ಪ್ರವಾಸವನ್ನು ಅನುಭವಿಸುವುದು ಹೇಗೆ ?
Team Udayavani, Mar 12, 2020, 5:52 AM IST
ಪ್ರವಾಸ ಎಂಬುದು ಮೈಮನಗಳನ್ನು ಪುಳಕಿತಗೊಳಿಸುವ, ಉತ್ಸಾಹ, ಹುಮ್ಮಸ್ಸನ್ನು ಇಮ್ಮಡಿಗೊಳಿಸುವ ಮಾರ್ಗ. ಆಯಾ ಸ್ಥಳಗಳ ಸಂಸ್ಕೃತಿ-ಸಂಪ್ರದಾಯಗಳನ್ನು ಹತ್ತಿರದಿಂದ ತಿಳಿದುಕೊಳ್ಳಲು ಅನುಕೂಲ ಮಾಡಿಕೊಡುತ್ತದೆ. ಇಂತಹ ಯಾತ್ರೆಗಳು ನಮ್ಮಲ್ಲಿ ಜ್ಞಾನದ ದೀವಿಗೆಯನ್ನು ಉದ್ದೀಪನಗೊಳಿಸುವ ಶಕ್ತಿಯನ್ನು ತನ್ನಲ್ಲಿ ಹುದುಗಿಸಿಕೊಂಡಿದೆ. ಆರೋಗ್ಯದಲ್ಲೂ ಚೇತರಿಕೆ ತಂದುಕೊಟ್ಟು, ಒತ್ತಡ ಕಡಿಮೆ ಮಾಡುವ ಸುಂದರ ಚಟುವಟಿಕೆಯೂ ಹೌದು ಎನ್ನುತ್ತಾರೆ ಕಾರ್ತಿಕ್ ಅಮೈ.
ಪ್ರ ತಿಯೊಂದು ರೀತಿಯ ಪ್ರವಾಸಗಳು ತಮ್ಮದೆ ಆದ ವೈಶಿಷ್ಟತೆಗಳನ್ನು ಹೊಂದಿರುತ್ತವೆ. ಪ್ರವಾಸವನ್ನು ಸಾಮಾನ್ಯವಾಗಿ ಹಲವು ಬಗೆಗಳಲ್ಲಿ ವಿಂಗಡಿಸಬಹುದು. ಕೌಟುಂಬಿಕ ಪ್ರವಾಸ, ಶೈಕ್ಷಣಿಕ ಪ್ರವಾಸ, ಅಧ್ಯಯನ ಪ್ರವಾಸ, ಸಾಹಸಮಯ ಪ್ರವಾಸ, ಧಾರ್ಮಿಕ ಪ್ರವಾಸ ಹೀಗೆ ಹತ್ತು ಹಲವು ವಿಧಗಳನ್ನು ಈ ಪಟ್ಟಿಗೆ ಸೇರಿಸಬಹುದಾಗಿದೆ.
ಚಾರಣ ಪ್ರವಾಸ ಅಥವಾ ಟ್ರೆಕ್ಕಿಂಗ್ ಹದಿಹರೆಯದವರಲ್ಲಿ ಯುವಕರಲ್ಲಿ ಹೆಚ್ಚಿನ ಕುತೂಹಲ ಕೆರಳಿಸುತ್ತದೆ. ಶೈಕ್ಷಣಿಕ ಪ್ರವಾಸ ಎಂಬುದು ಮುಖ್ಯ ಉದ್ದೇಶ ಸ್ಥಳಗಳ ಐತಿಹಾಸಿಕ ಶ್ರೀಮಂತಿಕೆ, ವಿಶೇಷತೆ ಹಾಗೂ ಸಂಸ್ಕೃತಿಯನ್ನು ತಿಳಿಸುವುದಾಗಿರುತ್ತದೆ. ಸಾಮಾನ್ಯವಾಗಿ ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಹೆಚ್ಚಿನ ಜ್ಞಾನಾರ್ಜನೆಗೆ ಈ ಪ್ರವಾಸಗಳನ್ನು ಆಯೋಜಿ ಸಲಾಗುತ್ತದೆ. ಅದರ ಅಗತ್ಯವೂ ಇದೆ.
