಷೆ, ಮೈನ್ಸ್ ಪರೀಕ್ಷೆ ಮತ್ತು ಸಂದರ್ಶನದ ಆಧಾರದಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಪ್ರಿಲಿಮಿನರಿ ಪರೀಕ್ಷೆಯು 100 ಅಂಕಗಳನ್ನು ಹೊಂದಿದ್ದು 1 ಗಂಟೆ ಅವಧಿಯಿದೆ. ಮೈನ್ಸ್ ಪರೀಕ್ಷೆಯು 200 ಅಂಕಗಳನ್ನು ಹೊಂದಿದ್ದು, 3 ಗಂಟೆ ಅವಧಿಯಿದೆ.ಮೈನ್ಸ್ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ಸಂದರ್ಶನಕ್ಕೆ ಆಹ್ವಾನ ನೀಡಲಾಗುತ್ತದೆ. ಸಂದರ್ಶನವನ್ನು ಐಬಿಪಿಎಸ್‌ನ ಸಹಾಯದಿಂದ ಪ್ರತಿ ರಾಜ್ಯ ಮತ್ತು ಕೇಂದ್ರಾಡಳಿತದ ಪ್ರದೇಶಗಳಲ್ಲಿ ನೋಡಲ್ ಬ್ಯಾಂಕ್ ನಡೆಸುತ್ತದೆ.
ಸಂದರ್ಶನಕ್ಕೆ 100 ಅಂಕ
ಸಂದರ್ಶನಕ್ಕೆ ಒಟ್ಟು 100 ಅಂಕ ನಿಗದಿ ಯಾಗಿದ್ದು, ಇದರಲ್ಲಿ ಶೇ.40ಕ್ಕಿಂತ (ಎಸ್ಸಿ/ಎಸ್ಟಿ ಅಭ್ಯರ್ಥಿಗಳು ಶೇ. 35) ಹೆಚ್ಚು ಅಂಕ ಪಡೆಯ ಬೇಕು. ಆಯ್ಕೆ ಪಟ್ಟಿ ಸಿದ್ಧಪಡಿಸುವಾಗ ಮುಖ್ಯ ಪರೀಕ್ಷೆಯಲ್ಲಿ ಮತ್ತು ಸಂದರ್ಶನದಲ್ಲಿ ಪಡೆದ ಅಂಕವನ್ನು 80:20ರ ಅನುಪಾತದಲ್ಲಿ ಪರಿಗ ಣಿಸಲಾಗುತ್ತದೆ. ಪೂರ್ವಭಾವಿ ಪರೀಕ್ಷೆಯ ಹಂತದಲ್ಲಿಯೇ ಸರಿ ಸುಮಾರು 1:10ರ ಪ್ರಮಾಣದಲ್ಲಿ ಅಭ್ಯರ್ಥಿಗಳನ್ನು ಕಿರು ಪಟ್ಟಿ ಮಾಡಿ, ಮುಖ್ಯ ಪರೀಕ್ಷೆಗೆ ಆಯ್ಕೆ ಮಾಡುವ ಸಾಧ್ಯತೆಗಳಿರುತ್ತವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
New Year Guidelines: ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಹೈದರಾಬಾದ್ ಪೊಲೀಸರು
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.