ಮಳೆಯಿಂದ ರಕ್ಷಣೆ ಮಾಡುವುದು ಹೇಗೆ? 


Team Udayavani, Jul 13, 2018, 3:00 PM IST

13-july-13.jpg

ಕರಾವಳಿಯಲ್ಲಂತೂ ಧಾರಾಕಾರ ಮಳೆ ಸುರೀತಿದೆ. ಕಾರು, ಬೈಕ್‌ ಎಲ್ಲ ತೊಯ್ದು ತೊಪ್ಪೆಯಾಗಿದೆ. ತುಕ್ಕು ಬೇರೆ ಹಿಡೀತಿದೆ, ಎಲೆಕ್ಟ್ರಿಕಲ್‌ ಬಿಡಿ ಭಾಗಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎನ್ನುವುದು ಸಮಸ್ಯೆ. ಇಂತಹ ಸಮಸ್ಯೆಗಳಿಗೆ ಪರಿಹಾರ ಏನು ಎನ್ನುವುದಕ್ಕೆ ಉತ್ತರ ಇಲ್ಲಿದೆ.

ಆ್ಯಂಟಿ ರಸ್ಟ್‌ ಕೋಟಿಂಗ್‌ ಕಾರುಗಳಿಗೆ: 
ಕರಾವಳಿಯಲ್ಲಿ ತುಕ್ಕು ಹಿಡಿಯುವ ಸಮಸ್ಯೆ ಕಾರುಗಳಲ್ಲಿ ಸಾಮಾನ್ಯ. ಇದಕ್ಕಾಗಿ ಕಾರುಗಳ ಅಡಿ ಭಾಗಕ್ಕೆ ಆ್ಯಂಟಿ ರಸ್ಟ್‌ ಕೋಟಿಂಗ್‌ ಕೊಡಬೇಕಾದ್ದು ಅಗತ್ಯ ಇದಕ್ಕಾಗಿ ಸುಮಾರು 3 ಸಾವಿರ ರೂ. ವೆಚ್ಚವಾಗುತ್ತದೆ. ಕಾರನ್ನು ತೊಳೆದು ಅಡಿಭಾಗ ಸಂಪೂರ್ಣ ಒಣಗಿದ ಬಳಿಕ ಅದಕ್ಕೆ ತುಕ್ಕು ನಿರೋಧಕ ವ್ಯವಸ್ಥೆಯನ್ನು ಸ್ಪ್ರೇ  ಮಾಡಲಾಗುತ್ತದೆ. ಇದರ ವಾರೆಂಟಿ ಸುಮಾರು 5 ವರ್ಷದವರೆಗೆ ನೀಡುತ್ತಾರೆ. ಇದನ್ನು ಮಾಡುವುದರಿಂದ ಬೇಗನೆ ಕಾರುಗಳಿಗೆ ತುಕ್ಕು ಹಿಡಿಯುವುದಿಲ್ಲ. ಕಾರು ಬಾಳಿಕೆಗೆ ಉತ್ತಮ. ಇದರೊಂದಿಗೆ ಕಾರುಗಳ ಒಳಭಾಗದಲ್ಲಿ ವಿನಾಯಿಲ್‌ ಮ್ಯಾಟ್‌ ಅನ್ನು ಅಳವಡಿಸಬೇಕು. ಇದರಿಂದ ಒಳಗೆ ನೀರು ಬಿದ್ದರೆ ಅದರಿಂದ
ಕಾರಿನ ತಳಭಾಗ ಹಾಳಾಗುವುದೂ ತಪ್ಪುತ್ತದೆ. ಜತೆಗೆ ಬಾಡಿಗೆ ವಾಕ್ಸಿನೇಷನ್‌ ಹಾಕಿದರೆ, ಪೈಂಟ್‌ ಉತ್ತಮವಾಗಿದ್ದು, ಮಣ್ಣು, ಮರಳು ಹಿಡಿಯುವುದು ತಪ್ಪುತ್ತದೆ.

