ಬೈಕ್ ಟ್ಯಾಂಕ್ ತುಕ್ಕು ತೆಗೆಯುವುದು ಹೇಗೆ?
Team Udayavani, Feb 15, 2019, 9:21 AM IST
ಬೈಕ್ ಸ್ಟಾರ್ಟ್ ಆಗುತ್ತಿಲ್ಲ, ಭಾರೀ ಹೊಗೆ ಬರುತ್ತಿದೆ. ಆಗಾಗ್ಗೆ ಜರ್ಕ್ ಕೂಡ ಇದೆ ಇತ್ಯಾದಿ ಸಮಸ್ಯೆಗಳಿದ್ದರೆ ನಿಮ್ಮ ಬೈಕ್‌ನ ಪೆಟ್ರೋಲ್ ಟ್ಯಾಂಕ್ ಸಮಸ್ಯೆ ಕೂಡ ಇದ್ದಿರಬಹುದು. ಪೆಟ್ರೋಲ್ ಟ್ಯಾಂಕ್‌ನಲ್ಲಿ ತುಕ್ಕು ಹಿಡಿದಿರುವುದು ಅಥವಾ ಪೆಟ್ರೋಲ್‌ನಲ್ಲಿ ನೀರು ಸೇರಿಕೊಂಡು ಈ ರೀತಿಯ ಸಮಸ್ಯೆಗಳು ಶುರುವಾಗುತ್ತವೆ. ಇದಕ್ಕೇನು ಪರಿಹಾರ ನೋಡೋಣ ಬನ್ನಿ.
ಪೆಟ್ರೋಲ್ ಟ್ಯಾಂಕ್‌ನಲ್ಲಿ ನೀರು
ಪೆಟ್ರೋಲ್ ಟ್ಯಾಂಕ್‌ನಲ್ಲಿ ನೀರು ಸೇರಲು ಎರಡು ಕಾರಣಗಳಿವೆ. ಒಂದನೆಯದು ಪೆಟ್ರೋಲ್‌ನಲ್ಲಿ ಕಲಬೆರಕೆ ಇದ್ದರೆ ಈ ಸಮಸ್ಯೆ ಇರುತ್ತದೆ. ಎರಡನೆಯದು ಮಳೆಗಾಲದಲ್ಲಿ ಪೆಟ್ರೋಲ್ ಟ್ಯಾಂಕ್‌ನ ಮುಚ್ಚಳದಲ್ಲಿ ಆಗುವ ಸೋರಿಕೆ/ ಮುಚ್ಚಳದ ಮೇಲಿರುವ ರಬ್ಬರ್ ಸೀಲ್ ಹಾಳಾಗಿರುವುದು, ಅಥವಾ ಮುಚ್ಚಳದ ಬದಿಯಲ್ಲಿ ನೀರು ಸೋರುವುದು ಇತ್ಯಾದಿ ಕಾರಣಗಳಿಂದಲೂ ಟ್ಯಾಂಕ್‌ನಲ್ಲಿ ನೀರು ತುಂಬಬಹುದು. ಇದರಿಂದ ನೀರು ಕೆಳಭಾಗದಲ್ಲಿದ್ದು, ಪೆಟ್ರೋಲ್ ಮೇಲೆ ನಿಲ್ಲುವಂತೆ ಮಾಡುತ್ತದೆ. ಅಲ್ಪ ನೀರಿದ್ದರೂ ಬೈಕ್ ಸ್ಟಾರ್ಟಿಂಗ್ ಸಮಸ್ಯೆ, ಹೊಗೆ ಇತ್ಯಾದಿ ಸಮಸ್ಯೆಗಳಿಗೆ ಕಾರಣವಾಗಬಹುದು. ಟ್ಯಾಂಕ್‌ನಲ್ಲಿ ನೀರಿದ್ದರೆ ಕಾರ್ಬ್ಯುಯರೇಟರ್‌ಗೆ ನೇರವಾಗಿ ಹಾನಿಯಾಗುತ್ತದೆ.
ಟ್ಯಾಂಕ್‌ಗೆ ತುಕ್ಕು
ಪೆಟ್ರೋಲ್ ಟ್ಯಾಂಕ್ ಒಳಭಾಗದಲ್ಲೂ ತುಕ್ಕು ಹಿಡಿಯುತ್ತದೆ. ಹೆಚ್ಚಾಗಿ ಕರಾವಳಿ ಪ್ರದೇಶಗಳಲ್ಲಿ, ಅತಿ ಮಳೆ ಬೀಳುವ ಪ್ರದೇಶಗಳಲ್ಲಿ ಇದು ಸಾಮಾನ್ಯವಾಗಿರುತ್ತದೆ. ತುಕ್ಕು ಹಿಡಿದದ್ದರಿಂದ ಅದರ ಪುಡಿ ಬಿದ್ದು, ಟ್ಯಾಂಕ್ ಬ್ಲಾಕ್ ಆಗುವುದು ಅಥವಾ ಪೆಟ್ರೋಲ್‌ನೊಂದಿಗೆ ಅದರ ಕಣಗಳು ಸೇರಿ ಕಾರ್ಬ್ಯುರೇಟರ್‌ಗೆ ಹಾನಿ ಮಾಡುತ್ತವೆ. ಜತೆಗೆ ಸ್ಟಾರ್ಟಿಂಗ್ ಸಮಸ್ಯೆಗೆ ಕಾರಣವಾಗುತ್ತದೆ.
