ಮನೆ ಚಿಕ್ಕದಾದರೂ ಚೊಕ್ಕವಾಗಿರಲಿ

Team Udayavani, Mar 16, 2019, 7:23 AM IST

16-march-10.jpg

ಮನೆ ಎಷ್ಟೇ ದೊಡ್ಡದಾಗಿದ್ದರೂ ಸರಕುಗಳನ್ನು ಇಡಲು ಜಾಗ ಸಾಲುತ್ತಿಲ್ಲ ಎನ್ನುವುದು ಸರ್ವೆ ಸಾಮಾನ್ಯವಾಗಿ ಎಲ್ಲರ ಬಾಯಲ್ಲಿ ಕೇಳಿಬರುವ ಮಾತು. ಆದರೆ ವಾಸ್ತವದಲ್ಲಿ ಮನೆಯ ಜಾಗದ ಕೊರತೆಯ ಬದಲು ಅವುಗಳನ್ನು ಜೋಡಿಸುವಲ್ಲಿ ನಾವು ಮಾಡುವ ತಪ್ಪುಗಳಿಂದಾಗಿ ಈ ಸಮಸ್ಯೆ ಉಂಟಾಗುತ್ತದೆ. 

ಮನೆಯ ಅಂದ ಚೆಂದದ ವಿಷಯಗಳಲ್ಲಿಯೂ ನಾವು ಅನೇಕ ಬಾರಿ ಎಡವುತ್ತಲೇ ಇರುತ್ತೇವೆ. ಮನೆ ಚಿಕ್ಕದಾದರೂ ಪರವಾಗಿಲ್ಲ. ಚೊಕ್ಕವಾಗಿಇರಬೇಕು ಎಂಬುದು ದೊಡ್ಡವರ ಮಾತು. ದುಂದು ವೆಚ್ಚ ಮಾಡದೆ ಇರುವ ಸಂಪನ್ಮೂಲಗಳಲ್ಲಿಯೇ ಮನೆಯ ಅಂದ ಹೆಚ್ಚಿಸಲು ಕೆಲವು ಉಪಾಯಗಳು ಇಲ್ಲಿವೆ.

ಫೋಟೋಗಳ ಜೋಡಣೆ
ಯಾವುದೋ ಘಟನೆಗಳ ಸವಿನೆನಪಿಗಾಗಿ ಕುಟುಂಬ ಸದಸ್ಯರು, ಸ್ನೇಹಿತರು ಹೀಗೆ ಮತ್ತಾರದೋ ಜತೆಯಲ್ಲಿ ತೆಗೆಸಿಕೊಂಡ ಫೋಟೋಗಳು ಮನೆಯಲ್ಲಿ ಎಲ್ಲೋ ಬಿದ್ದಿರುತ್ತವೆ. ಕೆಲವರು ಮಲಗುವ ಕೋಣೆಗಳಲ್ಲಿ ಇಂಥಹ ಫೋಟೋಗಳನ್ನು ಇಟ್ಟಿರುತ್ತಾರೆ. ಇದರ ಬದಲು ಮನೆಯ ಹಾಲ್‌ನ ಗೋಡೆಯ ಒಂದು ಕಡೆ ಇವೆಲ್ಲವನ್ನೂ ಸುಂದರವಾಗಿ ಜೋಡಿಸಿದಾಗ ಎಲ್ಲ ನೆನಪುಗಳೂ ಒಮ್ಮೆ ಕಣ್ಮುಂದೆ ಬರುವುದರ ಜತೆಗೆ ನೋಡಲು ಸುಂದರವಾಗಿಯೂ ಕಾಣುತ್ತದೆ. ಇವುಗಳ ಜತೆಗೆ ಮನೆಯಲ್ಲಿರುವ ಪುಸ್ತಗಳನ್ನು ಕೂಡ ಒಂದೆಡೆ ಅಥವಾ ಬುಕ್‌ ಸ್ಟ್ಯಾಂಡ್‌ಗಳಲ್ಲಿ ಜೋಡಿಸುವುರಿಂದ ಮನೆಯ ಅಂದ ಹೆಚ್ಚುತ್ತದೆ.

ಹಳೆಯ ವಸ್ತುಗಳಿಂದ ಕ್ರಾಫ್ಟ್ ತಯಾರಿ
ಮುರಿದ ಕುರ್ಚಿ, ಅಡುಗೆಗೆ ಬಳಸಿದ ತೆಂಗಿನ ಕಾಯಿಯ ಚಿಪ್ಪು, ಖಾಲಿಯಾಗಿರುವ ಟೂತ್‌ಪೇಸ್ಟ್‌ ಕವರ್‌, ಬಾಟಲ್‌ಗ‌ಳು ಹೀಗೆ ಹತ್ತು ಹಲವು ಹಾಳಾಗಿರುವ ಅಥವಾ ಕೆಲಸಕ್ಕೆ ಬಾರದ ವಸ್ತುಗಳು ಮನೆಯಲ್ಲಿ ಇರುತ್ತವೆ. ಇವುಗಳಿಂದ ಹಲವು ಬಗೆಯ ಕ್ರಾಫ್ಟ್ಗಳನ್ನು ತಯಾರಿಸಬಹುದಾಗಿದ್ದು, ಇವುಗಳನ್ನು ಶೋಕೇಸ್‌ಗಳಲ್ಲಿ, ಟಿವಿ ಸ್ಟ್ಯಾಂಡ್‌ಗಳಲ್ಲಿ ಅಲಂಕಾರಿಕ ವಸ್ತುಗಳಾಗಿ ಇಡಬಹುದು.

