ಸ್ಫೂರ್ತಿಯಾದ ಯಶಸ್ವಿ ಮಹಿಳೆಯರು
Team Udayavani, Aug 27, 2018, 1:47 PM IST
ಸಾಧನೆ ಅಸಾಧ್ಯವಲ್ಲ
ಅನುಕರಣೆ ಎಂಬುವುದು ಇಂದು ಎಲ್ಲ ಕ್ಷೇತ್ರಗಳಲ್ಲೂ ಸಾಮಾನ್ಯ. ಅದು ಕ್ರೀಡಾಳುಗಳಿಂದ ಹಿಡಿದು ಚಿತ್ರನಟರ ತನಕ. ಆದರೆ ಆ ಪರಿ ಕೇವಲ ನೋಟ, ಆಕರ್ಷಣೆ, ನಡವಳಿಕೆಗಷೇ ಸೀಮಿತವಾಗಬಾರದು. ಹೆಚ್ಚಿನವರು ಎಡವುದು ಕೂಡ ಇಲ್ಲಿಯೇ. ಈಗಾಗಲೇ ಸಾಧಕರು ಅನಿಸಿಕೊಂಡವರು, ಸಾಧನೆ ಮಾಡುತ್ತಿರುವವರ ಹಿನ್ನಲೆ, ಅವರು ಪಟ್ಟ ಕಷ್ಟ, ಅದರ ಹಿಂದಿನ ನೋವು, ಅವರು ಎದುರಿಸಿದ ಸವಾಲುಗಳನ್ನು ನಾವು ಕರಗತ ಮಾಡಿಕೊಂಡರಷ್ಟೇ ನಾವೂ ಯಶಸ್ಸಿನತ್ತ ಸಾಗಲು ಸಾಧ್ಯ.
ವಾಣಿಜ್ಯ, ತಂತ್ರಜ್ಞಾನ, ಆರೋಗ್ಯ ಕ್ಷೇತ್ರದಲ್ಲಿ ಮಹಿಳೆಯರ ಸಾಧನೆ ಬಹಳ ಕಡಿಮೆ ಇದ್ದರೂ ಒಂದು ಸಣ್ಣ ಹುದ್ದೆ ಅಥವಾ ಪದವಿಗೆ ತೃಪ್ತಿ ಪಟ್ಟುಕೊಂಡಿರುತ್ತಾರೆ. ಉನ್ನತ ಪದವಿಯನ್ನೇರುವ ಅವಕಾಶ ಬಂದರೆ ಅದು ತನಗೆ ತಕ್ಕುದ್ದಲ್ಲ ಎಂದು ಹೇಳಿ ಹಿಂಜರಿಯುತ್ತಾರೆ. ಆದರೆ ಇಲ್ಲಿ ಕೆಲವರಿದ್ದಾರೆ. ವಯಸ್ಸಿನ ಅಂತರವನ್ನು ಮೀರಿ ಬೆಳೆದಿದ್ದಾರೆ. ಸಾಂಪ್ರದಾಯಿಕ ಚೌಕಟ್ಟು ಬಿಟ್ಟು ಹೊರ ನಡೆದಿದ್ದಾರೆ. ತಾವೂ ಯಾರಿಗೂ ಕಡಿಮೆ ಇಲ್ಲ ಎನ್ನುವುದನ್ನು ಜಗತ್ತಿಗೆ ಸಾರಿದ್ದಾರೆ. ಬದುಕಿನಲ್ಲಿ ಅತ್ಯಂತ ಕಠಿನ ಸವಾಲುಗಳನ್ನು ಎದುರಿಸಿ ತಮ್ಮ ಕಾರ್ಯಕ್ಷೇತ್ರದಲ್ಲಿ ಮುಖ್ಯ ಹುದ್ದೆಯನ್ನು ಅಲಂಕರಿಸಿ, ತಮ್ಮ ಸಂಸ್ಥೆಯನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ.
