ಪೌರಾಣಿಕ ಪ್ರಸಂಗಗಳಿಗೆ ಜೀವ ತುಂಬುವ ಐರೋಡಿಯ ಕಲಾವಿದ

Team Udayavani, Feb 20, 2020, 5:48 AM IST

aaaa

ಸಾಸ್ತಾನ ಐರೋಡಿಯ ಗೋವಿಂದಪ್ಪನವರು ಯಕ್ಷಗಾನದ ಪಾರಂಪರಿಕ ಕೊಂಡಿಯಾಗಿದ್ದಾರೆ. ಇವರು ಸಂಪ್ರದಾಯವನ್ನು ಚಾಚುತಪ್ಪದೆ ಪರಿಪಾಲಿಸಿ ಪೌರಾಣಿಕ ಪಾತ್ರಗಳಿಗೆ ಜೀವತುಂಬುವ ಮೂಲಕ ಯಕ್ಷರಂಗದಲ್ಲಿ ಕ್ರಾಂತಿಯ ಹೆಜ್ಜೆಗುರುತು ಮೂಡಿಸಿದವರು. ಸುದಿನ ಪ್ರತಿಭಾ ಸಿರಿಗೆ ಇವರನ್ನು ಮಾತನಾಡಿಸಿದ್ದಾರೆ ರಾಜೇಶ್‌ ಗಾಣಿಗ ಅಚ್ಲಾಡಿ.

ಸಾಸ್ತಾನ ಬಳಿಯ ಐರೋಡಿಯಲ್ಲಿ 1945ರಲ್ಲಿ ಬೂದ ಭಾಗವತ ಮತ್ತು ಗೌರಿ ದಂಪತಿಯ ಪುತ್ರನಾಗಿ ಜನಿಸಿದ ಐರೋಡಿ ಗೋವಿಂದಪ್ಪನವರು ಐದನೇ ತರಗತಿಗೆ ಶಿಕ್ಷಣ ಮುಗಿಸಿ ಭಾಗವತರಾಗಿದ್ದ ತಂದೆ ಬೂದ ಅವರಿಂದ ತಾಳ, ನೃತ್ಯ, ಬಣ್ಣಗಾರಿಕೆಯ ಪ್ರಾಥಮಿಕ ಅಭ್ಯಾಸ ಕಲಿತವರು. ಯಕ್ಷಗುರು ಕಾಂತಪ್ಪ ಮಾಸ್ಟರ್‌ರಿಂದ ತರಬೇತಿ ಪಡೆದು ಯಕ್ಷರಂಗಕ್ಕೆ ಹೆಜ್ಜೆ ಇಟ್ಟರು. ಗೋಳಿಗರಡಿ ಮೇಳದ ಕಲಾವಿ ದನಾಗಿ ವೃತ್ತಿ ಜೀವನಕ್ಕೆ ಪ್ರವೇಶಿಸಿ ಕುಂಡಾವು, ಸಾಲಿಗ್ರಾಮ, ಪೆರ್ಡೂರು, ಮುಲ್ಕಿ, ಅಮೃತೇಶ್ವರೀ, ಹಿರಿಯಡ್ಕ, ಕುಂಬ್ಳೆ ಮೇಳಗಳಲ್ಲಿ 55 ವರ್ಷ ತಿರುಗಾಟ ನಡೆಸಿದವರು. ಕರ್ಣನ ಪಾತ್ರಕ್ಕೆ ಹೊಸ ಆಯಾಮವನ್ನು ಕೊಟ್ಟದ್ದು ಅವರ ಹೆಗ್ಗಳಿಕೆ. ಭೀಷ್ಮ, ತಾಮ್ರಧ್ವಜ, ಅರ್ಜುನ, ಜಾಂಬವ ಮೊದಲಾದ ಪಾತ್ರಗಳ ಮೂಲಕವೂ ಜನಪ್ರಿಯರಾದರು. ಬಡಗು ಮತ್ತು ತೆಂಕು ಎರಡೂ ತಿಟ್ಟುಗಳಲ್ಲಿ ತಿರುಗಾಟ ನಡೆಸಿರುವುದು ಹಾಗೂ ಗೋಳಿಗರಡಿ ಮೇಳದಲ್ಲಿ 25 ವರ್ಷಗಳ ಸೇವೆ ಮಾಡಿದ್ದು ಅವರ ಸಾಧನೆ. 2003ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, ಜನಪದ ಪ್ರಶಸ್ತಿ, ಸೋಮನಾಥ ಹೆಗ್ಡೆ ಸ್ಮಾರಕ ಪ್ರಶಸ್ತಿ ಸೇರಿದಂತೆ ಹಲವು ಗೌರವ ಸಂದಿವೆ.

