ಬೈಕ್ ಚೈನ್ ನಿರ್ವಹಣೆ ಹೇಗೆ?
Team Udayavani, Jun 29, 2018, 4:19 PM IST
ಬೈಕ್‌ನಲ್ಲಿ ಚೈನ್ ಒಂದು ಪ್ರಮುಖ ಭಾಗ. ಎಂಜಿನ್‌ನ ಶಕ್ತಿಯನ್ನು ಇದು ಚಕ್ರಕ್ಕೆ ವರ್ಗಾಯಿಸುತ್ತದೆ. ಒಂದು ವೇಳೆ ಚೈನ್ ಸರಿಯಾಗಿಲ್ಲ ಎಂದರೆ ಶಕ್ತಿ ವರ್ಗಾವಣೆಯಲ್ಲಿ ಕಡಿಮೆಯಾಗಬಹುದು. ಇದು ಬೈಕ್‌ನ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ. ಚೈನ್‌ನ ಬಿಗಿತ ಸರಿಯಾಗಿದ್ದರೆ ಮಾತ್ರ ಉತ್ತಮ ಸವಾರಿ ಸಾಧ್ಯ. ಸಾಮಾನ್ಯ ಬೈಕ್‌ಗಳಲ್ಲಿ ಚೈನ್‌ಗಳಿದ್ದು, ಇನ್ನು ಕೆಲವು ಬೈಕ್‌ಗಳಲ್ಲಿ ಬೆಲ್ಟ್ ಡ್ರೈವ್ ಗಳಿರುತ್ತವೆ. ಇನ್ನು ಕೆಲ ದುಬಾರಿ ಬೈಕ್‌ಗಳಲ್ಲಿ ಕಾರಿನ ಮಾದರಿ ಶಾಫ್ಟು ಗಳು ಇರುವುದೂ ಇವೆ.
ಚೈನ್ ಯಾಕೆ ನಿರ್ವಹಣೆ ಮಾಡಬೇಕು?
ಭಾರತದಂತಹ ದೇಶದಲ್ಲಿ ಹವಾಮಾನ ಬದಲಾವಣೆಯಾಗುತ್ತಲೇ ಇರುತ್ತದೆ. ಜತೆಗೆ ಎಲ್ಲ ಕಡೆಯೂ ರಸ್ತೆಯ ಸ್ಥಿತಿ ಚೆನ್ನಾಗಿ ಇರುವುದಿಲ್ಲ. ಡಾಮಾರು/ ಮಣ್ಣಿನ ರಸ್ತೆ ಇದ್ದು, ಇಂತಹ ಕಡೆಗಳಲ್ಲಿ ಚೈನ್ ಬಿಗಿತ ಬೇಗನೆ ಕಳೆದುಕೊಳ್ಳುತ್ತದೆ. ಆದ್ದರಿಂದ ನಿಯಮಿತವಾಗಿ ಇದರ ನಿರ್ವಹಣೆ ಮಾಡಲೇ ಬೇಕು.
ಯಾವಾಗ ನಿರ್ವಹಣೆ ಮಾಡಬೇಕು?