ರೋಶಿನಿ ನಾದಾರ್ ಮಲ್ಹೋ ತ್ರಾ
ವಯಸ್ಸು 36, ಹುಟ್ಟಿದ್ದು ಹೊಸ ದಿಲ್ಲಿಯಲ್ಲಿ. ಎಂಬಿಎ ಪದವಿ ಪಡೆದ ಇವರು 2009 ತಮ್ಮ 27ನೇ ವಯಸ್ಸಿನಲ್ಲಿ ಎಚ್‌ಸಿಎಲ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಆಯ್ಕೆಯಾದ ಅವರು ಒಂದೇ ವರ್ಷದಲ್ಲಿ ಅದೇ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರಾದರು. ವಯಕ್ತಿಕ ಗಣಕ ಉದ್ಯಮದಲ್ಲಿ ಮುಂಚೂಣಿಯಲ್ಲಿರುವ, ತಂತ್ರಜ್ಞಾನ, ಆರೋಗ್ಯ ರಕ್ಷಣೆ, ಇನ್ಫೋಸಿಸ್ಟಮ್ ಕುರಿತು ಕಾರ್ಯನಿರ್ವಹಿಸುವ ಎಚ್ ಸಿಎಲ್‌ನ 7.5 ಮಿಲಿಯನ್ ಉದ್ಯಮಗಳ ಕಾರ್ಯ ತಂತ್ರದ ನಿರ್ಧಾರಗಳನ್ನು ರೂಪಿಸುವವರಾಗಿದ್ದಾರೆ. ಇಬ್ಬರು ಮಕ್ಕಳು ಇವರಿಗಿದ್ದಾರೆ.
ಚಂದಾ ಕೊಚ್ಚಾರ್
ವಯಸ್ಸು 56, ಹುಟ್ಟಿದ್ದು ರಾಜಸ್ಥಾನ. ಎಂಕಾಂ ಪದವೀಧರೆ. ಇಬ್ಬರು ಮಕ್ಕಳ ತಾಯಿ. ಈಗ ಐಸಿಐಸಿಐ ಬ್ಯಾಂಕ್‌ನ ನಿರ್ದೇಶಕರು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ. ಗ್ರಾಮಗಳ ಉನ್ನತೀಕರಣವನ್ನೇ ತಮ್ಮ ಬದುಕಿನ ಗುರಿಯಾಗಿಸಿಕೊಂಡು ಬಂದ ಇವರು, ದೇಶದ 17 ರಾಜ್ಯಗಳಲ್ಲಿ 11 ಸಾವಿರ ಗ್ರಾಮಗಳಲ್ಲಿ ಔದ್ಯೋಗಿಕ ತರಬೇತಿ ನೀಡಿದ್ದಾರೆ. ಮುಳುಗುವ ಸ್ಥಿತಿಯಲ್ಲಿದ್ದ ವಾರ್ಷಿಕ ಬೋನಸ್‌ಗಳನ್ನು ಸರಿಯಾದ ಹಂತಕ್ಕೆ ತಂದು ಉತ್ತಮ ಆದಾಯ ಗಳಿಸಿಕೊಟ್ಟವರು. ಬ್ಯಾಂಕ್ ಗಳ ವ್ಯವಹಾರ, ವಿಮೆ ಸೌಲಭ್ಯ ಸಾರ್ವಜನಿಕರಿಗೆ ಸುಲಭವಾಗುವಂತೆ ಮಾಡಿದ ಕೀರ್ತಿಯೂ ಇವರದ್ದೇ ಆಗಿದೆ. ದೇಶದ ಅತಿ ಹೆಚ್ಚು ಸಂಭಾವನೆ ಪಡೆಯುವ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಲ್ಲಿ ಇವರೂ ಒಬ್ಬರಾಗಿದ್ದಾರೆ.
ಕಿರಣ್ ಮಜುಮ್ದಾರ್ ಶಾ
ವಯಸ್ಸು 65. ಹುಟ್ಟಿದ್ದು ಬೆಂಗಳೂರು. ಎಂಎ ಪದವೀಧರೆ. ಬಯೋಕಾನ್ ಲಿಮಿಟೆಡ್‌ನ ಸ್ಥಾಪಕಾಧ್ಯಕ್ಷರು. ಸೆಲ್ಫ್ ಮೇಡ್ ವೆಲ್ತ್ ಬಯೋಟೆಕ್‌ನ ಬಯೋಕಾನ್ ಕಂಪೆನಿ ವಿದೇಶಗಳಲ್ಲಿಯೂ ಕಾರ್ಯನಿರ್ವಹಿಸುತ್ತಿದೆ. ಅಟೋ ಇಮ್ಯೂನ್, ಮಧು ಮೇಹ, ಕ್ಯಾನ್ಸರ್‌ಗಳಿಗೆ ಚಿಕಿತ್ಸೆ ಒದಗಿಸುವ ಬಯೋಕಾನ್ ಸಂಸ್ಥೆ ಏಷ್ಯಾದಲ್ಲಿಯೇ ಇನ್ಸುಲಿನ್ ಗಳನ್ನು ಹೆಚ್ಚು ಉತ್ಪಾದಿಸುವ ಸಂಸ್ಥೆಯಾಗಿದೆ. ಇದರ ಮುಖ್ಯ ಕಚೇರಿ ಇರುವುದು ಮಲೇಶಿಯಾದ ಜೋಹರ್‌ನಲ್ಲಿ.