ಕೌಟುಂಬಿಕ ಪ್ರವಾಸ ಸಾಮಾನ್ಯವಾಗಿ ಎಲ್ಲರೂ ಹೋಗಬಯಸುವ ಪ್ರವಾಸ. ಇಲ್ಲಿ ಕುಟುಂಬ ಸಮೇತರಾಗಿ ಯಾವು ದಾದರೂ ಪ್ರಾಕೃತಿಕ ಅಥವಾ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವುದೇ ಹೆಚ್ಚಾಗಿ ಕಂಡುಬರುತ್ತದೆ. ನೆಂಟರು, ಬಂಧುಗಳು ಎಲ್ಲರು ಒಂದೆಡೆ ಸೇರಿ ಪ್ರವಾಸ ಮಾಡುವುದರಿಂದ ಸಂಬಂಧದ ಬೆಸುಗೆ ಗಟ್ಟಿಯಾಗುವುದಲ್ಲದೆ ಸಾಕಷ್ಟು ಸಂತಸವನ್ನು ಪ್ರತಿಯೊಬ್ಬರು ಹಂಚಿಕೊಳ್ಳಬಹುದು.
ಮಧುಚಂದ್ರ ಪ್ರವಾಸ; ಮದುವೆಯ ಅನಂತರ ಕೈಗೊಳ್ಳುವ ಈ ರೀತಿಯ ಪ್ರವಾಸದ ಅನುಭವ ಮುಂದೆ ಜೀವನದಲ್ಲಿ ಮತ್ತೆಂದೂ ಲಭಿಸಲಾರದು. ಅದಕ್ಕಾಗಿಯೆ ಕೆಲ ಸ್ಥಳಗಳು ಹನಿ ಮೂನ್ ತಾಣಗಳಾಗಿ ಸಾಕಷ್ಟು ಪ್ರಸಿದ್ಧಿ ಪಡೆದಿವೆ. ಈ ಎಲ್ಲಾ ಪ್ರವಾಸಗಳು ನಮ್ಮ ನೆನಪಿನ ಬುತ್ತಿಯನ್ನು ತೆರೆದು ದೀರ್ಘಕಾಲ ಹಸುರಾಗಿ ರುವಂತೆ ಮಾಡುತ್ತದೆ. ನಮಗರಿಯದ ದೂರದೂರಿನ ತಾಣಗಳಿಗೆ ತೆರಳಿದಾಗ ಅಲ್ಲಿನ ಒಂದಷ್ಟು ಹೊಸ ಸಂಗತಿಗಳನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಬೇಕು. ಯಾವುದೇ ಪ್ರವಾಸವಾಗಿ ರಬಹುದು, ಅದರ ಸಂಭ್ರಮದ ಜತೆಗೆ ದೀರ್ಘಕಾಲ ನೆನಪುನಲ್ಲಿಡುವಂತೆ ಮಾಡುವ ಕೆಲವೊಂದಿಷ್ಟು ಅಂಶಗಳನ್ನು ಇಲ್ಲಿ ನೀಡಲಾಗಿದೆ.
ಹೌದು ಪ್ರವಾಸದ ಸಂದರ್ಭ ಟೂರ್ ಗೈಡ್ ಒಬ್ಬರ ಅಗತ್ಯ ತುಂಬಾ ಬೇಕಾಗಿ ಬರುತ್ತದೆ. ಅವಕಾಶ ದೊರೆತರೆ ಟೂರ್ ಗೈಡ್ ಒಬ್ಬರನ್ನು ಇಟ್ಟುಕೊಳ್ಳಿ. ಇದು ನಿಮ್ಮ ಸಮಯವನ್ನು ಉಳಿಸುತ್ತದೆ. ಉದಾಹರಣೆಗೆ ಯಾವುದೋ ಒಂದು ಊರಿನಲ್ಲಿ ಸಂಜೆಯ ಹೊತ್ತು ತಲುಪಿ ದ್ದೀರಿ ಎಂದಿಟ್ಟು ಕೊಳ್ಳಿ. ಅಲ್ಲೇ ನೆರೆಯ ಪ್ರದೇಶದಲ್ಲಿ ಒಳ್ಳೆಯ ಸೂರ್ಯಾಸ್ತ ಮಾನವನ್ನು ಅನುಭವಿಸುವ ಅವಕಾಶ ದೊರೆಯಬಹುದು. ಅಥವಾ ರಾತ್ರಿ ಹೊತ್ತು ನೀವು ರೂಂ ಮಾಡಿ ಕೊಳ್ಳುವ ಜಾಗದ ಸಮೀಪ ಒಳ್ಳೆಯ ಸೂರ್ಯೋದಯ ಕಾಣಬಹುದು. ಇದನ್ನು ಅರಿತುಕೊಳ್ಳಬೇಕಾದರೆ ಟೂರ್ ಗೈಡ್ ಇದ್ದರೆ ಮಾತ್ರ ಸಾಧ್ಯ. ಜತೆಗೆ ನಿಮ್ಮ ಸಮಯ ವೂ ಉಳಿ ಯುತ್ತದೆ.
