ಶಾಕ್ ಅಬ್ಸಾರ್ಬರ್ ಕೆಟ್ಟಿದೆಯೇ?
Team Udayavani, Feb 8, 2019, 7:13 AM IST
ಎಲ್ಲ್ಲ ವಾಹನಗಳಲ್ಲೂ ಶಾಕ್ ಇದೆ. ಏರು ತಗ್ಗು, ಹೊಂಡ ಗುಂಡಿಯ ರಸ್ತೆಗಳಲ್ಲೂ ಸುಗಮ ಸವಾರಿಗೆ ಇದು ಅನುಕೂಲ ಮಾಡಿಕೊಡುತ್ತದೆ. ಕಾರು ಗಳಲ್ಲಿ ನಾಲ್ಕೂ ಚಕ್ರ ಗಳಿಗೆ ಪ್ರತ್ಯೇಕ ಶಾಕ್ಸ್‌ಗಳಿ ರುತ್ತವೆ. ಇವುಗಳ ಒಳಗೆ ಒಂದು ಕಾಯಿಲ್ ಸ್ಪ್ರಿಂಗ್ ಇದ್ದು ಆಘಾತವನ್ನು ಹೀರಿಕೊಳ್ಳುತ್ತದೆ.
ಶಾಕ್ ಕೆಲಸ ಮಾಡೋದು ಹೇಗೆ?
ಶಾಕ್ ಒಳಗಡೆ ಆಯಿಲ್ ಇದ್ದು ಅದರ ಮೇಲ್ಭಾಗದಲ್ಲಿ ಪಿಸ್ಟನ್ ಇದ್ದು, ಅದರಲ್ಲಿ ರಿಬೌಂಡ್ ವಾಲ್ವ್ ಮತ್ತು ಕಂಪ್ರಷನ್ ವಾಲ್ವ್ ಅಡಕವಾಗಿರುತ್ತವೆ. ತಳದಲ್ಲಿರು ಆಯಿಲ್ ಮೆಕ್ಯಾನಿಕಲ್ ಶಕ್ತಿಯನ್ನು ಶಾಖವಾಗಿ ಪರಿವರ್ತಿಸುವುದರೊಂದಿಗೆ ತಡೆಯಂತೆ ವರ್ತಿಸುತ್ತದೆ. ಇದರಿಂದ ಕಂಪ್ರಷನ್ ವಾಲ್ ಮತ್ತು ರಿಬೌಂಡ್ ವಾಲ್ ಶಾಕ್‌ನ ಸ್ಪ್ರಿಂಗ್ ಮೇಲಕ್ಕೂ ಕೆಳಕ್ಕೂ ಸಂಚರಿಸಿ, ಆಘಾತವನ್ನು ತಡೆದುಕೊಳ್ಳುವಂತೆ ಮಾಡುತ್ತದೆ. ಇದರಿಂದ ಪ್ರತಿ ಬಾರಿ ವಾಹನದ ಚಕ್ರ ಉಬ್ಬುತಗ್ಗು ಹಾದು ಹೋದಾಗ ಚಕ್ರ ಮಾತ್ರ ಮೇಲಕ್ಕೂ ಕೆಳಕ್ಕೂ ಸಂಚರಿ ಸುವಂತೆ ಮಾಡಿ, ವಾಹನದ ಬಾಡಿಗೆ ಅದರ ಪರಿಣಾಮ ತಟ್ಟದಂತೆ ಮಾಡುತ್ತದೆ.
ಶಾಕ್ ಹಾಳಾದರೆ ಗೊತ್ತಾಗೋದು ಹೇಗೆ?
ಚಿಮ್ಮುವ ಅನುಭವ: ಶಾಕ್ ಹಾಳಾದರೆ ಲೆಕ್ಕಕ್ಕಿಂತ ಹೆಚ್ಚು ಚಿಮ್ಮಿದಂತೆ ಅಥವಾ ಏರು ತಗ್ಗುಗಳಲ್ಲಿ ಕೆಲವೊಮ್ಮೆ ಪ್ರತಿಕ್ರಿಯೆ ಇಲ್ಲದಂತೆ ಇರಬಹುದು. ಕಡಿಮೆ ಗ್ರೌಂಡ್ ಕ್ಲಿಯರೆನ್ಸ್ ಇರುವ ಕಾರುಗಳಲ್ಲಿ ಹಂಪ್‌ಗ್ಳಲ್ಲಿ ಅಡಿ ತಾಗುವ ಸಂಭವವೂ ಇರುತ್ತದೆ.
