ನೆಲಗಡಲೆ ಬೆಳೆ ಸುಧಾರಿತ ಬೇಸಾಯ ಕ್ರಮ
Team Udayavani, Dec 15, 2019, 4:01 AM IST
ಸಾವಯವ ಗೊಬ್ಬರ ಮತ್ತು ರಾಸಾಯನಿಕ ಗೊಬ್ಬರವನ್ನು ಮಣ್ಣಿನಲ್ಲಿ ಬೆರೆಸಿ ಬೀಜೋಪಚಾರ ಮಾಡಿದ ಬೀಜವನ್ನು ಸಾಲಿನಿಂದ 30 ಸೆಂ.ಮೀ. ಅಂತರ ಹಾಗೂ ಬೀಜದಿಂದ ಬೀಜಕ್ಕೆ 15 ಸೆಂ.ಮೀ. ಅಂತರದಲ್ಲಿ ಬಿತ್ತನೆ ಮಾಡಬೇಕು. ಬೀಜವನ್ನು 5 ಸೆಂ.ಮೀ.ಗಿಂತ ಹೆಚ್ಚಿನ ಆಳದಲ್ಲಿ ಬಿತ್ತಬಾರದು. ಅಧಿಕ ಇಳುವರಿಯ ಪಡೆಯಲು ಎಕರೆಗೆ 200 ಕಿ.ಗ್ರಾಂ. ಜಿಪ್ಸಂ ಅನ್ನು ಬಿತ್ತನೆಗೆ ಮುಂಚೆ ಮಣ್ಣಿಗೆ ಸೇರಿಸಬೇಕು. ಬಿತ್ತನೆಗೆ ಮೊದಲು ಸೂಕ್ತ ಶಿಲೀಂದ್ರನಾಶಕ, ಅನಂತರ ರೈಜೋಬಿಯಂ ಜೀವಾಣುವಿನಿಂದ ಉಪಚರಿಸಿ ಬಿತ್ತಬೇಕು.
ನೆಲಗಡಲೆ ಬೆಳೆ ಕರ್ನಾಟಕದಲ್ಲಿ ವಿವಿಧ ಮಣ್ಣು, ಹವಾಮಾನಗಳಲ್ಲಿ ಬೆಳೆಯುವ ಪ್ರಧಾನ ಎಣ್ಣೆಕಾಳು ಬೆಳೆ. ಇದನ್ನು ನೀರಾವರಿ ಮತ್ತು ಋಷ್ಕಿ ಬೆಳೆಯಲ್ಲಿ ಬೆಳೆಯಲಾಗುತ್ತದೆ. ನೀರಾವರಿ ಬೆಳೆಯಿಂದ ಹೆಚ್ಚಿನ ಇಳುವರಿ ಪಡೆಯಬಹುದು. ಇಳುವರಿಯು ಬೆಳೆಯ ಅವಧಿ, ಮಳೆಯ ಪ್ರಮಾಣ, ರೋಗ, ಕೀಟ, ಕಳೆ ನಿಯಂತ್ರಣದ ಮೇಲೆ ಅವಲಂಬಿತವಾಗಿದೆ. ನಮ್ಮ ದೇಶದಲ್ಲಿ ಇದರ ಬೆಳೆ ವಿಸ್ತೀರ್ಣ ಹೊಂದಿದ್ದರೂ ಉತ್ಪಾದನೆ ಮಾತ್ರ ಹೆಚ್ಚಿಲ್ಲ. ಇದಕ್ಕೆ ಕಾರಣ ಕ್ರಮವರಿತು ಸುಧಾರಿತ ಬೇಸಾಯ ಕ್ರಮ ಅಳವಡಿಸದೆ ಇರುವುದು ಕಾರಣವಾಗಿದೆ.
ಬೆಳೆಯುವ ಕಾಲ
ಮುಂಗಾರು ಬೆಳೆಯನ್ನು ಮೇ ತಿಂಗಳ 2ನೇ ವಾರದಿಂದ ಜುಲೈ ತಿಂಗಳ ಎರಡನೇ ವಾರದೊಳಗೆ ಬಿತ್ತನೆ ಮಾಡಬೇಕು. ಬೇಸಗೆ ಬೆಳೆಯನ್ನು ನವಂಬರ್‌ನಿಂದ ಜನವರಿ ಕೊನೆಯವರೆಗೂ ಬಿತ್ತನೆ ಮಾಡಬಹುದಾಗಿದೆ.
