ನಿದ್ರಾಹೀನತೆ ಯೋಗದಲ್ಲಿದೆ ಮದ್ದು; ಮಾತ್ರೆ ಬಿಡಿ ಯೋಗಕ್ಕೆ ಸಮಯ ನೀಡಿ
Team Udayavani, Feb 25, 2020, 5:03 AM IST
ನಿದ್ದೆಯ ಸಮಸ್ಯೆ ನಮ್ಮನ್ನು ಅತಿಯಾಗಿ ಕಾಡುತ್ತದೆ. ಸರಿಯಾಗಿ ನಿದ್ದೆಯಾಗದೇ ಇರಲು ಹಲವು ಕಾರಣಗಳನ್ನು ನಾವು ಪಟ್ಟಿ ಮಾಡಿಕೊಡ ಬಹುದಾಗಿದೆ. ಬಹುಶಃ ಒತ್ತಡ ಅಥವಾ ಇನ್ನಿತರ ಅಂಶಗಳು ನಿಮ್ಮ ಅಸೌಖ್ಯಕ್ಕೆ ಅಥವ ನಿದ್ರೆ ಕಾರಣವಾಗಿರಬಹುದು. ರಾತ್ರಿಯ ಹೊತ್ತು ನಿದ್ದೆ ಬಾರದಿರುವುದು ನಿದ್ರಾಹೀನತೆ ಅಥವಾ ಇನ್ಸೋಮ್ನಿಯಾದ ಸೂಚನೆಗಳಿರಬಹುದು. ಇನ್ಸೋಮ್ನಿಯ ಬಳಲಿಕೆಗಳ ಕಾರಣದಿಂದ ಕಾಡಬಹುದು.
ನಿದ್ರಾ ಹೀನತೆಗೆ ಕಾರಣ
ದಿನವಿಡೀ ಕೆಲಸ ಮಾಡಿ ದಣಿದು ಬಂದ ಬಳಿಕ ಪ್ರತಿಯೊಬ್ಬರು ನಿರೀಕ್ಷಿಸುವುದು ಮರು ದಿನದ ಬೆಳಗ್ಗಿನ ತನಕ ಸುಖ ನಿದ್ರೆ. ನಿದ್ರಾಹೀನತೆ ಸಮಸ್ಯೆಯು ಇಂದಿನ ದಿನಗಳಲ್ಲಿ ಸಾಮಾನ್ಯ ವಾಗಿದೆ. ಅಷ್ಟೇ ಅಲ್ಲದೆ ದಿನನಿತ್ಯದ ಜಂಜಾಟ, ಕದಡಿದ ನೆಮ್ಮದಿ, ಕೌಟುಂಬಿಕ ಕಲಹ, ಒತ್ತಡದ ಜೀವನ ಶೈಲಿ, ಆಹಾರ ಕ್ರಮದಲ್ಲಿ ಏರುಪೇರು, ಹೀಗೆ ನಾನಾ ರೀತಿಯ ಕಾರಣಗಳಿಂದಾಗಿ ಕೂಡ ನಾವು ರಾತ್ರಿಯ ಸುಖ ನಿದ್ರೆಯನ್ನು ಕಳೆದು ಕೊಳ್ಳುತ್ತಿದ್ದೇವೆ.
ಮಾತ್ರೆಯ ಅಗತ್ಯ ಇಲ್ಲ
ಈ ಎಲ್ಲಾ ಸಮಸ್ಯೆಯಿಂದ ಮುಕ್ತಿ ಹೊಂದಲು ಕೆಲವರು ನಿದ್ದೆಗುಳಿಗೆಗಳ ಮೊರೆ ಹೋಗುತ್ತಿದ್ದಾರೆ. ಆದರೆ ಈ ಮಾತ್ರೆಗಳು ತಾತ್ಕಾಲಿಕವಾಗಿ ನಿದ್ದೆಯನ್ನು ಒದಗಿಸಿದರೂ ಇವುಗಳ ಅಡ್ಡಪರಿಣಾಮಗಳು ತೀವ್ರವಾಗಿರುತ್ತ ಪ್ರತಿದಿನ ಯೋಗವನ್ನು ಅಭ್ಯಾಸ ಮಾಡುವುದರಿಂದ ನೀವು ರಾತ್ರಿಯಿಡಿ ಶಾಂತಿಯಿಂದ ನಿದ್ರೆ ಮಾಡಲು ಸಾಧ್ಯವಾಗುತ್ತದೆ. ಅದರಲ್ಲೂ ಸಂಜೆ ವೇಳೆ ಅಥವಾ ರಾತ್ರಿ ಮಲಗುವ ಮೊದಲು ಕೆಲವೊಂದು ಯೋಗಾಸನಗಳನ್ನು ಮಾಡಿದರೆ ನಿಮಗೆ ಕಣ್ತುಂಬ ನಿದ್ರೆ ಜತೆಗೆ ಮರುದಿನ ಉಲ್ಲಾಸಿತರಾಗಿ ದಿನ ಆರಂಭಿಸಲು ನೆರವಾಗುತ್ತದೆ.
