ಕಾರ್ಬ್ಯುರೇಟರ್ ಟ್ಯೂನಿಂಗ್ ಹೇಗೆ?
Team Udayavani, Mar 15, 2019, 7:54 AM IST
ಕಾರು ಕೋಲ್ಡ್, ಸ್ಟಾರ್ಟ್ ಪ್ರಾಬ್ಲಿಂ, ಎಕ್ಸಲರೇಷನ್ ಮಧ್ಯೆ ಬಿಕ್ಕಳಿಕೆ, ಪಿಕಪ್ ಇಲ್ಲ, ಮೃದುವಾದ ಎಕ್ಸಲರೇಷನ್ ಇಲ್ಲ ಇತ್ಯಾದಿ ಸಮಸ್ಯೆಗಳು ನಿಮ್ಮ ದ್ವಿಚಕ್ರ ವಾಹನದಲ್ಲಿದೆಯೇ? ಹಾಗಿದ್ದರೆ ಅದು ಕಾರ್ಬ್ಯುರೇಟರ್‌ನದ್ದೇ ಸಮಸ್ಯೆ. ಅರ್ಥಾತ್ ಟ್ಯೂನಿಂಗ್ ಸಮಸ್ಯೆ. ಕಾರ್ಬ್ಯುರೇಟರ್ ಇಂಧನ ಮತ್ತು ಗಾಳಿಯನ್ನು ಸರಿಯಾದ ಪ್ರಮಾಣದ ಮಿಕ್ಸ್ ಮಾಡಿ ದಹಿಸಲು ನೀಡುತ್ತದೆ. ಇದಕ್ಕೆ ಪರಿಣಾಮಕಾರಿ ಟ್ಯೂನಿಂಗ್ ಬೇಕು. ಇಲ್ಲದಿದ್ದರೆ ಎಂಜಿನ್ ಸಾಕಷ್ಟು ಪವರ್ ನೀಡುವುದಿಲ್ಲ. ಆದ್ದರಿಂದ ಕಾರ್ಬ್ಯುರೇಟರ್ ಟ್ಯೂನಿಂಗ್ ಇದಕ್ಕೆ ಪರಿಹಾರವಾಗಬಲ್ಲದು. ಟ್ಯೂನಿಂಗ್‌ಗೆ ತುಸು ಪರಿಣತಿ ಬೇಕು. ಒಂದು ಬಾರಿ ಚೆನ್ನಾಗಿ ಗಮನಿಸಿದರೆ ನಾವೂ ಇದನ್ನು ಪರಿಣಾಮಕಾರಿಯಾಗಿ ಮಾಡಬಹುದು.
ಟ್ಯೂನಿಂಗ್ ಹೇಗೆ?
ತುಸು ಪ್ರಶಾಂತ ಸ್ಥಳದಲ್ಲಾದರೆ ಎಂಜಿನ್ ಶಬ್ದ ವ್ಯತ್ಯಾಸ ಗುರುತಿಸಬಹುದು. ಅಂತಹ ಸ್ಥಳವನ್ನೇ ಟ್ಯೂನಿಂಗ್‌ಗೆ ಆಯ್ದುಕೊಳ್ಳಿ. ನಿಮ್ಮ ದ್ವಿಚಕ್ರ ವಾಹನ ಮೈನ್ ಸ್ಟಾಂಡ್‌ಗೆ ಹಾಕಿ ಸ್ಟಾರ್ಟ್ ಮಾಡಿ ಸುಮಾರು 15 ನಿಮಿಷ ಹಾಗೆಯೇ ಬಿಡಿ. ಅಂದರೆ ಎಂಜಿನ್ ಸಾಕಷ್ಟು ಬಿಸಿ ಆಗಬೇಕು. ಈಗ ಬೈಕ್‌ನ ಎಂಜಿನ್ ಆರ್‌ಪಿಎಂ ನಿರ್ದಿಷ್ಟ ಪ್ರಮಾಣದಲ್ಲಿರುತ್ತದೆ. ಒಂದು ವೇಳೆ ಬಿಸಿ ಆಗಿಲ್ಲ ಎಂದರೆ ಆರ್‌ಪಿಎಂ ಗುರುತಿಸುವುದು ಕಷ್ಟ.
ಈಗ ಐಡಲ್‌ಸ್ಕ್ರೂ ಬಿಗಿಗೊಳಿಸಿ. ಎಂಜಿನ್ ಆರ್‌ಪಿಎಂ 3 ಸಾವಿರದವರೆಗೆ ಇರಲಿ. ಈಗ ಸ್ಕ್ರೂ
ಡ್ರೈವರ್ ತೆಗೆದುಕೊಂಡು ಇಂಧನ ಮಿಕ್ಸರ್ ಸ್ಕ್ರೂ ಅನ್ನು ತಿರುಗಿಸಿ. ನೆನಪಿಡಿ. ಸೂð ಬಲಕ್ಕೆ ತಿರುಗಿಸಿದರೆ ಇಂಧನ ಹರಿವು ಕಡಿಮೆಯಾಗುತ್ತದೆ. ಸೂð ಎಡಕ್ಕೆ ತಿರುಗಿಸಿದರೆ ಇಂಧನ ಹರಿವು ಹೆಚ್ಚಾಗುತ್ತದೆ. ನೀವು ಇಂಧನ ಸೂð ಬಲಕ್ಕೆ ತಿರುಗಿಸಿ ಎಂಜಿನ್ ಆರ್‌ಪಿಎಂ ಕಡಿಮೆಗೊಳಿಸಿ. ಆದರೆ ಈ ವೇಳೆ ಎಂಜಿನ್ ಬಂದ್ ಬೀಳುವಂತೆ ಮಾಡದಿರಿ. ಇದಕ್ಕೆ ತಕ್ಕಂತೆ ಐಡಲ್ ಸೂð ಅಡ್ಜಸ್ಟ್ ಮಾಡಿ. ಹೀಗೆ ಮಾಡಲು ತಿಳಿಯುತ್ತಿಲ್ಲ ಎಂದರೆ ಒಂದು ಬಾರಿ ಇಂಧನ ಸ್ಕ್ರೂ ಸಂಪೂರ್ಣವಾಗಿ ಎಡಭಾಗಕ್ಕೆ ತಿರುಗಿಸಿ, ಎಂಜಿನ್ ಆರ್‌ಪಿಎಂ ಅತ್ಯಧಿಕವಾಗುತ್ತದೆ. ಬಳಿಕ ನಿಧಾನಕ್ಕೆ ಅದನ್ನು ಮತ್ತೆ ಬಲಭಾಗಕ್ಕೆ ತಿರುಗಿಸುತ್ತ ಬನ್ನಿ.
