ಬ್ಯಾಟರಿ ನಿರ್ವಹಣೆ ಹೇಗೆ ?
Team Udayavani, Jul 12, 2019, 5:20 AM IST
ಕಾರಿನ ಬ್ಯಾಟರಿ ಪ್ರಮುಖ ವಸ್ತು. ಕಾರು ಸ್ಟಾರ್ಟ್ ಆಗಬೇಕಾದರೆ, ಸುಸ್ಥಿತಿಯಲ್ಲಿರಬೇಕಾದ್ದು ಅಗತ್ಯ. ಇದರ ನಿರ್ವಹಣೆ ಮಾಡುವುದರಿಂದ ಸ್ಟಾರ್ಟಿಂಗ್ ಸಮಸ್ಯೆ ಇತ್ಯಾದಿಗಳನ್ನು ಬಹಳಷ್ಟು ಕಡಿಮೆಗೊಳಿಸಬಹುದು. ಕಾಲಕಾಲಕ್ಕೆ ನಿರ್ವಹಣೆ ಮಾಡುವುದೇ ಇಲ್ಲಿ ಮುಖ್ಯವಾಗಿದೆ.
ಸಮಸ್ಯೆ ಗೊತ್ತಾಗೋದು ಹೇಗೆ?
ಸಾಮಾನ್ಯವಾಗಿ ಬ್ಯಾಟರಿ ಸಮಸ್ಯೆ ಇದ್ದರೆ, ಎಂಜಿನ್ ಕ್ರ್ಯಾಂಕ್ ಆಗುವುದಕ್ಕೆ ತೊಡಕಾಗುತ್ತದೆ. ವಾಹನದ ಲೈಟ್‌ಗಳು ಉರಿಯದೇ ಇರಬಹುದು ಅಥವಾ ಮಂದವಾಗಿ ಉರಿಯುತ್ತಿರಬಹುದು. ಪ್ರಮುಖವಾಗಿ ಕೀ ತಿರುವಿದ ತತ್‌ಕ್ಷಣ ಮೀಟರ್ ಲೈಟ್‌ಗಳು ಸಣ್ಣಕೆ ಉರಿಯುವುದನ್ನು ಗುರುತಿಸಬಹುದು. ಹಾಗೆಯೇ, ಬ್ಯಾಟರಿಯಲ್ಲಿ ಕಡಿಮೆ ಡಿಸ್ಟಿಲ್ಡ್ ವಾಟರ್ ಇದ್ದರೂ ಚಾರ್ಜ್ ಆಗದೇ ಇರಬಹುದು. ಇದರೊಂದಿಗೆ ಬ್ಯಾಟರಿಗೆ ಜನರೇಟರ್‌ನಿಂದ ಸಂಪರ್ಕ ವ್ಯವಸ್ಥೆಯಲ್ಲಿ ದೋಷದಿಂದಾಗಿ ಬ್ಯಾಟರಿ ಸರಿಯಾಗಿ ಚಾರ್ಜ್ ಆಗದೆಯೇ ಇರಬಹುದು. ಕೆಲವೊಮ್ಮೆ ಬ್ಯಾಟರಿಯಲ್ಲಿನ ದೋಷದಿಂದಾಗಿ ಬ್ಯಾಟರಿ ಕೇಸ್ ದೊಡ್ಡದಾಗುವ ಸಂಭವವೂ ಇದೆ. ಇಂತಹ ಸಂದರ್ಭಗಳಲ್ಲಿ ಬ್ಯಾಟರಿ ಬದಲಾಯಿಸುವುದೇ ಪರಿಹಾರ
ಬ್ಯಾಟರಿ ಕೇಬಲ್ ಶುಚಿಗೊಳಿಸಿ
ಕಾಲಕಾಲಕ್ಕೆ ಬ್ಯಾಟರಿ ಕೇಬಲ್ಗಳನ್ನು ಶುಚಿಗೊಳಿಸುತ್ತಿರಬೇಕು. ಬ್ಯಾಟರಿಗಳ ಟರ್ಮಿನಲ್ಗಳಿಗೆ ಸಂಪರ್ಕ ಹೊಂದಿರುವ ವಯರ್‌ಗಳನ್ನು ತೆಗೆದು ಅವುಗಳ ತುದಿಯನ್ನು ತುಕ್ಕು ನಿರೋಧಕ ಸ್ಪ್ರೇ ಮಾಡಿ ಅಥವಾ ಪೆಟ್ರೋಲ್/ಸೀಮೆ ಎಣ್ಣೆಯಲ್ಲಿ ಶುಚಿಗೊಳಿಸಬೇಕು. ಬಳಿಕ ಪೆಟ್ರೋಲಿಯಂ ಜೆಲ್ಲಿ ಹಾಕಿ ಮೊದಲಿನಂತೆ ಅಳವಡಿಸಬೇಕು.
ಡಿಸ್ಟಿಲ್ಡ್ ವಾಟರ್ ಪರೀಕ್ಷೆ
ಬ್ಯಾಟರಿಯಲ್ಲಿ ನಿಗದಿತ ಪ್ರಮಾಣದಷ್ಟು ಡಿಸ್ಟಿಲ್ಡ್ ವಾಟರ್ ಇರಲೇಬೇಕು. ಇಲ್ಲದಿದ್ದರೆ ಬ್ಯಾಟರಿ ಬಾಳಿಕೆ ಕಡಿಮೆಯಾಗಬಹುದು, ಚಾರ್ಜ್ ಆಗದೇ ಇರುತ್ತದೆ. ಕ್ರಮೇಣ ಬ್ಯಾಟರಿ ಹಾಳಾಗುತ್ತದೆ. ಕನಿಷ್ಠ 3 ತಿಂಗಳಿಗೊಮ್ಮೆ ವಾಹನ ಚಲಾಯಿಸುವವರು ಗಮನ ನೀಡಬೇಕು. ಪ್ರತಿ 6 ಅಥವಾ 12 ತಿಂಗಳಿಗೊಮ್ಮೆ ಅಗತ್ಯವಿದ್ದರೆ ಡಿಸ್ಟಿಲ್ಡ್ ವಾಟರ್ ಹಾಕಬೇಕಾಗುತ್ತದೆ.
ದೀರ್ಘಕಾಲ ಪಾರ್ಕಿಂಗ್
ಬಹುಕಾಲ ಪಾರ್ಕಿಂಗ್ ಮಾಡುತ್ತೀರಾದರೆ, ಬ್ಯಾಟರಿ ಟರ್ಮಿನಲ್ಗಳಿಂದ ವಯರ್ ಅನ್ನು ಕೀಳುವುದು ಉತ್ತಮ. ವೃಥಾ ಬ್ಯಾಟರಿ ಡಿಸ್ಚಾರ್ಜ್ ಆಗುತ್ತದೆ. ಕಾರು ನಿಲ್ಲಿಸಿಯೇ ಇದ್ದರೆ 5 ದಿನಕ್ಕೊಮ್ಮೆಯಾದರೂ ಸ್ಟಾರ್ಟ್ ಮಾಡಿ 4-5 ನಿಮಿಷ ಚಾಲನೆಯಲ್ಲಿಡಿ.
– ಈಶ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ
Karnataka; ರಾಜ್ಯದ ಕಾಡಿಗೆ ಕೊಡಲಿ! ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳ?
Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.