ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ಬಗ್ಗೆ  ಎಷ್ಟು ಗೊತ್ತು?


Team Udayavani, Mar 18, 2019, 8:01 AM IST

18-march-11.jpg

ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ಒಂದು ರೀತಿಯಲ್ಲಿ ಓರ್ವ ಡ್ರಾಫ್ಟ್ ಸಾಲದ ಹಾಗೆ. ಅಲ್ಪಾವಧಿ ಸಾಲದ ಮಿತಿಗೆ ರೈತನಿಗೆ ಕಿಸಾನ್‌ ಕ್ರೆಡಿಟ್‌ ಎಂಬ ಎಟಿಎಂ ಕಾರ್ಡ್‌ ನೀಡುತ್ತಾರೆ. ಈ ಖಾತೆಯಲ್ಲಿ ಎಷ್ಟು ಸಾರಿ ಬೇಕಾದರೂ ಹಣ ಕಟ್ಟಬಹುದು, ತೆಗೆಯಬಹುದು. ಅಂಗಡಿಗಳಲ್ಲಿ ಕಾರ್ಡ್‌ ಉಜ್ಜಿ ವಸ್ತುಗಳನ್ನು ಖರೀದಿಸಬಹುದು, ಬೇರೆಯವರಿಗೆ ಚೆಕ್‌ ಮೂಲಕ ಹಣ ಪಾವತಿಸಬಹುದು.

ರೈತನಿಗೆ ನೆರವಾಗಲು ಭಾರತೀಯ ರಿಸರ್ವ್‌ ಬ್ಯಾಂಕ್‌ ಮುಂದಾಗಿದೆ. ಈ ದಿಸೆಯಲ್ಲಿ, ಎಲ್ಲ ಬ್ಯಾಂಕ್‌ಗಳಿಗೂ ಅನ್ವಯಿಸುವ ಕೃಷಿ ಚಟುವಟಿಕೆಗಳಿಗಾಗಿಯೇ ಯೋಜನೆಯೊಂದನ್ನು ಜಾರಿಗೆ ತಂದಿದೆ. ಅದುವೇ ಕಿಸಾನ್‌ ಕ್ರೆಡಿಟ್‌ ಕಾರ್ಡ್‌.

ಯಾವುದಕ್ಕೆ ಸಾಲ?
ಬೆಳೆ ಬೆಳೆಯಲು ಬೇಕಾಗುವ ಬೀಜ, ಗೊಬ್ಬರ ಇತ್ಯಾದಿ ಅಲ್ಪಾವಧಿ ಖರ್ಚುಗಳಿಗೆ, ಫ‌ಸಲು ಬಂದ ಅನಂತರ ಬೆಳೆಯ ಸಂಸ್ಕರಣೆಗೆ ಮಾಡಬೇಕಾದ ಖರ್ಚು ವೆಚ್ಚಗಳಿಗೆ, ಬೆಳೆಗೆ ಮಾರುಕಟ್ಟೆಯಲ್ಲಿ ಸರಿಯಾದ ದರ ಬರುವವರೆಗೆ ಕಾಯ್ದಿಡಬೇಕಾದ ಅವಧಿಯಲ್ಲಿ ಅಗತ್ಯವಿರುವ ಕೃಷಿ ಖರ್ಚು, ರೈತನ ಮನೆಯ ಗೃಹಸಂಬಂಧಿ ಖರ್ಚು, ಕೃಷಿಗೆ ಸಂಬಂಧಿಸಿದ ಪರಿಕರಗಳ ರಿಪೇರಿ ಮತ್ತು ನಿರ್ವಹಣೆಗೆ, ಹೈನುಗಾರಿಕೆ, ಕುರಿ, ಕೋಳಿ ಸಾಕಾಣಿಕೆ ಇತ್ಯಾದಿಗೆ ಕಿಸಾನ್‌ ಕ್ರೆಡಿಟ್‌ ಕಾರ್ಡ್‌ನಲ್ಲಿ ಸಾಲ ಪಡೆಯಬಹುದು.

