ಹ್ಯೂಮಿಡಿಫೈಯರ್, ಕೊಠಡಿಯ ಆರ್ದ್ರತೆ ಹೆಚ್ಚಿಸಿ


Team Udayavani, Aug 18, 2018, 2:08 PM IST

18-agust-11.jpg

ಸುಂದರ, ಸ್ವಚ್ಛ ಆಹ್ಲಾದಕರ ವಾತಾವರಣ ಇರುವ ಮನೆ ಪ್ರತಿಯೊಬ್ಬರ ಕನಸು. ಮನೆ ಕಟ್ಟಿದ ಬಳಿಕ ಅದರ ಸೌಂದರ್ಯವನ್ನು ಹೆಚ್ಚಿಸುವ ಸಾಧನಗಳಿಗೆ ಬಹಳ ಪ್ರಾಮುಖ್ಯ ನೀಡಲಾಗುತ್ತದೆ. ಅದರಿಂದಲೇ ಇಂಟಿರಿಯರ್‌ ಡಿಸೈನರ್‌ಗಳು ಇಂದು ಹೆಚ್ಚು ಬೇಡಿಕೆ ಪಡೆದುಕೊಳ್ಳುತ್ತಿದ್ದಾರೆ. ದುಬಾರಿ ಹಣವನ್ನು ಖರ್ಚು ಮಾಡುತ್ತಾರೆ. ಸೆಕೆಗಾಲದಲ್ಲಿ ಮನೆ ಕೂಲ್‌ ಆಗಿರಲು ಫ್ಯಾನ್‌, ಎಸಿ ಬಳಸಿದರೆ ಮಳೆಗಾದಲ್ಲಿ ಕೋಣೆ ಬೆಚ್ಚಗಿರುವಂತೆ ಇನ್ನೊಂದು ರೀತಿಯಲ್ಲಿ ತಯಾರಿ ಮಾಡಿಕೊಳ್ಳುತ್ತಾರೆ. ಇದರಲ್ಲಿ ಸಾಂಪ್ರದಾಯಿಕ ವಿಧಾನಕ್ಕಿಂತ ಹೆಚ್ಚಾಗಿ ಆಧುನಿಕ ಮನೆಗಳಿಗೆ ಅತ್ಯಾಧುನಿಕ ತಂತ್ರಜ್ಞಾನ ಎಂಬಂತೆ ಕಾಲಕ್ಕೆ ತಕ್ಕಂತೆ ಮನೆಯನ್ನು ಕೆಲವು ಎಲೆಕ್ಟ್ರಾನಿಕ್‌ ವಸ್ತುಗಳನ್ನು ಬಳಸಿ ಸುಂದರ ಹಾಗೂ ಅನುಕೂಲಕರವಾಗಿ ಮಾಡಿಕೊಳ್ಳುವವರೂ ಇದ್ದಾರೆ.

ಒತ್ತಡದ ಬದುಕಿನ ನಡುವೆ ನಮ್ಮ ಆರೋಗ್ಯದ ಕಡೆಗೆ ಗಮನ ನೀಡಲು ಸಮಯವೇ ಇಲ್ಲದಾಗುತ್ತದೆ. ಹಾಗಾಗಿ ಚಿಕ್ಕ ತಪ್ಪುಗಳಿಂದಲೇ ದೊಡ್ಡ ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಳ್ಳುತ್ತಾರೆ. ಸಾಮಾನ್ಯವಾಗಿ ಒಂದು ಕೋಣೆಯ ತೇವಾಂಶ ಶೇ. 45- 65 ಇರಬೇಕು. ತೇವಾಂಶದಲ್ಲಿ ಏರುಪೇರಾದಲ್ಲಿ ಚರ್ಮದ ತೊಂದರೆ, ನಿದ್ರೆ ಸಮಸ್ಯೆ, ಉಸಿರಾಟದ ತೊಂದರೆಗಳು ಆವರಿಸಿಕೊಳ್ಳುತ್ತದೆ. ಇದನ್ನು ನಿರ್ಲಕ್ಷಿಸಿದರೆ ಮುಂದೆ ಗಂಭೀರ ಕಾಯಿಲೆಗಳು ಬರಬಹುದು. ಈ ಬಗ್ಗೆ ಕಾಳಜಿ ವಹಿಸುವ ನಿಟ್ಟಿನಲ್ಲಿ ತಂತ್ರಜ್ಞಾನದ ಬಳಕೆ ಮಾಡಿ ಅದನ್ನು ನಿಯಂತ್ರಿಸುವ ಕೆಲಸಗಳಾಗುತ್ತಿವೆ.