ಈಗ ಎಂಜಿನ್ ಆರ್‌ಪಿಎಂ ಕಡಿಮೆಯಾಗುತ್ತಿರುತ್ತದೆ. 3- 4 ಬಾರಿ ಪರಿಶೀಲಿಸಿದ ಬಳಿಕ ಎಂಜಿನ್ ಆರ್‌ಪಿಎಂ ಸರಿಯಾಗಿದೆಯೇ, ಯಾವುದೇ ಜರ್ಕ್ ಬಗ್ಗೆ ಖಾತರಿಸಿ ಪಡಿಸಿಕೊಳ್ಳಿ. ಐಡಲ್ ಸ್ಕ್ರೂ ಸರಿಯಾಗಿದೆ ಎಬುದನ್ನು ಖಚಿತ ಪಡಿಸಿ ಎರಡು ಬಾರಿ ಅಕ್ಸಲರೇಟರ್ ಕೊಟ್ಟು ನೋಡಿ. ಈಗ ಎಂಜಿನ್ ಆರ್‌ಪಿಎಂ ಏರಿ ಮತ್ತೆ ಸಮಸ್ಥಿತಿಗೆ ಬರಬೇಕು. ಹಾಗೆಯೇ ಒಂದು ಬಾರಿ ಟೆಸ್ಟ್ ರೈಡ್ ಹೋಗಿ ಜರ್ಕ್ ಇದೆಯೇ? ಸಿಕ್ಕಾಪಟ್ಟೆ ಪಿಕಪ್ ಎಂದೆನಿಸುತ್ತದೆಯೇ ಎಂಬುದನ್ನು ನೋಡಿ. ಒಂದು ವೇಳೆ ಸಿಕ್ಕಾಪಟ್ಟೆ ಪಿಕಪ್ ಎಂದೆನಿಸುತ್ತಿದ್ದರೆ ಮತ್ತೆ ಸ್ಕ್ರೂ ಬಲಭಾಗಕ್ಕೆ ತಿರುಗಿಸಿ, ಕಡಿಮೆ ಪಿಕಪ್ ಆಗಿದ್ದರೆ ಎಡಭಾಗಕ್ಕೆ ತಿರುಗಿಸಿ. ಸೂð ಸಡಿಲ ಮಾಡಿದಷ್ಟೂ ಪಿಕಪ್ ಹೆಚ್ಚು, ಮೈಲೇಜ್ ಕಡಿಮೆ ನೆನಪಿಡಿ.
ಹೊಂದಾಣಿಕೆ ಮುಖ್ಯ
ಟ್ಯೂನಿಂಗ್ ವೇಳೆ ಅಕ್ಸಲರೇಟರ್ ಸಲ್ಲ. ಅಕ್ಸಲರೇಟರ್ ಹಾಗೆಯೇ ಬಿಡಬೇಕು. ಎಂಜಿನ್ ಪಕ್ಕದಲ್ಲಿರುವ ಕಾರ್ಬ್ಯುರೇಟರ್‌ನಲ್ಲಿ ಇಂಧನ ಸ್ಕ್ರೂ ಹುಡುಕಿ. ಈ ಸೂð ಇಂಧನ ಎಷ್ಟು ಪ್ರಮಾಣದಲ್ಲಿ ಗಾಳಿಯೊಂದಿಗೆ ಮಿಶ್ರಣವಾಗಬೇಕು ಎಂಬುದನ್ನು ನಿರ್ಧರಿಸುತ್ತದೆ. ಇನ್ನೊಂದು ಸ್ಕ್ರೂ (ಐಡಲ್) ವಾಹನದ ಆರ್‌ಪಿಎಂ ಅನ್ನು ನಿರ್ಧರಿಸುತ್ತದೆ. ಈ ಎರಡೂ ಸೂð ಹೊಂದಾಣಿಕೆ ಇರುವುದು ಮುಖ್ಯ.
ಈಶ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
Financial Burden: ಶಾಲಾ ಶಿಕ್ಷಕರಿಗೆ ಮೊಟ್ಟೆ ತಲೆನೋವು!
Naxal Activity: ಮಲೆನಾಡಿನವರೊಂದಿಗೆ ಆತ್ಮೀಯವಾಗಿ ಬೆರೆಯುತ್ತಿದ್ದ ವಿಕ್ರಂ ಗೌಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.