ಯಕ್ಷಗಾನ ನಿಮ್ಮ ಕಾಲದಲ್ಲಿ ಹೇಗಿತ್ತು? ಇಂದು ಹೇಗಿದೆ ?
ಅಂದು ನಿಜವಾದ ಯಕ್ಷಗಾನವಿತ್ತು. ಇಂದು ತನ್ನ ಮೂಲ ಆಶಯವನ್ನು ಕಳೆದು ಕೊಂಡು ಬಡವಾಗಿದೆ. ವೇಷಭೂಷಣ, ಅಭಿನಯ, ಹಾಡುಗಾರಿಕೆಗಳು ಇಂತಹ ಪಾತ್ರಕ್ಕೆ ಹೀಗೇ ಇರಬೇಕೆಂಬ ನಿಯಮ ವಿದೆ. ರಾಜನ ಪಾತ್ರ ಮಾಡುವವನು ಯಾವುದೇ ಕಾರಣಕ್ಕೆ ಕಿರೀಟವನ್ನು ಕಳಚಿ ರಂಗಸ್ಥಳಕ್ಕೆ ಬರುವಂತಿಲ್ಲ. ಆದರೆ ಈಗ ಕುಣಿತಕ್ಕೆ ಸಮಸ್ಯೆಯಾಗುತ್ತದೆ ಎಂದು ಕೀರಿಟ ಕಳಚಿ ರಂಗ ಪ್ರವೇಶ ಮಾಡುತ್ತಾರೆ. ಇದು ಸೂಕ್ತವಲ್ಲ.

ಪೌರಾಣಿಕ ಪ್ರಸಂಗಗಳು, ಪಾತ್ರಗಳು ಮೌಲ್ಯ ಕಳೆದುಕೊಳ್ಳುತ್ತಿವೆಯೇ ?
ಇಲ್ಲ. ಆದರೆ ಅದನ್ನು ಸಮರ್ಥವಾಗಿ ಪ್ರದರ್ಶಿಸುವ ಕಲಾವಿದರ ಕೊರತೆ ಇದೆ. ಉದಾಹರಣೆಗೆ ಕರ್ಣಾರ್ಜುನದ ಕರ್ಣ, ಭೀಷ್ಮ ವಿಜಯದ ಭೀಷ್ಮ, ಅಂಬೆ ಪಾತ್ರಗಳಿಗೆ ತನ್ನದೇ ಆದ ಚೌಕಟ್ಟಿದೆ. ಹೊಸ ಕಲಾವಿದರು ಅದಕ್ಕೆ ತನ್ನದೇ ಹೊಸ ಪರಿಕಲ್ಪನೆ ನೀಡಿದಾಗ ವಿರೂಪವಾಗುತ್ತದೆ. ಭೀಷ್ಮ ವಿಜಯದಲ್ಲಿ ಅಂಬೆ ಅಗ್ನಿಗೆ ಆಹುತಿಯಾಗುವ ಸಂದರ್ಭಕೆಲವು ಪ್ರಬುದ್ಧ ಕಲಾವಿದರು ಗಿಮಿಕ್‌ಗಳನ್ನು ಮಾಡುವುದನ್ನು ನೋಡುತ್ತೇವೆ. ಅದು ಅನವಶ್ಯಕ. ದಯವಿಟ್ಟು ಪೌರಾಣಿಕ ಪಾತ್ರಗಳಿಗೆ ಹೊಸತನ ಅಳವಡಿಸಬೇಡಿ.

ಬದಲಾವಣೆ ಬಗ್ಗೆ ಅಭಿಪ್ರಾಯ?
ಬದಲಾವಣೆ ಬೇಕು. ಆದರೆ ಬದಲಾ ವಣೆ ಕಲೆಗೆ ಹಿನ್ನಡೆಯಾಗಬಾರದು. ಕಲೆಯ ಮೂಲತಣ್ತೀಕ್ಕೆ ಧಕ್ಕೆಯಾಗಬಾರದು. ಅಂಥ ಬದಲಾವಣೆ ಖಂಡಿತಾ ಬೇಡ.