ಬಿತ್ತನೆ ವಿಧಾನ
ಭೂಮಿಯನ್ನು ಚೆನ್ನಾಗಿ ಹದ ಮಾಡಿದ ಮೇಲೆ ಶಿಫಾರಸು ಮಾಡಿದ ಸಾವಯವ ಗೊಬ್ಬರ (ಬಿತ್ತನೆಗೆ 2-3 ವಾರ ಮೊದಲು) ಮತ್ತು ರಾಸಾಯನಿಕ ಗೊಬ್ಬರವನ್ನು ಮಣ್ಣಿನಲ್ಲಿ ಬೆರೆಸಿ ಬೀಜೋಪಚಾರ ಮಾಡಿದ ಬೀಜವನ್ನು ಸಾಲಿನಿಂದ 30 ಸೆಂ.ಮೀ. ಅಂತರ ಹಾಗೂ ಬೀಜದಿಂದ ಬೀಜಕ್ಕೆ 15 ಸೆಂ.ಮೀ. ಅಂತರದಲ್ಲಿ ಬಿತ್ತನೆ ಮಾಡಬೇಕು. ಬೀಜವನ್ನು 5 ಸೆಂ.ಮೀ.ಗಿಂತ ಹೆಚ್ಚಿನ ಆಳದಲ್ಲಿ ಬಿತ್ತಬಾರದು. ಅಧಿಕ ಇಳುವರಿಯ ಪಡೆಯಲು ಎಕರೆಗೆ 200 ಕಿ.ಗ್ರಾಂ. ಚಿಪ್ಸಂನ್ನು ಬಿತ್ತನೆಗೆ ಮುಂಚೆ ಮಣ್ಣಿಗೆ ಸೇರಿಸಬೇಕು. ಬಿತ್ತನೆಗೆ ಮೊದಲು ಸೂಕ್ತ ಶಿಲೀಂದ್ರನಾಶಕ, ಅನಂತರ ರೈಜೋಬಿಯಂ ಜೀವಾಣುವಿನಿಂದ ಉಪಚರಿಸಿ ಬಿತ್ತಬೇಕು.
ಜಿಪ್ಸಂ ಉಪಯೋಗದ ಲಾಭ
ನೆಲಗಡಲೆ ಬೆಳೆಗೆ ಜಿಪ್ಸಂ ಉಪಯೋಗಿಸುವುದರಿಂದ ಮಣ್ಣು ಸಡಿಲಗೊಳ್ಳುವುದು. ಕಾಯಿಯ ಹೊಟ್ಟು ಗಟ್ಟಿಯಾಗುವುದು. ಬೇರು ಆಳಕ್ಕೆ ಹೋಗಿ ಕಾಯಿಯ ತೂಕ, ಕಾಯಿಯ ಎಣ್ಣೆಯ ಅಂಶ ಹೆಚ್ಚುವುದು.
ನೀರಾವರಿ, ಅಂತರ ಬೇಸಾಯ
ಬಿತ್ತನೆ ಸಮಯದಲ್ಲಿ ಒಂದು ಬಾರಿ ನೀರು ಹಾಯಿಸಿ ಬಿತ್ತನೆಯಾದ ನಾಲ್ಕು ವಾರ ಹೆಚ್ಚು ನೀರು ಕೊಡಬಾರದು. ಒಟ್ಟು ಮುಂಗಾರಿನಲ್ಲಿ ಭೂಮಿ ಮತ್ತು ಹವಾಮಾನಕ್ಕನುಗುಣವಾಗಿ 12 ಹಾಗೂ ಹಿಂಗಾರು ಬೇಸಗೆಯಲ್ಲಿ 16 ಇಂಚಿನಷ್ಟು ನೀರಿನ ಆವಶ್ಯಕತೆ ಇದೆ. ಬಿತ್ತಿದ 15 ದಿನದ ಅನಂತರ 10 ದಿನದ ಅಂತರದಲ್ಲಿ 3 ಬಾರಿ ಗಿಡಕ್ಕೆ ಮಣ್ಣು ಏರಿಸಬೇಕು. ಯಾವುದೇ ಕಾರಣಕ್ಕೂ ಬಿತ್ತಿದ 45 ದಿನಗಳ ಅನಂತರ ಮಣ್ಣು ಏರಿಸಬಾರದು. ಹೂ, ಕಾಳು ಕಟ್ಟುವಾಗ ಭೂಮಿಯಲ್ಲಿ ಸಾಕಷ್ಟು ತೇವಾಂಶ ಒದಗಿಸುವುದು ಮುಖ್ಯ. ಇದರಿಂದ ಹೆಚ್ಚಿನ ಇಳುವರಿ ಪಡೆಯಲು ಸಾಧ್ಯ.