ಜಾನು ಶೀರ್ಷಾಸನ
(ತಲೆಯಿಂದ ಮೊಣಕಾಲಿನ ವರೆಗೆ)
ಕಾಲುಗಳನ್ನು ಮುಂದಕ್ಕೆ ಚಾಚಿಕೊಂಡು ನೇರವಾಗಿ ಕುಳಿತುಕೊಳ್ಳಿ. ಬಲ ಮೊಣಕಾಲನ್ನು ಬಗ್ಗಿಸಿ ಮತ್ತು ಅದನ್ನು ಎಡ ತೊಡೆಯ ತನಕ ತನ್ನಿ. ಬಲ ಮೊಣಕಾಲು ನೆಲವನ್ನು ಸ್ಪರ್ಶಿಸಲಿ. ಉಸಿರನ್ನು ಎಳೆದುಕೊಳ್ಳಿ ಮತ್ತು ಎರಡು ಕೈಗಳನ್ನು ವಿಸ್ತಾರಗೊಳಿಸಿ. ಈಗ ಉಸಿರನ್ನು ಹೊರಗೆ ಬಿಡಿ ಮತ್ತು ಎಡ ಪಾದಗಳನ್ನು ಮುಟ್ಟಿ. ಎಡಪಾದದ ಎರಡು ಕಡೆಗೆ ನಿಮ್ಮ ಕೈಗಳನ್ನಿಡಿ. ಹೆಬ್ಬೆರಳನ್ನು ಒಂದು ನಿಮಿಷ ಹಿಡಿಯಿರಿ ಮತ್ತು ಇನ್ನೊಂದು ಕಾಲಿನಲ್ಲಿಯೂ ಇದೇ ರೀತಿ ಮಾಡಿ.
ಶವಾಸನ
(ಶವದ ಭಂಗಿ)
ಇದು ಎಲ್ಲಕ್ಕಿಂತಲೂ ತುಂಬಾ ಸುಲಭ ಆಸನ. ಬೆನ್ನನ್ನು ನೆಲಕ್ಕೊರಗಿಸಿ ಕೈಗಳು ಮತ್ತು ಕಾಲುಗಳನ್ನು ಜತೆ ಯಾಗಿಟ್ಟುಕೊಂಡು ಶವದಂತೆ ಮಲಗಿ ಮತ್ತು ನಿಮ್ಮ ಉಸಿರಾಟದ ಕಡೆ ಗಮನಹರಿಸಿ. ನಿದ್ರೆ ಬರಲು ಇದು ಒಳ್ಳೆಯ ಆಸನ.
ಉತ್ಥಾನಾಸನ (ನೇರವಾಗಿ ನಿಂತು ಬಾಗುವುದು)
ನಿಮ್ಮ ಎರಡು ಕಾಲುಗಳ ಮಧ್ಯೆ ಆರು ಇಂಚು ಸ್ಥಳಾವಕಾಶ ಇರುವಂತೆ ನಿಂತುಕೊಳ್ಳಿ. ದೇಹವನ್ನು ಬಾಗಿಸಿ ಎರಡು ಕೈಗಳಿಂದ ನಿಮ್ಮ ಕಾಲುಗಳನ್ನು ಮುಟ್ಟಿ. ಈ ಆಸನದಿಂದ ಒಳ್ಳೆಯ ನಿದ್ರೆ ಮಾತ್ರವಲ್ಲದೆ, ತಲೆನೋವು ಶಮನ
ವಾಗುತ್ತದೆ.