ಪ್ರೇಕ್ಷಕ ಹೇಗಿರಬೇಕು?
ಒಳ್ಳೆಯ ಪ್ರಶ್ನೆ. ನಿಜವಾಗಿ ಯಕ್ಷಗಾನ ಕಲೆ ಹಾಳಾಗಲಿಕ್ಕೆ ಕಲಾವಿದನ ಜತೆಗೆ ಪ್ರೇಕ್ಷಕನ ಪಾತ್ರವೂ ದೊಡ್ಡದಿದೆ. ಕಲಾ ವಿದನ ರೀತಿಯಲ್ಲಿ ಪ್ರೇಕ್ಷಕನಿಗೂ ಕಲೆಯ ಬಗ್ಗೆ ಜ್ಞಾನ ಇರಬೇಕು. ಆದರೆ ಇಂದಿನ ಶೇ.90ರಷ್ಟು ಪ್ರೇಕ್ಷಕರಿಗೆ ಕಲೆಯ ಬಗ್ಗೆ ಅರಿವು ಕಡಿಮೆ. ಹೀಗಾಗಿ ಭಾಗವತ ಸುಗಮ ಸಂಗೀತ, ಭಜನೆ ಹಾಡಿದರೂ, ಕಲಾವಿದ ಸಿನೆಮಾ ನೃತ್ಯ ಮಾಡಿದರೂ ಚಪ್ಪಾಳೆ ತಟ್ಟುತ್ತಾರೆ.

ಹೊಸ ಪ್ರಸಂಗಗಳು-ಪ್ರಸಂಗಕರ್ತರ ಬಗ್ಗೆ ನಿಮ್ಮ ಅಭಿಪ್ರಾಯ?
ಪ್ರಸಂಗ ರಚಿಸಲು ಛಂದಸ್ಸು, ಮಾತ್ರೆಗಳು, ತಾಳ, ಲಯ, ಶ್ರುತಿ ಜ್ಞಾನ ಬೇಕು. ಆದರೆ ಇಂದು ಯಾವುದೇ ಜ್ಞಾನವಿಲ್ಲದವ ಹೊಸ ಪ್ರಸಂಗಗಳ ಸರದಾರನಾಗುತ್ತಿದ್ದಾನೆ. ಹೀಗಾಗಿ ಪ್ರಸಂಗಗಳು ಮೌಲ್ಯ ರಹಿತವಾಗುತ್ತಿವೆ.

ನೀವೂ ಸಾಮಾಜಿಕ ಪಾತ್ರಗಳಲ್ಲಿ ಅಭಿನಯಿಸಿ ದ್ದೀರಿ? ಹೀಗೆ ಹೇಳುವುದು ಸರಿಯೇ?
ನನಗೆ ಪೌರಾಣಿಕ ಪಾತ್ರಗಳೇ ಅಚ್ಚು-ಮೆಚ್ಚು. ಸಾಮಾಜಿಕ ಪಾತ್ರಗಳನ್ನು ಒಲ್ಲದ ಮನಸ್ಸಿಂದ ಮೇಳದಲ್ಲಿ ಇದ್ದೆ ಎನ್ನುವ ಕಾರಣಕ್ಕೆ ಮಾಡುತ್ತಿದ್ದೆ.

ಯಕ್ಷಗಾನ ಕಲೆ- ಕಲಾವಿದ ಹೇಗಿರಬೇಕು.
ಯಕ್ಷಗಾನ ಕಲೆಯಾಗಿಯೇ ಉಳಿಯಬೇಕು. ಕಲಾವಿದ ನಿಗೆ ತಾನು ಕಲೆಗಾಗಿ ದುಡಿಯುತ್ತಿದ್ದೇನೆ, ಈ ಕಲೆಯನ್ನು ಉಳಿಸಿ ಬೆಳೆಸಬೇಕು. ಸಮರ್ಥ ಕಲಾವಿದನಾಗಬೇಕು ಎನ್ನುವ ಅಭಿರುಚಿ ಇರಬೇಕು. ಅಧ್ಯಯನ, ಪ್ರಸಂಗ ಪುಸ್ತಕದ ಓದು, ಹಿರಿಯ ಕಲಾವಿದರೊಂದಿಗೆ ಸಂವಾದ, ಪ್ರದರ್ಶನವನ್ನು ನೋಡುವ ಗುಣ ಅಗತ್ಯವಾಗಿ ಬೇಕು. ಆದರೆ ಇಂದಿನ ಕಲಾವಿದರು ಚೌಕಿಗೆ ಬಂದಾಕ್ಷಣ ಮೊಬೈಲ್‌ ಹಿಡಿದು ಕೂರುತ್ತಾರೆ. ಯಾರ ಜತೆಯೂ ಚರ್ಚಿಸುವುದಿಲ್ಲ. ತಮ್ಮ ಪಾತ್ರ ಮುಗಿದಾಕ್ಷಣ ಮನೆಗೆ ಹೋಗುತ್ತಾರೆ.

