ಅವರೆಕಾಯಿ ಬೆಳೆದರೆ ಫ‌ಲವತ್ತ ಭೂಮಿ


Team Udayavani, Mar 8, 2020, 5:00 AM IST

avarekai

ಮಿಶ್ರಬೆಳೆಯಾಗಿ ಅವರೆಕಾಯಿ ಅನ್ನು ಬೆಳೆಯಬಹುದಾಗಿದೆ. ಶ್ರಮ, ಖರ್ಚು ಬೇಡದ ಅವರೆಕಾಯಿ ಬೆಳೆಯನ್ನು ಸಾವಯವ ಪದ್ಧತಿಯಲ್ಲಿ ಬೆಳೆದರೆ ಲಾಭ ಅಧಿಕ. ಜಾಸ್ತಿ ಗೊಬ್ಬರ ಬೇಡ, ನೀರು ಹೆಚ್ಚು ಕೇಳ್ಳೋ ದಿಲ್ಲ, ಶ್ರಮವಿಲ್ಲದೆ ಸುಲ ಭ ವಾಗಿ ಬೆಳೆದುಬಿಡಬಹುದಾದ ತರಕಾರಿ ಎಂದರೆ ಅದುವೇ ಅವರೆಕಾಯಿ.

ಅವರೆಕಾಯಿ ದ್ವಿದಳ ಧಾನ್ಯದ ಬೆಳೆ. ಹೀಗಾಗಿ, ಹೆಚ್ಚು ಮೇಲ್ಗೊಬ್ಬರ ಕೊಡುವ ಆವಶ್ಯಕತೆ ಇಲ್ಲ, ಮಣ್ಣು ಫ‌ಲವತ್ತಾಗಿದ್ದರಷ್ಟೇ ಸಾಕು. ಆದರೆ ತುಂಬಾ ಜನ ರೈತರು ಇದಕ್ಕೂ ಮೂಟೆಗಟ್ಟಲೆ ರಾಸಾಯನಿಕ ಗೊಬ್ಬರ ಸುರಿಯುತ್ತಾರೆ. ಇದರಿಂದ ಬೆಳೆ ವಿಷಕಾರಿಯಾಗುವುದರ ಜತೆಗೆ ಸುಮ್ಮನೆ ಗೊಬ್ಬರಕ್ಕೆ ಹಾಕಿದ ದುಡ್ಡು ಹಾಳು; ರೋಗ ಹೆಚ್ಚು. ಸಾವಯವದಲ್ಲಿ ಬೆಳೆದರೆ ಗಿಡಗಳು ಸದೃಢವಾಗಿ ಬೆಳೆದು, ಸಣ್ಣ ಪುಟ್ಟ ರೋಗಗಳನ್ನು ಮೆಟ್ಟಿ ನಿಂತು ಸಿಂಪರಣೆಗಾಗಿ ಮಾಡುವ ಖರ್ಚು ಉಳಿಸುತ್ತದೆ.

ಯಾವುದು ಸೂಕ್ತ ಸಮಯ
ಅವರೆಯನ್ನು ವರ್ಷದಲ್ಲಿ 2ಸಲ ಬೆಳೆಯಬಹುದು. ಎಪ್ರಿಲ್, ಮೇ, ಜೂನ್‌ ಹಾಗೂ ಡಿಸೆಂಬರ್‌- ಜನವರಿ ಅವರೆ ಬಿತ್ತನೆಗೆ ಸೂಕ್ತ. ಒಂದು ಎಕ್ರೆ ಅವರೆ ಬೆಳೆಯಲು 12ರಿಂದ 15 ಕೆ.ಜಿ.ಯಷ್ಟು ಬೀಜ ಬೇಕಾಗುತ್ತದೆ. ಒಂದೂವರೆ ಅಡಿಯ ಸಾಲು ಬಿಟ್ಟು ಅರ್ಧ ಅಡಿಗೊಂದು ಬೀಜ ಬರು ವಂತೆ ಬಿತ್ತನೆ ಮಾಡಬೇಕು. ಬಿತ್ತನೆಗೂ ಮೊದಲು ಒಂದು ಎಕ್ರೆ ಜಮೀನಿಗೆ 8 ಟನ್‌ನಷ್ಟು ಕೊಟ್ಟಿಗೆ ಗೊಬ್ಬರ ಹಾಕಬೇಕು. ಅದು ಲಭ್ಯವಿಲ್ಲ ದಿದ್ದರೆ ಹಾಗೇ ಬಿತ್ತನೆ ಮಾಡಿ  ಅನಂತರ ಮೊದಲ ಸಲ ಉಳುಮೆ ಮಾಡುವಾಗ ಒಂದು ಟನ್‌ ನಷ್ಟು ಒಳ್ಳೆ ಗುಣಮಟ್ಟದ ಎರೆಹುಳು ಗೊಬ್ಬರ ಕೊಡಬೇಕು.