ಏನು ಮಾಡಬೇಕು?
ಡೀಸೆಲ್‌ನಲ್ಲಿ ತೊಳೆಯುವುದು: ಟ್ಯಾಂಕ್‌ನಲ್ಲಿ ನೀರು ತುಂಬಿ ಸಮಸ್ಯೆಯಾಗಿದ್ದರೆ, ಟ್ಯಾಂಕ್ ಸಂಪೂರ್ಣ ತೆಗೆದು ಅದರಲ್ಲಿರುವ
ಪೆಟ್ರೋಲ್-ನೀರಿನಂಶ ತೆಗೆದು, ಡೀಸೆಲ್ ಹಾಕಿ ತೊಳೆಯಬೇಕು. ಇದರೊಂದಿಗೆ ಕಾರ್ಬ್ಯುಯರೇಟರ್, ಸ್ಪಾರ್ಕ್ ಪ್ಲಗ್ ಕೂಡ
ಶುಚಿಗೊಳಿಸಬೇಕು.
ತುಕ್ಕು ತೆಗೆಯುವ ವಿಧಾನ
ವಿನೆಗರ್, ಉಪ್ಪು ಹಾಕಿ ನಾಲ್ಕಾರು ದಿನಗಳ ಕಾಲ ಇಟ್ಟು ನಿತ್ಯವೂ ಅದನ್ನು ತೊಳೆಯುತ್ತಿರುವುದು, ಸೀಮೆಎಣ್ಣೆಯಲ್ಲಿ/ಡೀಸೆಲ್ ನಲ್ಲಿ ತೊಳೆಯುವುದು, ರಾಸಾಯನಿಕಗಳನ್ನು ಹಾಕಿ ತೊಳೆಯುವ ವಿಧಾನಗಳಿವೆ. ಸಂಪೂರ್ಣ ತುಕ್ಕು ಹಿಡಿದು ಹಾಳಾಗಿದ್ದರೆ ಕೆಲವೊಮ್ಮೆ ಇಡೀ ಟ್ಯಾಂಕ್ ಹೊಸತು ಹಾಕಬೇಕಾಗಬಹುದು.
ಮುನ್ನೆಚ್ಚರಿಕೆ ಹೇಗೆ?
ಸೀಲೆಂಟ್: ಟ್ಯಾಂಕ್‌ಗೆ ತುಕ್ಕು ಹಿಡಿಯದಂತೆ ಟ್ಯಾಂಕ್ ಸೀಲೆಂಟ್‌ಗಳನ್ನು ಹಾಕಬಹುದು. ಇದು ಸಿಲ್ವರ್ ಬಣ್ಣದ್ದಾಗಿದ್ದು, ತುಕ್ಕು ಹಿಡಿಯುವುದನ್ನು ತಪ್ಪಿಸುತ್ತದೆ. ಈಗಿನ ಹಲವು ಬೈಕ್‌ಗಳಲ್ಲಿ ಕಂಪನೆನಿಯವರೇ ಇಂತಹ ಸೀಲೆಂಟ್‌ಗಳನ್ನು ಹಾಕಿರುತ್ತಾರೆ. ಇಂತಹ ಸೀಲೆಂಟ್ ಇದ್ದರೂ ಎರಡು ವರ್ಷಕ್ಕೊಮ್ಮೆಯಾದರೂ ಟ್ಯಾಂಕ್ ಕ್ಲೀನ್ ಮಾಡುವುದು ಉತ್ತಮ. ನೀರಿನಂಶ ಗೊತ್ತಿಲ್ಲದೇ
ಸೇರಿಕೊಳ್ಳುವುದರಿಂದ ಇದು ಅಗತ್ಯ.
ಫ್ಯುಯೆಲ್ ಸಿಸ್ಟಂ ಕ್ಲೀನರ್ ಬಳಕೆ
ಮಾರುಕಟ್ಟೆಯಲ್ಲಿ ಫುಯೆಲ್ ಸಿಸ್ಟಂ ಶುಚಿಗೊಳಿಸುವ ಕ್ಲೀನರ್‌ಗಳು ಲಭ್ಯ. ಟ್ಯಾಂಕ್ ಗೆ ಫುಲ್ ಪೆಟ್ರೋಲ್ ತುಂಬಿಸಿ ಬಳಿಕ ನಿಗದಿತ ಪ್ರಮಾಣದಲ್ಲಿ ಹಾಕಲಾಗುತ್ತದೆ. ಇದರಿಂದ ಟ್ಯಾಂಕ್, ಕಾರ್ಬ್ಯುರೇಟರ್ ಅಥವಾ ಫ್ಯುಯೆಲ್ ಇಂಜೆಕ್ಷನ್ ವ್ಯವಸ್ಥೆ ಶುಚಿಯಾಗುತ್ತದೆ.
ಫುಲ್‌ಟ್ಯಾಂಕ್ ಪದ್ಧತಿ
ಬೈಕ್‌ಗೆ ವರ್ಷಕ್ಕೆ ನಾಲ್ಕು ಬಾರಿಯಾದರೂ ಫುಲ್ ಟ್ಯಾಂಕ್ ಪೆಟ್ರೋಲ್ ಹಾಕಿಸುವುದರಿಂದ ಟ್ಯಾಂಕ್‌ನ ಭಾಗಗಳಲ್ಲಿ ತುಕ್ಕು ಹಿಡಿಯುವುದು ತಪ್ಪುತ್ತದೆ.
ಈಶ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.