ಸುಮಾರು 500 ರಿಂದ 800 ಕಿ.ಮೀ. ಅವಧಿಗೆ ಚೈನ್ ಲ್ಯೂಬ್ರಿಕೇಶನ್ ಮಾಡುತ್ತಿದ್ದರೆ ಉತ್ತಮ. ಚೈನ್‌ನ ಬಾಳಿಕೆಯೂ ಉತ್ತಮವಾಗಿರುತ್ತದೆ. ಚೈನ್‌ಗೆ ಆಯಿಲ್ ಸಿಂಪಡಿಸುವ ಬದಲು ಅದಕ್ಕೆಂದೇ ಸಿಗುವ ಸ್ಪ್ರೇ ಗಳನ್ನು ಬಳಸಿದರೆ, ಬಾಳಿಕೆಯೂ, ಸವಾರಿಯ ಖುಷಿಯೂ ಹೆಚ್ಚಿರುತ್ತದೆ. ಸಾಮಾನ್ಯವಾಗಿ ನಮ್ಮ ಚಾಲನಾ ಅಭ್ಯಾಸ, ಯಾವ ರೀತಿಯ ರಸ್ತೆ ಇದೆ? ಕರಾವಳಿ ಭಾಗದಲ್ಲಿದ್ದೇವೆಯೇ? ಎಂಬುದರ ಮೇಲೆ ಚೈನ್ ನಿರ್ವಹಣೆ ನಿರ್ಧಾರವಾಗುತ್ತದೆ. ಕರಾವಳಿ ಭಾಗದಲ್ಲಿ ಸಮುದ್ರದ ಉಪ್ಪು ನೀರಿನ ಅಂಶದ ಕಾರಣದಿಂದ ಚೈನ್ ಬೇಗನೆ ಸವೆತ, ಬಿಗಿತ ಕಳೆದುಕೊಳ್ಳುವುದು ಸಾಮಾನ್ಯ. ಆದ್ದರಿಂದ ಇಲ್ಲಿ ಸರಿಯಾಗಿ ನಿರ್ವಹಣೆ, ಬಿಗಿತದ ಪರಿಶೀಲನೆ ಮಾಡಬೇಕಾಗುತ್ತದೆ.
ಸಾಂಪ್ರಾಯಿಕ ಮತ್ತು ಒ ರಿಂಗ್ ಚೈನ್
ಚೈನ್‌ಗಳಲ್ಲಿ ಎರಡು ರೀತಿಗಳಿವೆ. ಚೈನ್ ಒಳಗಿನ ಜೋಡಣಾ ಭಾಗದಲ್ಲಿ ಇದು ವ್ಯತ್ಯಾಸ ಹೊಂದಿದೆ. ಒ ರಿಂಗ್ ಚೈನ್‌ಗಳಿಗೆ ಚೈನ್ ಗಾರ್ಡ್ ಇರದೇ ಎದುರಿಗೆ ಕಾಣಿಸುವಂತೆ ಇರುತ್ತದೆ. ಸಾಂಪ್ರದಾಯಿಕ ಚೈನ್‌ಗಳಿಗೆ ಚೈನ್ ಗಾರ್ಡ್ ಇದ್ದು, ಇದಕ್ಕೆ ಹೆಚ್ಚಿನ ಮಣ್ಣು, ಕೆಸರು ಇತ್ಯಾದಿಗಳು ಮೆತ್ತಿಕೊಳ್ಳದಂತೆ ಕಾಪಾಡುವುದು ಅಗತ್ಯವಾಗುತ್ತದೆ. ಒ ರಿಂಗ್ ಚೈನ್‌ಗಳನ್ನು ತುಸು ಅಧಿಕ ಸಾಮರ್ಥ್ಯದ ಬೈಕಗಳಲ್ಲಿ ಬಳಸುವುದು ಸಾಮಾನ್ಯ.
ಚೈನ್ ಕ್ಲೀನಿಂಗ್ ಹೇಗೆ?
ಚೈನ್ ಅನ್ನು ಡೀಸೆಲ್‌ನಲ್ಲಿ ಸ್ವಲ್ಪ ಹೊತ್ತು ಅದ್ದಿ ಇಟ್ಟು ಬಳಿಕ ಅದರ ಕೊಳೆಯನ್ನು ತೆಗೆಯಬೇಕು. ನೀರಿನಿಂದ ತೊಳೆದ ಬಳಿಕ ನೀರಿನ ಅಂಶವನ್ನು ಬಟ್ಟೆಯಿಂದ ಒರೆಸಿ, ಒಣಗಿದ ಬಳಿಕ ಆಯಿಲ್ ಅಥವಾ ಸ್ಪ್ರೇ ಮಾಡಬಹುದು. ಅಥವಾ ಕ್ಲೀನಿಂಗ್ ಸ್ಪ್ರೇ ಮೂಲಕವೂ ಕೊಳೆ ತೆಗೆಯಬಹುದು. ಸ್ಪ್ರೇ ಅಥವಾ ಆಯಿಲ್ ಸಮಪ್ರಮಾಣದಲ್ಲಿ ಚೈನ್ ಸುತ್ತಲೂ ಹಾಕಬೇಕು.