ಬೈಕ್‌ಗಳಿಗೆ
ಬೈಕ್‌ಗಳಿಗೂ ಆ್ಯಂಟಿ ರಸ್ಟ್‌ ಕೋಟಿಂಗ್‌ ಲಭ್ಯವಿದೆ. ಆದರೆ ಬೈಕ್‌ಗಳಲ್ಲಿ ಸ್ಟೀಲ್‌ (ಹೊಳೆಯುವ) ಭಾಗಗಳು ಹೆಚ್ಚಿದ್ದರೆ ಅದಕ್ಕೊಂದು ಸಮಸ್ಯೆಯಿದೆ. ಮಳೆಗಾಲದಲ್ಲಿ ಕೊಟ್ಟ ಕೋಟಿಂಗ್‌ ಸುಮಾರು ನಾಲ್ಕಾರು ತಿಂಗಳ ಕಾಲ ಬರಬಹುದು. ಆದರೆ ಇದರಿಂದ ಹೊಳೆಯುವ ಭಾಗಗಳು ಕುಂದುತ್ತವೆ. ಇದಕ್ಕಾಗಿ ಆ್ಯಂಟಿ ರೆಸ್ಟ್‌ ಕೋಟಿಂಗ್‌ ಹೊರತಾಗಿ ಗ್ರೀಸ್‌ ಮತ್ತು ಆಯಿಲ್‌ ಅನ್ನು ಹಚ್ಚಬೇಕು. ಇದರ ಪ್ರಮಾಣ ಶೇ.85ರಷ್ಟು ಗ್ರೀಸ್‌ ಮತ್ತು ಶೇ.15ರಷ್ಟು ಆಯಿಲ್‌ ಇದ್ದು ಚೆನ್ನಾಗಿ ಮಿಕ್ಸ್‌ ಮಾಡಿ ಸವರಬಹುದು.

ಎಲೆಕ್ಟ್ರಿಕಲ್‌ ಸುರಕ್ಷತೆ
ಕಾರು ಅಥವಾ ಬೈಕ್‌ ಆಗಲಿ, ಅದರ ಎಲೆಕ್ಟ್ರಿಕಲ್‌ ಬಿಡಿಭಾಗಗಳ ಸುರಕ್ಷತೆ ಅಗತ್ಯ. ಆದ್ದರಿಂದ ಎಲೆಕ್ಟ್ರಿಕಲ್‌ ಬಿಡಿಭಾಗಗಳಿಗೆ ನೀರು ಹೋಗುತ್ತಿದೆಯೇ? ನೀರು ಅದರ ಮೇಲೆ ಬೀಳುತ್ತದೆಯೇ ಎಂದು ಪರಿಶೀಲಿಸಿ. ಒಂದು ವೇಳೆ ಕಾರಿನಲ್ಲಿ ಬೋನೆಟ್‌ ಒಳಗಡೆ ನೀರು ಹೋಗುತ್ತದೆ ಎಂದಾದರೆ ಈ ಭಾಗಕ್ಕೆ ಒಳಭಾಗದಿಂದ ಬೀಡಿಂಗ್‌ ಅಳವಡಿಸುವುದು ಉತ್ತಮ ಹಾಗೆಯೇ ಬ್ಯಾಟರಿ ಲೆಡ್‌ಗಳಿಗೆ ತುಕ್ಕು ನಿರೋಧಕವನ್ನು ಸ್ಪ್ರೇ ಮಾಡುವುದು ಉತ್ತಮ ಬೈಕ್‌ ಗಳಲ್ಲೂ ಸೀಟಿನ ತಳಭಾಗ ನೀರು ಹೋಗುತ್ತದೆಯೇ ಎಂದು ಗಮನಿಸಬೇಕು. ಟ್ಯಾಂಕ್‌ನ ತೂತಿನಲ್ಲೂ ನೀರು ಹೋಗುವ ಅಪಾಯವಿರುತ್ತದೆ. ಬ್ಯಾಟರಿ, ರಿಲೇ ಭಾಗಕ್ಕೆ ನೀರು ಹೋದರೆ ನಿಮ್ಮ ವಾಹನ ಚಾಲೂ ಆಗಲಾರದು. ಇದಕ್ಕಾಗಿ ಸೂಕ್ತವಾಗಿ ಕವರ್‌ ಮಾಡಬೇಕು. ವಯರ್‌ ಭಾಗಕ್ಕೆ ಇನ್ಸುಲೇಷನ್‌ ಟೇಪ್‌ ಹಾಕಿ ಸೂಕ್ತವಾಗಿರಿಸಬಹುದು. ಸ್ವಿಚ್‌ಗಳಿಗೆ ಅಂಗಡಿಗಳಲ್ಲಿ ಕವರ್‌ ಲಭ್ಯವಿದ್ದು ಅವುಗಳನ್ನು ಅಳವಡಿಸಬೇಕು.