ಸ್ಟೀರಿಂಗ್ ವೀಲ್ ಅದುರುವಿಕೆ: ಶಾಕ್ ಹಾಳಾದಾಗ ಸ್ಟೀರಿಂಗ್ ವೀಲ್ ವಿಪರೀತ ವೈಬ್ರೇಷನ್ ಇರಬಹುದು. ವೇಗದ ಚಾಲನೆಯಲ್ಲಿ ಇದು ಹೆಚ್ಚಾಗಿ ಕಂಡು ಬರಬಹುದು.
ಬ್ರೇಕ್ ಹಾಕಿದಾಗ: ವಾಹನ ಚಾಲನೆ ವೇಳೆ ಏಕಾಏಕಿ ಬ್ರೇಕ್ ಹಾಕಿದಾಗ ಮುಂದಕ್ಕೆ ಅತೀವ ಗುದ್ದಿದಂತೆ ಭಾಸವಾಗಬಹುದು. ಕೆಲವೊಮ್ಮೆ ನಿಯಂತ್ರಣ ಕಳೆದುಕೊಂಡಂತೆಯೂ ಅನುಭವವಾಗಬಹುದು.
ಟಯರ್ ಸವೆತ: ಶಾಕ್ ಸರಿಯಿಲ್ಲದಿದ್ದರೆ, ಟಯರ್ ಹೆಚ್ಚು ಸವೆಯಬಹುದು/ ಒಂದೇ ಭಾಗದಲ್ಲಿ ಹೆಚ್ಚು ಸವೆತ ಉಂಟಾಗುವ ಸಾಧ್ಯತೆ ಹೆಚ್ಚು. ಆದ್ದರಿಂದ ಮೇಲಿನ ಯಾವುದಾದರೊಂದು ಸಮಸ್ಯೆ ಕಂಡಬಂದಲ್ಲಿ ಕೂಡಲೇ ಮೆಕ್ಯಾನಿಕ್‌ಗಳನ್ನು ಭೇಟಿಯಾಗುವುದು ಉತ್ತಮ. ಶಾಕ್‌ನ ಆಯಿಲ್ ಸೀಲ್ ಹೋಗಿ ಲೀಕ್ ಆಗುತ್ತಿದ್ದರೆ, ಹೊಸ ಆಯಿಲ್, ಸೀಲ್ ಹಾಕುವುದೇ ಇದಕ್ಕಿರುವ ಪರಿಹಾರವಾಗಿದೆ. ಪ್ರತಿ ಬಾರಿ ಸರ್ವಿಸ್ ವೇಳೆ ಇದರ ಪರಿಶೀಲನೆ ಉತ್ತಮ.
ಶಾಕ್‌ಗಳು ಹಾಳಾಗುವುದು ಹೇಗೆ?
·ಶಾಕ್‌ಗಳಲ್ಲಿ ಆಯಿಲ್ ಹೊರಗೆ ಬಾರದಂತೆ ತಡೆಯುವ ಸೀಲ್‌ಗಳಿದ್ದು ಅದಕ್ಕೆ ಹಾನಿಯಾದರೆ ಆಯಿಲ್ ಹೊರಬಂದು ಪರಿಣಾಮಕಾರಿಯಾಗಿ ವರ್ತಿಸದೇ ಇರಬಹುದು.
·ಆಘಾತದಿಂದಾಗಿ ಶಾಕ್ ಒಳಗಿನ ಪಿಸ್ಟನ್‌ಗೆಹಾನಿಯಾಗುತ್ತದೆ. ಬೆಂಡ್ ಬಂದರೆ ಸರಿಯಾಗಿ ಮೇಲಕ್ಕೂ ಕೆಳಕ್ಕೂ ಹೋಗದೆ ಸಮಸ್ಯೆಯಾಗುತ್ತದೆ.
·ಶಾಕ್ ಒಳಗಿನ ಸಣ್ಣ ಬಿಡಿಭಾಗಗಳು ಹಾಳಾದರೂ ಪರಿಣಾಮಕಾರಿಯಾಗಿ ಕೆಲಸ ಮಾಡುವುದಿಲ್ಲ. ·ಶಾಕ್‌ಗಳು ತುಂಬ ಹಳತಾದರೆ ಕೂಡ ಅದು ಪರಿಣಾಮಕಾರಿಯಾಗಿರುವುದಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Shimoga; ಜಮೀರ್ ಅವರನ್ನು ಗಡಿಪಾರು ಮಾಡಿ: ಶಾಸಕ ಚನ್ನಬಸಪ್ಪ
Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು
Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್ ಕುಮಾರ್
Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.