ಹೊಲ ತೀರ ಫ‌ಲವತ್ತಾಗಿರದೇ ಹೋದಲ್ಲಿ ಮಾತ್ರ ಬಿತ್ತನೆ ಮಾಡುವಾಗ 10 ಕೆ.ಜಿ. ಯೂರಿಯಾ, 20 ಕೆ.ಜಿ. ಡಿ.ಎ.ಪಿ., 10 ಕೆ.ಜಿ. ಪೊಟ್ಯಾಶ್‌ ಗೊಬ್ಬರ ಕೊಡಿ. ಇದಕ್ಕೂ ಹೆಚ್ಚಿಗೆ ಬೇಡ. ಅರ್ಕಾ ಜಯ್‌ ಹೆಬ್ಟಾಳ, ಅರ್ಕಾ ವಿಜಯ್‌ ಪ್ರಮುಖ ಅವರೆ ತಳಿ. ಇದರ ಜತೆಗೆ ಅರ್ಕಾ ಸಂಭ್ರಮ…, ಶಿಲ್ಪ, ಎಚ್‌.ಎ. ಹಲವು ಖಾಸಗಿ ಕಂಪೆನಿಯ ಅಧಿಕ ಇಳುವರಿ ಕೊಡುವ ಬೀಜ ಈಗ ಲಭ್ಯ.

ನಿರ್ವಹಣೆ
ಸಾವಯವದಲ್ಲಿ ಬೆಳೆಯುವುದಾದರೆ ಒಂದು ತಿಂಗಳಿಗೂ ಮೊದಲು ಅವರೆ ಸಾಲಿನಲ್ಲಿ ಎರೆಹುಳು ಗೊಬ್ಬರ ಹಾಕಿ, ಮಣ್ಣು ಬುಡಕ್ಕೆ ಏರುವ ಹಾಗೆ ಸಾಲು ಮಾಡಿ ನೀರು ಕೊಡಿ. ಹಾಗೆಯೇ 15 ದಿನಕ್ಕೊಮ್ಮೆ ಜೀವಾಮೃತ ಸಿಂಪರಣೆ ಮಾಡಿ. ಅವರೆಕಾಯಿ ಬೆಳೆಯನ್ನು ಕಾಡುವುದು ಕಾಯಿ ಕೊರೆಯುವ ಹುಳ ಹಾಗೂ ಸಸ್ಯ ಹೇನು ಮಾತ್ರ. ಸಾವಯವದಲ್ಲಿ ಇವೆರಡೂ ಕೀಟಬಾಧೆ ಹತೋಟಿ ಮಾಡುವುದಾದರೆ ಪ್ರತಿ ಹದಿನೈದು ದಿನಕ್ಕೊಮ್ಮೆ ಹಸುವಿನ ಗಂಜಲ, ಅರಿಸಿನ ಪುಡಿ, ಹಸಿ ಮೆಣಸಿನಕಾಯಿ ಕಷಾಯ ಹಾಗೂ ಜಜ್ಜಿ ಹಿಂಡಿದ ಬೆಳ್ಳುಳ್ಳಿ ಕಷಾಯ ಮಿಕ್ಸ್ ಮಾಡಿ ಸಿಂಪರಣೆ ಮಾಡಿ. ಇದರಿಂದ ಸಸ್ಯ ಹೇನು ಹಾಗೂ ಕಾಯಿಕೊರಕ ಹುಳು ಹತ್ತಿರ ಸುಳಿಯುವುದಿಲ್ಲ. ಹಸಿಮೆಣಸಿನಕಾಯಿ ಹಾಗೂ ಸೋಪಿನ ಪುಡಿ ದ್ರಾವಣವನ್ನೂ ಸಿಂಪಡಿಸಿ ಕೀಟಗಳ ಹಾವಳಿ ತಡೆಯಬಹುದು. ಅಷ್ಟಾಗಿಯೂ ಕೀಟ ಕಾಡತೊಡಗಿದರೆ ಸಾವಯವ ಕೀಟನಾಶಕ ಕೊಂಡು ತಂದು ಬಳಸಿ.