ಸಾಲದ ಮೊತ್ತ ನಿರ್ಧರಿಸುವುದು ಹೇಗೆ?
ಜಿಲ್ಲಾ ತಾಂತ್ರಿಕ ಸಮಿತಿಯ ಅನುಮೋದನೆಯ ಮೇರೆಗೆ ಎಕರೆಯೊಂದಕ್ಕೆ ಬೆಳೆ ಬೆಳೆಯಲು ಬೇಕಾಗುವ ಸಂಪೂರ್ಣ ವೆಚ್ಚಗಳನ್ನು ಪರಿಗಣಿಸಿ ಸ್ಕೇಲ್‌ ಆಫ್ ಫೈನಾನ್ಸ್  ಎಂದು ನಿರ್ದಿಷ್ಟ ಮೊತ್ತವನ್ನು ನಿಗದಿಪಡಿಸಲಾಗುತ್ತದೆ. ಅದಕ್ಕೆ ಶೇ.10ರಷ್ಟು ಮೊತ್ತವನ್ನು ಬೆಳೆ ಬೆಳೆಯುವ ಮುನ್ನ ಬರಬಹುದಾದ ಖರ್ಚು ಹಾಗೂ ಗೃಹಸಂಬಂಧಿ ಖರ್ಚು ಎಂದು ಸೇರಿಸಲಾಗುತ್ತದೆ. ಮತ್ತೆ ಶೇ.20 ರಷ್ಟು ಕೃಷಿ ಪರಿಕರಗಳ ರಿಪೇರಿ, ನಿರ್ವಹಣಾ ವೆಚ್ಚವೆಂದು ಸೇರಿಸಲಾಗುತ್ತದೆ. ಇದರ ಜತೆಗೆ ಬೆಳೆ ವಿಮೆ, ಅಪಘಾತ ವಿಮೆ, ಆರೋಗ್ಯ ವಿಮೆ ಸೇರಿಸಿ ಒಂದು ಎಕರೆಗೆ ಇಷ್ಟು ಅಂತ ಸಾಲದ ಮಿತಿಯನ್ನು ಪರಿಗಣಿಸಲಾಗುತ್ತದೆ. ಪ್ರತಿ ವರ್ಷವೂ ಹಿಂದಿನ ವರ್ಷದ ಸಾಲದ ಮೊತ್ತಕ್ಕೆ ಶೇ.10ರಂತೆ ಹೆಚ್ಚಿಸಲಾಗುತ್ತದೆ.

ಅವಧಿ ಸಾಲದ ಮಿತಿ
ಐದು ವರ್ಷಗಳಲ್ಲಿ ರೈತನ ಜಮೀನು ಅಭಿವೃದ್ಧಿಗೆ ಕೊಳ್ಳಬೇಕಾದ ಪರಿಕರಗಳು, ನೀರಾವರಿ ಖರ್ಚುವೆಚ್ಚಗಳು ಇವುಗಳಿಗೆ ರೈತನ ವರಮಾನ, ಸಾಲದ ಕಂತುಗಳನ್ನು ತುಂಬುವ ಸಾಮರ್ಥ್ಯವನ್ನು ಪರಿಗಣಿಸಿ, ಅದಕ್ಕೆ ನಿಗದಿಪಡಿಸಿದ ಸ್ಕೇಲ್‌ ಆಫ್ ಫೈನಾನ್ಸ್ಆಧಾರದಲ್ಲಿ ಅವಧಿ ಸಾಲವನ್ನು ನಿಗದಿಪಡಿಸಲಾಗುತ್ತದೆ. ಐದನೇ ವರ್ಷಕ್ಕೆ ನಿಗದಿಪಡಿಸಬೇಕಾದ ಅಲ್ಪಾವಧಿ ಕೃಷಿ ಸಾಲ ಹಾಗೂ ಅವಧಿ ಸಾಲವನ್ನು ಸೇರಿಸಿ ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ಒಟ್ಟು ಸಾಲದ ಮಿತಿಯನ್ನು ನಿರ್ಧರಿಸಲಾಗುತ್ತದೆ.

ಬಡ್ಡಿ ದರ
ಮೂರು ಲಕ್ಷದವರೆಗಿನ ಅಲ್ಪಾವಧಿ ಸಾಲಕ್ಕೆ ಈಗ ಶೇ.7 ಬಡ್ಡಿ ಇದ್ದು ಪ್ರಾಮಾಣಿಕವಾಗಿ ಮರುಪಾವತಿ ಮಾಡಿದವರಿಗೆ ಶೇ.4 ರ ಬಡ್ಡಿಯಲ್ಲಿ ಸಾಲ ದೊರೆಯುತ್ತದೆ. ಅವಧಿ ಸಾಲಗಳಿಗೆ ತುಸು ಹೆಚ್ಚಿನ ಬಡ್ಡಿ ಅಂದರೆ, ಶೇ.10.50 ರಿಂದ ಶೇ.11ರ ವರೆಗೆ ಇದೆ. ಒಂದು ಲಕ್ಷದವರೆಗಿನ ಸಾಲಕ್ಕೆ ಯಾವುದೇ ಭದ್ರ ತೆಯ ಅವಶ್ಯಕತೆ ಇಲ್ಲ.