ಕಳೆ ನಿಯಂತ್ರಣ
ಬಿತ್ತಿದ ದಿನ ಅಥವಾ ಮಾರನೆಯ ದಿನ ಶಿಫಾರಸು ಮಾಡಿದ ಕಳೆನಾಶಕವನ್ನು ಸಿಂಪಡಿಸಬೇಕು. ಸಿಂಪಡಣೆಯ ಅನಂತರ ಭೂಮಿಯನ್ನು ತುಳಿಯಬಾರದು. ಸಿಂಪಡಣೆ ಸಮಯದಲ್ಲಿ ಭೂಮಿಯಲ್ಲಿ ಸಾಕಷ್ಟು ತೇವಾಂಶ ಇರಬೇಕು.
ಕೂರಿಗೆ ಪದ್ಧತಿ: ಶೇಂಗಾ ಕೃಷಿಯಲ್ಲಿ ಕೂರಿಗೆ ಪದ್ಧತಿ ಅನುಸರಿಸುವುದರಿಂದ ಶೇ. 20ರಿಂದ 30ರಷ್ಟು ಖರ್ಚು ಕಡಿಮೆಯಾಗುವುದಲ್ಲದೆ ಲಾಭಾಂಶವೂ ಅದೇ ಪ್ರಮಾಣದಲ್ಲಿ ಹೆಚ್ಚುವುದು. ಈಗ ಎಕ್ರೆಗೆ 4ರಿಂದ 5 ಸಾವಿರ ರೂ. ವೆಚ್ಚವಾದರೆ ಕೂರಿಗೆ ವಿಧಾನದಿಂದ ಅದು ಕೇವಲ ಎರಡು ಸಾವಿರದಿಂದ ಎರಡುವರೆ ಸಾವಿರ ರೂ.ನಷ್ಟು ವೆಚ್ಚವಾಗುತ್ತದೆ.
ರಾಸಾಯನಿಕೇತರ ಸಸ್ಯ ಸಂರಕ್ಷಣೆ
1 ಸಾಗುವಳಿ ಪದ್ಧತಿ:
ಹೊಲದಲ್ಲಿ ಬಿತ್ತನೆಯಾದ 3-4 ವಾರಗಳ ಅನಂತರ ಅಲ್ಲಲ್ಲಿ ಕವಲಿರುವ ಮರ ನೆಟ್ಟು ಪಕ್ಷಿಗಳನ್ನು ಆಕರ್ಷಿಸಿ ಅದು ಎಲೆ ತಿನ್ನುವ ಹುಳುಗಳನ್ನು ಹೆಕ್ಕಿ ತಿನ್ನುತ್ತವೆ. ಸಾರಜನಕ ಗೊಬ್ಬರವನ್ನು ಶಿಫಾರಸು ಮಾಡಿರುವುದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ನೀಡಬಾರದು. ರಂಜಕ, ಪೊಟ್ಯಾಶ್ ತಪ್ಪದೆ ನೀಡಬೇಕು.
2 ಯಾಂತ್ರಿಕ ವಿಧಾನ:
ಬೆಳೆಯು ಹೂ ಹಂತದಲ್ಲಿರುವಾಗ ಕೀಟಗಳ ಸಂಖ್ಯೆ ಹೆಚ್ಚಿರುತ್ತದೆ. ಸಂಜೆ 7ರಿಂದ 9ರವರೆಗೆ ವಿದ್ಯುತ್‌ದೀಪ ಅಥವಾ ಪೆಟ್ರೋಮ್ಯಾಕ್ಸ್ ಬಳಸಿ ಕೀಟ ಪತಂಗಗಳನ್ನು ಆಕರ್ಷಿಸಿ ದೀಪದ ಕೆಳಭಾಗದಲ್ಲಿ ಸೀಮೆಎಣ್ಣೆ ಅಥವಾ ಕೀಟನಾಶಕ ಮಿಶ್ರಿತ ನೀರನ್ನು ಬಳಸಿ ನಾಶಮಾಡಬಹುದು.
