ಹುಡುಗರ ಉಡುಗೆ ಲೋಕದಲ್ಲಿ ಕುರ್ತಾಗಳದ್ದೇ ದರ್ಬಾರು
Team Udayavani, Mar 6, 2020, 3:28 AM IST
ಸಾಂಪ್ರದಾಯಿಕ ಉಡುಗೆಗಳು ಫ್ಯಾಷನ್ ಆಗುತ್ತಿರುವ ಜಮಾನಾದಲ್ಲಿ ಕುರ್ತಾ ಶರ್ಟ್‌ಗಳ ಕಾರುಬಾರು ಜೋರಾಗಿಯೇ ನಡೆದಿದೆ. ವಿನೂತನ ಶೈಲಿಯಿಂದ ಟ್ರೆಂಡ್ ಆಗುತ್ತಿರುವ ಈ ದಿರಿಸುಗಳು ವಿವಿಧ ಮಾದರಿಗಳಲ್ಲಿ ಲಭ್ಯವಾಗುತ್ತಿದ್ದು, ಹಿಂದಿನ ಮಾದರಿಯ ವಿನ್ಯಾಸಕ್ಕಿಂತ ಮತ್ತಷ್ಟು ಭಿನ್ನ ಮತ್ತು ಸ್ಟೈಲಿಶ್ ಆಗಿ ವಿನ್ಯಾಸ ಮಾಡಿ ಮಾರುಕಟ್ಟೆಗೆ ಬಿಡಲಾಗುತ್ತಿದೆ. ಇನ್ನು ಇದಕ್ಕೆ ಧೋತಿ, ಫಾರ್ಮಲ್ ಪ್ಯಾಂಟ್‌ಗಳನ್ನು ಹೊಂದಾಣಿಕೆ ಮಾಡಿಕೊಳ್ಳಲಾಗುತ್ತಿದೆ. ಭಾರತೀಯ ವಸ್ತ್ರ ಪರಂಪರೆಯಲ್ಲಿ ಪುರುಷರ ಪ್ರಮುಖ ಉಡುಗೆಯಾಗಿದ್ದ ಧೋತಿಯನ್ನು ಮತ್ತಷ್ಟು ನವೀಕರಣಗೊಳಿಸಿ ವಿಭಿನ್ನ ಶೈಲಿಯ ಮೂಲಕ ಯುವಕರನ್ನು ಸೆಳೆಯಲಾಗುದೆ. ಮಾರುಕಟ್ಟೆ ಟ್ರೆಂಡ್ ಆಗುತ್ತಿರುವ ಸಂಪ್ರಾದಾಯಿಕ ಸೊಗಡಿನ ಆಧುನಿಕ ಮೆರುಗನ್ನು ಹೊಂದಿರುವ ಕುರ್ತಾ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ.
ಕುರ್ತಾ ಶರ್ಟ್‌ಗಳು
ತುಂಬು ತೋಳು, ಗಿಡ್ಡ ತೋಳಿನ ಶರ್ಟ್, ಟೀ ಶರ್ಟ್‌ಗಳು, ಪೈಜಾಮಾದಂತಹ ಕೆಲವೇ ಆಯ್ಕೆಗಳಿಗೆ ಸೀಮಿತವಾಗಿದ್ದ ಹುಡುಗರ ವಸ್ತ್ರ ಲೋಕಕ್ಕೆ ಈಗ ನಾನಾ ಶೈಲಿಯ ಕುರ್ತಾಗಳು ಎಂಟ್ರಿಯಾಗಿವೆ. ಮಾರುಕಟ್ಟೆಯಲ್ಲಿ ಇಂದು ಸಖತ್ ಟ್ರೆಂಡ್ ಆಗುತ್ತಿರುವ ಈ ಮಾದರಿಯ ಉಡುಗೆ ಇಂದಿನ ಯುವಕರ ಮೆಚ್ಚಿನ ಧಿರಿಸಾಗಿ ಗುರುತಿಸಿಕೊಳ್ಳುತ್ತಿದೆ. ಫಾರ್ಮಲ್ ಫಂಕ್ಷನ್‌ಗಳಲ್ಲಿ ಶಾರ್ಟ್ ಕುರ್ತಾ, ಲಾಂಗ್ ಕುರ್ತಾಗಳು ಮನ್ನಣೆ ಪಡೆದುಕೊಳ್ಳುತ್ತಿ¤ವೆ.