ಎಲ್ಲ ಕಾಲದಲ್ಲೂ ಮಲಗುವ ಕೊಠಡಿಯನ್ನು ತೇವಗೊಳಿಸಬೇಕಾಗುತ್ತದೆ. ಆ ಹಿನ್ನೆಲೆಯಲ್ಲಿ ಪ್ರಸ್ತುತ ಹ್ಯೂಮಿಡಿಫೈಯರ್‌ ಎನ್ನುವ ಸಾಧನ ಬಹು ಮುಖ್ಯ ಪಾತ್ರವಹಿಸುತ್ತಿದೆ. ಈ ಸಾಧನ ಕೊಠಡಿಯ ಗಾಳಿಯ ತೇವಾಂಶವನ್ನು ಕಾಯ್ದುಕೊಳ್ಳಲು ಸಹಾಯ ಮಾಡುತ್ತದೆ. ಈ ಸಾಧನವನ್ನು ವಿವಿಧ ಕಂಪೆನಿಗಳು ಹಲವಾರು ವಿನ್ಯಾಸಗಳಲ್ಲಿ ಹೊರತರುತ್ತಿದೆ. ಒಂದು ಸಾಧನದಲ್ಲಿ ಹಲವಾರು ಗುಣಲಕ್ಷಣಗಳನ್ನು ಇಟ್ಟು ಅದಕ್ಕೆ ತಕ್ಕಂತೆ ದರ ನಿಗದಿ ಮಾಡುತ್ತದೆ.

ಕೋಣೆಯಲ್ಲಿ ಗಾಳಿಯನ್ನು ತೇವಗೊಳಿಸುವ ನಿಟ್ಟಿನಲ್ಲಿ ಬಳಸುವ ಈ ಸಾಧನ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಪಡೆದುಕೊಳ್ಳುತ್ತಿದೆ. ಇದು ಉಗಿ ಉತ್ಪಾದಕದಂತೆ ಕಾರ್ಯನಿರ್ವಹಿಸುತ್ತದೆ. ಇದಕ್ಕೆ ನೀರು ಹಾಕಿದಾಗ ಕೊಠಡಿಯ ಸುತ್ತ ಪಸರಿಸಿಕೊಳ್ಳುತ್ತದೆ. ಆವಿಯೂ ಸೃಷ್ಟಿಯಾಗುತ್ತದೆ. ತೇವಾಂಶ ಸುತ್ತಲಿನ ಧೂಳಿನ ಮೊತ್ತವನ್ನು ಕಡಿಮೆ ಮಾಡುತ್ತದೆ. ಇದರಿಂದಾಗಿ ಮನೆಯಲ್ಲಿ ವಾಸಿಸುವ ಜನರು ಆರೋಗ್ಯವಂತರಾಗಿ ಇರುತ್ತಾರೆ. ಇದರೊಂದಿಗೆ ಮನೆಯ ಸೌಂದರ್ಯ ಹೆಚ್ಚಿಸಲು ಬಳಸುವ ಹೂಗಳು ಹೆಚ್ಚು ದಿನ ಬಾಡದೆ ಇರುತ್ತದೆ.