ಶೋಭನಾ ಭಾರ್ತಿಯಾ
ವಯಸ್ಸು 61. ಹುಟ್ಟಿದ್ದು ದೆಹಲಿಯಲ್ಲಿ. ಇಬ್ಬರು ಮಕ್ಕಳ ತಾಯಿ. ಆಂಗ್ಲ ಮತ್ತು ಹಿಂದಿ ಭಾಷೆಗಳಲ್ಲಿ ಪ್ರಕಟವಾಗುವ ಹಿಂದೂ ಸ್ಥಾನ್ ಟೈಮ್ಸ್ ಎಂಬ ಬೃಹತ್ ಮಾಧ್ಯಮ ಸಂಸ್ಥೆಯ ಅಧ್ಯಕ್ಷರು ಮತ್ತು ಸಂಪಾದಕೀಯ ವಿಭಾಗದ ಮುಖ್ಯಸ್ಥರಾಗಿದ್ದಾರೆ. ವಾಣಿಜ್ಯ ಲೋಕದ ಸುದ್ದಿಗಳನ್ನು ನೀಡುತ್ತಿರುವ ಮಿಂಟ್ ಪತ್ರಿಕಾ ಬಳಗದಲ್ಲಿಯೂ ಪ್ರಮುಖ ಸ್ಥಾನವನ್ನು ಅಲಂಕರಿಸಿದ್ದಾರೆ.
ಇವರ ನಾಯಕತ್ವದಲ್ಲಿ ಎಚ್‌ಟಿ ಸಂಸ್ಥೆ ನಾಲ್ಕು ಬಾನುಲಿ ಕೇಂದ್ರಗಳನ್ನು, ಉದ್ಯೋಗ, ಸಿನೆಮಾ ವಿಚಾರಗಳನ್ನೊಳಗೊಂಡಂತೆ ಅನೇಕ ವೆಬ್‌ಸೈಟ್‌ಗಳನ್ನು ನಡೆಸುತ್ತಿದೆ. 2013ರಲ್ಲಿ ಭಾಟಿಯಾ ವಾಣಿಜ್ಯ ವ್ಯವಹಾರಕ್ಕೆ ಸಂಬಂಧಿಸಿದಂತೆ ಮಿಂಟ್ ಏಷ್ಯಾವನ್ನು ಸಿಂಗಾಪುರದಲ್ಲಿ ಆರಂಭಿಸಿದ್ದರು. ಅಲ್ಲದೆ ಇವರ ನೇತೃತ್ವದಲ್ಲಿ ಆಡಳಿತಾತ್ಮಕ ವಿಚಾರದ ಕುರಿತು ವಿದ್ಯಾರ್ಥಿಗಳಿಗೆ ಕೋಚಿಂಗ್ ನೀಡಲು ಭಾರತದಲ್ಲಿ ಎಲೈಟ್ ಎಂಜಿನಿಯರಿಂಗ್ ಸ್ಕೂಲ್ ಕಾರ್ಯ ನಿರ್ವಹಿಸುತ್ತಿದೆ. ಇತ್ತೀಚೆಗಷ್ಟೇ ರೇಡಿಯೋ ನಾಸ 107.2 ಅನ್ನು ದೆಹಲಿಯಲ್ಲಿ ಆರಂಭಿಸಿದ ಸಾಧನೆಯೂ ಇವರದ್ದಾಗಿದೆ.
ಪ್ರಿಯಾಂಕಾ ಚೋಪ್ರಾ
ಬಾಲಿವುಡ್, ಹಾಲಿವುಡ್ ಸಹಿತ ಸಿನೆಮಾ ಕ್ಷೇತ್ರದಲ್ಲಿ ಅತ್ಯಂತ ಯಶಸ್ವಿ ಮಹಿಳೆಯರಲ್ಲಿ ಒಬ್ಬರಾಗಿರುವ ಇವರ ವಯಸ್ಸು 36. 2003ರಲ್ಲಿ ವೃತ್ತಿ ಕ್ಷೇತ್ರಕ್ಕೆ ಇಳಿದ ಇವರು 40ಕ್ಕೂ ಹೆಚ್ಚು ಬಾಲಿವುಡ್ ಸಿನೆಮಾದಲ್ಲಿ ಕೆಲಸ ಮಾಡಿದ್ದಾರೆ. ಟಿವಿ ಮಾಧ್ಯಮದಲ್ಲಿ ಅತೀ ಹೆಚ್ಚು ಆದಾಯ ಗಳಿಸುವ ಮಹಿಳೆಯರ ಸಾಲಿನಲ್ಲಿರುವ ಪ್ರಿಯಾಂಕಾ ಚೋಪ್ರಾ ನಿರ್ದೇಶಕರಾಗಿಯೂ ಗುರುತಿಸಿಕೊಂಡಿದ್ದಾರೆ. ಪ್ರಾದೇಶಿಕ ಚಲನಚಿತ್ರ ಮಾಡುವವರಿಗೆ ಪ್ರೋತ್ಸಾಹ ಮತ್ತು ಪ್ರತಿಭೆ ಗುರುತಿಸುವ ಸಲುವಾಗಿ ಮುಂಬಯಿಯಲ್ಲಿ ಪರ್ಪಲ್ ಪೆಬೆಲ್ ಪಿಕ್ಚರ್ ಅನ್ನು ಆರಂಭಿಸಿದರು. ಮಕ್ಕಳ ಹಕ್ಕಿಗಾಗಿ ಹೋರಾಟ ಮಾಡುತ್ತಿರುವ ಇವರು ಯುನಿಸೆಫ್ನ ರಾಯಭಾರಿ ಯಾಗಿಯೂ ಗುರುತಿಸಿಕೊಂಡಿದ್ದಾರೆ.