ಸ್ವಚ್ಚತೆಗೆ ಆದ್ಯತೆ
ಕೆಲವರು ಮನೆಯ ಸ್ವಚ್ಚತೆಗಾಗಿ ದುಂದುವೆಚ್ಚ ಮಾಡುತ್ತಾರೆ. ಪ್ರತಿನಿತ್ಯ ಮನೆಯ ಸ್ವಚ್ಚತೆಗೆ ಆದ್ಯತೆ ನೀಡಿದಲ್ಲಿ ಯಾವುದೇ ದುಂದು ವೆಚ್ಚದ ಆವಶ್ಯಕತೆ ಇರುವುದಿಲ್ಲ. ಮುಖ್ಯವಾಗಿ ಬಾತ್‌ 
ರೂಮ್‌, ಟಾಯ್ಲೆಟ್‌ ಮತ್ತು ಅಡುಗೆ ಕೋಣೆಯಲ್ಲಿನ ಸಿಂಕ್‌ಗಳ ಸ್ವಚ್ಚತೆಯ ಬಗ್ಗೆ ಹೆಚ್ಚು ಗಮನ ನೀಡಬೇಕಾಗುತ್ತದೆ. ಪೀಠೊಪಕರಣಗಳಿಗೆ ಅಂಟಿಕೊಂಡಿರುವ ಧೂಳನ್ನೂ ಕಾಲ ಕಾಲಕ್ಕೆ ಶುಚಿಗೊಳಿಸಬೇಕು.

ಬಟ್ಟೆಗಳ ಜೋಡಣೆ
ಹಗ್ಗಗಳನ್ನು ಕಟ್ಟಿ ಮನೆಯ ಎಲ್ಲೆಂದರಲ್ಲಿ ಬಟ್ಟೆಗಳನ್ನು ತೂಗು ಹಾಕುವುದು ಸರ್ವೇ ಸಾಮಾನ್ಯವಾಗಿ ಕಂಡುಬರುವ ತಪ್ಪು. ಹೀಗೆ ಮಾಡುವುದರಿಂದ ಅಂದ ಕೆಡುತ್ತದೆ. ತೊಳೆದು ಹರಗುವ ಬಟ್ಟೆಗಳನ್ನಾದರೆ ಮನೆಯ ಹಿಂಭಾಗದಲ್ಲಿ ಹಾಕಿದರೆ ಉತ್ತಮ. ಉಳಿದ ಬಟ್ಟೆಗಳನ್ನು ಬೆಡ್‌ ರೋಮ್‌ಗಳಲ್ಲಿನ ಕಪಾಟುಗಳಲ್ಲಿ ಜೋಡಿಸಿಟ್ಟರೆ ಚೆಂದ.

 ಪ್ರೀತಿ ಭಟ್‌ ಗುಣವಂತೆ 

ಟಾಪ್ ನ್ಯೂಸ್

Edaneer-swmij

Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ

Constable-Hsn

Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್‌ ಬರ್ಬರ ಹ*ತ್ಯೆ!

US Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿUS Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿ

US Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿ

Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ

Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ

Mangaluru Airport: ಮಂಜು ಕವಿದ ವಾತಾವರಣ: ವಿಮಾನ ಯಾನದಲ್ಲಿ ವ್ಯತ್ಯಯ

Mangaluru Airport: ಮಂಜು ಕವಿದ ವಾತಾವರಣ: ವಿಮಾನ ಯಾನದಲ್ಲಿ ವ್ಯತ್ಯಯ

ಸಜೀಪಮೂಡ: ಮನೆಗೆ ಸಿಡಿಲು ಬಡಿದು ಹಾನಿ

Bantwal ಸಜೀಪಮೂಡ: ಮನೆಗೆ ಸಿಡಿಲು ಬಡಿದು ಹಾನಿ

DK-Suresh

By Election: ಮಗನಿಗಾಗಿ ಎಚ್‌ಡಿಕೆ ನಿಮ್ಮ ಊರು ಹುಡುಕಿ ಬರುತ್ತಾರಷ್ಟೇ: ಡಿ.ಕೆ.ಸುರೇಶ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Edaneer-swmij

Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ

Constable-Hsn

Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್‌ ಬರ್ಬರ ಹ*ತ್ಯೆ!

US Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿUS Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿ

US Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿ

Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ

Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ

Mangaluru Airport: ಮಂಜು ಕವಿದ ವಾತಾವರಣ: ವಿಮಾನ ಯಾನದಲ್ಲಿ ವ್ಯತ್ಯಯ

Mangaluru Airport: ಮಂಜು ಕವಿದ ವಾತಾವರಣ: ವಿಮಾನ ಯಾನದಲ್ಲಿ ವ್ಯತ್ಯಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.