ಸುಖಾಸನ
(ಸುಲಭವಾಗಿ ಮುಂದಕ್ಕೆ ಬಾಗುವುದು)
ಎಲ್ಲರೂ ಪ್ರಯತ್ನಿಸಬಹುದಾದ ತುಂಬಾ ಸುಲಭ ಆಸನ. ತುಂಬಾ ಆರಾಮವಾಗಿ ಕುಳಿತುಕೊಂಡು ಮೊಣಕಾಲುಗಳನ್ನು ಬಗ್ಗಿಸಿ. ಕೈಗಳನ್ನು ಹಿಗ್ಗಿಸಿ ಮತ್ತು ಮುಂದಕ್ಕೆ ಬಾಗಿ. ನಿಮ್ಮ ತಲೆಯಿಂದ ನೆಲವನ್ನು ಸ್ಪರ್ಶಿಸಲು ಪ್ರಯತ್ನಿಸಿ. ಒಂದು ನಿಮಿಷ ಹಾಗೆ ಇರಿ ಮತ್ತು ಮತ್ತೆ ಆರಾಮದಾಯಕ ಸ್ಥಿತಿಗೆ ಬನ್ನಿ.
ಹಾಲಾಸನ
ಬೆನ್ನನ್ನು ನೆಲಕ್ಕೊರಗಿಸಿ ಮಲಗಿ, ಎರಡು ಕಾಲು ಗಳನ್ನು ನಿಮ್ಮ ತಲೆಯ ಮೇಲೆ ಎತ್ತಿ ಮತ್ತು ನೆಲವನ್ನು ಕಾಲಿನಿಂದ ಮುಟ್ಟಲು ಪ್ರಯತ್ನಿಸಿ. ಕೈಗಳು ನಿಮ್ಮ ಬೆನ್ನಿನ ನೆರವಿಗಿರಲಿ ಅಥವಾ ನೆಲದ ಮೇಲಿರಲಿ.
ಸುಪ್ತ ಬದ್ಧ ಕೋನಾಸನ
ಇದು ಒರಗು ಚಿಟ್ಟೆಯ ಆಸನ. ಬೆನ್ನನ್ನು ನೆಲಕ್ಕೊರಗಿಸಿ ಮಲಗಿ ಮತ್ತು ಕಾಲುಗಳನ್ನು ಜತೆಯಾಗಿರಿಸಿ. ಕಾಲುಗಳನ್ನು ನಿಮ್ಮ ಕೈಗಳಿಂದ ಹಿಡಿಯಿರಿ ಮತ್ತು ಇದೇ ರೀತಿ ಒಂದು ನಿಮಿಷ ಹಾಗೆ ಇರಿ.
ವಿಪ್ರಿತಾ ಕರಣಿ
ಇದು ವಿಶ್ರಾಂತಿ ಪಡೆಯಲು ಮತ್ತು ಒತ್ತಡ ಕಡಿಮೆ ಮಾಡಲು ಒಳ್ಳೆಯ ಆಸನ. ಗೋಡೆಯ ವಿರುದ್ಧವಾಗಿ ಮಾಡಬೇಕಾದ ಆಸನವಿದು. ಗೋಡೆಯ ಮೇಲೆ ಕಾಲುಗಳನ್ನಿಟ್ಟು ಸುಮಾರು 5-6 ನಿಮಿಷ ಹಾಗೆ ಇರಲಿ.
ಬಾಲಾಸನ
(ಮಕ್ಕಳ ಭಂಗಿ)
ಕೈಗಳನ್ನು ಮತ್ತು ಭುಜವನ್ನು ಮುಂದಕ್ಕೆ ಬಾಗಿಸಿ ಮಗುವಿನಂತೆ ಭಂಗಿ ನೀಡಿ. ನಿಮ್ಮ ಹಿಂಗಾಲಿನ ಮೇಲೆ ಪೃಷ್ಠವಿರಲಿ. ಸಾಮಾನ್ಯವಾಗಿ ಉಸಿರಾಡಿ. ಇದೇ ರೀತಿ ಕೆಲವು ಸಮಯ ಮಾಡಿ. ಉಸಿರು ಮೇಲಕ್ಕೆಳೆದುಕೊಳ್ಳಿ ಮತ್ತು ಆರಂಭದ ಸ್ಥಿತಿಗೆ ಬನ್ನಿ.
