ಕಾರು ಡೆಂಟ್‌ಗಳನ್ನು ಸರಿಪಡಿಸೋದು ಹೇಗೆ?
Team Udayavani, Nov 30, 2018, 1:06 PM IST
ಎಲ್ಲ ಕಾರು ಮಾಲಕರದ್ದೂ ಒಂದೇ ಸಮಸ್ಯೆ ಅದು ಡೆಂಟ್‌ನದ್ದು! ಪಾರ್ಕಿಂಗ್ ಮಾಡಿದಲ್ಲಿ, ಅಥವಾ ಟ್ರಾಫಿಕ್‌ನಲ್ಲಿ ಸಂಚರಿಸುತ್ತಿರುವ ವೇಳೆಯಲ್ಲಿ ಕಾರಿಗೆ ಇನ್ನೊಂದು ವಾಹನ ಅಥವಾ ಸಣ್ಣ ಮರದ ಗೆಲ್ಲು ಬಿದ್ದರೂ ಸಾಕು. ಕುಳಿ ಸೃಷ್ಟಿಯಾಗುತ್ತದೆ. ಇದು ಕಾರಿನ ಸೌಂದರ್ಯವನ್ನು ಕಡಿಮೆ ಮಾಡುತ್ತದೆ. ಆದ್ದರಿಂದ ಸಾಮಾನ್ಯ ಡೆಂಟ್‌ಗಳನ್ನು ತೆಗೆಯುವುದು ಹೇಗೆ ಎನ್ನುವುದು ಎಲ್ಲರ ಸಮಸ್ಯೆ!
ಯಾವ ಡೆಂಟ್‌ಗಳನ್ನು ತೆಗೆಯಬಹುದು?
ಸಾಮಾನ್ಯವಾಗಿ ಡೆಂಟ್‌ಗಳಲ್ಲಿ ಎರಡು ಮಾದರಿಯಿದೆ. ಒಂದು ಡೆಂಟ್. ಇದರಲ್ಲಿ ಕಾರಿನ ಪೈಂಟ್‌ಗೂ ಹಾನಿಯಾಗಿರಬಹುದು. ಎರಡನೆಯದು ಕಾರಿನ ಲೋಹದ ಭಾಗ/ಫೈಬರ್ ಭಾಗ ಒಳಕ್ಕೆ ಹೋಗಿರುವುದು. ಇದನ್ನು ಡಿಂಗ್ ಎಂದು ಕರೆಯುತ್ತಾರೆ. ಸಾಮಾನ್ಯ ಡಿಂಗ್‌ಗಳು ಅಥವಾ ನೆಗ್ಗುಗಳನ್ನು ಮನೆಯಲ್ಲೇ ಸರಿಪಡಿಸಲು ಸಾಧ್ಯವಿದೆ. ಆದರೆ ಇದಕ್ಕೆ ತುಸು ಕೌಶಲ ಅಗತ್ಯ. ಇಲ್ಲಿ ಪೈಂಟ್‌ಗೆ ಹಾನಿಯಾಗಲಾರದು. ಪೈಂಟ್‌ಗೆ ಹಾನಿಯಾಗಿರುವ ಡೆಂಟ್‌ಗಳನ್ನು ಪರಿಣತರೇ ತೆಗೆಯಬೇಕಾಗುತ್ತದೆ ಮತ್ತು ಆ ಜಾಗಕ್ಕೆ ರಿಪೈಂಟ್ ಮಾಡಬೇಕಿರುತ್ತದೆ. ಇದಕ್ಕೆ ಹಣ ಖರ್ಚಾಗುತ್ತದೆ.
ಸಾಮಾನ್ಯ ಡಿಂಗ್‌ಗಳನ್ನು ತೆಗೆಯುವುದು ಹೇಗೆ?
ಹೇರ್ ಡ್ರಯರ್ ಬಳಕೆ
ನಿಮ್ಮ ಕಾರಿನ ಯಾವ ಲೋಹದ ಭಾಗ ಡಿಂಗ್ ಆಗಿದೆ ಎಂಬುದನ್ನು ನೋಡಿಕೊಂಡು ಮತ್ತು ಲೋಹ ತುಂಬ ದಪ್ಪನೆ ಇಲ್ಲದಿದ್ದರೆ ಹೇರ್ ಡ್ರಯರ್ ಬಳಸಿ ಡಿಂಗ್‌ಗಳನ್ನು ತೆಗೆಯಬಹುದು. ಡಿಂಗ್ ಬಿದ್ದ ಜಾಗದಲ್ಲಿ ತುಸು ಬಿಸಿ ಮಾಡಿ ಆ ಭಾಗಕ್ಕೆ ಐಸ್ ಹಾಕಿ ಅಥವಾ ವಾಕ್ಯೂಮ್ ಮೂಲಕ ಆ ಭಾಗವನ್ನು ಎಳೆಯಬೇಕು. ತಕ್ಷಣ ಶಾಖದ ಪ್ರಮಾಣ ಬದಲಾಗುವುದರಿಂದ ಲೋಹ ಹಿಗ್ಗುತ್ತದೆ.