ಕಣ್ಮನ ಸೆಳೆದ ಕೌಲ್ ಕುರ್ತಾದ ವಿನ್ಯಾಸ
ಎಡ ಭುಜದಿಂದ ಇಳಿದ ಐದು ನೆರಿಗೆಗಳು ಕುರ್ತಾದ ಕೊನೆಯಿಂದ ಸೊಂಟದ ಬಲಭಾಗದತ್ತ ಹೊರಳುತ್ತವೆ. ಕುರ್ತಾಕ್ಕೆ ಅಸಾಮಾನ್ಯ ನೋಟ ನೀಡುವುದೇ ಆ ನೆರಿಗೆಗಳು. ಭುಜದ ಬಳಿ ನೆರಿಗೆಗಳಿಗೆ ಮೇಲ್ಭಾಗದಲ್ಲೇ ಹೊಲಿಗೆ ಹಾಕಿರುವ ಕ್ಲಾಸಿ ಲುಕ್ ನೀಡುತ್ತದೆ. ಮದುವೆ ಮನೆ, ಶುಭ ಸಮಾರಂಭಗಳಲ್ಲಿ ಮದುಮಗ ಮತ್ತು ಅವನ ಅಕ್ಕಪಕ್ಕ ನಿಲ್ಲುವ ಸಹೋದರರಿಗೆ, ಸ್ನೇಹಿತರಿಗೆ ಪಕ್ಕಾ ಟ್ರೆಂಡಿ ಉಡುಗೆ ಎಂಬ ಹೆಗ್ಗಳಿಕೆ ಗಳಿಸಿದೆ.
ಭಿನ್ನವಾಗಿ ಕಾಣಲು ಜಾಕೆಟ್
ಭಿನ್ನವಾಗಿ ಕಾಣಲು ಕೌಲ್ ಕುರ್ತಾದ ಮೇಲೆ ಜಾಕೆಟ್‌ಗಳನ್ನು ಧರಿಸುತ್ತಿದ್ದು, ಕುರ್ತಾಕ್ಕೆ ಹೊಂದಾಣಿಕೆ ಆಗುವಂತೆ ವಾಸ್ಕೋಟ್‌ಗಳನ್ನು ವಿನ್ಯಾಸ ಮಾಡಲಾಗುತ್ತಿದೆ. ಜಾಕೆಟ್ ಆರಿಸುವಾಗಲೂ ಜಾಣತನ ಮತ್ತು ಸೌಂದರ್ಯಪ್ರಜ್ಞೆ ತೋರುವ ಯುವಕರು ಕೆನೆಬಣ್ಣದ ಕೌಲ್ ಕುರ್ತಾ ಮತ್ತು ಪೈಜಾಮದ ಮೇಲೆ ಗಂಧದ ಬಣ್ಣದ ಜಾಕೆಟ್, ತಿಳಿಗುಲಾಬಿ ಬಣ್ಣದ ಕೌಲ್ ಕುರ್ತಾ ಪೈಜಾಮಾಕ್ಕೆ ಗುಲಾಬಿ ಬಣ್ಣದ್ದೇ ಹೂಬಳ್ಳಿಯಂತಹ ವಿನ್ಯಾಸವಿರುವ ಜಾಕೆಟ್ ಮತ್ತು ಗ್ರೀಸ್ ಬಣ್ಣದ ಕುರ್ತಾಕ್ಕೆ ಅದೇ ಬಣ್ಣ ಮತ್ತು ತಿಳಿ ನೀಲಿ (ಇಂಡಿಗೊ)ವಿನ್ಯಾಸವಿರುವ ಜಾಕೆಟ್‌ಗಳನ್ನು ತೊಡುತ್ತಿದ್ದಾರೆ.