ಪಾರ್ಕಿಂಗ್‌
ಸುದೀರ್ಘ‌ ಕಾಲದವರೆಗೆ ವಾಹನವನ್ನು ಮಳೆಯಲ್ಲಿ ತೊಯ್ಯುವಂತೆ ಮಾಡಬೇಡಿ. ಇದರಿಂದ ಸ್ಟಾರ್ಟಿಂಗ್‌ ಸಮಸ್ಯೆ/ ನೀರು ಹೋಗುವ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಷೆಡ್‌ ವ್ಯವಸ್ಥೆ ಇದ್ದರೆ ಅದರೊಳಗೆ ನಿಲ್ಲಿಸುವ ವ್ಯವಸ್ಥೆ ಮಾಡಿ. ಅಥವಾ ವಾಹನಗಳಿಗೆ ಕವರ್‌ ಆದರೂ ಅಳವಡಿಸಿ. ಇದರಿಂದ ವಾಹನ ಸುಸ್ಥಿತಿಯಲ್ಲಿರಲು ನೆರವಾಗುತ್ತದೆ. 

 ಈಶ 

ಟಾಪ್ ನ್ಯೂಸ್

Charmady Ghat: ಬಿದಿರುತಳ ಅರಣ್ಯದಲ್ಲಿ ಕಾಡ್ಗಿಚ್ಚು

Charmady Ghat: ಬಿದಿರುತಳ ಅರಣ್ಯದಲ್ಲಿ ಕಾಡ್ಗಿಚ್ಚು

1-eewq

ತುಬಚಿ- ಬಬಲೇಶ್ವರ ಏತ ನೀರಾವರಿ: 3,048 ಎಕರೆ ಸ್ವಾಧೀನ, ಹಣ ಬಿಡುಗಡೆಗೆ ಎಂ.ಬಿ.ಪಾಟೀಲ ಸೂಚನೆ

1-5555

Vijayapura; ಕಾರ್ಮಿಕರ ಕೂಡಿ ಹಾಕಿ ರಾಕ್ಷಸಿ ಕೃತ್ಯ: ಎಲ್ಲ 5 ಆರೋಪಿಗಳ ಬಂಧನ

Tarikere: ತಂದೆ ಸಾವಿನ ವಿಷಯ ಗೊತ್ತಿಲ್ಲದೆ ಹಸೆಮಣೆ ಏರಿದ ಮಗಳು!

Tarikere: ತಂದೆ ಸಾವಿನ ವಿಷಯ ಗೊತ್ತಿಲ್ಲದೆ ಹಸೆಮಣೆ ಏರಿದ ಮಗಳು!

renukaacharya

BJP Rift; ಯತ್ನಾಳ್ ಒಬ್ಬ 420, ಗೋಮುಖ ವ್ಯಾಘ್ರ: ರೇಣುಕಾಚಾರ್ಯ

1-jan-26

R-Day parade; ಗಣರಾಜ್ಯೋತ್ಸವ ಪರೇಡ್‌ನಲ್ಲಿ 5,000 ಕ್ಕೂ ಹೆಚ್ಚು ಕಲಾವಿದರ ತಂಡಗಳು

1-sp

Farmers; ಕಬ್ಬು ಹಾನಿಗೆ ಪರಿಹಾರ ನಿಧಿ,ತೊಗರಿಗೆ ಪ್ರೋತ್ಸಾಹ ಧನ: ಸಚಿವ ಶಿವಾನಂದ ಪಾಟೀಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

|ಹೂವಿನ ತೋಟದಲ್ಲಿ ಅರಳಿದೆ ರಾಮಾಯಣ ಕಥನ

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

ಹೊಸ ಸೇರ್ಪಡೆ

2

Udupi: ವೇಶ್ಯಾವಾಟಿಕೆ; ಓರ್ವನ ಬಂಧನ

Charmady Ghat: ಬಿದಿರುತಳ ಅರಣ್ಯದಲ್ಲಿ ಕಾಡ್ಗಿಚ್ಚು

Charmady Ghat: ಬಿದಿರುತಳ ಅರಣ್ಯದಲ್ಲಿ ಕಾಡ್ಗಿಚ್ಚು

POlice

Puttur: ಅನಾಥ ಸ್ಥಿತಿಯಲ್ಲಿ ಎರಡು ಬೈಕ್‌; ವಶಕ್ಕೆ ಪಡೆದುಕೊಂಡ ಪೊಲೀಸರು

1-eewq

ತುಬಚಿ- ಬಬಲೇಶ್ವರ ಏತ ನೀರಾವರಿ: 3,048 ಎಕರೆ ಸ್ವಾಧೀನ, ಹಣ ಬಿಡುಗಡೆಗೆ ಎಂ.ಬಿ.ಪಾಟೀಲ ಸೂಚನೆ

1-5555

Vijayapura; ಕಾರ್ಮಿಕರ ಕೂಡಿ ಹಾಕಿ ರಾಕ್ಷಸಿ ಕೃತ್ಯ: ಎಲ್ಲ 5 ಆರೋಪಿಗಳ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.