3 ಮೋಹಕ ಬಲೆಗಳ ಬಳಕೆ:
ಎಲೆ ತಿನ್ನುವ ಕೀಟಗಳ ಹೆಣ್ಣು, ಗಂಡು ಪತಂಗಗಳನ್ನು ಆಕರ್ಷಿಸುವ ವಿಶಿಷ್ಟವಾದ ರಾಸಾಯನಿಕ (ಫೆರಮೋನ್) ಗಳನ್ನು ಕೃತಕವಾಗಿ ತಯಾರಿಸಿ ವಸ್ತುಗಳನ್ನು ಬಲೆಗಳಲ್ಲಿ ಬಳಸಿ ಗಂಡು ಪತಂಗಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸಿ ಕೊಲ್ಲುವುದರಿಂದ ಸಂತಾನಾಭಿವೃದ್ಧಿ ಕಡಿಮೆಯಾಗಿ ಕೀಟಗಳ ಸಂಖ್ಯೆ ಕಡಿಮೆಯಾಗುತ್ತದೆ.
ಅಧಿಕ ಇಳುವರಿಗೆ ಮಾರ್ಗೋಪಾಯ
1 ಮಣ್ಣಿನ ಪರೀಕ್ಷೆ, ತೇವಾಂಶದ ಆಧಾರದ ಮೇಲೆ ರಾಸಾಯನಿಕ ಗೊಬ್ಬರಗಳ ಪ್ರಮಾಣವನ್ನು ನಿರ್ಧರಿಸಬೇಕು.
2 ರೈಜೋಬಿಯಂ, ಪಿಎಸ್‌ಬಿ ಬೀಜೋಪಚಾರಕ್ಕೆ ಮುಂಚೆ ಶಿಲೀಂದ್ರ ನಾಶಕದ ಬೀಜೋಪಚಾರ ಮಾಡಬೇಕು.
3 ಬಿತ್ತನೆಗೆ ಮೊದಲು ಅಥವಾ ಬಿತ್ತನೆ ಆದ 30-40 ದಿನಗಳಲ್ಲಿ ಎಕ್ರೆಗೆ 200 ಕಿ.ಗ್ರಾಂ. ಜಿಪ್ಸಂ ಅನ್ನು ಮಣ್ಣಿನಲ್ಲಿ ಬೆರೆಸಬೇಕು.
4 ಬಿತ್ತನೆಯಾದ 4ನೇ ವಾರದವರೆಗೆ ಅತಿಯಾಗಿ ನೀರು ಹಾಯಿಸಬಾರದು ಹಾಗೂ ಮುಂದಿನ 2 ವಾರ ಮಿತವಾಗಿ ನೀರು ಹಾಯಿಸಬೇಕು.
5 ಸತು ಮತ್ತು ಬೋರಾನ್ ಕೊರತೆ ನೀಗಿಸಲು ಎಕ್ರೆಗೆ 4 ಕಿ.ಗ್ರಾಂ. ಸತುವಿನ ಸಲ್ಫೆàಟ್ ಮತ್ತು 4 ಕಿ.ಗ್ರಾಂ. ಬೊರಾಕ್ಸ್ ಅನ್ನು ಕೊಟ್ಟಿಗೆ ಗೊಬ್ಬರದ ಜತೆ ಸೇರಿಸಿ ಬಿತ್ತನೆಗೆ ಮೊದಲು ಭೂಮಿಗೆ ಸೇರಿಸಬೇಕು. ಇದರಿಂದ ಇಳುವರಿ, ಗುಣಮಟ್ಟ ಹೆಚ್ಚುತ್ತದೆ. ಪ್ರತಿ ಮೂರು ಬೆಳೆಗಳಿಗೆ ಒಂದು ಬಾರಿ ಬಿತ್ತನೆ ಸಮಯದಲ್ಲಿ ಮಣ್ಣಿಗೆ ಸೇರಿಸಬೇಕು.
ಜಯಾನಂದ ಅಮೀನ್ ಬನ್ನಂಜೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.