ಪ್ಲಂಗರ್ ಬಳಕೆ
ಬಚ್ಚಲು ಮನೆಯಲ್ಲಿ, ಅಡುಗೆ ಮನೆಯಲ್ಲಿ ಕಸ ಕಟ್ಟಿಕೊಂಡಿದ್ದರೆ ಅವುಗಳನ್ನು ಪೈಪ್‌ನಲ್ಲಿ ಸರಾಗವಾಗಿ ಚಲಿಸುವಂತೆ ಮಾಡಲು ಪ್ಲಂಗರ್‌ಗಳ ಬಳಕೆ ಮಾಡುತ್ತೇವೆ. ಒತ್ತಡ ಹಾಕಲು ಇದು ಉತ್ತಮ ಸಾಧನ. ಅದೇ ರೀತಿ ಹೆಚ್ಚು ಆಳವಲ್ಲದ ರೀತಿ, ವಿಶಾಲವಾಗಿ ಡಿಂಗ್‌ಗಳು ಸೃಷ್ಟಿಯಾಗಿದ್ದರೆ ಪ್ಲಂಗರ್ ಅನ್ನು ಆ ಭಾಗದಲ್ಲಿ ಒತ್ತಿ ಹಿಡಿದು ಒಂದೇ ಬಾರಿಗೆ ಎಳೆದು ಬಿಡಬೇಕು.
ಬಂಪರ್ ಡೆಂಟ್‌ಗೆ ಬಿಸಿನೀರು
ಕಾರಿನ ಬಂಪರ್ ಫೈಬರ್‌ನಲ್ಲಿ ಮಾಡಿದ್ದಾಗಿರುತ್ತದೆ. ಇದು ಒಳಕ್ಕೆ ಹೋದಲ್ಲಿ, ಆ ಭಾಗಕ್ಕೆ ಕುದಿಯುವ ಬಿಸಿನೀರು ಹಾಕಿ ಒಳಭಾಗದಿಂದ ಯಾವುದಾದರೊಂದು ಸಾಧನದಲ್ಲಿ ಲಘುವಾಗಿ ಹೊಡೆಯಿರಿ. ಫೈಬರ್ ಸುತ್ತಿಗೆಯಾಗಿದ್ದರೆ ಉತ್ತಮ. ತಕ್ಷಣ ಡೆಂಟ್ ಬಿದ್ದ ಜಾಗ ಸರಿಯಾಗುತ್ತದೆ. ಶಾಖಕ್ಕೆ ಅದು ಪೂರಕವಾಗಿ ವರ್ತಿಸುತ್ತದೆ.
ಸಕ್ಷನ್ ಕ್ಯಾಪ್ ಬಳಕೆ
ಮನೆಯ ಕನ್ನಡಿಗೆ ಅಥವಾ ಫೋಟೋಕ್ಕೆ ಅಲಂಕಾರಿಗಳನ್ನು ಹಾಕಲು ಪುಟ್ಟ ವ್ಯಾಕ್ಯೂಮ್ ಹ್ಯಾಂಗರ್ ಬಳಸಿರುವುದನ್ನು ನೀವು ನೋಡಿರುತ್ತೀರಿ. ಅದೇ ಮಾದರಿಯದ್ದು ಸಕ್ಷನ್ ಕ್ಯಾಪ್ ಗಳು. ಇವುಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಇದನ್ನೂ ಡಿಂಗ್ ಇರುವ ಜಾಗಕ್ಕೆ ಅಳವಡಿಸಿ ಎಳೆಯಬೇಕು. ಆಗ ಲೋಹ ಮೊದಲಿನಂತೆ ಸರಿ ಸ್ಥಾನಕ್ಕೆ ಬರುತ್ತದೆ.
ಈಶ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ
Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ
ಗೂಗಲ್ ಮ್ಯಾಪ್ ನಂಬಿ ಸೇತುವೆಯಿಂದ ನದಿಗೆ ಬಿದ್ದ ಕಾರು, ಮದುವೆಗೆ ಹೊರಟಿದ್ದ ಮೂವರು ಮೃತ್ಯು
JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ
Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್’ಗೆ ಗುಡ್ ಬೈ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.