ಉತ್ತಮ ಎಂಜಿನ್ ಆಯಿಲ್ ಆಯ್ಕೆ ಹೇಗೆ?
Team Udayavani, Nov 9, 2018, 1:03 PM IST
ಬೈಕ್ ಹೊಂದಿದ್ದರೆ, ಪ್ರತಿ ಬಾರಿಯೂ ಎಂಜಿನ್ ಆಯಿಲ್ ಯಾವುದು ಬೆಸ್ಟ್? ಎಂಬ ಪ್ರಶ್ನೆ ನಿಮಗೆ ಕಾಡುತ್ತಿರಬಹುದು. 150 ಸಿಸಿ ಮೇಲ್ಪಟ್ಟ ಬೈಕುಗಳಿಗೆ ಉತ್ತಮ ಎಂಜಿನ್ ಆಯಿಲ್ ಆಯ್ಕೆಯಿಂದ ಆರಾಮದಾಯಕ ಸವಾರಿ ಸಾಧ್ಯವಾಗುತ್ತದೆ. ವಿಶೇಷವಾಗಿ 250 ಸಿಸಿ ಮೇಲ್ಪಟ್ಟ ಬೈಕ್ಗಳಲ್ಲಿ ಎಂಜಿನ್ ಆಯಿಲ್ ಅತ್ಯಧಿಕ ಕಾರ್ಯಕ್ಷಮತೆ ನೀಡಲೂ ಕಾರಣವಾಗುತ್ತದೆ. ಆದ್ದರಿಂದ ಉತ್ತಮ ಎಂಜಿನ್ ಆಯಿಲ್ ಯಾವುದು? ಆಯಿಲ್ ಗ್ರೇಡ್ ಅಂದರೇನು ಎಂಬುದನ್ನು ನೋಡೋಣ.
ಮಿನರಲ್ ಆಯಿಲ್
110 ಸಿಸಿ ಒಳಪಟ್ಟ ಬೈಕ್ಗಳಲ್ಲಿ ಇವುಗಳನ್ನು ಬಳಸಲಾಗುತ್ತದೆ. ಹೊಸ ಬೈಕ್ಗಳಲ್ಲಿ ಆರಂಭದಲ್ಲಿ ಇವುಗಳನ್ನೇ ಬಳಸಲಾಗುತ್ತದೆ. ಇದು ಎಂಜಿನ್ ಸುರಕ್ಷತೆಗೆ ಹೆಚ್ಚು ಪ್ರಯೋಜನಕಾರಿ. ಇದರ ಬೆಲೆ ಕಡಿಮೆ. ಸುಮಾರು 3/4 ಸಾವಿರ ಕಿ.ಮೀ.ಗಳಿಗೊಮ್ಮೆ ಮಿನರಲ್ ಆಯಿಲ್ಗಳನ್ನು ಬದಲಾಯಿಸಬೇಕಾಗುತ್ತದೆ.
ಸೆಮಿ ಸಿಂಥೆಟಿಕ್ ಆಯಿಲ್
ಸಾಮಾನ್ಯ ಎಂಜಿನ್ ಆಯಿಲ್ಗಳೆಂದು ಕರೆಯುವ ಮಿನರಲ್ ಆಯಿಲ್ಗಳಿಗಿಂತ ಸಂಪೂರ್ಣ ಭಿನ್ನ. ಸಾಮಾನ್ಯವಾಗಿ 125ರಿಂದ 180 ಸಿಸಿ ಬೈಕ್ಗಳಲ್ಲಿ ಇವುಗಳನ್ನು ಬಳಸಲಾಗುತ್ತದೆ. ಹೆಚ್ಚು ಕಿ.ಮೀ. ಬಳಸಬಹುದು. ಮಿನರಲ್ ಆಯಿಲ್ಗಿಂತ ಈ ಆಯಿಲ್ ತುಸು ದಪ್ಪನೆ ಇರುತ್ತದೆ. ಎಂಜಿನ್ 10-15 ಸಾವಿರ ಕಿ.ಮೀ. ವರೆಗೆ ಓಡಿದೆ ಮತ್ತು ಎಂಜಿನ್ ಪಿಸ್ಟನ್ ತುಸು ಸಡಿಲವಾಗಿ ಆಗಿದೆ ಎಂದರೆ ಸೆಮಿ ಸಿಂಥೆಟಿಕ್ ಆಯಿಲ್ ಬಳಸಬಹುದು. ಇದರಿಂದ ದೂರದ ಚಾಲನೆಗೆ ಹೆಚ್ಚು ಪ್ರಯೋಜನ ಎಂಜಿನ್ ಬೇಗನೆ ಬಿಸಿಯಾಗುವುದಿಲ್ಲ.