ಲಾಭ ಜಾಸ್ತಿ
2 ಎಕ್ರೆಯಿಂದ ಗರಿಷ್ಠ 12-14 ಟನ್‌ ಅವರೆಕಾಯಿ ಇಳುವರಿ ಪಡೆಯಬಹುದು. ತೆಂಗಿನ, ಇತರ ತೋಟಗಾರಿಕಾ ಗಿಡಗಳ ನಡುವೆ ಮಿಶ್ರಬೆಳೆಯಾಗಿಯೂ ಅವರೆ ಬೆಳೆಯಬಹುದು. ಇದರಿಂದ ಒಂದೇ ಖರ್ಚಿನಲ್ಲಿ ಎರಡು ಆದಾಯ ಪಡೆಯುವುದರ ಜತೆಗೆ ಅವರೆ ಬೆಳೆಯುವುದರಿಂದ ಭೂಮಿ ಫ‌ಲವತ್ತಾಗುವುದು.

ಟಾಪ್ ನ್ಯೂಸ್

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

T20 Asia Cup: ಬಾಂಗ್ಲಾ ವಿರುದ್ದ ಅಂಡರ್‌ 19 ವನಿತಾ ಏಷ್ಯಾಕಪ್‌ ಚಾಂಪಿಯನ್‌ ಆದ ಭಾರತ

T20 Asia Cup: ಬಾಂಗ್ಲಾ ವಿರುದ್ದ ಅಂಡರ್‌ 19 ವನಿತಾ ಏಷ್ಯಾಕಪ್‌ ಚಾಂಪಿಯನ್‌ ಆದ ಭಾರತ

BBK11: ವೀಕ್ಷಕರಿಗೆ ಸರ್ಪ್ರೈಸ್;‌ ಮತ್ತೆ‌ ಬಿಗ್ ಬಾಸ್‌ಗೆ ಗೋಲ್ಡ್‌ ಸುರೇಶ್

BBK11: ವೀಕ್ಷಕರಿಗೆ ಸರ್ಪ್ರೈಸ್;‌ ಮತ್ತೆ‌ ಬಿಗ್ ಬಾಸ್‌ಗೆ ಗೋಲ್ಡ್‌ ಸುರೇಶ್

BGT 2024: Team India faces injury problems ahead of Melbourne match

BGT 2024: ಮೆಲ್ಬೋರ್ನ್‌ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಕೊಡುವುದರಿಂದ ಕೊರತೆಯಾಗದು!

ಕೊಡುವುದರಿಂದ ಕೊರತೆಯಾಗದು!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು

Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು

4

Bengaluru: ಹಫ್ತಾ ನೀಡಲು ವ್ಯಾಪಾರಿಗೆ ಜೈಲಿನಿಂದಲೇ ಧಮ್ಕಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.