ವಿಶ್ವದ ಶಕ್ತಿಶಾಲಿ ಮಹಿಳೆಯರ ಸಾಲಿನಲ್ಲಿ ಗುರುತಿಸಿಕೊಂಡಿರುವ ಇವರು ನಮ್ಮ ದೇಶದ ಹೆಮ್ಮೆಯೂ ಹೌದು. ಮದುವೆ, ಮಕ್ಕಳಾದರೆ ಅಥವಾ ವಯಸ್ಸು 30 ಆದರೆ ಸಾಕು ತಮ್ಮ ಬದುಕೇ ಮುಗಿದು ಹೋಯಿತು ಎಂದು ವರ್ತಿಸುತ್ತಿರುವ ಅನೇಕ ಮಹಿಳೆಯರಿದ್ದಾರೆ. ಆದರೆ ಇವರು ತಮ್ಮ ವೃತ್ತಿ ಕ್ಷೇತ್ರದಲ್ಲಿ ಸಾಧನೆಯ ಹಾದಿಯಲ್ಲಿ ಯಶಸ್ವಿಯಾಗಿ ಮುನ್ನಡೆದದ್ದು 30 ವರ್ಷದ ಅನಂತರವೇ. ತಾವು ಆಯ್ಕೆ ಮಾಡಿ ಕೊಂಡ ಕ್ಷೇತ್ರದಲ್ಲಿ ಪ್ರೀತಿಯಿಟ್ಟು, ಧೈರ್ಯದಿಂದ ಮುನ್ನಡೆದು ಇಂದು ಸಾಧಕರ ಸಾಲಿನಲ್ಲಿ ಗುರುತಿಸಿಕೊಂಡಿದ್ದಾರೆ.
2017ರಲ್ಲಿ ಫೋರ್ಬ್ಸ್ ಮ್ಯಾಗಜೀನ್ ಬಿಡುಗಡೆ ಮಾಡಿದ 100 ಹೆಚ್ಚು ಶಕ್ತಿಶಾಲಿ ಮಹಿಳೆಯರ ಪಟ್ಟಿಯಲ್ಲಿ ಭಾರತದ ಈ ಐವರು ಸ್ಥಾನಗಿಟ್ಟಿಸಿಕೊಂಡಿದ್ದರು. ಒಟ್ಟಿನಲ್ಲಿ ಪ್ರಗತಿಯ ಪಥ ಬೇರೆಯದ್ದಾಗಿದ್ದರೂ ತಮ್ಮದೇ ಕ್ಷೇತ್ರದಲ್ಲಿ ಉನ್ನತಿಯನ್ನು ಪಡೆದು ಇವತ್ತು ವಿಶ್ವದಾದ್ಯಂತ ತಮ್ಮ ಕೆಲಸದ ಮೂಲಕವೇ ಗುರುತಿಸಿಕೊಂಡು ಪ್ರಮುಖ ಸಾಧಕ ಮಹಿಳೆಯರ ಸಾಲಿನ ಇವರು ನಿಂತಿದ್ದಾರೆ. ಇನ್ನೊಬ್ಬರಿಗೆ ಮಾರ್ಗದರ್ಶನ ತೋರುತ್ತಿದ್ದಾರೆ. ಸಾಧನೆಯ ಛಲವಿದ್ದರೆ ಯಾರೂ ನಿಮ್ಮನ್ನು ತಡೆಯಲಾರರು ಎಂಬ ಸಂದೇಶವನ್ನು ಸಾರುತ್ತಿದ್ದಾರೆ.
ಭುವನಾ, ಪ್ರೀತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.