ಅರ್ಧ ಮತ್ಸೆéàಂದ್ರಾಸನ
ಕುಳಿತುಕೊಂಡು ನಿಮ್ಮ ಬಲಮೊಣಕಾಲನ್ನು ಎಡ ತೊಡೆಯ ಕಡೆ ಬಗ್ಗಿಸಿ. ಅದೇ ರೀತಿ ಎಡಮೊಣಕಾಲನ್ನು ಬಲ ತೊಡೆಯ ಕಡೆ ಬಗ್ಗಿಸಿ ಮತ್ತು ಎಡಭಾಗಕ್ಕೆ ದೃಷ್ಟಿಯಿಟ್ಟು ನೋಡಿ.
ಸೂರ್ಯ ಭೇದನ
ಅಡ್ಡಕಾಲಿನಲ್ಲಿ ಕುಳಿತುಕೊಂಡು ನಿಮ್ಮ ಬಲ ಮೂಗನ್ನು ಹೆಬ್ಬೆರಳಿನಿಂದ ಹಿಡಿಯಿರಿ ಮತ್ತು ಬೆರಳುಗಳನ್ನು ವಿಸ್ತರಿಸಿ. ಬಲದ ಮೂಗಿನಿಂದ 5-10 ಸಲ ದೀರ್ಘವಾಗಿ
ಉಸಿರಾಡಿ.
ಪ್ರಯೋಜನಗಳು ಏನು?
ಭುಜಗಳನ್ನು, ಕೈಗಳನ್ನು ಮತ್ತು ಮಣಿಕಟ್ಟುಗಳನ್ನು ಗಟ್ಟಿಗೊಳಿಸಲು ಸಹಾಯ ಮಾಡುತ್ತದೆ.
ಒತ್ತಡ ಮತ್ತು ಆತಂಕಗಳನ್ನು ಕಡಿಮೆ ಮಾಡಿ ಮೆದುಳಿಗೆ ವಿಶ್ರಾಂತಿಯನ್ನು ನೀಡುತ್ತದೆ.
ಹೊಟ್ಟೆಯ ಭಾಗವನ್ನು ಸ್ಟ್ರೆಚ್ ಮಾಡಲು ಇದು ಸಹಕರಿಸುತ್ತದೆ.
ಸಾಧಾರಣ ಖನ್ನತೆಯನ್ನು ನಿವಾರಿಸುತ್ತದೆ.
ಗಮನಿಸಿ: ಇದು ಮಾಹಿತಿ ಮಾತ್ರ
ಯೋಗ ಸೇರಿದಂತೆ ಯಾವುದೇ ಕಲಿಕೆ ಗುರುವಿನ ಮೂಲಕ ಕಲಿತಾಗ ಮಾತ್ರ ಸಮಗ್ರವಾಗಿ ಅರಿತುಕೊಳ್ಳಲು ಸಾಧ್ಯ.
ಆದ ಕಾರಣ ಇಲ್ಲಿ ನೀಡುತ್ತಿರುವುದು ಯೋಗದ ಕುರಿತು ಆಸಕ್ತಿ ಹೆಚ್ಚಿಸಲು ಮಾಹಿತಿಯೇ ಹೊರತು ಅಭ್ಯಾಸ ಕ್ರಮದ ನಿರ್ದೇಶನವಲ್ಲ. ಯೋಗಾಭ್ಯಾಸಿ ಯಾಗಲು ಸಮೀಪದ ಗುರುವನ್ನು ಸಂಪರ್ಕಿಸಿ ಪ್ರಶ್ನೆಗಳಿದರೆ ಕೇಳಿ.
ನಾವು ಪ್ರತಿ ನಿತ್ಯ ಯೋಗ
ಮಾಡಿದರೆ ನಿದ್ರಾಹೀನತೆಯಂತಹ ಸಮಸ್ಯೆಗಳು ಬಾರದು. ಪ್ರತಿ ನಿತ್ಯ ಒಂದು ಗಂಟೆ ಯೋಗ ಮಾಡಬೇಕು. ನಾವು ಚಟುವಟಿಕೆಯಿಂದ ಇದ್ದರೆ ಮನಸ್ಸು ಚರುಕಾಗಿರುತ್ತದೆ.
ಇದಕ್ಕಾಗಿ ನಾವು ವಿಶೇಷವಾಗಿ ಆಸನಗಳನ್ನು ಬಳಸಿಕೊಳ್ಳಬಹುದು.
-ವಿವೇಕ್ ಪೈ,
ಯೋಗ ತಜ್ಞರು,ಕುಂದಾಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.