ರಾಮಸ್ವಾಮಿ

ಟಾಪ್ ನ್ಯೂಸ್

1-raichur

Raichur; ಜೆಸ್ಕಾಂ ಜೆ.ಇ ಹುಲಿರಾಜ ಮನೆ ಮೇಲೆ ಲೋಕಾಯುಕ್ತ ದಾಳಿ

Toxic Movie: ಫ್ಯಾನ್ಸ್‌ ನಶೆಯೇರಿಸಿದ ಯಶ್‌; ಹಾಲಿವುಡ್‌ ರೇಂಜ್‌ನಲ್ಲಿ ಮಿಂಚಿದ ರಾಕಿಭಾಯ್.!

Toxic Movie: ಫ್ಯಾನ್ಸ್‌ ನಶೆಯೇರಿಸಿದ ಯಶ್‌; ಹಾಲಿವುಡ್‌ ರೇಂಜ್‌ನಲ್ಲಿ ಮಿಂಚಿದ ರಾಕಿಭಾಯ್.!

1-nxxxxx

Naxal ಶರಣಾಗತಿ; ಚಿಕ್ಕಮಗಳೂರು ಡಿಸಿ ಕಚೇರಿ ಸುತ್ತಮುತ್ತ ಬಿಗಿ ಭದ್ರತೆ

1-naxal

Ballari; ಬಿಸಿಎಂ ತಾಲೂಕು ಅಧಿಕಾರಿ ಮನೆ ಮೇಲೆ ಲೋಕಾಯುಕ್ತ ದಾಳಿ

1-aishw

Fraud; ಡಿಕೆಶಿ, ಡಿಕೆಸು ಸಹೋದರಿ ಎಂದು ಸ್ತ್ರೀರೋಗ ತಜ್ಞೆಗೂ 4.2 ಕೋಟಿ ವಂಚಿಸಿದ್ದ ಐಶ್ವರ್ಯ!

police

Bengaluru; ಮದ್ಯ ಕುಡಿಸಿ ಅತ್ಯಾಚಾ*ರ: ಬಿಜೆಪಿ ಮುಖಂಡ ಜಿಮ್‌ ಸೋಮನ ವಿರುದ್ಧ ಕೇಸ್‌

1-gadag

Gangavathi; ಸಿಲಿಂಡರ್ ಸ್ಪೋ*ಟಗೊಂಡು ಅಗ್ನಿ ಅವಘಡ: ವೈದ್ಯೆ ಸೇರಿ ಇಬ್ಬರಿಗೆ ತೀವ್ರ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-raichur

Raichur; ಜೆಸ್ಕಾಂ ಜೆ.ಇ ಹುಲಿರಾಜ ಮನೆ ಮೇಲೆ ಲೋಕಾಯುಕ್ತ ದಾಳಿ

Toxic Movie: ಫ್ಯಾನ್ಸ್‌ ನಶೆಯೇರಿಸಿದ ಯಶ್‌; ಹಾಲಿವುಡ್‌ ರೇಂಜ್‌ನಲ್ಲಿ ಮಿಂಚಿದ ರಾಕಿಭಾಯ್.!

Toxic Movie: ಫ್ಯಾನ್ಸ್‌ ನಶೆಯೇರಿಸಿದ ಯಶ್‌; ಹಾಲಿವುಡ್‌ ರೇಂಜ್‌ನಲ್ಲಿ ಮಿಂಚಿದ ರಾಕಿಭಾಯ್.!

1-nxxxxx

Naxal ಶರಣಾಗತಿ; ಚಿಕ್ಕಮಗಳೂರು ಡಿಸಿ ಕಚೇರಿ ಸುತ್ತಮುತ್ತ ಬಿಗಿ ಭದ್ರತೆ

1-naxal

Ballari; ಬಿಸಿಎಂ ತಾಲೂಕು ಅಧಿಕಾರಿ ಮನೆ ಮೇಲೆ ಲೋಕಾಯುಕ್ತ ದಾಳಿ

1-aishw

Fraud; ಡಿಕೆಶಿ, ಡಿಕೆಸು ಸಹೋದರಿ ಎಂದು ಸ್ತ್ರೀರೋಗ ತಜ್ಞೆಗೂ 4.2 ಕೋಟಿ ವಂಚಿಸಿದ್ದ ಐಶ್ವರ್ಯ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.