ಪ್ರವಾಸದ ಸಂದರ್ಭ ನಿಮ್ಮ ತಂಡದೊಂದಿಗೆ ಮಾತ್ರ ಬೆರೆ ಯಬೇಡಿ. ತಂಡದ ಜತೆ ಸಹ ಯಾತ್ರಿಕರನ್ನು ಮಾತನಾಡಿಸಲು ಮರೆಯದಿರಿ. ಕಾರಣ ಇಷ್ಟೇ. ನೀವು ಇದೇ ಮೊದಲ ಬಾರಿ ಆ ಸ್ಥಳಕ್ಕೆ ಪ್ರಯಾಣಿಸುವುದಾದರೆ, ನಿಮ್ಮ ಸಹ ಯಾತ್ರಿಕ ಈ ಹಿಂದೆ ಹಲವು ಬಾರಿ ಈ ತಾಣವನ್ನು ಪ್ರವೇಶಿಸಿರಬಹುದಾಗಿದೆ. ಇಂತಹ ಸಂದರ್ಭ ನಿಮ್ಮ ಇಬ್ಬರಲ್ಲಿ ಮಾಹಿತಿಯ ವಿನಿಮಯ ಕಾರ್ಯಗಳು ನಡೆಯುತ್ತವೆ. ಇದು ಬೆಳಕಿಗೆ ಬರದೇ ಇರುವ ಬಹಳಷ್ಟು ಸಂಗತಿಗಳನ್ನು ಹೊರಗೆಡವಳು ನೆರವಾಗುತ್ತದೆ.
ಬಹಳಷ್ಟು ಸಂದರ್ಭ ನಾವು ಉದ್ದೇಶಿಸಿರುವ ಸ್ಥಳವನ್ನು ಮಾತ್ರ ನೋಡಿ ಬರುತ್ತೇವೆ. ಇದರಿಂದ ನಮ್ಮ ಯಾತ್ರೆ ಫಲಪ್ರದವಾಗುವುದಿಲ್ಲ. ಬದಲಾಗಿ ಅಲ್ಲಿನ ಮೂಲ ನಿವಾಸಿಗಳನ್ನು ಮಾತನಾಡಿಸಿ. ಇದರಿಂದ ಆ ಸ್ಥಳದ ಇತಿಹಾಸ ಮತ್ತು ಯಾರಿಗೂ ತಿಳಿದಿರದ ಮಾಹಿತಿಗಳು ನಿಮಗೆ ದೊರೆಯುತ್ತವೆ.ಉದಾಹರಣೆಗೆ ನೀವು ಯಾವುದಾದರೂ ಒಂದು ಪೌರಾಣಿಕ ಹಿನ್ನೆಲೆಯುಳ್ಳ ಸ್ಥಳದತ್ತ ತೆರಳಿದ್ದೀರಿ ಎಂದಿಟ್ಟುಕೊಳ್ಳಿ. ಇಂತಹ ಕಡೆಗಳಲ್ಲಿ ಹೆಚ್ಚಾಗಿ ಅಲ್ಲಿನ ಮೇಲ್ಮೆ„ ಇತಿಹಾಸ ಮಾತ್ರ ದೊರೆಯುತ್ತದೆ. ಆದರೆ ಸ್ಥಳೀಯರನ್ನು ಮಾತನಾಡಿಸಿದರೆ ಹೊಸ ಹೊಸ ಸಂಗತಿಗಳನ್ನು ನಿಮಗೆ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ.
ಹೌದು ಇದು ಮುಖ್ಯವಾದುದು. ನಾವು ಯಾವುದಾದರೂ ಒಂದು ಸ್ಥಳದ ಕುರಿತು ತಿಳಿದುಕೊಳ್ಳಬೇಕು ಎಂದೆನಿಸಿದರೆ ನಿಮ್ಮಲ್ಲಿನ ಕಿರು ಪುಸ್ತಕದಲ್ಲಿ ಅದನ್ನು ನೋಟ್ ಮಾಡಿಕೊಳ್ಳಿ. ಇದು ನಿಮಗೆ ಟ್ರಾವೆಲ್ ಬ್ಲಾಗ್‌ಗಳನ್ನು ಬರೆದಿಟ್ಟುಕೊಳ್ಳುವ ಹವ್ಯಾಸ ಇದ್ದರೆ ಅದು ನೆರವಾಗುತ್ತದೆ. ಇದು ನೀವು ಹೋದ ತಾಣದ ಕುರಿತು ಯಾರದರೂ ಮಾಹಿತಿಯನ್ನು ಬಯಸಿದರೆ ಅದರಿಗೆ ನೀಡಲು ನೆರವಾಗುತ್ತದೆ.