ಲ್ಯೂಬ್ರಿಕೆಂಟ್ ಆಯ್ಕೆ
ನಾನ್‌ಸ್ಟಿಕಿ ಲ್ಯೂಬ್ರಿಕೆಂಟ್‌ಗಳ ಆಯ್ಕೆಯೇ ಉತ್ತಮ ಇವುಗಳು ಯಾವುದೇ ಧೂಳು, ಗ್ರೀಸ್ ಇತ್ಯಾದಿಗಳನ್ನು ಚೈನ್‌ನಲ್ಲಿ ಇರಗೊಡುವುದಿಲ್ಲ.
ಚೈನ್ ಬಿಗಿತ ಪರಿಶೀಲನೆ ಹೇಗೆ?
ಚೈನ್ ಸ್ಲಾಕ್‌ನೆಸ್ ಮತ್ತು ಟೆನ್ಷ್ ನ್ ಎಂದು ಇದನ್ನು ಕರೆಯುತ್ತಾರೆ. ಇದಕ್ಕಾಗಿ ಬೈಕ್ ಅನ್ನು ಮೇನ್ ಸ್ಟಾಂಡ್ ಹಾಕಿ ನಿಲ್ಲಿಸಿ ಚಕ್ರವವನ್ನು ಹಿಂದೆ, ಮುಂದೆ ತಿರುಗಿಸಬೇಕು. ಈ ವೇಳೆ ಚೈನ್ ಹೆಚ್ಚು ಬಿಗಿ ಇರದೇ, ಹಾಗೆಂದು ಹೆಚ್ಚು ಸಡಿಲವಾಗಿಯೂ ಇರಬಾರದು. ಚೈನ್‌ನ ಎಲ್ಲ ಬದಿಯೂ ಒಂದೇ ರೀತಿ ಬಿಗಿತ ಹೊಂದದಿರಬೇಕು. ಈ ಬಿಗಿತ ಪರಿಶೀಲನೆಗೆ ಚೈನ್ ಗಾರ್ಡ್‌ನಲ್ಲಿ ಒಂದು ಮಟ್ಟವಿದ್ದು, ಅದರ ಒಳಗೆ ಚೈನ್ ನಿಂತಿದಿಯೇ ಎಂದು ಪರಿಶೀಲಿಸಬಹುದು.
ಈಶ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
CEN Police Station: ದಕ್ಷಿಣ ಕನ್ನಡ ಜಿಲ್ಲಾ ಸೆನ್ ಪೊಲೀಸ್ ಠಾಣೆ ಬಂಟ್ವಾಳಕ್ಕೆ
ಜಂಟಿ ಸಂಸದೀಯ ಸಮಿತಿ ತನಿಖಾಸ್ತ್ರ!; ಇದು ಹೇಗೆ ಕಾರ್ಯನಿರ್ವಹಿಸುತ್ತದೆ? ಅಧಿಕಾರವೇನು?
Japan rivals: ನಿಸ್ಸಾನ್-ಹೋಂಡಾ ವಿಲೀನ: ಇನ್ನು ವಿಶ್ವದ ನಂ.3 ಕಂಪೆನಿ!
Legislative House: ಶಾಸನಸಭೆಯೊಳಗೆ ಪೊಲೀಸ್ ಪ್ರವೇಶಕ್ಕಿಲ್ಲ ಅವಕಾಶ: ತಜ್ಞರು
Christmas; ಪ್ರಭು ಕ್ರಿಸ್ತನ ಸ್ವಾಗತಕ್ಕೆ ಕರಾವಳಿ ಸಡಗರದಿಂದ ಸಜ್ಜು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.