ಫುಲ್ ಸಿಂಥೆಟಿಕ್ ಆಯಿಲ್
ಸೆಮಿ ಸಿಂಥೆಟಿಕ್ ಆಯಿಲ್ಗಳಿಗಿಂತ ತುಸು ದಪ್ಪನೆ ಆಯಿಲ್. ವಿಶೇಷವಾಗಿ ಸ್ಪೋರ್ಟ್ಸ್ ಬೈಕ್ಗಳಲ್ಲಿ, ಅತ್ಯಧಿಕ ಕಾರ್ಯಕ್ಷಮತೆಯ ಬೈಕ್ ಗಳಲ್ಲಿ, 200 ಸಿಸಿ ಮೇಲ್ಪಟ್ಟ ಬೈಕ್ಗಳಲ್ಲಿ ಇದನ್ನು ಬಳಸುತ್ತಾರೆ. ಇದು ಬಹುದೂರದ ಚಾಲನೆಗೆ ಪ್ರಯೋಜನಕಾರಿ. ಎಂಜಿನ್ ಬೇಗನೆ ಬಿಸಿಯಾಗಲು ಬಿಡಲಾರದು. ಸುಮಾರು 6ರಿಂದ 8 ಸಾವಿರ ಕಿ.ಮೀ.ಗಳಿಗೊಮ್ಮೆ ಈ ಎಂಜಿನ್ ಆಯಿಲ್ ಬದಲಾಯಿಸಿದರೆ ಸಾಕಾಗುತ್ತದೆ. ಈ ಮಾದರಿ ಆಯಿಲ್ ದುಬಾರಿ. ಹೆಚ್ಚು ಟಾರ್ಕ್ ಇರುವ, ಏಕಾಏಕಿ ವೇಗ ವೃದ್ಧಿಸುವ ಸಾಮರ್ಥ್ಯವುಳ್ಳ ಭಾರೀ ಗಾತ್ರದ ಬೈಕ್ಗಳಿಗೆ ಇದು ಪ್ರಯೋಜನಕಾರಿ.
ಎಂಜಿನ್ ಗ್ರೇಡ್ ಅಂದರೇನು?
ಎಲ್ಲ ವಾಹನಗಳಿಗೆ ನಿರ್ದಿಷ್ಟ ಗ್ರೇಡ್ನ ಎಂಜಿನ್ ಆಯಿಲ್ ಹಾಕುವುದು ಪ್ರಯೋಜನಕಾರಿ. ಇದನ್ನು ಬಳಕೆದಾರರ ಕೈಪಿಡಿಯಲ್ಲಿ ಬರೆದಿರುತ್ತಾರೆ. ಹೆಚ್ಚಿನ ಸಾಮರ್ಥ್ಯದ ಬೈಕ್ಗಳಿಗೆ ಮಾತ್ರ ಇದು ಪ್ರಯೋಜನಕಾರಿ. ಎಂಜಿನ್ ಆಯಿಲ್ ಗ್ರೇಡ್ ಅನ್ನು ಅವುಗಳ ವೆಸ್ಕೋಸಿಟಿ (ಜಿಗುಟುತನ) ಗುಣದಿಂದ ಅಳೆಯಲಾಗುತ್ತದೆ. ಇದು ವಿವಿಧ ವಾತಾವರಣಕ್ಕೆ ಅನುಗುಣವಾಗಿ ಅಳೆಯಲಾಗುತ್ತದೆ. ಎಂಜಿನ್ ಗ್ರೇಡ್ ಅನ್ನು ಉದಾ 20×40 ಎಂದು ಬರೆದಿರಬಹುದು. ಇಲ್ಲಿ ಡಿ ಎಂದರೆ ಚಳಿಗಾಲ (ವಿಂಟರ್) ಬೈಕ್ ಎಂಜಿನ್ ಅನ್ನು ಎಷ್ಟು ಕಡಿಮೆ ತಾಪಮಾನದಲ್ಲಿ ಚಾಲೂ ಮಾಡಲು ಆಯಿಲ್ ನೆರವಾಗುತ್ತದೆ ಎಂಬುದನ್ನು ಗ್ರೇಡ್ನಲ್ಲಿ ಹೇಳಲಾಗುತ್ತದೆ. 10ಡಿ30 ಅಂದರೆ 10 ಡಿಗ್ರಿ ಮತ್ತು 30 ಡಿಗ್ರಿ ತಾಪಮಾನದವರೆಗೆ ಎಂಜಿನ್ ಅನ್ನು ಆಯಿಲ್ ಸುರಕ್ಷಿತವಾಗಿರಿಸುತ್ತದೆ ಎಂದರ್ಥ. ಬೈಕ್ ತಯಾರಿಕೆದಾರರು ಹೇಳಿದ ಗ್ರೇಡ್ ಆಯಿಲ್ ಉತ್ತಮವಾದರೂ ಆಯಾ ಊರಿನ ತಾಪಮಾನಕ್ಕೆ ಬೇಕಾದಂತೆ ಗ್ರೇಡ್ ಬದಲಾಯಿಸಬಹುದು.
ಈಶ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಟ್ರಾಯ್ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Naxal ಎನ್ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.