ಬಳಕೆ ಹೇಗೆ?
ಕೋಣೆಯಲ್ಲಿ ಗಾಳಿಯನ್ನು ಸಮವಾಗಿ ತೇವಗೊಳಿಸಲು ನೆಲದಿಂದ 50- 100 ಸೆ.ಮೀ. ದೂರದಲ್ಲಿ ಹ್ಯೂಮಿಡಿಫೈಯರ್‌ ಸಾಧನವನ್ನು ಇರಿಸಬೇಕು. ಆಗ ಅದು ಕೊಠಡಿಯೊಳಗೆ ಪಸರಿಸುತ್ತದೆ. ಹ್ಯೂಮಿಡಿಫೈಯರ್‌ನ್ನು ನೇರವಾಗಿ ವಸ್ತುಗಳ ಮೇಲೆ ಅಂದರೆ ಪೀಠೊಪಕರಣ, ಪುಸ್ತಕ, ವಿದ್ಯುತ್‌ ಉಪಕರಣಗಳ ಮೇಲೆ ಬಿದ್ದಲ್ಲಿ ಹಾಳಾಗುವ ಸಾಧ್ಯತೆ ಹೆಚ್ಚಿರುತ್ತದೆ. ಕೋಣೆಯಲ್ಲಿ ಗಾಳಿಯ ತೇವಾಂಶವನ್ನು ಸರಿಯಾಗಿ ಇರಿಸಿಕೊಳ್ಳಲು ಈ ಸಾಧನ ಸಹಕರಿಸುತ್ತದೆ. ಇದು 100 ಡಿಗ್ರಿ ಸೆಲ್ಸಿಯಸ್‌ ತಾಪಮಾನದಲ್ಲಿ ಹೈಪೋಲಾರ್ಜನಿಕ್‌ ಆವಿಯನ್ನು ಉತ್ಪತ್ತಿ ಮಾಡುತ್ತದೆ. ಇದಕ್ಕಾಗಿ ಈ ಸಾಧನವನ್ನು ಮನೆ, ಕಚೇರಿ ಮತ್ತು ಹಸುರು ಮನೆಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ.

ಇದು ಸಾಕಷ್ಟು ವಿದ್ಯುತ್‌ ಅನ್ನು ಬಳಸಿಕೊಳ್ಳುತ್ತದೆ. ಅಲ್ಟ್ರಾಸಾನಿಕ್‌ನ ತರಂಗಗಳ ಕ್ರಿಯೆಗಳಿಂದಾಗಿ ಇದರಲ್ಲಿರುವ ನೀರು ಆವಿಯಾಗುತ್ತದೆ. ನವಜಾತ ಶಿಶುಗಳು ಮತ್ತು ಮಕ್ಕಳು ಇರುವ ಜಾಗದಲ್ಲಿ ಈ ಸಾಧನವನ್ನು ಹೆಚ್ಚು ಇಡಬಹುದು. ಯಾಕೆಂದರೆ ಧೂಳು ಅಥವಾ ಇನ್ನಿತರ ಕಾರಣಗಳಿಂದ ಉಂಟಾಗುವ ಅಲರ್ಜಿಯನ್ನು ಇದು ತಡೆಗಟ್ಟುತ್ತದೆ.

ಆರ್ದ್ರತೆ ಕಾಪಾಡುತ್ತದೆ
ಬಳಕೆದಾರರ ಸ್ನೇಹಿ ಎಂದು ಹೆಸರು ಪಡೆದುಕೊಂಡಿರುವ ಹ್ಯೂಮಿಡಿಫೈಯರ್‌ ಮನೆ ಅಥವಾ ಕೊಠಡಿಯಲ್ಲಿ ಅಗತ್ಯವಿರುವ ಮಟ್ಟಕ್ಕೆ ಗಾಳಿಯನ್ನು ಆರ್ದ್ರತೆಗೊಳಿಸುತ್ತದೆ. ಇದು ವಿದ್ಯುತ್‌ ನಿಯಂತ್ರಕವನ್ನು ಹೊಂದಿದೆ. ಈ ಸಾಧನವನ್ನು ಹೆಚ್ಚಾಗಿ ಅಪಾರ್ಟ್‌ಮೆಂಟ್‌ ಗಳಲ್ಲಿ ಬಳಸಲಾಗುತ್ತದೆ. 