ಫಾರ್ಮಲ್ ಪ್ಯಾಂಟ್ ಮ್ಯಾಚಿಂಗ್
ಕುರ್ತಾ ಶರ್ಟ್‌ಗಳಿಗೆ ಜಿನ್ಸ್ ಪ್ಯಾಂಟ್‌ಗಳಿಗಿಂತ್ ಫಾರ್ಮಲ್ಸ್ ಮತ್ತು ಆಂಕ್ಯಲ್ ಪ್ಯಾಂಟ್‌ಗಳು ಹೊಂದಾಣಿಕೆಯಾದರೆ, ಮೊಣಕಾಲಿನವರೆಗೆ ಬರುವ ಕುರ್ತಾಗಳಿಗೆ ಪುಶ್ ಆಪ್ ಪ್ಯಾಂಟ್‌ಗಳು ಅಥವ ಪೈಜಾಮಾಗಳು ಸೂಟ್ ಆಗುತ್ತವೆ.
ಆಕರ್ಷಕ ವಿನ್ಯಾಸ
ಸೈಡ್ ಬಟನ್ ಮತ್ತು ಮಿಡ್‌ಲ್ ಬಟನ್ ಹೀಗೆ ಎರಡು ಮಾದರಿಯಲ್ಲಿ ಆಕರ್ಷಕವಾಗಿ ವಿನ್ಯಾಸಗೊಳಿಸಲಾಗಿದ್ದು, ರೌಂಡ್ ನೆಕ್ ಅಥವಾ ಚೈನಿಸ್ ಕಾಲರ್ ಇದರ ಅಂದವನ್ನು ಹೆಚ್ಚಿಸುತ್ತಿದೆ. ಪುಲ್ ಹ್ಯಾಂಡ್ ಮತ್ತು ತ್ರೀ ಫೋರ್ಥ್ ಕೈ ತೋಳುಗಳ ಮಾದರಿಯಲ್ಲಿ ಲಭ್ಯ. ಸಮಾರಂಭ ಮಾತ್ರವಲ್ಲ ಎಲ್ಲ ಸಂದರ್ಭಗಳಿಗೂ ಸೂಟ್ ಆಗುವ ಈ ಅಂಗಿಯನ್ನು ಕಾಲೇಜ್ ಹೈಕಳುಗಳಿಂದ ಹಿಡಿದು ಕಚೇರಿಗೆ ಹೋಗುವವರೂ, ಮಧ್ಯ ವಯಸ್ಕರೂ ತೊಡಲು ಆಸಕ್ತಿ ತೋರುತ್ತಿದ್ದಾರೆ.
– ಸುಶ್ಮಿತಾ ಜೈನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Commission: 60 ಪರ್ಸೆಂಟ್ ಕಮಿಷನ್: ಎಚ್‌ಡಿಕೆ ವಿರುದ್ಧ ಮುಗಿಬಿದ್ದ ಆಡಳಿತ ಪಕ್ಷ
illegal Investigation: ಬಿಬಿಎಂಪಿ ಮುಖ್ಯ ಎಂಜಿನಿಯರ್ ಕಚೇರಿ ಮೇಲೆ ಇ.ಡಿ. ದಾಳಿ
Waqf Report: ಅಮಿತ್ ಶಾ ಅಂಗಳಕ್ಕೆ ಭಿನ್ನರ ವಕ್ಫ್ ವರದಿ: ಕಿರಣ್ ರಿಜಿಜು ಮೂಲಕ ಸಲ್ಲಿಕೆ
Udupi:ಗೀತಾರ್ಥ ಚಿಂತನೆ 149: ಜಗತ್ತಿನಲ್ಲಿ ಇಷ್ಟೊಂದು ವ್ಯತ್ಯಾಸವೇಕೆ? ಪ್ರಶ್ನೆಗುತ್ತರವಿಲ್ಲ
ಮಮ್ತಾಜ್ ಅಲಿ ಆತ್ಮಹ*ತ್ಯೆ ಪ್ರಚೋದನೆ ಆರೋಪ: ಆರೋಪಿಗಳ ವಿರುದ್ದ ಆರೋಪ ಪಟ್ಟಿ ಸಲ್ಲಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.