ಪ್ರವಾಸವನ್ನು ಅನುಭವಿಸಿಬೇಕಾದರೆ ಒಳ್ಳೆಯ ಬಾಹ್ಯ ಮತ್ತು ಆಂತರಿಕ ವಾತಾವರಣಗಳ ಅಗತ್ಯ ಇದೆ. ಆಂತರಿಕ ವಾತಾವರಣವನ್ನು ನಾವೇ ಸೃಷ್ಟಿಸಿಕೊಳ್ಳಬೇಕಾಗಿದೆ. ಹೊರಗಿನಿಂದ ಬಂದವರು ನಿಮಗೆ ಗೈಡ್ ಮಾಡಬಹುದಷ್ಟೇ. ಸ್ಥಳಗಳಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚು ಇದ್ದರೆ ಕಿರಿಕಿರಿಯಾಗಬಹುದು. ಆದರೆ ಈ ಒಂದು ಕಾರಣಕ್ಕೆ ನಿಮ್ಮ ಮೂಡ್ ಹಾಳು ಮಾಡಿಕೊಳ್ಳಬೇಕಾಗಿಲ್ಲ.
ನಿಮ್ಮ ಪ್ರವಾಸದಲ್ಲಿ ಒಂದು ಅಥವಾ ಎರಡು ಮೀಟಿಂಗ್ ಪಾಯಿಂಟ್ ಇಟ್ಟುಕೊಳ್ಳಿ. ಇದು ಪೀಲ್ಡ್‌ನಲ್ಲಿ ಹೊಸ ಯೋಜನೆ ಹಾಕಿಕೊಳ್ಳಲು ನೆರವಾಗುತ್ತದೆ. ನಿಮ್ಮಲ್ಲಿ ಹೊಸ ಐಡಿಯಾ ಗಳಿದ್ದರೆ ಅದನ್ನು ಹಂಚಿಕೊಳ್ಳುವ ಅವಕಾಶವೂ ನೀಡಿದಂತಾಗುತ್ತದೆ.
ಸಂಭ್ರಮಿಸಿ
ಪ್ರವಾಸದ ಸಂದರ್ಭ ನೀವು ಯಾವುದೇ ಮಿತಿ ಇಲ್ಲದೇ ಸಭ್ಯ ರೀತಿಯಲ್ಲಿ ಅದನ್ನು ಅನುಭವಿಸಿ. ಯಾಕೆಂದರೆ ನಿಮ್ಮ ಎಲ್ಲಾ ಒತ್ತಡಗಳನ್ನು ಬದಿಗಿಟ್ಟು ಎಂಜಾಯ್ ಮಾಡುವ ಉದ್ದೇಶಕ್ಕೆ ತೆರಳಿರುತ್ತೀರಿ, ಅಲ್ಲಿ ನೀವು ಯಾವುದೇ ಬಾಹ್ಯ ಒತ್ತಡಗಳು, ಕಚೇರಿ ಕೆಲಸಗಳ ಕುರಿತು ತಲೆಕೆಡಿಸಿಕೊಳ್ಳುವ ಅಗತ್ಯ ಇಲ್ಲ. ನೀವು ತೆರಳಬೇಕಿರುವ ಜಾಗದಲ್ಲಿ ನೋಡಲು ಹಲವು ತಾಣಗಳು ಇದ್ದರೆ, ಸಮಯಾವಕಾಶದ ಕೊರತೆಯಾದರೆ ರಜೆಯನ್ನು ವಿಸ್ತರಿಸಿಕೊಳ್ಳಲು ಪ್ರಯತ್ನಿಸಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kadaba: ಇದ್ದೂ ಇಲ್ಲವಾದ 108 ಆ್ಯಂಬುಲೆನ್ಸ್ ಸೇವೆ
Karinja: ಅಪಾಯಕಾರಿ ವಿದ್ಯುತ್ ಕಂಬ; ತುಕ್ಕು ಹಿಡಿದ, ಶಕ್ತಿ ಕಳೆದು ಬಾಗಿರುವ ಕಂಬ
ಟಿಬೆಟ್ ನಲ್ಲಿ ಪ್ರಬಲ ಭೂಕಂಪ… ಸಾವಿನ ಸಂಖ್ಯೆ 53ಕ್ಕೆ ಏರಿಕೆ, 60ಕ್ಕೂ ಹೆಚ್ಚು ಮಂದಿ ಗಾಯ
Updated: ಕೆನಡಾ ಮುಂದಿನ ಪ್ರಧಾನಿ ರೇಸ್ ನಲ್ಲಿ ಭಾರತೀಯ ಮೂಲದ ಅನಿತಾ ಸೇರಿ ಹಲವರ ಪೈಪೋಟಿ!
UP: ಪತಿ, ಆರು ಮಕ್ಕಳನ್ನು ಬಿಟ್ಟು ಭಿಕ್ಷುಕನ ಜತೆ ಓಡಿಹೋದ ಮಹಿಳೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.