ಹೆಚ್ಚಿನ ಬೇಡಿಕೆ
ಒತ್ತಡಯುತ ಜೀವನದಲ್ಲಿ ಮನೆ ಮಂದಿಯ ಆರೋಗ್ಯವನ್ನು ಗಮನಿಸಲು ಸಮಯಾವಕಾಶದ ಕೊರತೆ ಇರುತ್ತದೆ. ಇದಕ್ಕಾಗಿ ಹೆಚ್ಚು ಮಂದಿ ವೈದ್ಯರ ಸಲಹೆಗಳನ್ನು ಪಡೆದು ಆರೋಗ್ಯಯುತವಾಗಿರಲು ಸುಲಭ ದಾರಿಗಳನ್ನು ಕಂಡುಕೊಳ್ಳುತ್ತಾರೆ. ಈ ನಿಟ್ಟಿನಲ್ಲಿ ಚರ್ಮದ ತೊಂದರೆ ಹಾಗೂ ಇತರ ಸಾಮಾನ್ಯ ತೊಂದರೆಗಳನ್ನು ದೂರ ಮಾಡಲು ಕೆಲವು ಮಾರ್ಗೋಪಾಯಗಳನ್ನು ಮಾಡುತ್ತಾರೆ. ಅವುಗಳಲ್ಲಿ ಹ್ಯೂಮಿಡಿಫೈಯರ್‌ ಸಾಧನ ಬಹಳ ಮುಖ್ಯವಾಗಿದೆ. ಈ ಹಿನ್ನೆಲೆಯಲ್ಲಿ ಮಂಗಳೂರಿನಲ್ಲೂ ಈ ಸಾಧನ ಹೆಚ್ಚು ಬೇಡಿಕೆ ಪಡೆದುಕೊಳ್ಳುತ್ತಿದೆ. 

ಹ್ಯೂಮಿಡಿಫೈಯರ್‌ ಎಲೆಕ್ಟ್ರಾನಿಕ್‌ ಅಂಗಡಿಗಳಲ್ಲಿ ಮಾತ್ರವಲ್ಲದೆ ಆನ್‌ಲೈನ್‌ ಗಳಲ್ಲೂ ಲಭಿಸುತ್ತದೆ. ವಿವಿಧ ವಿನ್ಯಾಸ, ಕಂಪೆನಿಗಳ ದರ ವ್ಯತ್ಯಸ್ಥವಾಗಿರುತ್ತದೆ. ಈ ಸಾಧನದ ಬೆಲೆ ಸುಮಾರು 1,800 ರೂ. ನಿಂದ ಆರಂಭವಾಗಿ 6,000 ರೂ. ವರೆಗೂ ಇದೆ. ಸಾಧನದ ಗಾತ್ರ, ಗುಣಲಕ್ಷಣಗಳನ್ನು ಹೊಂದಿ ಅದರ ದರ ಬದಲಾವಣೆಗಳು ಉಂಟಾಗುತ್ತದೆ.

ಮಕ್ಕಳ ಕೋಣೆಗೂ ಸೂಕ್ತ
ಮಕ್ಕಳ ಕೋಣೆಯಲ್ಲಿ ಆರ್ದ್ರತೆಯ ಮಟ್ಟ ಶೇ.50ಕ್ಕಿಂತ ಕಡಿಮೆಯಾದಾಗ ಮಾತ್ರ ಈ ಸಾಧನವನ್ನು ಬಳಸಬೇಕು. ಕೊಠಡಿಯ ನೀರನ್ನು ಸಂಪೂರ್ಣವಾಗಿ ಆವಿಯನ್ನಾಗಿಸಿ ತೇವಾಂಶವನ್ನು ಉಳಿಸಿಕೊಳ್ಳುತ್ತದೆ. ಈ ಸಾಧನ ಯಾವುದೇ ಶಬ್ದವನ್ನು ಮಾಡದೆ ಇರುವುದರಿಂದ ಮಕ್ಕಳು ಹಾಯಾಗಿ ಮಲಗುತ್ತಾರೆ. 