ಕಲಾಮಿತಿಯ ಪ್ರದರ್ಶನ ಅನಿವಾರ್ಯವೇ ?
ಬದಲಾದ ಪ್ರೇಕ್ಷಕರ ಮನಃಸ್ಥಿತಿಗೆ ಅನುಗುಣವಾಗಿ ಸರಿ. ಆದರೆ ಇದರಲ್ಲಿ ಕಲೆಯ ಪರಿಪೂರ್ಣತೆ ಸಿಗದು. ಸಾವೇರಿ, ಮೋಹನ ರಾಗ ರಾತ್ರಿ 2ಗಂಟೆ ನಂತರ ಪ್ರಯೋಗವಾದರೆ ಅದನ್ನು ಕೇಳುವ ಇಂಪೇ ಬೇರೆ.

ನಿಮ್ಮ ಮೆಚ್ಚಿನ ಈಗಿನ ಕಲಾವಿದರು?
ಐರಿಬೈಲು ಆನಂದ ಶೆಟ್ಟಿ, ಆಜ್ರಿ ಗೋಪಾಲ ಗಾಣಿಗ, ಕೃಷ್ಣಯ್ನಾಜಿ, ಶಶಿಕಾಂತ್‌ ಶೆಟ್ಟಿ ಕಾರ್ಕಳ, ವಂಡಾರು ಗೋವಿಂದ, ಮೊಳಹಳ್ಳಿ ಕೃಷ್ಣ ನಾಯ್ಕ, ಮಾಧವ ನಾಗೂರು, ಹೆರೆಂಜಾಲು ಗೋಪಾಲ ಗಾಣಿಗ, ಜನ್ಸಾಲೆ ರಾಘವೇಂದ್ರ ಆಚಾರ್ಯ, ಉದಯ ಹೊಸಾಳ ಮತ್ತಿತರಿದ್ದಾರೆ.

ಟಾಪ್ ನ್ಯೂಸ್

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

1-sidd-nirmala

NABARD ಸಾಲ ಮಿತಿ ಹೆಚ್ಚಿಸಿ: ನಿರ್ಮಲಾಗೆ ಸಿಎಂ ಮನವಿ

Udupi: ಗೀತಾರ್ಥ ಚಿಂತನೆ 101: ಸಾರ್ವತ್ರಿಕವಾದರೆ ದುಃಖಶಮನ

Udupi: ಗೀತಾರ್ಥ ಚಿಂತನೆ 101: ಸಾರ್ವತ್ರಿಕವಾದರೆ ದುಃಖಶಮನ

Court: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾCourt: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾ

Court: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾ

Congress: ಜಮೀರ್‌ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್‌

Congress: ಜಮೀರ್‌ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್‌

Karnataka: ವೈದ್ಯ ಸೀಟು ಸಿಗದವರ ಮುಂಗಡ ಶುಲ್ಕ ವಾಪಸ್‌

Karnataka: ವೈದ್ಯ ಸೀಟು ಸಿಗದವರ ಮುಂಗಡ ಶುಲ್ಕ ವಾಪಸ್‌

H.D.Kote: ಹುಲಿ ದಾಳಿಗೆ ಹೊಂಚು: ಕೂದಲೆಳೆ ಅಂತರದಲ್ಲಿ ಪಾರಾದ ಯುವಕ!

H.D.Kote: ಹುಲಿ ದಾಳಿಗೆ ಹೊಂಚು: ಕೂದಲೆಳೆ ಅಂತರದಲ್ಲಿ ಪಾರಾದ ಯುವಕ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

1-sidd-nirmala

NABARD ಸಾಲ ಮಿತಿ ಹೆಚ್ಚಿಸಿ: ನಿರ್ಮಲಾಗೆ ಸಿಎಂ ಮನವಿ

Udupi: ಗೀತಾರ್ಥ ಚಿಂತನೆ 101: ಸಾರ್ವತ್ರಿಕವಾದರೆ ದುಃಖಶಮನ

Udupi: ಗೀತಾರ್ಥ ಚಿಂತನೆ 101: ಸಾರ್ವತ್ರಿಕವಾದರೆ ದುಃಖಶಮನ

Court: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾCourt: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾ

Court: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾ

Congress: ಜಮೀರ್‌ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್‌

Congress: ಜಮೀರ್‌ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.