ಪ್ರಜ್ಞಾ ಶೆಟ್ಟಿ 

ಟಾಪ್ ನ್ಯೂಸ್

Vijayapura: ಮಹಿಳಾ ವಿವಿಯಿಂದ ನಟಿ ತಾರಾ, ಮೀನಾಕ್ಷಿ ಬಾಳಿ, ವೇದಾರಾಣಿಗೆ ಗೌರವ ಡಾಕ್ಟರೇಟ್

Vijayapura: ಮಹಿಳಾ ವಿವಿಯಿಂದ ನಟಿ ತಾರಾ, ಮೀನಾಕ್ಷಿ ಬಾಳಿ, ವೇದಾರಾಣಿಗೆ ಗೌರವ ಡಾಕ್ಟರೇಟ್

1-delhi

Delhi Election; ಅಧಿಕಾರ ಉಳಿಸಿಕೊಳ್ಳುವರೋ? ಪಡೆದುಕೊಳ್ಳುವರೋ?

Visa Extended: ಬಾಂಗ್ಲಾ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ವೀಸಾ ಅವಧಿ ವಿಸ್ತರಿಸಿದ ಭಾರತ

Visa Extended: ಬಾಂಗ್ಲಾ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ವೀಸಾ ಅವಧಿ ವಿಸ್ತರಿಸಿದ ಭಾರತ

6-gangolli

Gangolli: ಮರದ ದಿಮ್ಮಿಗೆ ಡಿಕ್ಕಿ ಹೊಡೆದ ಮೀನುಗಾರಿಕಾ ದೋಣಿ

BBK11: ಫಿನಾಲೆ ಓಟದಿಂದ ಚೈತ್ರಾಳನ್ನು ಹೊರಗಿಟ್ಟ ಮನೆಮಂದಿ..ಕಣ್ಣೀರಿಟ್ಟ ಫೈಯರ್ ಬ್ರ್ಯಾಂಡ್‌

BBK11: ಫಿನಾಲೆ ಓಟದಿಂದ ಚೈತ್ರಾಳನ್ನು ಹೊರಗಿಟ್ಟ ಮನೆಮಂದಿ..ಕಣ್ಣೀರಿಟ್ಟ ಫೈಯರ್ ಬ್ರ್ಯಾಂಡ್‌

1-kadkona

Mudigere; ಕಾಫಿ ಎಸ್ಟೇಟ್ ನಲ್ಲಿ ಕಾಡುಕೋಣ ದಾಳಿ: ಅಸ್ಸಾಂ ಮೂಲದ ಕಾರ್ಮಿಕ ಮಹಿಳೆ ಮೃ*ತ್ಯು

1-H-R

Bollywood ನಲ್ಲಿ ಹೃತಿಕ್ ರೋಷನ್ 25 ವರ್ಷ; ಸಂಕೋಚ, ಆತಂಕ ಈಗಲೂ ಇದೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

ಹೊಸ ಸೇರ್ಪಡೆ

Vijayapura: ಮಹಿಳಾ ವಿವಿಯಿಂದ ನಟಿ ತಾರಾ, ಮೀನಾಕ್ಷಿ ಬಾಳಿ, ವೇದಾರಾಣಿಗೆ ಗೌರವ ಡಾಕ್ಟರೇಟ್

Vijayapura: ಮಹಿಳಾ ವಿವಿಯಿಂದ ನಟಿ ತಾರಾ, ಮೀನಾಕ್ಷಿ ಬಾಳಿ, ವೇದಾರಾಣಿಗೆ ಗೌರವ ಡಾಕ್ಟರೇಟ್

1-delhi

Delhi Election; ಅಧಿಕಾರ ಉಳಿಸಿಕೊಳ್ಳುವರೋ? ಪಡೆದುಕೊಳ್ಳುವರೋ?

9(1

Mangaluru: 10ಕ್ಕೂ ಅಧಿಕ ಅಪಾಯಕಾರಿ ಕ್ರಾಸಿಂಗ್‌

8

Kundapura: ರಸ್ತೆ, ಪೈಪ್‌ಲೈನ್‌ ಕಾಮಗಾರಿಯಿಂದ ಧೂಳು; ಹೈರಾಣಾದ ಜನ

7

Belman: ಅಗ್ನಿ ದುರಂತದ ಅಪಾಯ; ಟ್ರಾನ್ಸ್‌ಫಾರ್ಮರ್‌ ಸುತ್ತ ಸ್ವಚ್ಛತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.